Author: admin

ಹಿರಿಯೂರು:  ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ  ಕುವೆಂಪುರವರು ಬರೆಯದ ಸಾಹಿತ್ಯವಿಲ್ಲ,  ಸಮಾಜದ ಎಲ್ಲಾ ವಿಷಯಗಳ ಕುರಿತಂತೆ ತಮ್ಮದೇ ಆದ ಅದ್ಭುತ ಶೈಲಿ ಹಾಗೂ ವೈಚಾರಿಕ ಹಿನ್ನೆಲೆಯಲ್ಲಿ ಕಥೆ-ಕಾವ್ಯ-ಕಾದಂಬರಿಗಳನ್ನು ರಚಿಸುವ ಮೂಲಕ ಕುವೆಂಪುರವರು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಧರಣೇಂದ್ರಯ್ಯ ಹೇಳಿದರು. ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಕುವೆಂಪುರವರ 116 ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರು ಮಾತನಾಡಿದರು. ಇಂದಿನ ಯುವಜನತೆ ಜಡತ್ವದಿಂದ ಹೊರಬಂದು ಕ್ರಿಯಾಶೀಲತೆಯಿಂದ ಕೂಡಿದವರಾಗಿ ಕುವೆಂಪುರವರ ವೈಚಾರಿಕತೆ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡಬೇಕಲ್ಲದೆ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಮನಸ್ಸಿನ ಅಂಧಕಾರವನ್ನು ಅಳಿಸಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಕುವೆಂಪುರವರ ದಿನಾಚರಣೆಯನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಆದೇಶಿಸಿರುವುದು ಶ್ಲಾಘನೀಯ…

Read More

ತುಮಕೂರು: ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯು ಸಾವಿತ್ರಿ ಬಾಯಿ ಪುಲೆ ಮಹಿಳಾ ಸ್ವ ಸಹಾಯ ಸಂಘ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ದಲಿತ ಸಂಘಟನೆಗಳ ಒಕ್ಕೂಟ ದ ವತಿಯಿಂದ ಹೊಸಹಳ್ಳಿ ಗ್ರಾಮದಲ್ಲಿ  ನಡೆಯಿತು. ಈ ವೇಳೆ ಮಾತನಾಡಿದ ಮುಖಂಡರು ಸಾವಿತ್ರಿ ಬಾಯಿ ಫುಲೆ ಅವರ ಇತಿಹಾಸವನ್ನು ತಿಳಿಸಿದರು.  ಬಳಿಕ ಸಿಹಿ ಹಂಚುವ ಮೂಲಕ ಸರಳವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತಿ ಎಂ.ರಾಮಯ್ಯ ಮತ್ತು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ  ಜಿಲ್ಲಾಧ್ಯಕ್ಷರು  ನಟರಾಜು ಜಿ.ಎಲ್. ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರು ರಾಜಣ್ಣ ಯಲದಬಾಗಿಯವರನ್ನು ಗ್ರಾಮದ ಸಾವಿತ್ರಿಬಾಯಿ ಫುಲೆ ಸ್ವಸಹಾಯ ಸಂಘದವರು ಸನ್ಮಾನ ಮಾಡಲಾಯಿತು. ಈ ವೇಳೆ  ಮಹಿಳಾ ಅಧ್ಯಕ್ಷೆ ಮಂಜುಳಾ ಹಾಗೂ ಸಂಘದ ಪದಾಧಿಕಾರಿಗಳಾದ  ಮಂಜುಳ ಎನ್,  ರೂಪಾ, ಶ್ವೇತಾ,  ಅನು,  ರೂಪ,  ಅಂಜನಮ್ಮ, ಅಂಜಿನಮ್ಮ,  ಗೌರಮ್ಮ, ಅನಂತಕುಮಾರಿ,  ನಂದಕುಮಾರಿ,  ಮಂಜಮ್ಮ,  ಮಾಲಾಶ್ರೀ,  ಜಯಲಕ್ಷ್ಮೀ,  ಶಕುಂತಲಾ, ಸಿದ್ದಗಂಗಮ್ಮ, ಶಿವಮ್ಮ ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ಸಮವಸ್ತ್ರ ಧರಿಸಿ…

Read More

ತುಮಕೂರು: ಭಾರತದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರು ಶಾಂತಿ ಮತ್ತು ಸಹಬಾಳ್ವೆಯಿಂದ ಎಲ್ಲ ಸಮುದಾಯದ ಜನರೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವು ಮತೀಯ ದುಷ್ಕರ್ಮಿಗಳು ಚರ್ಚ್ ಗಳು, ಪಾದ್ರಿಗಳು ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿದ್ದು, ದ್ವೇಷದ ಭಾಷಣದ ಮೂಲಕ  ಏಕತೆಗೆ ಧಕ್ಕೆ ತರುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ. ಹರಿದ್ವಾರದಲ್ಲಿ ನಡೆದಿರುವ ಧರ್ಮ ಸಂಸತ್ ಸಭೆಯಲ್ಲಿ ಮತೀಯ ಭಾವನೆಯುಳ್ಳ ನಾಯಕರು ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಕಡಿತೀವಿ, ಬಡಿತೀವಿ ಎಂದು ಹೇಳಿಕೆ ನೀಡಿದರೂ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಮಾತನಾಡದೇ ಇರುವುದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದೆ. ತೇಜಸ್ವಿ ಸೂರ್ಯ ತನ್ನ ಮಾತುಗಳನ್ನು ವಾಪಸ್ ಪಡೆದಿದ್ದರೂ, ಈ ರೀತಿಯ ಮಾತುಗಳು ಸಮಾಜದ ಸೌಹಾರ್ದತೆಗೆ ಧಕ್ಕೆ ತರುತ್ತಿದೆ.  ಪಾಂಡವಪುರದಲ್ಲಿ  ಶಾಲೆಗೆ ನುಗ್ಗಿ ಕ್ರಿಸ್ಮಸ್ ಗೆ ಹಬ್ಬ ಆಚರಿಸದಂತೆ ತಡೆಯಲಾಗಿದೆ. ಗೋಕಾಕ್ ನಲ್ಲಿ ಕೆಲವು ವ್ಯಕ್ತಿಗಳು ಚರ್ಚ್ ಗೆ…

Read More

ತುಮಕೂರು:  ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ  ಮುಂಜಾನೆ ಗೆಳೆಯರ ಬಳಗದ ತುಮಕೂರು ನಗರದ ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರ 74ನೇ ಹುಟ್ಟು ಆಚರಣೆಯನ್ನು ಆಚರಿಸಲಾಯಿತು. ಇಂದು ಬೆಳಿಗ್ಗೆ ಪ್ರಾತಃಕಾಲದ ವಾಕಿಂಗ್ ಸಮಯದಲ್ಲಿ 74ನೇ ವಸಂತಕ್ಕೆ ಕಾಲಿಟ್ಟ  ಆನಂದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಮುಂಜಾನೆ ಗೆಳೆಯರ ಬಳಗದ ಸದಸ್ಯ ಧನ್ಯಕುಮಾರ್ ಮಾತನಾಡಿ, ಹೋಬಳಿ ತಾಲ್ಲೂಕು ರಾಜ್ಯ ದೇಶಗಳ ಮಟ್ಟದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ 74 ಇಳಿವಯಸ್ಸಿನಲ್ಲೂ ನವಯುವಕನಂತೆ ಸಾಧನೆಗೆ ಸಿದ್ದವಿರುವ ಆನಂದ್ ಅವರ ಕಾರ್ಯ ವೈಖರಿ ಶ್ಲಾಘನೀಯ ಎಂದರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿರುವ ಆನಂದ್ ಅವರು ಅನೇಕ ಕ್ರೀಡಾಸಕ್ತರುನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ ಹಲವು ಕ್ರೀಡಾಸಕ್ತರಿಗೆ ಕ್ರೀಡಾ‌ ಉಪಕರಣ ಹಾಗೂ ಶೂ, ಬಟ್ಟೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ತೆರಳಲು ಉಚಿತ ಪ್ರವಾಸ ಖರ್ಚು ಭರಿಸುತ್ತಿದ್ದರು. ಇಂತಹ ಅಮೋಘ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿಗೆ ಗೌರವಾರ್ಥವಾಗಿ…

Read More

ಮಧುಗಿರಿ: ಕೇಂದ್ರ ಸರ್ಕಾರವು ಇಂದಿನಿಂದ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ನಡೆಯಿತು. ಶಾಸಕರಾದ ಎಂ.ವಿ.ವೀರಭದ್ರಯ್ಯ ಇಂದು ಮಧುಗಿರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೊವಿಡ್ ಲಸಿಕೆ ಕಾರ್ಯಕ್ರಮದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಶನ್ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಬೆಂಗಳೂರಿನ ನಯನ ಸಭಾಂಗಣ ( ರವೀಂದ್ರ ಕಲಾಕ್ಷೇತ್ರ) ದಲ್ಲಿ ಲೇಖಕಿ ರೂಪಾ ಜಿ.ಎಂ. ರವರ ಚೊಚ್ಚಲ ಕಾದಂಬರಿ” ಬಂಧಗಳ ಬಲೆಯೊಳಗೆ ” ಕೃತಿಯನ್ನು  ಕರ್ನಾಟಕ ರೈಲ್ವೇಸ್ ಐಪಿಎಸ್, ಎಡಿಜಿಪಿ  ಭಾಸ್ಕರ್ ರಾವ್ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ  ಉದ್ಘಾಟನೆ ನೆರವೇರಿಸಿದರು.  ಕೃತಿಯ ಪರಿಚಯವನ್ನು ಸಾಹಿತಿಗಳಾದ ಡಾ.ಬೇಲೂರು ರಘುನಂದನ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮಿ ಎಸ್ ಎ. ಗೋವಿಂದರಾಜು, ಪಿ.ರಾಜಶೇಖರ್, ಶಂಕರ್ ಬೆನ್ನೂರ್, ಸಂತೋಷ ಹುಣಸನಹಳ್ಳಿ, ದೇವರಾಜು ಚನ್ನಸಂದ್ರ, ಮಾಲತೇಶ್ ಮಾಳಮ್ಮನವರ್ ಉಪಸ್ಥಿತರಿದ್ದರು. ವರದಿ: ಆಂಟೋನಿ, ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹೊಸ ವರ್ಷ ಪ್ರಾರಂಭ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. 300ರೂ.ಗಳ ವಿಶೇಷ ದರ್ಶನವೆಂದು ಹಣ ಪಡೆಯುತ್ತಿದ್ದು, ಆಡಳಿತ ಮಂಡಳಿಯ ವಿರುದ್ಧ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ. ಹೊಸವರ್ಷದ ಪ್ರಯುಕ್ತ ನಿನ್ನೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಾಯಿಯ ದರ್ಶನಕ್ಕೆ ಆಗಮಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಧಿಸಲಾಗಿತ್ತು. ಈ ಬಾರಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲದೇ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.ಹೊಸ ವರ್ಷದಲ್ಲಿ ಬೆಟ್ಟಕ್ಕೆ ಭಕ್ತರು ಬರುತ್ತಾರೆಂಬ ನಿರೀಕ್ಷೆಯಲ್ಲಿ 300ರೂ.ಗಳ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಳದ ಆಡಳಿತಾಕಾರಿ ಯತೀಂದ್ರ ಎಂಬವರು 300ರೂ.ಗಳ ವಿಶೇಷ ದರ್ಶನದ ರಸೀದಿ ನೀಡುತ್ತಿದ್ದು, ಇಷ್ಟೊಂದು ಹಣ ಯಾಕೆ ಕೊಡಬೇಕು? ಇದು ಸುಲಿಗೆಯಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಜಿ.ಟಿ.ದೇವೇಗೌಡರನ್ನು ಸಂಪರ್ಕಿಸಿದಾಗ ಅವರು ನನಗೆ ಆ ವಿಷಯ…

Read More

ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 33,750 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. 123 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಒಟ್ಟು 1,45,582 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ 10,846 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ 3,42,95,407 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಒಂದು ದಿನದಲ್ಲಿ 123 ಜನ ಸೋಂಕಿತರು ಸಾವನ್ನಪ್ಪಿರುವುದು ಸೇರಿದಂತೆ ಈ ಮೂಲಕ ಒಟ್ಟು ದೇಶದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 4,81,893ಕ್ಕೆ ಏರಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆದರೆ ಕಳೆದ ಒಂದು ವಾರದಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3,194, ಮಹಾರಾಷ್ಟ್ರದಲ್ಲಿ 11,877, ಕರ್ನಾಟನದಲ್ಲಿ 1,187 ಪ್ರಕರಣಗಳು ಪತ್ತೆಯಾಗಿವೆ. ಶೇ.28ರಷ್ಟು ಕೋವಿಡ್ ಕೇಸ್ಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿರುವುದು ಆತಂಕಕ್ಕೆ ಎಡೆಮಾಡಿದೆ. ಕೋವಿಡ್ ಜೊತೆಗೆ ಓಮಿಕ್ರಾನ್ ವೈರಸ್ ಸೋಂಕಿನ ಪ್ರಕರಣಗಳು ಕೂಡ…

Read More

ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ನೂತನ ವರ್ಷದ ಸಂಘದ ಕ್ಯಾಲೆಂಡರ್  ಮತ್ತು ಡೈರಿಯನ್ನು ಬೆಂಗಳೂರಿನ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಹರಿಪ್ರಸಾದ್ ಚಲನಚಿತ್ರ ನಿರ್ಮಾಪಕರು ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಎಸ್.ಸೋಮಶೇಖರ್  ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಪ್ರಖ್ಯಾತ ವೈದ್ಯರಾದ ಅಂತ ಡಾ.ರಕ್ಷಿತ್ ಗೌಡ‌ (ಫಿಜಿಸಿಯನ್) ಅವರು ಮಾತನಾಡಿ, ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ವೇದಿಕೆಯ ಮೇಲಿರುವ ಎಲ್ಲ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸುತ್ತಾ, ಈ ವೇದಿಕೆಗೆ ನಾನು ಚಿಕ್ಕವನಾದರೂ ನನ್ನ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿರುವುದು ನನಗೆ ತುಂಬಾ ಸಂತೋಷದ ವಿಷಯ.  ಪತ್ರಕರ್ತರು ಈ ದೇಶದ ಬೆನ್ನೆಲುಬು  ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೆದ್ದಿರಬಹುದು ಆದರೆ,  ಈ ದೇಶದ ಪ್ರಧಾನಿ ಆಗಬೇಕಾದರೆ 50% ಪತ್ರಕರ್ತರ ಪರಿಶ್ರಮದಿಂದ ಎನ್ನಬಹುದು ಎಂದರು. ಇನ್ನೂ ಕೋವಿಡ್ 19 ಬಗ್ಗೆ ಮಾತನಾಡಿ,  ಜನವರಿ ಮತ್ತು ಫೆಬ್ರವರಿ ಕೊನೆಯಲ್ಲಿ ಕೋವಿಡ್ 19 ಮೂರನೇ ಅಲೆ ಜಾಸ್ತಿಯಾಗುತ್ತಿದೆ.…

Read More

ಹಿರಿಯೂರು:  ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಅವರು  ವಾರ್ಡ್ ನಂ 8ರ ಮಿರ್ಜಾ ಬಡಾವಣೆಯಲ್ಲಿ   ಮಾಜಿ ಸಚಿವರಾದ ಡಿ.ಸುಧಾಕರ್ ನೀಡಿರುವಂತಹ  ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ಹಂಚುವ ಮೂಲಕಹೊಸ ವರ್ಷದ ಶುಭಾಶಯಗಳು ತಿಳಿಸಿದರು . ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಹಾಗೂ ಸಾದತ್ ಉಲ್ಲಾ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್.  ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More