Subscribe to Updates
Get the latest creative news from FooBar about art, design and business.
- ಸಿದ್ದಗಂಗಾ ಮಠದಲ್ಲಿ ಸಂಭ್ರಮದ ನಾಮಕರಣ ಮಹೋತ್ಸವ: 119 ಮಕ್ಕಳಿಗೆ ‘ಶಿವಕುಮಾರ’ ನಾಮಕರಣ
- ಎಲ್ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
- ಡಾ.ಬಾಬು ಜಗಜೀವನರಾಮ್’ರವರ119ನೇ ಜಯಂತಿ ಆಚರಣೆ
- ತಿಪಟೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ: ಕೆ.ಟಿ.ಶಾಂತಕುಮಾರ್ ಎಚ್ಚರಿಕೆ
- ತಿಪಟೂರು: ಕಾರು–ಬೈಕ್ ನಡುವೆ ಭೀಕರ ಅಪಘಾತ: ವೆಲ್ಡಿಂಗ್ ಕಾರ್ಮಿಕ ಸಾವು
- ಶಿರಾ ಬಳಿ ಭೀಕರ ರಸ್ತೆ ಅಪಘಾತ: ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ, ಇಬ್ಬರು ಸಾವು
- ಡಾ.ಶಿವಕುಮಾರ್ ಸ್ವಾಮೀಜಿಗಳಿಂದಾಗಿ ತುಮಕೂರು ದಾಸೋಹ ಯೂನಿವರ್ಸಿಟಿಯಾಗಿದೆ: ಹಿರೇಮಠ ಶ್ರೀ
- ನಿಂದನೆ: ಟೆಂಪಲ್ ವಿಭಾಗೀಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ವಿರುದ್ಧ ಗುತ್ತಿಗೆದಾರರಿಂದ ಪ್ರತಿಭಟನೆ
Author: admin
1. ಗೋವಾನಲ್ಲಿದೆ ಫಾರೆನರ್ಸ್ ಓನ್ಲಿ ಬೀಚ್ – ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ವಿದೇಶಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ, ಆದರೆ ಇಲ್ಲಿ ಕೆಲವು ಕಡಲತೀರಗಳಿಗೆ ಭಾರತೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ಕಡಲತೀರಗಳು ವಿದೇಶಿಯರಿಗೆ ಮಾತ್ರ ಇವೆ. ವಿದೇಶಿ ಪ್ರವಾಸಿಗರಿಗಾಗಿಯೇ ಇಂತಹ ಬೀಚ್ ಮಾಡಲು ಕಾರಣ ಎಂದರೆ ಅವರ ಆಚಾರ-ವಿಚಾರ ಮತ್ತು ಸಾಂಸ್ಕೃತಿಕ ವಾತಾವರಣ ಭಾರತಕ್ಕಿಂತ ಭಿನ್ನವಾಗಿದೆ. ಈ ಕಡಲತೀರಗಳಲ್ಲಿ, ಅವರು ತನ್ನ ಜಾಗದಲ್ಲಿ ವಾಸಿಸುವಾಗ ಆರಾಮವಾಗಿ ಪ್ರಕೃತಿಯನ್ನು ಆನಂದಿಸುತ್ತಾನೆ. ಅವರ ಖಾಸಗಿತನವನ್ನು ಇಲ್ಲಿ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ. 2. ನಾರ್ತ್ ಸೆಂಟಿನಲಿ ಐಲ್ಯಾಂಡ್ ನಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ – ಉತ್ತರ ಸೆಂಟಿನೆಲ್ ಇದು ದಕ್ಷಿಣ ಅಂಡಮಾನ್‌ನ ಬಂಗಾಳ ಕೊಲ್ಲಿಯಲ್ಲಿರುವ ಸಣ್ಣ ದ್ವೀಪವಾಗಿದೆ. ಇಲ್ಲಿ ವಾಸಿಸುವ ಬುಡಕಟ್ಟುಗಳ ರಕ್ಷಣೆಯ ಉದ್ದೇಶದಿಂದ ಭಾರತ ಸರ್ಕಾರವು ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಈ ದ್ವೀಪದಲ್ಲಿ ವಾಸಿಸುವ ಬುಡಕಟ್ಟುಗಳಿಗೆ ಹೊರ ಪ್ರಪಂಚದ ಸಂಪರ್ಕವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬುಡಕಟ್ಟುಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಯಾವುದೇ ರೀತಿಯ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. 2011…
ನಿವೇಶನ ಕಬಳಿಸಿರುವ ವಿಚಾರವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಹೀತಾ ನಾಜೀನ್ ಎಂಬುವರು ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ತಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು.ಪ್ರಶ್ನಿಸಿದರೆ ಅವರ ಕಡೆಯವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇದೇ ವೇಳೆ ವಾದ-ಪ್ರತಿವಾದ ಆಲಿಸಿದ 7 ನೇ ಎಸಿಎಂಎ ನ್ಯಾಯಾಲಯ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದ ಮೇರೆಗೆ ಈಗ ಅವರು ಶಾಸಕ ಜಮೀರ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.2015 ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಜೀನ್ ಎಂಬುವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು.ನಿವೇಶನ ಖರೀದಿಸಿ ಕೆಲವರ್ಷಗಳಾದರೂ ಸೈಟ್ ಗಳ ಕಡೆ…
ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಮರಳುವಂತೆ ಕೇಳಿದೆ. ರಾಜತಾಂತ್ರಿಕರ ಕುಟುಂಬಗಳು ಉಕ್ರೇನ್ ತೊರೆದು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಕೇಳಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಉಕ್ರೇನ್‌ನ (Ukraine) ಪೂರ್ವ ಪ್ರದೇಶಗಳಲ್ಲಿ ಸರ್ಕಾರಿ ಸೇನೆ ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವೆ ಘರ್ಷಣೆಗಳು ಪ್ರಾರಂಭವಾಗಿವೆ. ಈ ಘರ್ಷಣೆಯಲ್ಲಿ (Ukraine Russia Crisis) ಇಬ್ಬರು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡೂ ಕಡೆಯಿಂದ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಈ ಪರಿಸರದ ದೃಷ್ಟಿಯಿಂದ, ಭಾರತ ಸರ್ಕಾರವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಉಕ್ರೇನ್‌ನಲ್ಲಿ ಪರಿಸ್ಥಿತಿ (Ukraine Russia Crisis) ನಿರಂತರವಾಗಿ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ಅಲ್ಲಿ ನಿಯೋಜಿಸಲಾದ ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಹಿಂತಿರುಗುವಂತೆ ನಿರ್ದೇಶಿಸಿದೆ.ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ: ಪ್ರಸ್ತುತ, ಉಕ್ರೇನ್‌ನಲ್ಲಿ ಸುಮಾರು 20,000 ಭಾರತೀಯ…
ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ,ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ದಿನದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ದಂಡಾಧಿಕಾರಿಗಳಾದ ನಾಹೀದಾ ಜಮ್ ಜಮ್ ರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮದ ಎಲ್ಲಾ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಕಾಶಾಪುರ ಗ್ರಾಮವು ಅರಸಾಪುರ ಗ್ರಾಮ ಪಂಚಾಯತಿಗೆ ಸೇರಿದ್ದು.ತಾಲ್ಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಹಾಗೂ ಸಾರ್ವಜನಿಕರು, ಬಹುತೇಕ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಯಾ ಇಲಾಖೆಯ ಕೌಂಟರ್ ಗಳಲ್ಲಿ…
ಜಗಳೂರು: ಯಕ್ಷಗಾನ ಕಲೆಯು ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜಗಳೂರು ಭಾಗ ಹಾಗೂ ಚಿತ್ರದುರ್ಗ ಬಳ್ಳಾರಿ ಜಿಲ್ಲೆಯಲ್ಲಿ ಇಂದಿಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿರುವುದು ಆಧುನಿಕ ಕಾಲದಲ್ಲಿ ಒಂದು ಅದ್ಭುತವೆ ಸರಿ ಎಂದು ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆಯ ಸಂಸ್ಥಾಪಕ ಮಹಾಲಿಂಗಪ್ಪ ಜೆ ಹೆಚ್ ಎಮ್ ಹೊಳೆ ತಿಳಿಸಿದರು. ಯಕ್ಷಗಾನ ಬಯಲಾಟ ನಾಟಕ ಎಂಬುವುದು ಒಂದು ಗಂಡು ವಿದ್ಯೆ. ತಾಳ ಮೇಳ ತಮಟೆ ಗೆಜ್ಜೆ ತಬಲ ಶಾನಹಿ ಮುಂತಾದ ವಾದ್ಯಮೇಳಗಳ ಮುಖಾಂತರ ಪಾತ್ರಧಾರಿಗಳನ್ನು ಉರಿದುಂಬಿಸುವ ಬಯಲಾಟ, ಭಾಗವತರ ಪರಿ ನೋಡಲು, ಕೇಳಲು ಅದ್ಭುತವಾಗಿರುತ್ತದೆ. ಮನಮೋಹಕ ಸ್ತ್ರೀ ಪಾತ್ರವನ್ನು ಪುರುಷರು ಮಹಿಳೆಯರೇ ನಾಚುವಂತೆ ಅಭಿನಯಿಸುವುದು ಸೋಜಿಗ ಎಂದರು. ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಈ ಯುಗದಲ್ಲಿ ಸಿನಿಮಾ, ಧಾರವಾಹಿಗಳ ಮೋರೆಹೋಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ಸಹ ಜಗಳೂರು ತಾಲೂಕು ಹಿರೆಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬಯಲಾಟವನ್ನ ಉಳಿಸಿ ಬೆಳಸಿಕೊಂಡು ಬರುತ್ತಿರುವುದು ಗ್ರಾಮಿಣ ಕಲೆಗೆ ಇರುವ ಶಕ್ತಿಯನ್ನ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಬಗ್ಗನಡು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷರು ಸ್ವಾಭಿಮಾನಿ ಡಾ.ಆರ್ ಕೋದಂಡ ರಾಮ್ ಮಾರ್ಗದರ್ಶನದಲ್ಲಿ ಬಗ್ಗನಾಡು ಗ್ರಾಮ ಶಾಖೆಯ ನಾಮಫಲಕವನ್ನು ಮಾಜಿ ಸಚಿವ ಡಿ.ಸುಧಾಕರ್ ಅವರು ಉದ್ಘಾಟನೆ ಮಾಡಿದರು. ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್.ವಿ. ಅಧ್ಯಕ್ಷತೆ ವಹಿಸಿದ್ದರು. ಜೆ.ಜಿ.ಹಳ್ಳಿ ಹೋಬಳಿಯ ಉಪಾಧ್ಯಕ್ಷರಾದ ರಂಗನಾಥ್ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಕೆ. ಗೌಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಭೂಷಣ್ ಗೌಡ, ಆರ್.ಟಿ.ಗ್ರಾಮ ಪಂಚಾಯಿತಿ ಸದಸ್ಯರಾದ ನಿಂಗಮ್ಮ, ಹನುಮಂತಪ್ಪ, ರಂಗಮ್ಮ, ರಾಜಣ್ಣ , ಜಿಲ್ಲಾ ಗೌರವ ಅಧ್ಯಕ್ಷರಾದ ತಿಪ್ಪೇಸ್ವಾಮಿ ಪಿ.ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್. ವೃಷಬೇಂದ್ರ ಬಾಬು, ಬಿ.ರೊಪ್ಪ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಣ್ಣ, ಟಿ.ಸಿ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ರೇವಣ್ಣ ಸಿದ್ದಪ್ಪ, ಬಿ.(ಕಲ್ಕುಂಟೆ) ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ವಿನೋದ್ ಕುಮಾರ್, ಹಿರಿಯೂರು ತಾಲ್ಲೂಕು ಕಾರ್ಯಾಧ್ಯಕ್ಷರಾದ ರಾಘವೇಂದ್ರ ಆರ್., ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ…
ಕೊರಟಗೆರೆ : ತಾಲ್ಲೂಕಿನ ಬೈಪಾಸ್ ರಸ್ತೆಯಲ್ಲಿ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೊರಟಗೆರೆ ಮಾರ್ಗವಾಗಿ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಠಾಣಾ ಸಿಬ್ಬಂದಿ ರಾಜಶೇಖರ್ ಭೇಟಿ ನೀಡಿ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳವನ್ನು ಪರಿಶೀಲಿಸಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಯುವಕ ಕೊರಟಗೆರೆ ತಾಲ್ಲೂಕಿನ ಕಂಬದಹಳ್ಳಿಯ ಶೇಖರಪ್ಪ ಎನ್ನುವವರ ಪುತ್ರ 23ವರ್ಷ ವಯಸ್ಸಿನ ಚೇತನ್ ಎಂದು ತಿಳಿದುಬಂದಿದೆ. ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಪಾವಗಡ: ಸಿ.ಕೆ.ಪುರ ಗ್ರಾಮದಲ್ಲಿ ಶ್ರೀ ಚನ್ನಕೇಶವ ಕ್ರಿಕೆಟರ್ಸ್ ವತಿಯಿಂದ ಏರ್ಪಡಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಹಾಗೂ ಸಮಾಜಸೇವಕರಾದ ನೆರಳು ಕುಂಟೆ ನಾಗೇಂದ್ರಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಯಿಸುಮನ ಹನುಮಂತರಾಯಪ್ಪ ಅವರು ಮಾತನಾಡಿದರು ಹಾಗೂ ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ ಟ್ರೋಫಿಗಳನ್ನು ಹಾಗೂ ಕ್ರೀಡಾಪಟುಗಳಿಗೆ ಮೆಡಲ್ ಗಳನ್ನು ವಿತರಿಸಿದರು. ಟೂರ್ನಿಯ ಅಧ್ಯಕ್ಷತೆಯನ್ನು ಅಜಯ್ ನಾಗೇಶ್ ರಾವ್ ಅವರು ವಹಿಸಿಕೊಂಡಿದ್ದರು. ಬಿಂದುಮಾಧವ ರಾವ್ ಅವರು ಕ್ರೀಡಾಪಟುಗಳಿಗೆ ಕ್ರೀಡಾಸ್ಫೂರ್ತಿಯ ಕುರಿತು ತಿಳಿಸಿದರು. ಟೂರ್ನಿಯ ಅತಿಥಿಗಳಾಗಿ ಸಿ.ಕೆ.ಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಮ್ಮ ಈರಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಮತಾ ನಾಗರಾಜ್ ಕೊತ್ತೂರು ನಾಗೇಂದ್ರಕುಮಾರ್, ಪಾಳೆಗಾರ ಲೋಕೇಶ್, ದೇವಲಕೆರೆ ಅಜಯ್ ಉಪಸ್ಥಿತರಿದ್ದರು. ವರದಿ: ನಂದೀಶ್, ಕೊತ್ತೂರು ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ವಾಣಿವಿಲಾಸಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಭರಂಗಿರಿ ಮಜರೆ ತಳವಾರಹಟ್ಟಿಯಲ್ಲಿ ಸುಮಾರು 300ಕ್ಕಿಂತಲೂ ಅಧಿಕ ಮನೆಗಳಿದ್ದು, ಇಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದೆ. ಇಲ್ಲಿನ ತಳವಾರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗೊಂಡು ನಾಲ್ಕು ವರ್ಷಗಳೇ ಕಳೆದರೂ, ಬಿಲ್ ಪಾಸ್ ಆಗಿದ್ದರೂ, ಕುಡಿಯುವ ನೀರಿನ ಸರಿಯಾದ ವ್ಯವಸ್ಥೆಯೇ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ತಳವಾರಹಟ್ಟಿ ಗ್ರಾಮಸ್ಥರು ನಿರ್ಮಿತ ಕೇಂದ್ರದಲ್ಲಿ ವಿಚಾರಿಸಿದರೆ, ಅಧಿಕಾರಿಯಾದ ಪ್ರಕಾಶ್ ರವರು ಬೇಜಾವ್ದಾರಿತನದಿಂದ ಉತ್ತರಿಸಿದ್ದು, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ಇಲ್ಲಿನ ವಾಟರ್ ಸಪ್ಲೆ ಇಂಜನಿಯರ್ ಆದ ರಾಮಚಂದ್ರಪ್ಪ ನವರನ್ನು ವಿಚಾರಿಸಿದರೆ ಅವರು ಕೂಡ ಸರಿಯಾದ ಉತ್ತರವನ್ನು ನೀಡದೇ ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ‘ದೀಪದ ಕೆಳಗಡೆ ಕತ್ತಲೆ’ ಎನ್ನುವಂತೆ ಕರ್ನಾಟಕದಾದ್ಯಂತ ಪ್ರಖ್ಯಾತವಾದ ವಾಣಿವಿಲಾಸಸಾಗರ ಜಲಾಶಯದಲ್ಲಿ ನೀರು ಹರಿಯುತ್ತಿದ್ದರೂ, ಇಲ್ಲಿನ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಂಟಾಗಿದೆ. …
ಮಧುಗಿರಿ: ಮಧುಗಿರಿ ತಾಲ್ಲೂಕು ಕಂದಾಯ ಇಲಾಖೆ, ವತಿಯಿಂದ ದೊಡ್ಡೇರಿ ಹೋಬಳಿಯ ಸಿಂಗಾರವತನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ” ಕಾರ್ಯಕ್ರಮವನ್ನು ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಸವಲತ್ತು ಹಾಗೂ ಸೌಲಭ್ಯಗಳನ್ನು ಗ್ರಾಮದ ಸಾರ್ವಜನಿಕರು ಪಡೆಯುವ ಕಾರ್ಯಕ್ರಮವಾಗಿದೆ. ವೃದ್ದಾಪ್ಯಾ ವೇತನ, ವಿಶೇಷ ಚೇತನ ವೇತನ, ಮನಸ್ವಿನಿ, ವಿಧವಾ ವೇತನಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರಿಂದ ಗ್ರಾಮದ ರೈತರ, ಸಾರ್ವಜನಿಕರ ,ಸಾರಿಗೆ, ಶಾಲೆಗಳ ನಿರ್ಮಾಣ ಹಾಗೂ ID ಹಳ್ಳಿಯಲ್ಲಿ ನೂತನ ಪೊಲೀಸ್ ಠಾಣೆ ನಿರ್ಮಾಣ ಸೇರಿದಂತೆ, ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸುವ ಕಾರ್ಯ ಕ್ರಮವಾಗಿದೆ. ID ಹಳ್ಳಿ ಹೋಬಳಿ ಅಭಿವೃದ್ದಿಗೆ 46 ಕೋಟಿ ಅನುದಾನ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂಪು ರೇಷೆ ಸಿದ್ದಪಡಿಸಲಾಗಿದೆ. ಸರ್ಕಾರದ ಎಲ್ಲಾ ಸವಲತ್ತುಗಳನ್ನು “ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರು. ಇದೇ…