Author: admin

ಚಿಕ್ಕಮಗಳೂರು: ಶಾಲೆ- ಕಾಲೇಜುಗಳಲ್ಲಿ ಹೆಚ್ಚಾಗುತ್ತಿರುವ ಹಿಜಾಬ್, ಕೇಸರಿ ಶಾಲು ಸಮರ ಬಳಿಕ ನೀಲಿ ಶಾಲು ಎಂಟ್ರಿ ಕೊಟ್ಟ ಘಟನೆ ಚಿಕ್ಕಮಗಳೂರಿನ ಐಡಿಎಸ್‌ ಜಿ ಕಾಲೇಜಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಇಂದು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಹಾಗೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿದ್ದು ಮುಂದೆ ಏನು ಎಂಬ ಭಯದಲ್ಲಿ ಕುಳಿತಿದ್ದಾರೆ. ಸದ್ಯ ಕೆಲ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಕೆಲವು ಕಡೆ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಂ ಪ್ರವೇಶಕ್ಕೆ ತಡೆ ಹಿಡಿಯಲಾಗಿದೆ. ಮತ್ತೇ ಕೆಲವು ಕಡೆ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಾರೆ. ಈ ಘಟನೆಯ ನಡುವೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಹಿಜಾಬ್ ತೆಗೆಸಬಾರದೆಂದು ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಧರಣಿ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ಐಡಿಎಸ್‌ ಜಿ…

Read More

ತುರುವೇಕೆರೆ: ತಾಲ್ಲೂಕಿನ ತಾಳ್ಕೆರೆಯಲ್ಲಿ ಶುದ್ಧ ನೀರಿನ ಘಟಕವಿದ್ದರೂ , ಸಾರ್ವಜನಿಕರು ಸರಿಯಾಗಿ ಅದರ ಪ್ರಯೋಜನ ಪಡೆದುಕೊಳ್ಳಲು ಹೆಣಗಾಡುವ ರೀತಿ ಆಗಿದೆ. ತಾಳ್ಕೆರೆ ಪಂಚಾಯ್ತಿ ಪಕ್ಕದಲ್ಲೇ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಾಯಿನ್ ಬಾಕ್ಸ್ ಇಲ್ಲದೇ ನೀರು ತುಂಬಿಕೊಳ್ಳಲು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನೀರು ಬಿಡಲು ಯಾರೋ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದಾರೆ ಮತ್ತು ಅವರು ಬರುವವರೆಗೂ ನೀರು ಸಿಗುವುದಿಲ್ಲ. ಇದರೊಂದಿಗೆ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಮತ್ತು ಸಂಜೆ 4 ಗಂಟೆಯ ಮೇಲೆ ಮಾತ್ರ ನೀರಿನ ಲಭ್ಯತೆ ಇದೆ ಎಂದು ಬೋರ್ಡ್ ಕೂಡ ಹಾಕಲಾಗಿದೆ. ಇದ್ಯಾವುದೂ ಪಂಚಾಯ್ತಿಯ ಗಮನಕ್ಕೆ ಬಂದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಪರಿಹಾರ ನೀಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತುಮಕೂರು: ಜಿಲ್ಲೆಯ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ  ನಿನ್ನೆ ಬೀಗ ಹಾಕಿರುವ ಘಟನೆ  ನಡೆದಿದೆ. ಇತಿಹಾಸದಲ್ಲೇ ಮೊದಲ ಸಲ ಈ ಘಟನೆ ನಡೆದಿದ್ದು, ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ಧಾರೆ.  ಮುಜರಾಯಿ ಇಲಾಖೆ, ದೇವಾಲಯ ವ್ಯವಸ್ಥಾಪನ ಸಮಿತಿ ಮತ್ತು ಪರಿಚಾರಕನ ನಡುವಿನ ಗೊಂದಲ, ಸಮನ್ವಯ ಕೊರತೆಯಿಂದ ಭಕ್ತರಿಗೆ ಸಂಕಷ್ಟ ಸೃಷ್ಟಿಯಾಗಿದೆ. ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.6ರಿಂದ ಫೆ.17ರ ವರೆಗೆ ದೇವಾಲಯ ಪ್ರಧಾನ ಅರ್ಚಕರ ಹುದ್ದೆಗೆ ದೇವರಾಯನ ದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣ್ ತಾತ್ಕಾಲಿಕ ನಿಯೋಜಿಸಲು ಜಿಲ್ಲಾಧಿಕಾರಿ ಫೆ.3ರಂದು ಆದೇಶ ಮಾಡಿದ್ದಾರೆ. ಕಳೆದ ಐದು ವರ್ಷದಿಂದ ಅರ್ಚಕರನ್ನು ನೇಮಕ ಮಾಡದೇ ಮೌನ ವಹಿಸಿದ್ದ ಮುಜರಾಯಿ ಇಲಾಖೆ, ಈಗ ಏಕಾಏಕಿ ನೇಮಕ ಮಾಡಿರುವುದೇ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಈ ನಡುವೆ ಜಿಲ್ಲಾಧಿಕಾರಿ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಾತ್ಕಾಲಿಕವಾಗಿ ಲಕ್ಷ್ಮೀನಾರಾಯಣರನ್ನು ಅರ್ಚಕರಾಗಿ ನೇಮಿಸಿದ್ರು ದೇವಾಲಯ ಪರಿಚಾರಕ ಕೃಷ್ಣಚಾರ್ ಕ್ಷೇತ್ರದ ಜವಾಬ್ದಾರಿ ನೀಡಲು ನಿರಾಕರಿಸಿ, ತುಮಕೂರು ಜಿಲ್ಲಾಧಿಕಾರಿ ಆದೇಶಕ್ಕೆ…

Read More

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕಾಮೆಂಟ್ ಮಾಡುವ ಅನಾಮಧೇಯರ ಹಾವಳಿ ಹೆಚ್ಚಾಗಿದ್ದು, ಮುಜುಗರ ಉಂಟು ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೆಸ್‍ಬುಕ್‍ನಲ್ಲಿ ಖಾತೆ ಹೊಂದಿದ್ದಾರೆ.ಅದಕ್ಕೆ ಫೆಸ್‍ಬುಕ್‍ನಿಂದ ನೀಲಿ ಟಿಕ್‍ ನ ಅಧಿಕೃತ ಮಾನ್ಯತೆಯೂ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಭಾರತ್ ಕುರಿತು ದೇಶದ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳನ್ನು ಉದ್ದೇಶಿಸಿ ಮೂರು ದಿನಗಳ ಹಿಂದೆ ಭಾಷಣ ಮಾಡಿದರು. ಅದರಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು.ಈ ಕಾರ್ಯಕ್ರಮಗಳ ಪೋಟೊಗಳು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಆಗಿದ್ದವು. ಪೋಟೋ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ವನಜ ವನಜ ಎಂಬ ಹೆಸರಿನ ಖಾತೆಯಿಂದ ಆಕ್ಷೇಪಾರ್ಹ ವಿಷಯ ಪ್ರಸ್ತಾಪವಾಗಿದೆ. ನಮಸ್ಕಾರ್ ಸಿಎಂ ಸರ್, ನಾನು ನಿಮ್ಮ ಹಿಂದೆ ಕುಳಿತಿರುವ ರಾಜಕುಮಾರ್ ಪಾಟೀಲ್ ತೇಲ್ಕರ್ ಸೆಡಂ ಎಂಎಲ್‍ಎಯಿಂದ ಮೊಸ ಹೋದ…

Read More

ತಿಪಟೂರು : ನಿರಾಕಾರವಾಗಿರುವ ಚೈತನ್ಯ ಶಕ್ತಿಯಲ್ಲಿ ನಂಬಿಕೆ ಇರಿಸಿ ಶ್ರದ್ಧಾ ಭಕ್ತಿಯಿಂದ ನಡೆದಾಗ ಮಾತ್ರವೇ ಜ್ಞಾನ ಮತ್ತು ಮುಕ್ತಿಯ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಆದಿಚುಂಚನಗಿರಿ ಶಾಖಾಮಠದ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ನವಚಂಡಿಯಾಗ’ದಲ್ಲಿ ಭಾಗವಹಿಸಿ ಪೂರ್ಣಾಹುತಿ ನೀಡಿ ಮಾತನಾಡಿದರು. ಅಗೋಚರ ಹಾಗೂ ಅವ್ಯಕ್ತವಾದ ಶಕ್ತಿಯಲ್ಲಿ ವಿಜೃಂಭಿಸುವ ದೇವಿಯೂ ಜಗತ್ತನ್ನು ಕಾಪಾಡುತ್ತಿದ್ದಾಳೆ. ಇಂತಹ ದೇವಿಯ ಮಹಿಮೆಯನ್ನು ಅರಿಯಬೇಕಾದರೆ ಪಂಚೇಂದ್ರಿಯಗಳ ನಿಗ್ರಹ ಅತ್ಯವಶ್ಯಕ. ಪಂಚಭೂತಗಳಲ್ಲಿ ಅಪಾರ ನಂಬಿಕೆಯನ್ನು ಇರಿಸಿಕೊಂಡು ಬಹುನಿಷ್ಠೆಯಿಂದ ಶಕ್ತಿಯ ಆರಾಧನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಕಳೆದ 63 ವರ್ಷಗಳಿಂದ ಭಕ್ತರನ್ನು ಪೋಷಿಸಿಕೊಂಡು ಬರುತ್ತಿದ್ದ ಈ ದೇವಿಗೆ 353 ದಿನಗಳ ನಂತರ ಮತ್ತೇ ಪುನರ್ ಶಕ್ತಿಯನ್ನು ತುಂಬಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿಯೊಬ್ಬ ಮನುಷ್ಯನು ತಾಯಿಯ ಮೂಲಕವೇ ಇನ್ನುಳಿದ ದೇವಾನುದೇವತೆಗಳ ದರ್ಶನವನ್ನು ಮಾಡಬೇಕು. ಅವ್ಯಕ್ತವಾದ ಹಾಗೂ ಅಗೋಚರವಾದ…

Read More

ಉಡುಪಿ: ಜಿಲ್ಲೆ ಕುಂದಾಪುರದ ಸರಕಾರಿ ಪಿಯು ಕಾಲೇಜು ಬಳಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಸಮೀಪದ ಗಂಗೊಳ್ಳಿ ಗ್ರಾಮ ಅಬ್ದುಲ್ ಮಜೀದ್ (32) ಮತ್ತು ರಜಬ್ (41) ಎಂದು ಗುರುತಿಸಲಾಗಿದೆ. ಹಿಜಾಬ್ ಅನ್ನು ನಿಷೇಧಿಸುವ ಅಧಿಕಾರಿಗಳ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನೆ ಪ್ರತಿಭಟನೆಯಲ್ಲಿ ಬಂಧಿತರನ್ನು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಐವರು ಮಾರಕಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದರು ಮತ್ತು ಅವರಲ್ಲಿ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಾಸನ: ನವಜಾತ ಶಿಶುವನ್ನು ಶ್ವಾನಗಳು ತಿಂದುಹಾಕಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ಯಾರೋ ನವಜಾತ ಶಿಶುವನ್ನು ಎಸೆದು ಹೋಗಿದ್ದು, ನಾಯಿಗಳು ಶಿಶುವನ್ನು ಎಳೆದುಕೊಂಡು ಹೋಗುತ್ತಿದ್ದು, ಇದನ್ನು ನೋಡಿದ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ ಶಿಶುವನ್ನು ನಾಯಿಗಳು ಅರ್ಧಂಬರ್ಧ ತಿಂದು ಹಾಕಿವೆ.ಕರುಣೆ ಇಲ್ಲದ ಕ್ರೂರಿ ತಾಯಿ ಅಕ್ರಮ ಸಂಬಂಧದಿಂದ ಮಗುವಿಗೆ ಜನ್ಮ ನೀಡಿ ಬಳಿಕ ಮಗುವನ್ನು ರಸ್ತೆ ಬದಿ ಎಸೆದು ಹೋಗಿದ್ದು, ಕಣ್ಣು ಬಿಡದ ಕಂದಮ್ಮ ನಾಯಿಗಳಿಗೆ ಆಹಾರವಾಗಿದೆ. ಈ ದೃಶ್ಯಕಂಡ ಸ್ಥಳೀಯರು ಮರುಕಪಟ್ಟಿದ್ದಾರೆ. ಮೃತಪಟ್ಟ ನವಜಾತ ಶಿಶುವಿನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್‍ ನಲ್ಲಿ ನಡೆದಿದೆ. ಗುಜರಾತ್ ಮೂಲದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾಗಿದ್ದಾರೆ. ಬಜಾರ್ ಲೈನ್‍ನಲ್ಲಿ ವಾಸವಿದ್ದ ಈ ಕುಟುಂಬದವರ ಮನೆಗೆ ನಿನ್ನೆ ತಡ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವ್ಯಾಪಾರಿ ಸಮುದಾಯವಾದ ಬೈಯಾದ್ ಜನಾಂಗಕ್ಕೆ ಸೇರಿರುವ ಗಂಗರಾಮ್ ಅವರ ಪತ್ನಿ ಲಕ್ಷ್ಮಿ ಮತ್ತು ಅವರ ಮಕ್ಕಳಾದ ರಾಜ್, ಕೋಮಲ್, ಕುನಾಲ್ ಮತ್ತು ಗಂಗರಾಮ್ ಅವರ ಅಣ್ಣನ ಮಗ ಗೋವಿಂದ ಕೊಲೆಯಾದವರು. ಗಂಗರಾಮ್ ಮತ್ತು ಆತನ ಅಣ್ಣ ಇಬ್ಬರು ಬಟ್ಟೆ ವ್ಯಾಪಾರಕ್ಕೆಂದು ಕಳೆದ ಹತ್ತು ದಿನಗಳ ಹಿಂದೆ ಹೊರ ಹೋಗಿದ್ದರು. ಲಕ್ಷ್ಮೀ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ನಿನ್ನೆ ತಡ ರಾತ್ರಿ ಈ ದುರ್ಘಟನೆ ನಡೆದಿದೆ. ಹತ್ಯೆ ಮಾಡಿರುವ ಹಂತಕರು ಮನೆಯ ಬಾಗಿಲು ಹಾಕಿಕೊಂಡು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ ನೇತೃತ್ವದಲ್ಲಿ ವಾರ್ಡ್ ನಂ.8ರ ವಾರ್ಡ್ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಾಜಿ ಸಚಿವರಾದ ಡಿ.ಸುಧಾಕರ್ ನೇಮಕಾತಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಅಮ್ಮತೇಶ್ವ್ ಸ್ವಾಮಿ,  ನಗರ ಸಭೆಯ ಅಧ್ಯಕ್ಷರಾದ ಶಂಶುನ್ನಿಸಾ,  ಗೌರವಾಧ್ಯಕ್ಷರಾದ ಅಬ್ದುಲ್ ನಭಿ ವಾರ್ಡ್ ನ ಅಧ್ಯಕ್ಷರಾದ ಅಬೀಬ್ ಪುರು ರಹಮಾನ್,  ಉಪಾಧ್ಯಕ್ಷರಾದ ಹೆಚ್.ಬಾಬು,  ಎಸ್.ಪಾಪಣ್ಣ , ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ ಸೈಫುಲ್ಲಾ,  ಮಹಾಂತೇಶ್, ಮಹ್ಮದ್ ಇಸ್ಮಾಯಿಲ್ , ಇತಿಯಾಜ್ ನಯಾಜ್ಠ, ಖಚಾಂಚಿ ಹೈದರ್ ಅಲಿ,  ವಾರ್ಡ್ ನ ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು. ವರದಿ:  ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಕಲ್ಪತರು ನಾಡು ತುಮಕೂರು ಕಲೆಗಳ ತವರೂರು ಎಂದು ಹೆಸರುವಾಸಿಯಾಗಿದೆ ಇನ್ನೂ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ಕಲಾ ತಂಡಗಳು ಜಿಲ್ಲೆಯ ಹೆಸರನ್ನು ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಮಕೂರಿನ ಹೆಸರನ್ನ ಹಸಿರಾಗಿ ಉಳಿಸುವಲ್ಲಿ ಸಾಕಷ್ಟು ಕಲಾವಿದರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈ ಮೂಲಕ ತುಮಕೂರು ಸಾಕಷ್ಟು ಕಲಾತಂಡಗಳು, ವಿವಿಧ ಕಲೆಗಳು ಸೇರಿದಂತೆ ಸಾವಿರಾರು ಕಲಾವಿದರಿಗೆ ತವರುರಂತೆ ಇರುವ ತುಮಕೂರಿನಲ್ಲಿ ಆರ್ಕೆಸ್ಟ್ರಾ ಮಾಲೀಕರೊಬ್ಬರು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವ ಯುವತಿಯರನ್ನು ಫೋನ್ ಮೂಲಕ ಪುಸಲಾಯಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸುವ ಮೂಲಕ ಯುವತಿಯರ ಬಾಳಲ್ಲಿ ಆಟವಾಡುವ ಮೂಲಕ ಜಿಲ್ಲೆಯ ಕಲಾವಿದರ ಹೆಸರಿಗೆ ಮಸಿ ಬಳಿಯುವಂತಹ ಕೆಲಸವನ್ನು ತುಮಕೂರಿನ  ಆರ್ಕೆಸ್ಟ್ರಾ ಮಾಲೀಕ ನಾಣಿ ಹಂದ್ರಾಳ (ಸಂಜಯ್ ಮೆಲೋಡಿಸ್)ಎಂಬುವವರು ಮಾಡುತ್ತಿದ್ದಾರೆ ಎಂದು ಕಲ್ಪತರು ನಾಡು ತುಮಕೂರು ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಸಂಘದ ಸದಸ್ಯರು ಇಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ತುಮಕೂರಿನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಸಂಘದ ಪದಾಧಿಕಾರಿಗಳು ಕೊರೊನಾ ಸಂಕಷ್ಟ ಕಾಲದಿಂದಲೂ ಕಲಾವಿದರ ಬದುಕು…

Read More