nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ

    May 21, 2026

    ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?

    May 21, 2026

    ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ

    May 21, 2026
    Facebook Twitter Instagram
    ಟ್ರೆಂಡಿಂಗ್
    • ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ
    • ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?
    • ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ
    • ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು
    • ತುಮಕೂರು ಜಿಲ್ಲೆಯ ಅಸ್ತಿತ್ವ ಕಳೆಯಬೇಡಿ: ಬೆಂಗಳೂರು ಉತ್ತರ ಜಿಲ್ಲೆ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ
    • ತುಮಕೂರು: ಅಕ್ರಮ ಶೆಡ್ ನಿರ್ಮಿಸಲು ಹೊರಟಿರುವವರನ್ನು ತೆರವುಗೊಳಿಸಲು ಮನವಿ
    • ಕುಣಿಗಲ್: ಗ್ರಾಪಂ ಸ್ವತ್ತಿನಲ್ಲಿ ಅಕ್ರಮ ಮಳಿಗೆ: ಒತ್ತುವರಿ ಜಾಗದಲ್ಲಿ ಗ್ರಂಥಾಲಯಕ್ಕೆ ದಲಿತ ಸಂಘಟನೆ ಆಗ್ರಹ
    • ತುಮಕೂರು: ಕಂಪ್ಯೂಟರ್ ಡಿಟಿಪಿ ತರಬೇತಿಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ,ಕಾಶಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ
    ಕೊರಟಗೆರೆ February 20, 2022

    ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ,ಕಾಶಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

    By adminFebruary 20, 2022No Comments2 Mins Read
    grama vasthavya

    ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ,ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ದಿನದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ದಂಡಾಧಿಕಾರಿಗಳಾದ ನಾಹೀದಾ ಜಮ್ ಜಮ್ ರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮದ ಎಲ್ಲಾ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.


    Provided by
    Provided by

    ಕಾಶಾಪುರ ಗ್ರಾಮವು ಅರಸಾಪುರ ಗ್ರಾಮ ಪಂಚಾಯತಿಗೆ ಸೇರಿದ್ದು.ತಾಲ್ಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಹಾಗೂ ಸಾರ್ವಜನಿಕರು, ಬಹುತೇಕ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಯಾ ಇಲಾಖೆಯ ಕೌಂಟರ್ ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ತಕ್ಷಣ ಅಧಿಕಾರಿಯ ಗಮನಕ್ಕೆ ತಂದ ಸ್ಥಳದಲ್ಲಿಯೇ ರೈತರಿಗೆ ಪರಿಹಾರ ಒದಗಿಸಲಾಯಿತು.

    ತೋಟಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ರೈತ ರವಿಕುಮಾರ್ ಪ್ರಶ್ನಿಸಿ ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಕೇಳಿದಾಗ ಸಹಾಯಕ‌ ನಿರ್ದೇಶಕಿ ಪುಷ್ಪಲತಾ ಸಮರ್ಪಕ ಉತ್ತರ ನೀಡದೇ ತಡಬಡಾಯಿಸಿದರು.ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಇದುವರೆಗೂ ಯಾವುದೆ ಕಾರ್ಯಗಾರವನ್ನು ಏರ್ಪಡಿಸಿಲ್ಲ.ಈ ಇಲಾಖೆಗೆ ಬರುವ ಯೋಜನೆಗಳ ಮಾಹಿತಿಯನ್ನು ರೈತರಿಗೆ ತಿಳಿಸಿಲ್ಲ. ಈ ಭಾಗದ ಗ್ರಾಮಕ್ಕೆ ಒಂದು ಬಾರಿಯು ಅಧಿಕಾರಿಗಳು ಭೇಟಿ ನೀಡಿಲ್ಲ. ತಕ್ಷಣ ತಹಶೀಲ್ದಾರ್ ಮದ್ಯಪ್ರವೇಶಿಸಿ ಈಗಲೇ ರೈತನ ಜಮೀನಿಗೆ ಭೇಟಿ ನೀಡಿ ಪರಿಹಾರ ಸೂಚಿಸುವಂತೆ ಅಧಿಕಾರಿಗೆ ತಿಳಿಸಿದರು.

    ವಲಯ ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ರವರಿಗೆ ರೈತರು ಪ್ರಶ್ನೆ ಕೇಳಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ರೈತರ ಕುರಿ ಮೇಕೆಗಳ ರೊಪ್ಪಕ್ಕೆ ನೇರವಾಗಿ ರಾತ್ರಿ ಹೊತ್ತಿನಲ್ಲಿ ಚಿರತೆಗಳು ದಾಳಿ ಇಡುತ್ತೀವೆ. ರೈತರ ಕುರಿ ಮೇಕೆಗಳನ್ನು ಚಿರತೆ ಕೊಂದು ತಿನ್ನುತ್ತಿದೆ. ಇದಕ್ಕೆ ಅಧಿಕಾರಿ ಉತ್ತರಿಸಿ ಈಗಾಗಲೇ ಚಿರತೆ ಹಿಡಿಯಲು, ಈ ಭಾಗದಲ್ಲಿ ಎರಡು ಭೋನುಗಳನ್ನು ಇಡಲಾಗಿದೆ. ಅದರೆ ಚಾಣಾಕ್ಷ ಚಿರತೆ ಭೋನಿನ ಪಕ್ಕದಲ್ಲಿ ಹಾದುಹೋಗಿರುವ ಚಿತ್ರ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಅದರೆ ಚಿರತೆ ಮಾತ್ರ ಭೋನಿನೋಳಗೆ ಬೀಳುತ್ತಿಲ್ಲ ಎಂದು ಉತ್ತರಿಸಿದರು.

    ಈ ಕಾರ್ಯಕ್ರಮದಲ್ಲಿ ಅರಸಾಪುರ ಗ್ರಾಪಂ ಅದ್ಯಕ್ಷ ರಾಮಕೃಷ್ಣ, ಪಿಡಿಓ ಸುರೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿಡಿಪಿಒ ಅಂಬಿಕಾ, ನಾಗರಾಜು ಹೆಚ್, ಬೆಸ್ಕಾಂ ಇಂಜಿನಿಯರ್ ಮಲ್ಲಣ್ಣ, ಪೋಲಿಸ್ ಇಲಾಖೆಯ ಮುಖ್ಯ ಪೇದೆ ಬಾಲನಾಯ್ಕ್, ಗ್ರಾಮಸ್ಥರು, ಹಾಗೂ ರೈತರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ

    May 21, 2026

    ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು

    May 21, 2026

    ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ

    May 19, 2026

    Leave A Reply Cancel Reply

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ

    May 21, 2026

    ಕೊರಟಗೆರೆ : ದೇಶದ ಶೇ.60 ಭಾಗ ಉದ್ಯೋಗ ಸೃಷ್ಠಿ ಮಾಡಿ 140 ಕೋಟಿ ಜನಸಂಖ್ಯೆಗೆ ಅನ್ನ ನೀಡುವ ಕೃಷಿ ಕ್ಷೇತ್ರ.…

    ಕೋಡಿಗೇನಹಳ್ಳಿ: ಗ್ರಾಮೀಣ ಭಾಗದಲ್ಲೂ ಔಷಧ ಅಂಗಡಿಗಳು ಬಂದ್: ಬೇಡಿಕೆಗಳೇನು?

    May 21, 2026

    ಸರ್ಕಾರಿ ಗೋಮಾಳ ತೆರವಿಗೆ ಗ್ರಾಮಸ್ಥರ ಆಗ್ರಹ: 4.28 ಎಕರೆ ಬದಲು 18.27 ಎಕರೆ ಗೋಮಾಳ ಅಕ್ರಮ ಖಾತೆ ಆರೋಪ

    May 21, 2026

    ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು

    May 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.