Subscribe to Updates
Get the latest creative news from FooBar about art, design and business.
- ಕೊರಟಗೆರೆ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒತ್ತು– ಸರ್ವಜನ ಶ್ರಮಜೀವಿ ಸೇವಾ ಟ್ರಸ್ಟ್ ಉದ್ಘಾಟನೆ
- ಮಾವತ್ತೂರು ಸೊಸೈಟಿ ಸರ್ವ ಸದಸ್ಯರ ಸಭೆ ರಣರಂಗ: ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪ, ಅರ್ಧದಲ್ಲೇ ಸಭೆ ಮುಂದೂಡಿಕೆ!
- ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪಾವಗಡದ ಚನ್ನಕೇಶವಪುರ ತಂಡಕ್ಕೆ ದ್ವಿತೀಯ ಸ್ಥಾನ
- ಬುಡುಬುಡಿ ವೇಷಧಾರಿ ಕಳ್ಳರ ಬಂಧನ
- ತಿಪಟೂರಿನ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಅರ್ಥಪೂರ್ಣ ‘ವಿಶ್ವ ಫಾರ್ಮಸಿಸ್ಟ್ ದಿನಾಚರಣೆ — 2026’
- ಮೈಸೂರು ದಸರಾ: ಅ.11 ರಿಂದ ಕನ್ನಡ ಪುಸ್ತಕ ಮಾರಾಟ ಮೇಳ: ಮಾರಾಟಗಾರರಿಗೆ ಆಹ್ವಾನ
- ಕರ್ನಾಟಕದಲ್ಲಿ ಬರದಿಂದ 40 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಾಧ್ಯತೆ: ಡಿಸಿಎಂ ಜಿ.ಪರಮೇಶ್ವರ್
- ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!
Author: admin
ನಿಯಮಬಾಹೀರ ವಾಹನಗಳ ಪಾರ್ಕಿಂಗ್ ತಡೆಗಟ್ಟಲು ಹೊಸ ಕಾನೂನಿನ ಕುರಿತು ತಾವು ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೊಸ ಕಾನೂನಿನ ಅಡಿ ಯಾರಾದರು ತಪ್ಪಾದ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರೆ ಮತ್ತು ಬೇರೊಬ್ಬರು ಆ ವಾಹನದ ಫೋಟೋ ಕ್ಲಿಕ್ಕಿಸಿ ವರದಿ ಮಾಡಿದರೆ, ವರದಿ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎನ್ನಲಾಗಿದೆ. ಫೋಟೋ ಕಳುಹಿಸುವವರಿಗೆ ಸರ್ಕಾರ 500 ರೂ. ಬಹುಮಾನ ನೀಡಲಿದೆ! ತಪ್ಪಾದ ವಾಹನ ಪಾರ್ಕಿಂಗ್‌ನಿಂದಾಗಿ ರಸ್ತೆಗಳಲ್ಲಿ ಜಾಮ್ ಸಂಭವಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದನ್ನು ತಡೆಗಟ್ಟಲು ಸರ್ಕಾರ ಈ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ರೀತಿ ನಿಯಮ ಬಾಹೀರವಾಗಿ ಪಾರ್ಕಿಂಗ್ ಮಾಡಲಾಗಿರುವ ವಾಹನಗಳ ಛಾಯಾಚಿತ್ರ ತೆಗೆದು ಅಧಿಕಾರಿಗಳಿಗೆ ಕಳುಹಿಸಿದರೆ 500 ರೂ.ವರೆಗೆ ಬಹುಮಾನ ಪಡೆಯಬಹುದು ಎನ್ನಲಾಗಿದೆ. ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದೇನು? ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪ್ರಕಟಿಸಿರುವ ವರದಿಯ ಪ್ರಕಾರ, ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ…
ಸಿನಿಮಾ ಸಾಂಗ್, ಡಾನ್ಸ್ ಮೂಲಕ ಸುದ್ದಿಯಲ್ಲಿರುತ್ತಿದ್ದ ಬಹು ಭಾಷಾ ನಟಿ ಸಾಯಿ ಪಲ್ಲವಿ ಈಗ ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ತಮ್ಮ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಇದೀಗ ಇದೇ ಮಾತಿನಿಂದ ಸಾಯಿ ಪಲ್ಲವಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಸಂದರ್ಶನದ ವಿಡಿಯೋದಲ್ಲಿ ಏನಿದೆ, ಸಾಯಿ ಪಲ್ಲವಿ ಏನು ಹೇಳಿದ್ದಾರೆ ಅಂತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಯಿ ಪಲ್ಲವಿ ಹೇಳಿದ್ದೇನು? ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದಾಗ ಕಾಶ್ಮೀರಿ ಪಂಡಿತರನ್ನು ಕೊಂದರು, ಹತ್ಯೆ ಮಾಡಿದರು ಅಂತ ಹೇಳಲಾಯ್ತು. ಅದನ್ನು ಧಾರ್ಮಿಕ ಸಂಘರ್ಷವಾಗಿ ನೋಡಲಾಯ್ತು.…
ಮುಂಜಾನೆಯ ಸವಿನಿದ್ದೆಯಲ್ಲಿದ್ದ ೨೧ ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಡಿದೆಬ್ಬಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಭ್ರಷ್ಟರನ್ನು ಬಲೆಗೆ ಕೆಡವಿ ಹಣ ಚಿನ್ನ ಸೇರಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ. ಬೆಂಗಳೂರು,ಧಾರವಾಡ,ಹಾವೇರಿ ಶಿವಮೊಗ್ಗ ಸೇರಿ ರಾಜ್ಯಾದ೮೦ ಕಡೆಗಳಲ್ಲಿ ಏಕಕಾಲದಲ್ಲಿ ೩೦೦ಮಂದಿ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ೨೧ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ನೀರಾವರಿ,ಲೋಕೋಪಯೋಗಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳ ಇಂಜಿನಿಯರ್ ಗಳು ಒಳಗೊಂಡ ೨೧ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದ ನಡೆದಿರುವ ದಾಳಿಯು ಸಂಜೆವರೆಗೆ ಮುಂದುವರೆದಿದೆ. ನಗರದ ಜೆಪಿ ನಗರ, ಬಸವನಗುಡಿ, ಚಂದ್ರಾಲೇಔಟ್, ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದ್ದು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ನಗದು, ಚಿನ್ನ,ಐಷಾರಾಮಿ ವಸ್ತುಗಳು ಸೇರಿ ಕೋಟ್ಯಾಂತರ ಮೌಲ್ಯದ ಆಸ್ತಿ ಪಾಸ್ತಿ ಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾರಾಮಾರಿ ನಡೆದಿದ್ದು, ಇದೀಗ ಅಬ್ಬಿನಹೊಳೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾರಾಮಾರಿ ನಡೆದಿದ್ದು, ಪರಿಣಾಮವಾಗಿ ನಾಗಮ್ಮ, ಗೌರಮ್ಮ, ಶ್ರೀದೇವಿ ಎಂಬವರು ಗಾಯಗೊಂಡಿದ್ದು, ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಮ್ಮ (45) ಎಂಬವರಿಗೆ ತಲೆಗೆ , ಬಾಯಿಗೆ, ಏಟು ಬಿದ್ದಿದ್ದು, ಎಡಗೈ ಮುರಿದಿದೆ. ಕಾಲಿಗೂ ಪೆಟ್ಟಾಗಿದೆ. ಗೌರಮ್ಮ (48) ಅವರಿಗೆ ಕಾಲಿಗೆ ಗಾಯವಾಗಿದ್ದು, ಎರಡು ಕಾಲು ಸಹ ಓಡಾಡುವುದಕ್ಕೆ ಆಗದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀದೇವಿ (29) ಇವರಿಗೆ ಬಲಗೈ ಗೆ ಹೊಡೆದಿದ್ದು, ಬಲಗೈ ಬೆನ್ನು ಮೂಲೆ ಗಂಭೀರ ಸ್ಥಿತಿಯಲ್ಲಿದೆ. ಇದೀಗ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಹಳ್ಳಿ ಗ್ರಾಮದ ಗುಡ್ಡದ ಗೊಲ್ಲರಹಟ್ಟಿ ಗ್ರಾಮದ ಚಿತ್ತಯ್ಯ, ಚಂದ್ರ, ಶಾರದಾ, ಉಮಾದೇವಿ, ಕಾಂತರಾಜು, ಜೈಲಿಂಗಪ್ಪ, ತಿಪ್ಪೇಸ್ವಾಮಿ, ರಘು, ವಸಂತ , ಮಮತ, ಸುಜಾತ ಕುಟುಂಬದ ನಡುವೆ…
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ಅಧಿಕೃತ ಫಲಿತಾಂಶ ದೊರೆಯಲಿದ್ದು, ಇಂದು ಬೆಳಗ್ಗೆ 11:30 ಗಂಟೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನಾಗೇಶ್ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ https://karresult.nic.in/ ನಲ್ಲಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಗೂಗಲ್ ಸರ್ಚ್ ನಲ್ಲಿ ಮೇಲಿನ ವೆಬ್ ಅಡ್ರೆಸ್ ನ್ನು ಸರ್ಚ್ ಮಾಡಿದರೆ, ವೆಬ್ ಸೈಟ್ ನಲ್ಲಿ ನಿಮ್ಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಮೊಬೈಲ್ ನಲ್ಲೇ ನಿಮ್ಮ ಫಲಿತಾಂಶವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ 22 ರಿಂದ ಮೇ 18ರ ವರೆಗೂ ಪರೀಕ್ಷೆಗಳು ನಡೆದಿದ್ದವು. 6,84,255 ವಿದ್ಯಾರ್ಥಿಗಳು 2021-22ನೇ ಸಾಲಿನಲ್ಲಿ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 3,46,936 ವಿದ್ಯಾರ್ಥಿಗಳು ಹಾಗೂ 3,37,319 ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದಾರೆ. 6,00,519 ಫ್ರಷರ್ ವಿದ್ಯಾರ್ಥಿಗಳಾಗಿದ್ದು , 61,808 ಪುನಾರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಬಾಳೆಗದ್ದೆ ಬಳಿ ಕೆಎಸ್ಸಾರ್ಟಿಸಿ ಬಸ್ ಮತ್ತು ಓಮ್ನಿ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ದಂಪತಿ ಮೋಹನ್-ಶಾರದಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮೃತಪಟ್ಟವರು ಹಾಗೂ ಬಸ್ ಚಾಲಕನ ಊರು ಮೊದಲಾದ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮಧುಗಿರಿ: ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಗುರುವಾರ ಎಲ್ಲಾ ದಲಿತ ಪರ ಸಂಘಟನೆಗಳು ಒಟ್ಟಾಗಿ ಮಧುಗಿರಿ ಉಪ ವಿಭಾಗ ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಈ ವೇಳೆ ದಲಿತ ಮುಖಂಡರು ಮಾತನಾಡಿ, ತುಮಕೂರು ಜಿಲ್ಲೆಯ ದಲಿತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸರ್ಕಾರ ಮೊದಲು ದಲಿತ ಪರ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಸಂಘಟನೆಯ ಮುಖಂಡ ಜೀವಿಕ ಮಂಜುನಾಥ್, ಡಿಎಸ್ ಎಸ್ ಸಂಚಾಲಕ ನರಸಿಂಹಮೂರ್ತಿ ಹತ್ಯೆ ಖಂಡನೀಯ, ದಲಿತರಿಗೆ ರಕ್ಷಣೆ ನೀಡದ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಸಿದ್ದಾಪುರ ಮಾತನಾಡಿ, ರಂಗಶಾಮಯ್ಯ ರಾಜ್ಯ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ನಿರ್ಲಕ್ಷತನದಿಂದ ನೋಡುತ್ತಿದ್ದು, ಕೆಳವರ್ಗದವರಿಗೆ ಬಲ ಇಲ್ಲದಂತಾಗಿದೆ. ಇದು ತುಂಬಾ ಬೇಸರ ತರಿಸುತ್ತದೆ. ಸರ್ಕಾರ ಎಚ್ಚೆತ್ತು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಸಿದ್ದಾಪುರ ರಂಗಸ್ವಾಮಯ್ಯ, ದೊಡ್ಡೇರಿ…
ತುಮಕೂರು: ರಸ್ತೆ ಅವ್ಯವಸ್ಥೆಯ ಕಾರಣ ಆಟೋ ರಿಕ್ಷಾವೊಂದು ಬೈಕ್ ಗೆ ಡಿಕ್ಕಿಯಾದ ಘಟನೆ ತುಮಕೂರು ನಗರದ ಸದಾಶಿವನಗರದಿಂದ ಮೇಳೆಕೋಟೆಗೆ ತೆರಳುವ ಮುಖ್ಯಸ್ಥೆಯ ದಾನಾ ಪ್ಯಾಲೇಸ್ ಸಮೀಪ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಸಾಮಾನ್ಯ ವೇಗದಲ್ಲಿ ಬರುತ್ತಿದ್ದ ಆಟೋ ರಸ್ತೆಯ ಮೇಲೆಯೇ ಇರುವ ಮ್ಯಾನ್ ಹೋಲ್ ನಂತೆ ಕಂಡು ಬರುವ ಸ್ಲಾಬ್ ಮೇಲೆ ಹತ್ತಿದ್ದು, ಪರಿಣಾಮವಾಗಿ ಆಟೋ ವಿರುದ್ಧ ದಿಕ್ಕಿಗೆ ನೆಗೆದು ಮುಂದಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ತಕ್ಷಣವೇ ಆಟೋ ಚಾಲಕ ಹಾಗೂ ಬೈಕ್ ಸವಾರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಈ ರಸ್ತೆ ಇತ್ತೀಚಿಗೆ ಡಾಂಬರೀಕರಣವಾಗಿತ್ತು. ಕಾಮಗಾರಿ ಮಾಡುವ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರ ಅಲ್ಲಿನ ಮೇಲ್ವಿಚಾರಕ ಅಭಿಯಂತರರು, ಮಹಾನಗರ ಪಾಲಿಕೆಯ ಬೇಜವಾಬ್ದಾರಿಯುತ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಈ ಸಂಬಂಧ…
ಐಪಿಎಲ್ ನಲ್ಲಿ ರನ್ನರ್ ಅಪ್ ಆದ ರಾಜಸ್ಥಾನ್ ರಾಯಲ್ಸ್‍ನ ನಾಯಕ ಸಂಜು ಸಮ್ಸನ್‍ರ ಆಟದ ವೈಖರಿ ಕುರಿತು ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್ ಅವರು ಕಿಡಿಕಾರಿದ್ದಾರೆ. ಸಂಜು ಸಮ್ಸನ್ ಅವರು ತಮ್ಮ ಬ್ಯಾಟಿಂಗ್ ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಎಡವುತ್ತಿರು ವುದರಿಂದ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಆಗುತ್ತಿಲ್ಲ ಎಂದ ಕಪಿಲ್‍ದೇವ್, ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಮರ್ಥವಾಗಿ ನಿಭಾಯಿಸಿದ ಸಂಜು ಸಮ್ಸನ್ 458 ರನ್ ಗಳನ್ನು ಗಳಿಸಿದರೂ ಕೂಡ ಅವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಅವರು ಒಂದೆರಡು ಪಂದ್ಯಗಳಲ್ಲಿ ಗರಿಷ್ಠ ರನ್‍ಗಳನ್ನು ದಾಖಲಿಸಿದ್ದರಿಂದ ಅವರ ಅಷ್ಟೊಂದು ರನ್‍ಗಳನ್ನು ಗಳಿಸಲು ಸಾಧ್ಯವಾಯಿತಷ್ಟೇ ಎಂದು ಹೇಳಿದರು. ಸಂಜು ಸಮ್ಸನ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು, ಶ್ರೀಲಂಕಾ ಸರಣಿಯಲ್ಲಿ ಸಂಜು ಸಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರಿಂದ ಅವರನ್ನು ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗಿಡಲಾಗಿದೆ ಎಂದರು.…
ಇಂಧನ (ಎಟಿಎಫ್) ಬೆಲೆಯಲ್ಲಿನ ತೀವ್ರ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶೀಯ ವಿಮಾನಯಾನ ಸಂಸ್ಥೆಗಳು ತಕ್ಷಣವೇ ವಿಮಾನಯಾನ ದರಗಳನ್ನು ಹೆಚ್ಚಳವಾಗಲಿದೆ. ದರ ಏರಿಕೆ ಮಾರ್ಗ ಬಿಟ್ಟು ಬೇರೆ ದಾರಿಯಿಲ್ಲ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ. ಕಾರ್ಯಾಚರಣೆಯ ವೆಚ್ಚವನ್ನು ಉತ್ತಮವಾಗಿ ಉಳಿಸಿಕೊಳ್ಳಲು ವಿಮಾನ ದರಗಳಲ್ಲಿ ಕನಿಷ್ಠ 10-15 ಪ್ರತಿಶತ ಹೆಚ್ಚಳ ಅಗತ್ಯವಿದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂನ್ 2021 ರಿಂದ ಎಟಿಎಫ್ ಬೆಲೆಗಳು ಶೇಕಡಾ 120 ಕ್ಕಿಂತ ಹೆಚ್ಚಾಗಿದೆ. ಈ ಬೃಹತ್ ಹೆಚ್ಚಳವು ಸಮರ್ಥನೀಯವಲ್ಲ ,ಕೇಂದ್ರ ಮತ್ತು ರಾಜ್ಯಗಳು, ಎಟಿಎಫ್ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಮದು ಒತ್ತಾಯಿಸಿದ್ದಾರೆ. ವಿಶ್ವ ಮಟ್ಟಕ್ಕೆ ಹೊಲಿಸಿದರೆ ಭಾರತದಲ್ಲೇ ಅತಿ ಹೆಚ್ಚು ಎಂದು ಅವರು ಹೇಳಿದರು.ಸ್ಪೈಸ್ಜೆಟ್ ಕಳೆದ ಕೆಲವು ತಿಂಗಳುಗಳಲ್ಲಿ ಇಂಧನ ಬೆಲೆ ಏರಿಕೆಯ ಭಾರವನ್ನು ಹೀರಿಕೊಳ್ಳಲು ಪ್ರಯತ್ನಿಸಿದೆ, ಸದ್ಯ ನಮ್ಮ ಕಾರ್ಯಾಚರಣೆಯ ವೆಚ್ಚದ ಶೇಕಡಾ 50 ಕ್ಕಿಂತ ಹೆಚ್ಚು ಹೊರೆಯಾಗುತ್ತಿದೆ…