Author: admin

ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ, ಭಾರತೀಯ ವಾಯುಪಡೆಯ (ಐಎಎಫ್) ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರ ತಂದೆ ತಿಳಿಸಿದ್ದಾರೆ. ವರುಣ್ ಸಿಂಗ್ ಅವರ ತಂದೆ, ಭೋಪಾಲ್ ನಿವಾಸಿಯಾಗಿದ್ದು, ಅವರು ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ತೀವ್ರವಾಗಿ ಗಾಯಗೊಂಡ ಗ್ರೂಪ್  ಕ್ಯಾಪ್ಟನ್  ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ. ನಾನು ವೆಲ್ಲಿಂಗ್ಟನ್ ತಲುಪಿದ್ದೇನೆ” ಎಂದು ಅವರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ವರುಣ್ ಸಿಂಗ್ ಅವರು ಜನರಲ್ ರಾವತ್ ಅವರೊಂದಿಗೆ ವೆಲ್ಲಿಂಗ್ಟನ್ಗೆ ಪ್ರಯಾಣಿಸುತ್ತಿದ್ದರು, ಅಲ್ಲಿ ಸಿಡಿಎಸ್ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ನಿಗದಿಯಾಗಿತ್ತು, ಆಗ ತಮಿಳುನಾಡಿನ ಕೂನೂರ್ ಬಳಿ ಚಾಪರ್ ಅಪಘಾತಕ್ಕೀಡಾಯಿತು. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಸಿಂಗ್ ಅವರಿಗೆ ತೀವ್ರ ಗಾಯಗಳಾಗಿದ್ದು, ಸದ್ಯಕ್ಕೆ ವೆಂಟಿಲೇಟರ್ ಯಂತ್ರದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿವೃತ್ತ ಕರ್ನಲ್ ಅವರು ತಮ್ಮ ಮಗನ ಸ್ಥಿತಿಗೆ…

Read More

ತಿಪಟೂರು: ನಗರದಲ್ಲಿನ ಕೋಡಿ ಸರ್ಕಲ್ ಹತ್ತಿರ ಬರುವ ನಕ್ಷತ್ರ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರಾದ ರಮೇಶ್ ಶಿವಪುರ ಇವರ ಮೇಲೆ ನಗರ ಪೊಲೀಸ್ ಠಾಣಾ ಪೇದೆ ಕೃಷ್ಣಮೂರ್ತಿ ಎಂಬವರು ಹಲ್ಲೆ ನಡೆಸಿ, ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳು, ತಾಲೂಕಿನ ಆದಿಜಾಂಬವ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸೆಪ್ಟಂಬರ್ ನಲ್ಲಿ ಈ ಘಟನೆ ನಡೆದಿದ್ದು,  ಸಂಜೆ 5:30ರಿಂದ 6 ಗಂಟೆಯ ವೇಳೆ ಕೃಷ್ಣಪ್ಪನವರು  ಕಂಠಪೂರ್ತಿಯಾಗಿ ಕುಡಿದು ಬಿಲ್ ಕೊಡದೇ ಹೋಗಿದ್ದು, ಬಿಲ್ ಕೇಳಿದ ಸಂದರ್ಭ ಬಾರ್ ನ ವ್ಯವಸ್ಥಾಪಕ ರಮೇಶ್ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಆರೋಪಿಸಿದರು. ಪೇದೆ ಕೃಷ್ಣಮೂರ್ತಿ ಅವರು, ಹಲ್ಲೆ ನಡೆಸಿರುವುದೇ ಅಲ್ಲದೇ ಮಾಮೂಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ…

Read More

ಕೊರಟಗೆರೆ: ವಿಧಾನ ಪರಿಷತ್ ಚುನಾವಣೆ ಇಂದು ರಾಜ್ಯದಲ್ಲಿ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ತಮ್ಮ ಮತವನ್ನು ಚಲಾಯಿಸಿದರು. ಕೊರಟಗೆರೆ ಪಟ್ಟಣ ಪಂಚಾಯತ್ ಸದಸ್ಯರ ಜೊತೆಗೆ ಮತದಾನ ಕೇಂದ್ರಕ್ಕೆ ಆಗಮಿಸಿದ ಡಾ.ಜಿ.ಪರಮೇಶ್ವರ್ ಅವರು ಮತಚಲಾಯಿಸಿದರು. ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಡಾ.ಜಿ.ಪರಮೇಶ್ವರ್ ಅವರು ಬಿಡುವಿಲ್ಲದೇ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಜಿಲ್ಲೆಯ ಮೂಲೆಮೂಲೆಗಳಲ್ಲಿಯೂ ಪ್ರಚಾರ ನಡೆಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುರುವೇಕೆರೆ: ಇಡೀ ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿರುವಂತಹ ವಿಧಾನ ಪರಿಷತ್ ಚುನಾವಣೆ ಇಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಆದರೆ, 12 ಗಂಟೆಯಾದರೂ ಮಣೆಚೆಂಡೂರು ಗ್ರಾಮ ಪಂಚಾಯ್ತಿಯಲ್ಲಿನ ಒಂದು ಮತ ಬಿಟ್ಟರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ, ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಮತ್ತು ಮಾಯಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಇನ್ನೂ ಕೂಡ ಒಂದು ಮತವೂ ಆಗಿಲ್ಲ. ಪಂಚಾಯ್ತಿ ಸಿಬ್ಬಂದಿಗಳು, ಆರಕ್ಷಕರು ಮತ್ತು ಆಶಾಕಾರ್ಯಕರ್ತೆಯರು ಕೋವಿಡ್ ಸುರಕ್ಷಾ ಕ್ರಮಗಳನ್ನು ಕೈಗೊಂಡು ಬೆಳ್ಳಂಬೆಳಗ್ಗೆಯೇ ಪಂಚಾಯ್ತಿಯಲ್ಲಿ ಶಿಸ್ತಿನಿಂದ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಮಾತ್ರ  ಮತದಾನ ಮಾಡಲು ಇನ್ನೂ ಯಾಕೆ ಬಂದಿಲ್ಲ? ಎಂಬುದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡಿದೆ. ಮತದಾನ ಮಾಡಲು ಸಂಜೆ 4 ಗಂಟೆಯವರೆಗೂ ಸಮಯವಿರುವುದರಿಂದ ಕಾದು ನೋಡಬೇಕಾಗಿದೆ. ಸದಸ್ಯರ ಸಂಖ್ಯಾ ಬಲ ಶೆಟ್ಟಿಗೊಂಡನ ಹಳ್ಳಿ ಗ್ರಾಮ ಪಂಚಾಯ್ತಿ – 14 ಮಣೆಚೆಂಡೂರು ಗ್ರಾಮಪಂಚಾಯ್ತಿ – 14 ಸೊರವನಹಳ್ಳಿ ಗ್ರಾಮಪಂಚಾಯ್ತಿ-16 ಮಾಯಸಂದ್ರ ಗ್ರಾಮಪಂಚಾಯ್ತಿ-15 ವರದಿ: ವೆಂಕಟೇಶ ಜೆ ಎಸ್ (ವಿಕ್ಕಿ) ಮಾಯಸಂದ್ರ ನಿಮ್ಮ ಸುದ್ದಿಗಳನ್ನು…

Read More

ಬಾಂಗ್ಲಾದೇಶ: ಸರ್ಕಾರವನ್ನ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನ ಸಹ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು.. ಈ ಘಟನೆಗೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳಿಗೆ ಬಾಂಗ್ಲಾದೇಶದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.. ಸರ್ಕಾರವನ್ನು ಟೀಕಿಸಿ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಆವರಣದಲ್ಲೇ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.. ಹೀಗಾಗಿ ಪ್ರಕರಣದಲ್ಲಿ 20 ವಿದ್ಯಾರ್ಥಿಗಳಿಗೆ ಢಾಕಾ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿರುವುದಾಗಿ ಕೋರ್ಟ್‌ ಹೇಳಿದೆ. ಆರೋಪಿಗಳೆಲ್ಲರೂ ದೋಷಿಗಳೆಂದು ಸಾಬೀತಾಗಿದ್ದು, 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಮೂರ್ತಿ ಅಬು ಜಾಫರ್‌ ಮೊಹಮ್ಮದ್‌ ಕಮ್ರುಜ್ಜಾಮನ್‌ ಘೋಷಿಸಿದ್ದಾರೆ. ಒಟ್ಟು 25 ತಪ್ಪಿತಸ್ಥರ ಪೈಕಿ ಮೂವರು ಕೃತ್ಯ ನಡೆದ ದಿನದಿಂದಲೂ   ತಲೆಮರೆಸಿಕೊಂಡಿದ್ದು, ಉಳಿದ ಎಲ್ಲರೂ ಜೈಲಿನಲ್ಲಿದ್ದಾರೆ. 2019ರ ಅಕ್ಟೋಬರ್‌ 6ರಂದು ಬಾಂಗ್ಲಾದೇಶದ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಬ್ರಾರ್‌ ಫಹಾದ್‌ ಎಂಬುವವರನ್ನು ಕಾಲೇಜಿನ ಆವರಣದಲ್ಲಿ ಉದ್ರಿಕ್ತ ಗುಂಪೊಂದು ಭೀಕರವಾಗಿ…

Read More

ನವದೆಹಲಿ :  ಈ ತಿಂಗಳು ಅಂದ್ರೆ ಡಿಸೆಂಬರ್ ನಲ್ಲಿ ಮುಂದಿನ ವಾರ ಒಟ್ಟಿಗೆ 4 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ..  ಹೀಗಾಗಿ ಈಗಲೇ ಬ್ಯಾಂಕಿನ ವಹಿವಾಟುಗಳನ್ನ ಮುಗಿಸಿಕೊಳ್ಳಿ.. ಬ್ಯಾಂಕ್ ಗಳಿಗೆ ರಜೆ ಇದ್ರೂ ಕೂಡ ಆನ್‍ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರಲಿದೆ.. ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16 ಅಂದ್ರೆ ಗುರುವಾರ ಹಾಗೂ 17 ಅಂದ್ರೆ ಶುಕ್ರವಾರ ಬ್ಯಾಂಕ್‍ಗಳು ಬಂದ್ ಆಗಿರಲಿವೆ.. ಭಾರತದ ಎಲ್ಲಾ ರಾಜ್ಯಗಳಲ್ಲಿ ನಾಲ್ಕೂ ದಿನಗಳ ಕಾಲ ಬ್ಯಾಂಕ್‍ಗಳು ಮುಚ್ಚಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬ್ಯಾಂಕ್ ಮುಷ್ಕರ ಹೊರತುಪಡಿಸಿ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಆಚರಿಸುವ ಹಬ್ಬಗಳಿಗಾಗಿ ಉಳಿದ ಒಂದು ದಿನದ ರಜೆಯನ್ನು ಹೊಂದಿರುತ್ತದೆ. ಉಳಿದಂತೆ ಕೆಲವೆಡೆ ( ದೇಶಾದ್ಯಂತ  ಎಲ್ಲಾ ಬ್ಯಾಂಕ್ ಗಳು ಅಲ್ಲ ) ಡಿಸೆಂಬರ್ 18 ರಂದು ಬಂದ್ ಇರಲಿದೆ.. ಕಾರಣ ಯು ಸೋಸೋ ಮರಣ ವಾರ್ಷಿಕೋತ್ಸವ (…

Read More

ಬೆಂಗಳೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಯ 8, 9 ಹಾಗೂ 10ನೇ ತರಗತಿಗಳಿಗೆ ಇಂಗ್ಲಿಷ್ ವಿಷಯದ ಶಿಕ್ಷಕರನ್ನು ಶೀಘ್ರವೇ ನೇಮಕ ಮಾಡಿ ಎಂದು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಆಯುಕ್ತರಿಗೆ ನಿರ್ದೇಶಿಸಿದೆ. ತುರುವೇಕೆರೆ ತಾಲ್ಲೂಕಿನ ದುಂಡ ಗ್ರಾಮದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಡಿ.ಟಿ. ಲಕ್ಷ್ಮೀನಾರಾಯಣ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಶಿಕ್ಷಕರನ್ನು ನೇಮಕ ಮಾಡಿದ ಕುರಿತಂತೆ ಅನುಪಾಲನಾ ವರದಿಯನ್ನು ಇದೇ 22ರೊಳಗೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿದೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8,9 ಹಾಗೂ 10ನೇ ತರಗತಿಯಲ್ಲಿ ಒಟ್ಟು 166 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡಿಲ್ಲ. ಈ ಕುರಿತು ಕಳೆದ ಅಕ್ಟೋಬರ್ 10ರಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.…

Read More

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ದಿನಾಂಕ 11, 12,13,ರಂದು ರಾಜ್ಯಮಟ್ಟದ ಕೊಕ್ಕೋ ಪಂದ್ಯವನ್ನು ಆಯೋಜಿಸಲಾಗಿದೆ ಎಂದು ತಿಪಟೂರು ಕಲ್ಪತರು ಸ್ಪೋರ್ಟ್ಸ್ ಗೌರವಾಧ್ಯಕ್ಷ ಹಲೋಕೇಶ್ವರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು,ಮಂಡ್ಯ, ವಿಜಯಪುರ,ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ರಾಜ್ಯದ ಎಲ್ಲಾ ಭಾಗಗಳಿಂದ ಸ್ಪೋರ್ಟ್ಸ್ ಕ್ಲಬ್ ನ ಟೀಮ್ ಗಳು ಭಾಗವಹಿಸಲಿದ್ದು, ಜಿಲ್ಲಾಮಟ್ಟದ ಎಂಟು ಟೀಮ್ ಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ಸೇರಿ ಒಟ್ಟು 58 ಪುರುಷರು 25 ಮಹಿಳಾ ಟೀಮ್ ಗಳು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಬಾರಿ ನಾಲ್ಕರ ಬದಲಾಗಿ ಹೆಚ್ಚುವರಿಯಾಗಿ ಒಂದು ಕೋರ್ಟ್ ಸ್ಥಾಪಿಸಲಾಗಿದೆ. ಒಟ್ಟು 127 ಮ್ಯಾಚ್ ಗಳು ನಿರಂತರವಾಗಿ ನಡೆಯಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯರಾದ ನಿಜಗುಣ ರಾಮಯ್ಯ, ನಗರಸಭೆ ಸದಸ್ಯೆ ಭಾರತಿ ಮಂಜುನಾಥ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಹೊಣಕೆರೆ ಗ್ರಾಮದಲ್ಲಿ 2015-16 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರುದ್ರ ಭೂಮಿ ನಿರ್ಮಾಣಕ್ಕೆ  ನಿರ್ಮಿತಿ ಕೇಂದ್ರ ತುಮಕೂರು ಇವರಿಗೆ ಗುತ್ತಿಗೆ ನೀಡಿದ್ದು, ಈ ಕಾಮಗಾರಿಯನ್ನು ಕೈಗೆತ್ತಿಗೊಂದಿದ್ದು ಆದರೆ ಈವರೆಗೆ ಕಾಮಗಾರಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಮಶಾನ ಸುತ್ತ ಕಾಂಪೌಂಡ್  ಹಾಗೂ ಒಂದು ಕಟ್ಟಡ ನಿರ್ಮಾಣವಾಗಿದೆ ಆದ್ರೆ ಈ ಕಾಮಗಾರಿ ಕೈಗೊಳ್ಳುವ ಮುನ್ನ ಈ ಸ್ಥಳದ ವೀಕ್ಷಣೆ ಮಾಡಿ ಸ್ಮಶಾನಕ್ಕೆ ಯೋಗ್ಯವಾಗಿದೆಯ ಎಂದು  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಲ್ಲಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳೇ, ಆಗಲಿ ಶಾಸಕರೆ ಆಗಲಿ ಇತರೆ ಜನಪ್ರತಿನಿಧಿಗಳೆ ಆಗಲಿ ಕಿಂಚಿತ್ತೂ ಚಿಂತಿಸದೇ ನಿರ್ಲಕ್ಷತೆ ತೋರಿದ್ದಾರೆ. ಸ್ಮಶಾನದೊಳಗೆ ಕಂದಕ ತೋಡಿ ಬಳಸದಂತೆ ತಡೆದಿರುವುದು ಈ ಜಾಗವನ್ನು ಗುರುತು ಮಾಡಿದ ವೇಳೆ ಯಾವುದೇ ತಾಲೂಕು ಮಟ್ಟದ ದಲಿತ  ಮುಖಂಡಿಗಾಗಲಿ, ಊರಿನ ದಲಿತರಿಗಾಗಲಿ ಮಾಹಿತಿಯನ್ನೇ ನೀಡಿಲ್ಲ. ಈಗ ಗುರ್ತಿಸಿರುವ ಜಾಗದಲ್ಲಿ ಯಾರೋ ಕಿಡಿಗೇಡಿಗಳು ಸುಮಾರು 20ರಿಂದ 30 ಅಡಿ…

Read More

ವೆಂಕಟೇಶ ಜೆ.ಎಸ್ ( ವಿಕ್ಕಿ ) ಕ್ರೀಡಾ ಸುದ್ಧಿ: ಪ್ರತಿವರ್ಷದ ಡಿಸೆಂಬರ್’ನಲ್ಲಿ ನಡೆಯುವ ಪ್ರತಿಷ್ಠಿತ ದ್ವಿಪಕ್ಷೀಯ ಆಶಸ್ ಸರಣಿಯ ಮೊದಲ ಪಂದ್ಯದ  ಎರಡನೇ ದಿನವೂ ಆಸ್ಟ್ರೇಲಿಯಾ  ಮೇಲುಗೈ ಸಾಧಿಸಿದೆ. ‘ಬ್ರಿಸ್ಬೇನ್’ನಲ್ಲಿ ಡಿಸೆಂಬರ್ 8 ರಂದು ಪ್ರಾರಂಭವಾದ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಪ್ಯಾಟ್ ಕಮಿನ್ಸ್’ರವರ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್’ಗಳು ತಂಡದ ಅಲ್ಪ ಮೊತ್ತದ ಪತನಕ್ಕೆ ಕಾರಣವಾದರು. ಹಮೀದ್, ಪೋಪ್, ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಹೊರೆತು ಪಡಿಸಿ , ಇನ್ಯಾವ ಬ್ಯಾಟ್ಸ್ ಮ್ಯಾನ್’ಗಳು ಕೂಡ ಎರಡಂಕಿಗಡಿ ಮುಟ್ಟಲಿಲ್ಲ. ಇದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಇಂಗ್ಲೆಂಡ್ 147 ಕ್ಕೆ ಆಲೌಟ್ ಆಯಿತು. ಅಲ್ಪ ಮೊತ್ತದ ಟ್ರೈಯಲ್ ಬೆನ್ನತ್ತಿದ ಆಸ್ಟ್ರೇಲಿಯಾ ವಾರ್ನರ್ ( 94), ಲ್ಯಾಬಶೇನ್ (74)ಮತ್ತು ಟ್ರೆವಿಸ್ ಹೆಡ್ ರವರ(112*) ಶತಕದ ನೆರವಿನಿಂದ ಎರಡನೇ‌ ದಿನದಂತ್ಯಕ್ಕೆ  ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಕಳೆದು ಕೊಂಡು 343…

Read More