nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!

    August 11, 2026

    ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

    August 11, 2026
    Facebook Twitter Instagram
    ಟ್ರೆಂಡಿಂಗ್
    • ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
    • ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!
    • ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
    • ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ
    • ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ
    • ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’
    • ಬೆಳಕುಣಿ (ಚೌದ್ರಿ)–ಮುಂಗನಾಳ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ: ತಕ್ಷಣ ದುರಸ್ತಿಗೆ ಜೀವನ್ ಮಾಳೆಗೆ ಆಗ್ರಹ
    • ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶುದ್ಧ ನೀರಿನ ಘಟಕ ರಿಪೇರಿಗೆ ಮುಂದಾಗದ ಅಧಿಕಾರಿಗಳು: ಕುಡಿಯುವ ನೀರಿಲ್ಲದೇ ಸಾರ್ವಜನಿಕರ ಪರದಾಟ
    ಕೊರಟಗೆರೆ February 10, 2022

    ಶುದ್ಧ ನೀರಿನ ಘಟಕ ರಿಪೇರಿಗೆ ಮುಂದಾಗದ ಅಧಿಕಾರಿಗಳು: ಕುಡಿಯುವ ನೀರಿಲ್ಲದೇ ಸಾರ್ವಜನಿಕರ ಪರದಾಟ

    By adminFebruary 10, 2022No Comments2 Mins Read
    watar

    ಕೊರಟಗೆರೆ: ತಾಲ್ಲೂಕಿನಲ್ಲಿ ಚನ್ನರಾಯನದುರ್ಗ ಗ್ರಾಮವು ಒಂದು ದೊಡ್ಡ ಹೋಬಳಿ ಕೇಂದ್ರ ಈ ಚನ್ನರಾಯನದುರ್ಗಕ್ಕೆ ಏಳು ಸುತ್ತಿನ ಕೋಟೆ ಎಂದು ಕರೆಯಲಾಗುತ್ತದೆ. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ಮಧುಗಿರಿಯ ಪಾಳೆಗಾರನಾದ ಚಿಕ್ಕಪ್ಪ ಗೌಡ ಎಂಬ ಅರಸ ತನ್ನ ಆಳ್ವಿಕೆಯನ್ನು ನಡೆಸಿದ್ದ ನಂತರ, ಮೈಸೂರು ಸಂಸ್ಥಾನದ ಚಿಕ್ಕದೇವರಾಯ ಅರಸನ ಆಳ್ವಿಕೆಯಲ್ಲಿ ಈ ಚೆನ್ನರಾಯನದುರ್ಗ ಗ್ರಾಮವು ಒಂದು ಬಹುಮುಖ್ಯ ಭಾಗವಾಗಿತ್ತು. ಆದರೆ ಇಂತಹ ಇತಿಹಾಸವುಳ್ಳ ಈ ಚೆನ್ನರಾಯನದುರ್ಗ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಶುದ್ಧಕುಡಿಯುವ ನೀರಿನ ಕೊರತೆಯು ಸಹ ಹೆಚ್ಚಾಗಿ ಕಂಡು ಬರುತ್ತಿದೆ. ಇದರ ವಿರುದ್ಧ ಸ್ಥಳೀಯ ಜನನಾಯಕರ ಹಾಗೂ ಅಧಿಕಾರಿಗಳ ವಿರುದ್ಧ ಚೆನ್ನರಾಯನದುರ್ಗ ಗ್ರಾಮದ ಗ್ರಾಮಸ್ಥರು ಹಿಡಿಶಾಪ ವನ್ನು ಹಾಕುತ್ತಿದ್ದಾರೆ..

    ಸುಮಾರು 4 ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಅಂದಾಜು 10 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿತ್ತು ಅದರಂತೆ ಶಾಸಕರ ಮಾರ್ಗದರ್ಶನದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕಳೆದ ಒಂದೂವರೆ ವರ್ಷಗಳಿಂದ ಈ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು ಇಲ್ಲಿಯವರೆಗೂ ಕೂಡ ಇದನ್ನ ರಿಪೇರಿ ಮಾಡಿಸಿ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳು  ಮುಂದೆ ಬಂದಿಲ್ಲ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ DYFI ಸಂಘಟನೆಯ ಯುವ ಮುಖಂಡ ರಾಘವೇಂದ್ರ ಮಾತನಾಡಿ, ಸುಮಾರು ಒಂದುವರೆ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು, ಇದರ ಬಗ್ಗೆ ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ನಾವು ಈ ಹಿಂದೆ ತಂದಿದ್ದೆವು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ಸಹ ತಂದಿದ್ದರೂ ಕೂಡ ಅಧಿಕಾರಿಗಳು ಈ ಘಟಕವನ್ನು ರಿಪೇರಿ ಮಾಡಿಸದೆ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ನಮ್ಮ ಊರಿನಲ್ಲಿ ಈಗಾಗಲೇ ಸುಮಾರು ಜನರಿಗೆ ಕಿಡ್ನಿ ಸ್ಟೋನ್ ಕಾಯಿಲೆಯಿಂದ ನರಳುತ್ತಿದ್ದಾರೆ ಇನ್ನಾದರೂ ಅಧಿಕಾರಿಗಳು ಹಾಗೂ ಶಾಸಕರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿ, ಇತಿಹಾಸವುಳ್ಳ ಚೆನ್ನರಾಯನದುರ್ಗ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು,  ಸಾರ್ವಜನಿಕ ಬೋರ್ವೆಲ್ ನಿಂದ ಬರುವ ನೀರನ್ನು ಕುಡಿಯುವ ಸ್ಥಿತಿ ನಮಗೆ ಬಂದಿದೆ. ಹಾಗಾಗಿ ನಿರ್ವಹಣೆಯಾಗದ ಶುದ್ಧಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಿ ಊರಿನ ಗ್ರಾಮಸ್ಥರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

     ನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯ ಜೂನಿಯರ್ ಇಂಜಿನಿಯರ್ ಚಿಕ್ಕ ರಾಜು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 152 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಅಂಕಿಅಂಶದಲ್ಲಿ ಇವೆ. ಅದರಲ್ಲಿ 72-78 ಶುದ್ಧ ಕುಡಿಯುವ ನೀರಿನ ಘಟಕಗಳು ತನ್ನ ಕಾರ್ಯನಿರ್ವಹಣೆ ಮಾಡದೆ ಹಾಳಾಗಿವೆ. ಈ ಸಲುವಾಗಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ಹಿಂದಿನಿಂದಲೂ ತರಲಾಗಿದೆ. ಸುಮಾರು ಐದು ವರ್ಷಗಳನ್ನು ಪೂರೈಸಿದ 72 ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಗೆ ಬಂದಿವೆ ಇದಕ್ಕೆ ನೇರ ಹೊಣೆ ಏಜೆನ್ಸಿದಾರರು ಎಂದು ತಿಳಿಸಿದ್ದಾರೆ.

    ಇನ್ನಾದರೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲಾಧಿಕಾರಿಗಳು ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸದೆ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿಯನ್ನು ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆನ್ನುವುದು ನಮ್ಮ ಮನವಿ..

    ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ

    August 7, 2026

    ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ

    August 6, 2026

    ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ

    July 29, 2026

    Leave A Reply Cancel Reply

    Our Picks

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ದೇಹಕ್ಕೆ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ ಪುತ್ರಿ…

    ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!

    August 11, 2026

    ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

    August 11, 2026

    ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ

    August 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.