Subscribe to Updates
Get the latest creative news from FooBar about art, design and business.
- ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ
- ಪಾವಗಡ: ನುಡಿದಂತೆ ನಡೆದ ಸ್ವತಂತ್ರ ಅಭ್ಯರ್ಥಿ ಚೇತನ್ ಬಾಬು; ಬಸ್ ನಿಲ್ದಾಣಕ್ಕೆ ಆಸನಗಳ ಕೊಡುಗೆ!
- ವೈ.ಎನ್.ಹೊಸಕೋಟೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿ: ಬಸ್ ನಿಲ್ದಾಣ, ಮನೆ–ಮನೆಗೆ ತೆರಳಿ ಮಕ್ಕಳಿಗೆ ಹನಿ ಹಾಕಿದ ಆರೋಗ್ಯ ತಂಡ
- ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್ ಗೌಡ
- ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ
- ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ
- ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ
- ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ
Author: admin
ತುರುವೇಕೆರೆ: ಸ್ವಗ್ರಾಮದ ಸರ್ಕಲ್ ನಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸುವ ವೇಳೆ ಆಯತಪ್ಪಿ ಆಯತಪ್ಪಿ ಬಾಕ್ಸ್ ಚರಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪತ್ರಕರ್ತ ಕೆ.ಎ.ಮಂಜುನಾಥ್ ಮಂಜುನಾಥ್ ಅವರಿಗೆ ತಾಲ್ಲೂಕಿನ ಮಾಯಸಂದ್ರ ಹೋಬಳಿ, ಸೊರವನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಚಿಕಿತ್ಸೆಗೆ ನೆರವು ನೀಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾಬೀರ್ ಹುಸೇನ್ , ಮಾಜಿ ಉಪಾಧ್ಯಕ್ಷರಾದ ಶಶಿಕಲಾ ಹನುಮೇಗೌಡ, ಸದಸ್ಯರಾದ ಮಹಾಲಕ್ಷ್ಮಮ್ಮ, ಚಾಟಿತಿಮ್ಮಯ್ಯ ಹಾಗೂ ಸುರೇಶ್ ಹಾಗೂ ಸರ್ವಸದಸ್ಯರ ಹಾಜರಿಯಲ್ಲಿ ಚರ್ಚಿಸಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹಾಜರಿಯಲ್ಲಿ ಪತ್ರಕರ್ತ ಮಂಜುನಾಥ್ ರವರ ಮನೆಗೆ ತೆರಳಿ ಚೆಕ್ ವಿತರಿಸಲಾಯಿತು. ಇನ್ನೂ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದ ಮಾನವೀಯ ನೆರವಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದ ದಾವಣಗೆರೆ ವಿಶ್ವವಿದ್ಯಾನಿಲಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಧರ್ಮಪುರ ಕೆರೆ ಮತ್ತು ಇತರೆ ಏಳು ಕೆರೆಗಳಿಗೆ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಈ ರಾಜ್ಯದ ರೈತರ ಅಭ್ಯುದಯಕ್ಕೋಸ್ಕರ ಅಪ್ಪರ್ ಭದ್ರಾ ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯಂತಹ ಎರಡು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದಾಗಿ ಮಧ್ಯ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಈ ಪ್ರದೇಶವನ್ನು ನೀರಾವರಿಗೊಳಪಡಿಸಿ, ಈ ಭಾಗದ ರೈತರ ಬದುಕು ಹಸನುಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು. ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಭಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವಂತೆ ಸುಮಾರು…
ಪಾವಗಡ: ಪರಿಸರ ದಿನಾಚರಣೆಯ ಪ್ರಯುಕ್ತ “ಭಾರತ ಮಾತಾ ಸೇವಾ ಟ್ರಸ್ಟ್” ವತಿಯಿಂದ ಪಾವಗಡ ತಾಲೂಕಿನ ಸಾಸಲಕುಂಟೆ, ಆರ್ಲಹಳ್ಳಿ, ಮಲ್ಲಮ್ಮನಹಳ್ಳಿ, ಬುದಿಬೆಟ್ಟ, ಕೋಟಗುಡ್ಡ, ದೆವಲಕೆರೆ, ಮತ್ತು ಪಾವಗಡ ನಗರದಲ್ಲಿ 100 ನೂರಕ್ಕೂ ಹೆಚ್ಚು ಜಂಬುನೇರಳೆ, ಸಿಬೆಗಿಡ, ,ದೊಡ್ಡ ಹಲಸಿನ ಹಣ್ಣಿನ ಗಿಡ, ಬೆಲದಕಾಯಿ ಗಿಡ, ಕಾಡುಬಾದಮಿಗಿಡ, ಹೆಬ್ಬೆವು, ಹುಣಸೆ ಗಿಡ, ಗಸಗಸೆಗಿಡ, ಬೇವಿನಗಿಡ, ತೆಗದಗಿಡ, ಸಿತಾಫಲ, ಸಿಲ್ವರ್ ಇನ್ನೂ ಇತರೆ ವಿವಿಧ ರೀತಿಯ ಗಿಡಗಳನ್ನು ಮನೆಯ ಹತ್ತಿರ, ತೋಟದಲ್ಲಿ, ಹೊಲದಲ್ಲಿ ನೆಡುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಟ್ರಸ್ಟಿನ ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್ ಚಾಲನೆ ನೀಡಿ ಮಾತನಾಡಿ, ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಇದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಅಗತ್ಯತೆಯ ದಿನವಾಗಿದೆ ಎಂದರು. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಭೂಮಿಯು ವಿವಿಧ…
ಕೊರಟಗೆರೆ: ಡಾಂಬರು ತುಂಬಿದ ಡ್ರಮ್ ಟ್ರಾಕ್ಟರ್ ನಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರ ಕಣ್ಣುಗಳಿಗೆ ಡಾಂಬಾರು ತಗುಲಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ. ಕೊರಟಗೆರೆ ಇಂದ ಮಧುಗಿರಿ ಕಡೆಗೆ ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕ ಮೇಲೆ ಟ್ರಾಕ್ಟರ್ ನಿಂದ ಡಾಂಬಾರು ಡ್ರಮ್ ಉರುಳಿ ಬಿದ್ದಿದ್ದು, ಪರಿಣಾಮವಾಗಿ ಪ್ರಯಾಣಿಕರ ಕಣ್ಣುಗಳಿಗೆಯೇ ಡಾಂಬಾರು ತಾಗಿದ್ದು, ತಕ್ಷಣವೇ ಅವರನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ನಾಹಿದಾ ಜಂ ಜಂ, ಮಾಧ್ಯಮಗಳ ಜೊತೆಗೆ ಮಾತನಾಡಿ, ಸುಮಾರು 11:30ರ ವೇಳೆ ಈ ಅನಾಹುತವಾಗಿದೆ. ಕೊರಟಗೆರೆಯಿಂದ ಮಧುಗಿರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ರೋಡಿಗೆ ಡಾಂಬಾರು ಹಾಕುತ್ತಿದ್ದ ವೇಳೆ ಒಂದು ಟಿನ್ ಉರುಳಿ ಬಿದ್ದು, ಆಟೋದಲ್ಲಿದ್ದವರ ಕಣ್ಣೊಳಗೆ ಡಾಂಬಾರು ಹೋಗಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿದೆ ಎಂದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳು ಇಬ್ಬರ ಕಣ್ಣೊಳಗೂ…
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ಬೈರಾಗಿ. ‘ಡಾಲಿ’ ಧನಂಜಯ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡು ಶಿವರಾಜ್‌ಕುಮಾರ್ ಮತ್ತು ಶರಣ್ ಕಂಠಸಿರಿಯಲ್ಲಿ ಮೂಡಿಬಂದಿರೋದು ವಿಶೇಷ. ‘ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್ ದನಿಗೂಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ‘ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್ ಶಾಟ್’ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ರಿದಮ್ ಆಫ್ ಶಿವಪ್ಪ’ ಕಾನ್ಸೆಪ್ಟ್’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ‘ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್’ನಲ್ಲಿ ಚಿತ್ರೀಕರಣ ನಡೆಸಲಾಗಿದೆ.ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ನಖರನಖ’ ಹಾಡಿಗೆ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು. ಇದೀಗ ‘ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್…
ನೀವು ರೈಲ್ವೆ ಪ್ರಯಾಣಿಕರಾಗಿದ್ದರೆ ತಪ್ಪದೆ ಈ ಸುದ್ದಿ ಓದಿ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವವರಾಗಿದ್ದರೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಿಯಮಗಳನ್ನು ಭಾರತೀಯ ರೈಲ್ವೇ ಬದಲಾಯಿಸಿದೆ. ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್‌ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ. ರೈಲ್ವೆ ಸಚಿವಾಲಯ ಜಾರಿಗೊಳಿಸಿದೆ ಈ ಆದೇಶ ಮಾರ್ಚ್ 2020 ರಲ್ಲಿ ಕರೋನಾ ಸಮಯದಲ್ಲಿ IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಹೋಗುವ ಸ್ಥಳದ ವಿಳಾಸವನ್ನು ನಮೂದಿಸುವುದನ್ನು ಭಾರತೀಯ ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ. ಆದರೆ ಕೋವಿಡ್-19 ಪ್ರಕರಣಗಳು ಕಡಿಮೆಯಾದ ಕಾರಣ, ಈಗ ಪ್ರಯಾಣಿಕರು IRCTC ಕಡೆಯಿಂದ ಹೋಗುವ ಸ್ಥಳದ ವಿಳಾಸದ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಆದೇಶವನ್ನು ರೈಲ್ವೆ ಸಚಿವಾಲಯವೂ ಜಾರಿಗೊಳಿಸಿದೆ. ಈ ನಿಯಮಗಳನ್ನು ಹಿಂಪಡೆದ ರೈಲ್ವೆ ಇಲಾಖೆ ಕೋವಿಡ್ ಪ್ರಕರಣಗಳು ಹೆಚ್ಚಾದಂತೆ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲು ಹೋಗುವ ಸ್ಥಳದ ವಿಳಾಸವು…
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಕ್ಕದ ಪಶುವೈದ್ಯಕೀಯ ಔಷಧಿ ಕಂಪನಿಯಲ್ಲಿ ಅನಿಲ ಸೋರಿಕೆಯಾಗಿ, ಅಪ್ಯಾರಲ್ಸ್ ಸಂಸ್ಥೆಯ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಪೋರಸ್ ಲ್ಯಾಬೊರೇಟರೀಸ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿದೆ. ಅಚ್ಚುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (SEZ) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಅಸ್ವಸ್ಥವಾಗಿರುವ ಮಹಿಳೆಯರಿಗೆ ವಾಂತಿ, ತಲೆನೋವು ಮತ್ತು ಕಣ್ಣುರಿ ಕಾಣಿಸಿಕೊಂಡ ಪರಿಣಾಮ ಎಲ್ಲ ನೌಕರರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಕ್ಕದ ಪಶುವೈದ್ಯಕೀಯ ಔಷಧಿ ಕಂಪನಿಯಲ್ಲಿ ಅನಿಲ ಸೋರಿಕೆಯಾಗಿ ಪಕ್ಕದ ಅಪ್ಯಾರಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಪೋರಸ್ ಲ್ಯಾಬೊರೇಟರೀಸ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿದ್ದು, ಅಚ್ಚುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (SEZ) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಪೀಡಿತ ಮಹಿಳೆಯರಿಗೆ ವಾಂತಿ, ತಲೆನೋವು ಮತ್ತು ಕಣ್ಣುಗಳಲ್ಲಿ ಸುಡುವ ಸಂವೇದನೆ. ಪರಿಣಾಮ ಎಲ್ಲ ನೌಕರರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಾಯದಿಂದ…
ಏರುತ್ತಿರುವ ಹಣದುಬ್ಬರದ ಮಧ್ಯೆ, ಸರ್ಕಾರವು ಜನ ಸಾಮಾನ್ಯರಿಗೆ ಪರಿಹಾರ ನೀಡುವ ಪ್ರಯತ್ನಗಳನ್ನು ಕೂಡಾ ಮಾಡುತ್ತಿದೆ. ಇದೀಗ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 3 ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಗೋವಾ ಸರ್ಕಾರವು ತೆಗೆದುಕೊಂಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದ ಪ್ರತಿ ಕುಟುಂಬಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಘೋಷಣೆ ಮಾಡಿದ್ದಾರೆ. ಟ್ವೀಟ್ ಮೂಲಕ ಮಾಹಿತಿ: ಸೋಮವಾರ ಸಂಜೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹೊಸ ಆರ್ಥಿಕ ವರ್ಷದಿಂದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವ ಯೋಜನೆ ಸಿದ್ಧಪಡಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಪ್ರಸಕ್ತ…
ಕೊನೆಗೂ ಪೊಲೀಸ್ರ ಮುಂದೆ ಆ್ಯಸಿಡ್ ನಾಗ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾನೆ. ಕಾಮಾಕ್ಷಿಪಾಳ್ಯ ಪೋಲೀಸ್ರು ಆ್ಯಸಿಡ್ ನಾಗೇಶನ ಸ್ಟೇಟ್ ಮೆಂಟ್ ದಾಖಲಿಸಿದ್ದು, ನಾನು ದೊಡ್ಡ ಪ್ರಮಾದ ಎಸಗಿದ್ದೇನೆ. ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಅಂತ ನಾಗ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಆಕೆ ಮೇಲೆ ನಾನು ಆ್ಯಸಿಡ್ ಹಾಕಬಾರದಿತ್ತು: ತಾನು ಪ್ರೀತಿಸಿದ್ದ ಹುಡುಗಿಗೆ ಆ್ಯಸಿಡ್ ಹಾಕಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಆ್ಯಸಿಡ್ ನಾಗ, ನಾನು ಆ ಹುಡುಗಿ ಮೇಲೆ ಆ್ಯಸಿಡ್ ಹಾಕಬಾರದಿತ್ತು. ಆದರೆ ನನಗೆ ಸಿಗದ ಹುಡುಗಿ ಬೇರೆಯವರಿಗೆ ಸಿಗಬಾರದು ಅನ್ನೋ ಹೊಟ್ಟೆಕಿಚ್ಚಿನಲ್ಲಿ ಹಾಕಿಬಿಟ್ಟೆ. ಮರುಕ್ಷಣ ನನ್ನ ಮನಪರಿವರ್ತನೆ ಆಯ್ತು, ಹೆದರಿಕೆ ಆಯ್ತು. ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋ ಕಡಿಮೆ ಕಮ್ಮಿ. ನಮ್ಮ ಅಣ್ಣ ಮನೆಯವರು ಬೈದಿದ್ದಕ್ಕೆ ಹಾಗೇ ಮಾಡಿಬಿಟ್ಟೆ. ಅದು ಬಿಟ್ಟು ಬೇರೆನೂ ಕಾರಣ ಇಲ್ಲ ಎಂದಿದ್ದಾನೆ. ಆಕೆ ಮೇಲೆ…
ಈಗ ವಿದ್ಯುತ್ ಮೀಟರ್‌ಗಳು ಹೆಚ್ಚು ಸುಧಾರಿತವಾಗಲಿವೆ. 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಗಳು ಬಂದಿವೆ. 4G ಮೀಟರ್‌ಗಳು ಈಗ ಬಳಸುತ್ತಿರುವ ಮೀಟರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕೆಲವು ರಾಜ್ಯಗಳು ಈಗಾಗಲೇ ಈ ಮೀಟರ್ ಅನ್ನು ಅಳವಡಿಸುವ ತಯಾರಿ ಪೂರ್ಣಗೊಳಿಸಿವೆ. ಹೌದು, ಜುಲೈ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುವುದು. 4G ಮೀಟರ್ ಅಳವಡಿಕೆ ಹೇಗೆ ? ಹಳೆಯ ವಿದ್ಯುತ್ ಮೀಟರ್‌ಗಳನ್ನು ಯಾವ ಮನೆಗೆ ಹಾಕಲಾಗಿದೆಯೋ ಆ ಮೀಟರ್ ಗಳನ್ನೂ ಹೊಸ 4G ಮೀಟರ್‌ಗಳೊಂದಿಗೆ ಅಪ್ಡೇಟ್ ಮಾಡಲಾಗುವುದು. ಈಗಿರುವ ಮೀಟರ್ ಅಥವಾ ಹಳೆಯ ತಂತ್ರಜ್ಞಾನ ಮೀಟರ್ ಗಳನ್ನು ಸ್ಮಾರ್ಟ್ ಮೀಟರ್ ಗಳನ್ನಾಗಿ ಪರಿವರ್ತಿಸಲಾಗುವುದು. ಹೇಗೆ ಕಾರ್ಯ ನಿರ್ವಹಿಸುತ್ತದೆ 4G ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ? 4G ಪ್ರಿಪೇಯ್ಡ್ ಮೀಟರ್ ನಿಖರವಾಗಿ SIM ಕಾರ್ಡ್‌ನ ಪೋಸ್ಟ್‌ಪೇಯ್ಡ್ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. 4G ಮೀಟರ್ ಅನ್ನು ಅಳವಡಿಸಿದ ನಂತರ, ನಿಗದಿತ ಸಾಮರ್ಥ್ಯದ ಪ್ಲಾನ್ ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ಆಧಾರದ…