Subscribe to Updates
Get the latest creative news from FooBar about art, design and business.
- ಕೈಯಲ್ಲಿನ ಪುಸ್ತಕ ವಿಶ್ವವನ್ನೇ ಪರಿಚಯಿಸುತ್ತದೆ: ಸಾಹಿತಿ ಮಲನ ಮೂರ್ತಿ
- ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವ್ಯಸನಕ್ಕೆ ಕಡಿವಾಣ: ರಾಜ್ಯ ಸರ್ಕಾರದಿಂದ ಹೊಸ ಕರಡು ನೀತಿ ಪ್ರಕಟ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
- ಜನಗಣತಿ: ಏ.15ರವರೆಗೆ ಸ್ವಯಂ ಗಣನೆಗೆ ಜಿಲ್ಲಾಧಿಕಾರಿ ಕರೆ
- “ನಾನು ಸಿಎಂ ಆದ್ರೆ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನ ರದ್ದು”: ಯತ್ನಾಳ್ ಕಿಡಿ
- ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕೊನೆಗೂ ಲಾಕ್
- ಕುಣಿಗಲ್: ಡಾ.ಅಂಬೇಡ್ಕರ್, ಜಗಜೀವನರಾಂ ಜಯಂತಿ ಒಟ್ಟಿಗೆ ಆಚರಣೆಗೆ ವಿರೋಧ
- ಡಾ.ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಜಯಂತೋತ್ಸವ: ರಾಷ್ಟ್ರಪತಿ ದ್ರೌಪದಿ ಮುರ್ಮು, ಜಿ.ಪರಮೇಶ್ವರ್, ಗೆಹಲೋಟ್, ಶ್ರೀ ಸಿದ್ದಲಿಂಗ ಸ್ವಾಮೀಜಿ, ವಿ. ಸೋಮಣ್ಣ, ಪ್ರಹ್ಲಾದ್ ಜೋಶಿ ಭಾಷಣ
- ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು
Author: admin
ನೆಲಮಂಗಲ: ಮಣ್ಣೆಯ ಗ್ರಾಮದಲ್ಲಿರುವ ಪುರಾತನ ದೇವಾಲಯ ದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲಮಂಗಲ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಮಹಿಳಾ ಘಟಕದ ಅಧ್ಯಕ್ಷರಾದ ವರ್ಷರವರ ನೇತೃತ್ವದಲ್ಲಿ ಅವರ ನೇತೃತ್ವದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಶಿದಾಸ್, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷರಾದ ಮಾಲಾ, ಸಂಘಟನೆಯ ಪದಾಧಿಕಾರಿಗಳಾದ ಆಕಾಶ್, ಚಂದುರಾವ್, ನಿಕೇಶ್, ನವೀನ್, ಸಿದ್ದರಾಮು, ಲೀವಿಂಗ್ ಸಾಪ್ ಹಾಟ್ಸ್ ಸಂಸ್ಥೆ, ಕೆರೇಕತಿಗನುರು ಗಂಗಣ್ಣ, ಗೋವೆನ ಹಳ್ಳಿ ಪುನೀತ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ವಯಂ ಸೇವಕರು, ಗ್ರಾಮ ಪಂಚಾಯ್ತಿ ಸದಸ್ಯರಾದ ಶಂಕರ್, ವಿಜಯ್, ವೀಣಾ, ರಜಿನಿ, ಸ್ವಯಂ ಸೇವಕರು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಮತ್ತು ಮುಖಂಡರು ಉಪಸ್ಥಿತರಿದ್ದರು. ವರದಿ: ಮಂಜುಸ್ವಾಮಿ.ಎಂ.ಎನ್. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಯಲದಬಾಗಿ: ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ರವರು ಇಂದು ಯಲದಬಾಗಿ ಗ್ರಾಮ ಪಂಚಾಯತಿಯ ಯಲದಬಾಗಿ ಗ್ರಾಮದಲ್ಲಿ ಸುಮಾರು 40 ಲಕ್ಷವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಎಸ್. ಆರ್.ಗೌಡ, ಕಾರ್ಯನಿರ್ವಹಣಧಿಕಾರಿಗಳು ಅನಂತರಾಜು , ಸಹಾಯಕ ಕಾರ್ಯಪಾಲಕರು ಗಂಗಾಧರ್, ಕಟ್ಟಡದ ನಿವೇಶನದ ದಾನಿಗಳು ಆನಂದ ಗೌಡ, ಯಲದಬಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಜಯರಾಮಯ್ಯ, ಉಪಾಧ್ಯಕ್ಷ ಅಂಬಿಕಾ ನಾಗರಾಜ್, ಎಲ್ಲ ಗ್ರಾಮ ಪಂಚಾಯತ್ ಸದಸ್ಯರು ಮುಖಂಡರಾದ ರಂಗನಾಥ ಗೌಡ, ಹೊನ್ನೇಶ್ ಗೌಡ, ಬಗರ್ ಹುಕುಂ ಸದಸ್ಯ ಅಣ್ಣಪ್ಪ , ಬಾದೆಗೌಡ, ರಂಗನಾಥ್, ವದ್ದೆಗೌಡ, ಶಂಬಣ್ಣ,ವೈ ಟಿ ರಾಜ್, ತರೂರ್ ಬಸವರಾಜ್, ಬಿಜೆಪಿ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಸೋಮವಾರ ನಿಧನರಾದರು. ಪಟ್ಟಮ್ಮಾಳ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು. ಬೆಳಗ್ಗೆ 10.30ರ ವೇಳೆಗೆ ರವಿಚಂದ್ರನ್ ಅವರ ಮನೆಗೆ ಪಾರ್ಥೀವ ಶರೀರವನ್ನು ತರಲಾಗುತ್ತದೆ. ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಿತ್ರದುರ್ಗ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಕನ್ಯಾಡಿ ಗ್ರಾಮದ ನಿವಾಸಿಯಾದ ದಿನೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಫೆ.25ರಂದು ಧರ್ಮಸ್ಥಳದ ಕನ್ಯಾಡಿ ಗ್ರಾಮದ ವಾಸಿ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬ ವ್ಯಕ್ತಿಯನ್ನು ಮನಬಂದಂತೆ ಥಳಿಸಿ, ಆತನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ಬಜರಂಗದಳದ, ಆರ್.ಎಸ್.ಎಸ್ . , ಶ್ರೀರಾಮ ಸೇನೆ ಹಾಗೂ ಮುಂತಾದ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆರೋಪಿ ಕೃಷ್ಣ ಅಲಿಯಾಸ್ ಕಿಟ್ಟಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದಿನೇಶ್ ಅವರನ್ನು ಥಳಿಸಿ ಅಮಾನವೀಯವಾಗಿ ಹತ್ಯೆಗೈದಿರುವ ಆರೋಪಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಮೃತರ ಕುಟುಂಬಕ್ಕೆ ರೂ.25,00,000 ಪರಿಹಾರ ನೀಡಬೇಕು. ಮೃತನ ಕುಟುಂಬಕ್ಕೆ 5 ಎಕರೆ ಜಮೀನನ್ನು ಮಂಜೂರು ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಗಳ ಮುಖಾಂತರ ರಾಜ್ಯಪಾಲರಿಗೆ ಮನವಿ…
ಹಿರಿಯೂರು: ಅಭಿಮತ ವಾರಪತ್ರಿಕೆ ಯ ಹದಿನಾರನೇಯ ವರ್ಷದ ಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಜಿ.ಎಸ್.ಮಂಜುನಾಥ್ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಪೌರಕಾರ್ಮಿಕರು ಹಗಲಿರುಳು ಸ್ವಚ್ಚತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಳೆದ 2019 ರಲ್ಲಿ ಪ್ರಥಮವಾಗಿ ಕೊರೊನಾ ಎಂಬ ಮಹಾಮಾರಿಯು ಅಪ್ಪಳಿಸಿದಾಗ ಎರಡೂವರೆ ತಿಂಗಳು , ಮೂರು ತಿಂಗಳು ನಾವು ಯಾರು ಸಹ ಮನೆಯಿಂದ ಹೊರಗಡೆ ಬರಲು ಸಹ ಭಯ ಪಡುತ್ತಿದ್ದೆವು . ಆ ಸಮಯದಲ್ಲಿಯೂ ಪೌರಕಾರ್ಮಿಕರು ಹಗಲಿರುಳು ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಡಾಕ್ಟರ್ ಗಳು , ನರ್ಸ್ ಗಳು , ರಾಜಕೀಯ ವ್ಯಕ್ತಿಗಳು, ಬಿಟ್ಟರೆ ಯಾರು ಸಹ ಅಂತಹ ಸಂದರ್ಭದಲ್ಲಿ ಹೊರಗಡೆ ಬರಲು ಸಾಧ್ಯವೆ ಇಲ್ಲ. ಐದು ಮೀಟರ್ , ಹತ್ತು ಮೀಟರ್ ದೂರ ಇರುವಂತಹ ಪರಿಸ್ಥಿತಿ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ದಿನನಿತ್ಯ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಯಾವುದೇ ಸರ್ಕಾರಗಳು ಬಂದರೂ, ಪೌರಕಾರ್ಮಿಕರ ಸಮಸ್ಯೆಗಳು ಪರಿಹಾರವಾಗದೇ ಬೆಟ್ಟದಂತೆ ನಿಂತಿದೆ. …
ತುಮಕೂರು: ಬಿಸಿಯೂಟ ನೌಕರರ ಕಡಗಣನೆ ಖಂಡಿಸಿ , ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತುಮಕೂರು ಜಿಲ್ಲಾ ಬಿಸಿಯೂಟ ತಯಾರಕರ ಫೆಡರೇಶನ್ ನ ಜಿಲ್ಲಾ ಸಂಚಾಲಕರಾದ ಕಾಂತರಾಜು ರವರು ತಿಳಿಸಿದ್ದಾರೆ. 2003 ನೇ ಇಸವಿಯಿಂದ ಇಲ್ಲಿಯವರೆಗೂ ಸತತ 19 ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿರುವ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಅಂದಿನಿಂದ ಇಲ್ಲಿಯವರೆಗೂ ₹200 ಹಾಗೂ 300 ರೂಗಳ ಗೌರವದೊಂದಿಗೆ ಕೆಲಸ ನಿರ್ವಹಿಸಲು ಶುರುಮಾಡಿದ ನೌಕರರಿಗೆ ಇದುವರೆಗೂ ಸರ್ಕಾರ ಕೇವಲ 2,600 ಹಾಗೂ 2,700 ರೂಗಳ ಸಂಬಳ ನೀಡಿ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಆದರೆ ಸರ್ಕಾರದ ನಿಯಮದ ಪ್ರಕಾರ ನಿಗದಿಮಾಡಿರುವ ಕನಿಷ್ಠ ವೇತನಕ್ಕೆ ಆಗ್ರಹಿಸಿ ಇದುವರೆಗೂ ಹಲವು ಬಾರಿ ಮನವಿ ಮಾಡಿದರೂ ಸಹ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ ಮಾರ್ಚ್ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು…
ಪಾವಗಡ: ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್. ಹೊಸಕೋಟೆ ಗ್ರಾಮದ ಯುವಕ ಸಾವಿನಲ್ಲೂ ಸಹ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದು, ಈ ತ್ಯಾಗಿ ಯುವಕನ ಮನೆಗೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಕೆಲ ದಿನಗಳ ಹಿಂದೆ ಪಾವಗಡ ಪಟ್ಟಣದ ಹೊರವಲಯದಲ್ಲಿ ಆರ್. ಹೊಸಕೋಟೆ ಗ್ರಾಮದ 39 ವರ್ಷದ ಯುವಕ ಹನುಮಂತರಾಯಪ್ಪ ಅಪಘಾತಕ್ಕಿಡಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಪಡೆಯುವಾಗ ಚಿಕಿತ್ಸೆ ಫಲಕಾ ರಿಯಾಗದೆ ಸಾವನ್ನಪ್ಪಿದ್ದು, ಸಾವಿನಲ್ಲೂ ಸಹ ಪೋಷಕರು ಯುವಕನ ಮೂತ್ರಪಿಂಡ ಹಾಗೂ ಅಂಗಾಂಗಗಳನ್ನು 4 ರೋಗಿಗಳಿಗೆ ದಾನ ಮಾಡಿ, ಅಮೂಲ್ಯ ಜೀವಗಳನ್ನು ಉಳಿಸಿ ಸಾರ್ಥಕತೆ ಮೆರೆದಿದ್ದಾರೆ. ಸಾರ್ಥಕತೆ ಮೆರೆದ ಯುವಕನ ಕುಟುಂಬಕ್ಕೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಆರ್ಥಿಕ ಸಹಾಯ ನೀಡಿ, ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಸದಸ್ಯರಾದ…
ಸಿರಾ: ಆರೋಗ್ಯ ಇಲಾಖೆ ತಾಲ್ಲೂಕಿನಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ಸಿರಾ ತಾಲ್ಲೂಕು ಶಾಸಕ ಡಾ.ರಾಜೇಶ್ ಗೌಡ ಚಾಲನೆ ನೀಡಿದರು. ಸಿರಾ ನಗರದ ಸಪ್ತಗಿರಿ ಬಡಾವಣೆಯಲ್ಲಿ ಐದು ವರ್ಷದ ಒಳಗಿನ ಮಗುವಿಗೆ ಪೊಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತ, ತಾಲೂಕು ವೈದ್ಯಾಧಿಕಾರಿಗಳು ಡಾ.ಮೋಹನ್, ಡಾ. ಡಿ.ಎಂ.ಗೌಡ,ಡಾ ರಾಮಕೃಷ್ಣ ಅರೋಗ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯು ತಾಲ್ಲೂಕಿನಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಗುರಿಯನ್ನು ಹೊಂದಿದೆ. ಕೊರೋನಾ ಮೂರನೇ ಅಲೆಯಿಂದಾಗಿ ಕಳೆದ ಜನವರಿ ತಿಂಗಳಿನಲ್ಲಿ ನಡೆಯಬೇಕಾದ ಪೊಲಿಯೋ ಅಭಿಯಾನವನ್ನು ಮುಂದೂಡಲಾಗಿತ್ತು. ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯು ಕಾರ್ಯಕರ್ತರನ್ನು ಬಳಸಿಕೊಂಡು ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ. ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು. ವರದಿ: ಎ.ಎನ್. ಪೀರ್ ,…
ಹಿರಿಯೂರು: ನಗರದ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಸುರೇಖಾಮಣಿ ಅವರ ನೇತೃತ್ವದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಾಜಿ ಸಚಿವ ಡಿ. ಸುಧಾಕರ್ ನೇಮಕಾತಿ ಪತ್ರ ವಿತರಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ಪುಷ್ಪಾ ಅಮರ್ ನಾಥ್ ಮತ್ತು ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗೀತಾನಂದಿನಿಗೌಡ ಆದೇಶದ ಮೇರೆಗೆ ನೇಮಕಾತಿ ಪತ್ರ ವಿತರಿಸಲಾಯಿತು. ಹಿರಿಯೂರು ನಗರದ 31 ವಾರ್ಡ್ ಗಳು ಹಾಗೂ 31 ಗ್ರಾಮ ಪಂಚಾಯತಿಯ ಅಧ್ಯಕ್ಷರು , ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ .ಸುಧಾಕರ್, ತಕ್ಷಣದಿಂದಲೇ ಈ ಆದೇಶ ಜಾರಿಯಾಗಿದ್ದು, ಪದಾಧಿಕಾರಿಗಳು ನಿಷ್ಠ ಹಾಗೂ ಪ್ರಾಮಾಣಿಕತೆಯಿಂದ ತಮಗೆ ವಹಿಸಿದ ಜವಾಬ್ದಾರಿಯನ್ನು ನಾಯಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿ ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್…
ಗುಬ್ಬಿ: ತಾಲ್ಲೂಕು ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವಾದ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿಗಳಾದ ಡಾ. ದೀಪಕ್ ಗೋಲ್ಚ ರವರು, ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಲ್ಸ್ ಪೋಲಿಯೊ ಲಸಿಕೆಯನ್ನು 5 ವರ್ಷಗಳ ಒಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಹಾಕಿಸಬೇಕು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು ಇದೆ ಸಂದರ್ಭದಲ್ಲಿ ಫಾರ್ಮಷಿಷ್ಟ್ ಅಧಿಕಾರಿ NH ಉಮೇಶ್ ರವರು ಮಾತನಾಡಿ, ಪಲ್ಸ್ ಪೋಲಿಯೊ ಲಸಿಕೆಯನ್ನು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡಲಾಗುತ್ತಿದೆ . ಎಲ್ಲರೂ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ, ಪೋಲಿಯೊ ಮುಕ್ತ ಸಮಾಜ ನಿರ್ಮಾಣ ಮಾಡಿ. ಪೋಲಿಯೊ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ವಂದಂತಿಗಳಿಗೆ ಕಿವಿಕೊಡಬೇಡಿ ಲಸಿಕೆಯನ್ನು ಹಾಕಿಸದಿದ್ದರೆ ಬೆಳೆಯುತ್ತಿರುವ ಮಕ್ಕಳಲ್ಲಿ ಅಂಗವಿಲತೆಯಾಗುವ ಸಾಧ್ಯತೆ ಇರುತ್ತದೆ ಎಂದು ಜಾಗೃತಿ ಮೂಡಿಸಿದರು. ಇದೆ ಸಂದರ್ಭದಲ್ಲಿ ಸಮಾಜ ಸೇವಕರು, , ಶ್ರೀ ಜೈ…