Author: admin

ತುಮಕೂರು: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ  ಎಸಿಬಿ ಶಾಕ್ ನೀಡಿದ್ದು, ಮೂರು ಕಡೆಯ ಫಾಮ್ ಹೌಸ್‌ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಸಮಾಜ ಕಲ್ಯಾಣ ಇಲಾಖೆಯ ಜನರಲ್ ಮ್ಯಾನೇಜರ್  ಶ್ರೀನಿವಾಸ್ ಅವರಿಗೆ ಸೇರಿದ  3 ಫಾರ್ಮ್ ಹೌಸ್ ಗಳ ಮೇಲೆ ಎಸಿಬಿ ದಾಳಿ ನಡೆದಿದೆ. ತುಮಕೂರಿನ ಕೌತಮಾರನಹಳ್ಳಿ ಕೊಟ್ಟೆಗೆ ಗೊಲ್ಲಹಳ್ಳಿ ಹಾಗೂ ಮಧುಗಿರಿ ತಾಲೂಕಿನ ಪುರವರ ಬಳಿಯಿರೋ ಎಜಿಓ ಫಾಮ್ ಹೌಸ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಬೆಳಗ್ಗೆ 7 ಗಂಟೆಯಿಂದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಸಂಬಂಧ  ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸುತ್ತಿದ್ದೇವೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆಯ ಪಟ್ಟಣದ  ಸಿದ್ದಪಾಜಿ  ರಸ್ತೆ ನಿವಾಸಿ, ರಾಜಮ್ಮ ಅವರು ಅಪಘಾತದಿಂದಾಗಿ ಅಕಾಲಿಕವಾಗಿ ನಿಧನರಾಗಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಆದಿ ಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹೆಚ್.ಡಿ.ಕೋಟೆ ಪಟ್ಟಣದ ಸಿದ್ಧಪಾಜಿ ರಸ್ತೆ ನಿವಾಸಿಯಾಗಿರುವ ರಾಜಮ್ಮ ಅವರು,  ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕರ್ತವ್ಯದ ಜೊತೆಗೆ ಸಮಾಜ ಸೇವೆಗೂ ಮನಮಿಡಿದಿದ್ದರು. ಆದರೆ, ಕರ್ತವ್ಯ ಮುಗಿಸಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಲ್ಲಿನ 1ನೇ ಮುಖ್ಯ ರಸ್ತೆಯ ಶ್ರೀಮಾರಮ್ಮನ ಗುಡಿಯ ಮುಂದೆ ಹಂಸ್ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಹೆಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜಮ್ಮ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.  ಈ ಸಭೆಗೆ ಎಲ್ಲಾ ರಾಜಕೀಯ ಮುಖಂಡರು ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ದಿನಗೂಲಿ ನೌಕರರು ಹಾಜರಿದ್ದರು. ಈ ಸಭೆಯಲ್ಲಿ ಮಹಾ…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಕರ್ನಾಟಕ ಹಸಿರು ಸೇನೆ, ರೈತ ಸಂಘಟನೆ ಹಾಗೂ ಪ್ರಗತಿಪರ, ಸಂಘಟನೆಗಳು , ತುರುವೇಕೆರೆ ತಾಲೂಕು ರೈತ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್ ಗೌಡರ ನೇತೃತ್ವದಲ್ಲಿ, ಭ್ರಷ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ನೂರಾರು ಪ್ರತಿಭಟನಾಕಾರರು, ಕಾಲ್ನಡಿಗೆ ,ಮೂಲಕ ಸಂಚರಿಸಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಬೆಸ್ಕಾಂ ಕಚೇರಿಯ ಬಳಿ ತೆರಳಿ,ಕಚೇರಿಯ ಮುಂಭಾಗದಲ್ಲಿ, ನೂರಾರು ಹೋರಾಟದ ರೈತರು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕ ಸಂಘಟನೆಗಳು ಜಮಾಯಿಸಿ, ಧರಣಿ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಉದ್ದೇಶಿಸಿ ಮಾತನಾಡಿದ, ಸಿ.ಐ. ಟಿ. ಯು.ಕಾರ್ಮಿಕ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸತೀಶ್, ತುರುವೇಕೆರೆ ತಾಲೂಕಿನ, ರೈತರು ಶಾಂತಿ ಪ್ರಿಯರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಅದನ್ನು ದುರುಪಯೋಗಪಡಿಸಿಕೊಂಡು ನಮ್ಮನ್ನು ಯಾರು ಕೇಳುತ್ತಾರೆ ಅನ್ನೋ ತಾತ್ಸಾರ ತೋರಲಾಗುತ್ತಿದೆ. ರೈತರು ಸಿಡಿದು ನಿಂತ್ರೆ ಕಚೇರಿಯ ಕಟ್ಟಡನೆ ಇರಲ್ಲ. ನಾವು ಕಟ್ಟುತ್ತಿರುವ ಟ್ಯಾಕ್ಸ್ ಹಣದಲ್ಲಿ ಅಧಿಕಾರಿಗಳು ಸಂಬಳ…

Read More

ತಿಪಟೂರು:  ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಿ.ಹೊಸಳ್ಳಿಯ ಎಸ್.ಬಿ.ಕೆ ಕ್ರಿಕೆಟರ್ಸ್ ತಂಡದ ವತಿಯಿಂದ ರಾಜರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟ ನಡೆಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ     ಸಿ.ಬಿ.ಶಶಿಧರ್, ಗ್ರಾಮದ ಹಿರಿಯ ಮುಖಂಡ ಚಿದಾನಂದ್ ಮತ್ತು ಲಕ್ಷ್ಮಿ ಕ್ರಿಕೆಟರ್ಸ್ ನ ಚಿರಂಜೀವಿ  ಭಾಗವಹಿಸಿ ಮಾತನಾಡಿದರು. ಸಮಾಜ ಸೇವಕ ಬಿ.ಆರ್.ಶಶಿಧರ್,  ಗ್ರಾಪಂ ಸದಸ್ಯ ಸಿದ್ದಯ್ಯ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್, ಯುವ ಮುಖಂಡ ಶರತ್, ವಕೀಲ ಪ್ರಶಾಂತ್, ಭರತ್, ಉಮಾಶಂಕರ್, ಜಗನ್ನಾಥ್ ಮತ್ತು ಶಂಕರಲಿಂಗಪ್ಪ ಸೇರಿದಂತೆ ಎಸ್.ಬಿ.ಕೆ ಕ್ರಿಕೆಟರ್ಸ್ ನ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಹಾಗೂ  ಕ್ರೀಡಾಭಿಮಾನಿಗಳು  ಭಾಗವಹಿಸಿದ್ದರು ಈ ಪಂದ್ಯಾವಳಿಗೆ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದು,ಮೊದಲನೇ ಬಹುಮಾನ 12,000 ರೂ.ಗಳನ್ನು ಮಾದಾಪುರದ ಜೈಮಾರುತಿ ಕ್ರಿಕೆಟ್ ತಂಡ, ಎರಡನೇ ಬಹುಮಾನ 8,000 ರೂ.ಗಳನ್ನು ಬಿ.ಹೊಸಳ್ಳಿಯ  ಎಸ್.ಬಿ.ಕೆ ಕ್ರಿಕೆಟ್ ತಂಡ, ಮೂರನೇ ಬಹುಮಾನ 3,000 ರೂ.ಗಳನ್ನು  ಸಾರ್ಥವಳ್ಳಿಯ ಶ್ರೀ ಲಕ್ಷ್ಮೀ ಕ್ರಿಕೆಟರ್ಸ್…

Read More

ರಾಜೇಶ್ ರಂಗನಾಥ್ ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಉಚ್ಛನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂಬ ತೀರ್ಪು ನೀಡಿದೆ. ಸುದೀರ್ಘ ವಿಚಾರಣೆ ವಾದ ಪ್ರತಿವಾದವನ್ನು ಆಲಿಸಿದ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಹಿಜಾಬ್ ವಿವಾದಕ್ಜೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾರಂಭಗೊಂಡ ಹಿಜಾಬ್ ವಿವಾದ ರಾಜ್ಯದಾದ್ಯಂತ ಹಬ್ಬಿ ಕೊನೆಗೆ ದೇಶ ವಿದೇಶಗಳಲ್ಲೂ ಪ್ರತಿಧ್ವನಿಸಿತ್ತು. ಕಳೆದ ಫೆ. 11 ರಂದು ಉಚ್ಛನ್ಯಾಯಾಲಯ ಮಧ್ಯಂತರ ಆದೇಶವೊಂದನ್ನು ನೀಡಿ ತೀರ್ಪು ಕಾಯ್ದಿರಿಸಿತ್ತು. ಮಧ್ಯಂತರ ಆದೇಶದ ಅನ್ವಯ ತೀರ್ಪು ಪ್ರಕಟವಾಗುವವರೆಗೂ ಧಾರ್ಮಿಕ ಚಿನ್ಹೆ ಹಾಗೂ ಧಾರ್ಮಿಕತೆಯನ್ನು ಬಿಂಭಿಸುವ ಯಾವುದೇ ರೀತಿಯ ಉಡುಪು ಧರಿಸಬಾರದು ಹಾಗೆಯೇ ಎಂದಿನಂತೆ ಶೈಕ್ಷಣಿಕ ವ್ಯವಸ್ಥೆ ನಡೆಯಬೇಕು ಎಂದು. ಸುದೀರ್ಘ ಚರ್ಚೆ, ವಾದ ಪ್ರತಿವಾದ, ಹಾಗೂ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ನ ತ್ರಿಸದಸ್ಯ ಪೀಠ ಶಾಲಾಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಅವಕಾಶ ನೀಡಿ ಹಿಜಾಬ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು…

Read More

ತುಮಕೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ನಗರದ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಸುದೀರ್ಘವಾದ ಚರ್ಚೆ, ವಾದ ಪ್ರತಿವಾದವನ್ನು ಆಲಿಸಿ  ತೀರ್ಪು ಪ್ರಕಟಿಸಿದೆ. ಹದಿನೈದು ದಿನಗಳ ಕಾಲ ಕಾಲಾವಕಾಶ ತೆಗೆದುಕೊಂಡು ಅಂತಿಮ ತೀರ್ಪನ್ನು ಇಂದು ಪ್ರಕಟಗೊಳಿಸಿ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಆದೇಶಿಸಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು  ಎಂದರು. ಶಾಲೆ ಎಂದ ಮೇಲೆ ಎಲ್ಲರೂ ಒಂದು ಎನ್ನುವ ಮನೋಭಾವ ಇಟ್ಟುಕೊಂಡು ಪ್ರೀತಿ ವಿಶ್ವಾಸದಿಂದಿರಬೇಕು‌. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನೆಡೆಯಾಗಬಾರದು.  ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮಪಾಲನೆ ಮಾಡುವುದರ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿದು ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಎಲ್ಲರೂ ಬದ್ಧರಾಗಬೇಕು…

Read More

ಮಾಯಸಂದ್ರ: ಕಳೆದ ವರ್ಷ ಮಾಯಸಂದ್ರ ಬಸ್ ಸ್ಟ್ಯಾಂಡ್ ಗೆ ಅಂಟಿಕೊಂಡಿದ್ದ ಚರಂಡಿಯನ್ನು ತೆರೆದು ಮುಚ್ಚದೇ ಹಾಗೆಯೇ ಬಿಡಲಾಗಿತ್ತು. ಈ ಸಂಬಂಧ ನಮ್ಮ ತುಮಕೂರು ಮಾಧ್ಯಮ ಮಾಡಿದ ವರದಿಯಿಂದ ಎಚ್ಚೆತ್ತುಕೊಂಡ  ಗ್ರಾಮ ಪಂಚಾಯ್ತಿಯು  ಇದೀಗ ಚರಂಡಿಯನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿದೆ. ಕಳೆದ ವರ್ಷ ಬಸ್ಟ್ಯಾಂಡ್’ ಗೆ ಅಂಟಿಕೊಂಡಿರುವ 5 ಅಡಿ ಅಳವಾದ ಹಳೆಯ ಮೋರಿಯೊಂದನ್ನು ಸ್ವಚ್ಚ ಮಾಡಲು ತೆರೆದು ಹಾಗೆಯೇ ಬಿಡಲಾಗಿತ್ತು.  ಈ ಪ್ರದೇಶದಲ್ಲಿ ರಾತ್ರಿ ವೇಳೆ ಬಸ್ ಹತ್ತಲು ಬರುವ ಪ್ರಯಾಣಿಕರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಸಂಬಂಧ ನಮ್ಮತುಮಕೂರು.ಕಾಂ‘ಬಲಿಗಾಗಿ ಕಾಯುತ್ತಿದೆ ತೆರೆದ ಮೋರಿ” ಎಂಬ ಶೀರ್ಷಿಕೆಯೊಂದಿಗೆ ವಿವರವಾದ ವರದಿಯನ್ನು ಮಾಡಿತ್ತು. ನಮ್ಮ ತುಮಕೂರು ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಇದೀಗ ತೆರೆದ ಚರಂಡಿಯನ್ನು ಮುಚ್ಚಿ ಇದೀಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಸಮಸ್ಯೆಯೊಂದ ಬಗೆಹರಿದಂತಾಗಿದೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ ಪಶ್ಚಿಮ ಕೇಂದ್ರ ರೈಲ್ವೆಯ ಜಬಲ್ಪುರ ವಿಭಾಗದ ಮುಖ್ಯ ಟಿಕೆಟ್ ಪರಿವೀಕ್ಷಕರು 1.70 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. 16 ಟಿಕೆಟ್ ಪರಿವೀಕ್ಷಕರು ಪ್ರತ್ಯೇಕವಾಗಿ ತಲಾ 1 ಕೋಟಿ ರೂಪಾಯಿ ಮೌಲ್ಯದ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ವಿಶ್ವ ರಂಜನ್ ಇಲ್ಲಿ ತಿಳಿಸಿದ್ದಾರೆ. ಮುಖ್ಯ ಟಿಕೆಟ್ ಪರಿವೀಕ್ಷಕ ಆಶಿಶ್ ಯಾದವ್ ಅವರು ಏಪ್ರಿಲ್ 1, 2021 ರಿಂದ ಈ ವರ್ಷದ ಮಾರ್ಚ್ 9 ರವರೆಗೆ 20,600 ಪ್ರಯಾಣಿಕರಿಂದ 1.70 ಕೋಟಿ ರೂ. ವೈಯಕ್ತಿಕ ಸಾಮರ್ಥ್ಯದಲ್ಲಿ ಇದು ಅತ್ಯಧಿಕ ಸಂಗ್ರಹವಾಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾದವ್ ಸೇರಿದಂತೆ 42 ಸದಸ್ಯರನ್ನೊಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ವಿವಿಧ ರೈಲುಗಳಲ್ಲಿ ಪ್ರಯಾಣಿಕರಿಂದ 71 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದೆ ಎಂದು ರಂಜನ್ ಹೇಳಿದರು. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ನಿಯಮ ಉಲ್ಲಂಘನೆಗಾಗಿ ಸಂಚಾರಿ ಪೊಲೀಸರು ಚಲನ್ ಕಡಿತಗೊಳಿಸುವುದು (Challen)  ಅವರ ಕರ್ತವ್ಯದ ಒಂದು ಭಾಗ, ತಮಿಳುನಾಡಿನಲ್ಲಿ ಚಲನ್ ಕಡಿತಗೊಳಿಸುವ ಘಟನೆ ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ. ಶನಿವಾರ ರಾತ್ರಿ ಲಾರಿ ಚಾಲಕ ಸಂತೋಷ್ ಕುಮಾರ್ (Santosh Kumar) ಲಾರಿಯಲ್ಲಿ ಕೊಂಡ್ಲಂಪಟ್ಟಿ (Kodlampatti) ಕ್ರಾಸ್ ಕಡೆಗೆ ಹೋಗುತ್ತಿದ್ದರು. ಆಗ ಅಲ್ಲಿ ವಾಹನದ ಹುಡುಕಾಟದಲ್ಲಿ ನಿರತರಾಗಿದ್ದ ಪೊಲೀಸರು ಅವನ ವಾಹನವನ್ನು ನಿಲ್ಲಿಸಿ ಪರಿಶೀಲನೆ (Crime News)  ನಡೆಸಿದ್ದಾರೆ. ತನಿಖೆ ವೇಳೆ ಪೊಲೀಸರು ಸಂತೋಷ್‌ ಕುಮಾರ್‌ ಪಾನಮತ್ತನಾಗಿದ್ದ ಎಂದು ಆರೋಪಿಸಿ, ವಾಹನ ಜಪ್ತಿ ಮಾಡುವುದರ ಜತೆಗೆ ಹತ್ತು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ವಿಚಲಿತನಾದ ಸಂತೋಷ್ ಬಂಕ್‌ ನಿಂದ ಪೆಟ್ರೋಲ್ ಖರೀದಿಸಿ ಬೆಂಕಿ ಹಚ್ಚಿಕೊಂಡಿದ್ದಾನೆ. ಸಂತೋಷ್ ಕಿರುಚಾಡುವ ಸದ್ದು ಕೇಳಿದಾಗ ಅಲ್ಲೇ ಇದ್ದ ಪೊಲೀಸರು ಧಾವಿಸಿ ಸಂತೋಷ್‌ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವರದಿಯ ಪ್ರಕಾರ, 25 ವರ್ಷದ ಲಾರಿ ಚಾಲಕ ಸಂತೋಷ್ ತಮಿಳುನಾಡಿನ ಅಮಾನಿ ಕೊಂಡ್ಲಂಪಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಪ್ರಸ್ತುತ…

Read More

ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ತಮ್ಮ ಹಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಚಹಾ (Tea), ಕಾಫಿ, ಹಾಲು ಮತ್ತು ನೂಡಲ್ಸ್‌ಗಳ ಬೆಲೆಯನ್ನು (Noodles price)ಮಾರ್ಚ್ 14 ರಿಂದ ಅಂದರೆ ಇಂದಿನಿಂದ ಹೆಚ್ಚಿಸಲಾಗಿದೆ. ಎಚ್‌ ಯುಎಲ್ ಬ್ರೂ ಕಾಫಿಯ ಬೆಲೆಯನ್ನು 3-7% ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‌ ನ ಬೆಲೆಯನ್ನು 3-4% ಹೆಚ್ಚಿಸಿದೆ. ಇನ್‌ ಸ್ಟಂಟ್ ಕಾಫಿ ಪೌಚ್‌ ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದಲ್ಲದೇ ತಾಜ್ ಮಹಲ್ (Taj Mahal) ಟೀ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ (Tea price hike). ಬ್ರೂಕ್ ಬಾಂಡ್‌ನ (Brooke Bond) ಎಲ್ಲಾ ವಿಧದ ಚಹಾಗಳ ಬೆಲೆಗಳು 1.5% ರಿಂದ 14% ಕ್ಕೆ ಏರಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ (Price hike) ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು HUL ಹೇಳಿದೆ. ಮ್ಯಾಗಿ ದರದಲ್ಲಿ ಶೇ.9ರಿಂದ 16ರಷ್ಟು ಏರಿಕೆ : ನೆಸ್ಲೆ ಇಂಡಿಯಾ (Nestle India) ಕೂಡ ಮ್ಯಾಗಿ (Maggi) ಬೆಲೆಯನ್ನು…

Read More