Subscribe to Updates
Get the latest creative news from FooBar about art, design and business.
- ಕೊರಟಗೆರೆ: ಮಾದಕ ವ್ಯಸನ ತಡೆಗೆ ‘ಸ್ವಾಸ್ಥ್ಯ ಸಂಕಲ್ಪ’ ಜಾಗೃತಿ
- ಕೊರಟಗೆರೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಆರಂಭ ; ಜು.29ರವರೆಗೆ ಮನೆ-ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ–ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಹಕರಿಸಲು ಮನವಿ
- ಬೀದರ್: ರಾಡ್ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
- ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಸರ್ವರೂ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
- SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!
Author: admin
ಸಿರಾ: ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ವರಲಕ್ಷ್ಮೀ ರಾಜಣ್ಣ ಹೇಳಿದರು. ತಾಲ್ಲೂಕಿನ ಹೊಸಬಿಜ್ಜನಬೆಳ್ಳ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದುವಂತೆ ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಿ ಆರ್ ಪಿ ಕರುಣಾಕರ್ , ಈ ಹಿಂದೆ ಮುಖ್ಯ ಶಿಕ್ಷಕರಾಗಿದ್ದ ಟಿ.ಜಿ ಗಂಗಪ್ಪ ಜಯಣ್ಣ, ಆಲಿ ಮುಖ್ಯ ಶಿಕ್ಷಕರಾದ ಬಿ.ಆರ್. ರಂಗನಾಥ, ಶಿಕ್ಷಕಿಯಾದ ಗಿರಿಜಾ ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ರಂಗಮ್ಮ, ಗ್ರಾಮದ ಪಟೇಲರಾದ…
ಹಿರಿಯೂರು: ಒಮಿಕ್ರೋನ್ ಹಾಗೂ ಕೊರೊನಾ ಮಹಾಮಾರಿ ಕಾಯಿಲೆಯಿಂದ ಕಳೆದರೆಡು ವರ್ಷಗಳಿಂದ ವ್ಯಾಪಾರಿಗಳು ನಿರಂತರ ನಷ್ಟ ಅನುಭವಿಸಿದ್ದಾರೆ. ಈ ನಡುವೆ ಹಿರಿಯೂರು ನಗರದಲ್ಲಿ ನಡೆಯುತ್ತಿದ್ದ ಸಂತೆ ಪುನಃ ಆರಂಭವಾದರೂ ವ್ಯಾಪಾರವಿಲ್ಲದೇ ಜನರು ಕಂಗಾಲಾಗಿದ್ದಾರೆ. ಬುಧವಾರ ಟಿ.ಬಿ.ಸರ್ಕಲ್ ನಲ್ಲಿ ಹಾಗೂ ಶನಿವಾರದಂದು ಹಿರಿಯೂರು ನಗರದಲ್ಲಿ ನಡೆಯುತ್ತದ್ದ ಸಂತೆ ಪುನಃ ಆರಂಭಗೊಂಡಿದೆ. ಆದರೆ, ಹಿರಿಯೂರು ನಗರದ ಸಂತೆ ಮೈದಾನದಲ್ಲಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಕುಳಿತಿರುವುದು ಕಂಡು ಬಂದಿದೆ. ಶನಿವಾರ ಹಾಗೂ ಬುಧವಾರದಂದು ನಡೆಯುತ್ತಿದ್ದಂತಹ ವಾರದ ಸಂತೆ ಕಳೆದ ಎರಡು ವರ್ಷಗಳಿಂದ ಕೊರೊನಾ ಹಾಗೂ ಓಮಿಕ್ರೋನ್ ಎಂಬ ಸಾಂಕ್ರಾಮಿಕ ಕಾಯಿಲೆಗಳಿಂದ ಸ್ಥಗಿತಗೊಂಡಿತ್ತು . ಇದೀಗ ವಾರದ ಸಾಂಕ್ರಾಮಿಕ ಕಾಯಿಲೆಯು ಇದೀಗ ನಿಯಂತ್ರಣಕ್ಕೆ ಬಂದಿರುವುದರಿಂದ ಕಳೆದ ಶನಿವಾರದಿಂದ ಹಿರಿಯೂರು ನಗರಸಭೆ ಆಡಳಿತದ ಆದೇಶದಂತೆ ವ್ಯಾಪಾರಸ್ಥರು ಶನಿವಾರ ಹಾಗೂ ಬುಧವಾರದ ಸಂತೆಯಲ್ಲಿ ವ್ಯಾಪಾರ ಆರಂಭ ಮಾಡಿದ್ದರು. ಕಳೆದ ವಾರವೂ ಇದೇ ಸ್ಥಿತಿ ಇತ್ತು. ಈ ವಾರ ಕೂಡ ಇದೇ ಸ್ಥಿತಿ ಮುಂದುವರಿದಿದೆ. ಸಂತೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ…
ತುಮಕೂರು: ಕಾರುಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಹೊರವಲಯದ ನಾಮದಚಿಲುಮೆ ರಸ್ತೆಯ ಸಿದ್ದಗಂಗಾ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟವರು ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿ ಮೂಲದ ದಂಪತಿ ಎಂದು ತಿಳಿದು ಬಂದಿದೆ. ಇವರು ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಅವರಿಗೆ ಸೇರಿದ ಕಾರು ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಮಂಜು ಭಾರ್ಗವ್ ಅವರಿಗೂ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಅತೀ ವೇಗದಲ್ಲಿದ್ದ ಕಾರುಗಳು ನಿಯಂತ್ರಣ ಕಳೆದುಕೊಂಡು ಮುಖಾಮುಖಿಯಾಗಿ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರಗಿಸಿದ್ದಾರೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ತಿಪಟೂರು: ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಜನರ ಆಸೆಗೆ ಮತ್ತು ಭಾವನೆಗಳಿಗೆ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ ಷಡಕ್ಷರಿ ಅವರು ಹೇಳಿದರು. ತಿಪಟೂರು ನಗರದ ಸರ್ಕಾರಿ ನೌಕರ ಭವನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ನಾಲ್ಕು ವರ್ಷದಿಂದ ತಾಲೂಕಿನ ಸಮಸ್ಯೆಗಳು ಜನ ಎದುರಿಸುತ್ತಿದೆ. ಸಚಿವ ಬಿ.ಸಿ. ನಾಗೇಶ್ ಅವಧಿಯಲ್ಲಿ ಇದುವರೆಗೂ ಹೊಸ ಯೋಜನೆಗಳು ಬರಲಿಲ್ಲ. ಕಾಂಗ್ರೆಸ್ ಸರಕಾರ ಅನುಮೋದಿಸಿದ ಕಾಮಗಾರಿಗಳಿಗೆ ಅಡಚನೆ ಮಾಡಿ ನಿಲ್ಲಿಸಿದ್ದಾರೆ. ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಬಿಟ್ಟರೆ ಬೇರೆ ಏನು ಕೆಲಸ ಮಾಡಿಲ್ಲ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿಪಟೂರು ನಗರಕ್ಕೆ ಮಿನಿ ವಿಧಾನಸೌಧ ನಗರಸಭೆ ಕಟ್ಟಡ ಐಬಿ ಕಟ್ಟಡ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿದ್ದು ಎಂದರು. ಸರ್ಕಾರಿ ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ರೈತರ ರಾಗಿ ಖರೀದಿಗೆ ನಿರ್ಬಂಧ ಮಾಡಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ತಿಪಟೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರವೇ…
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ವಿತರಿಸಿ, ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲಾ ಕಂದಾಯ ವೃತ್ತಿಗಳನ್ನು ಆಯಾ ಆಯಾ ಗ್ರಾಮಲೆಕ್ಕಿಗರು ಕಂದಾಯ ದಾಖಲೆಗಳನ್ನು ಮನೆಮನೆಗೂ ಹಂಚಿಸುವ ಮೂಲಕ ಕಾಯ೯ಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದಭ೯ದಲ್ಲಿ ದೊಡ್ಡೇರಿ ನಾಡ ಕಚೇರಿ ಉಪ ತಸೀಲ್ದಾರ್ ಅನಂತನಾಗ್, ಕಂದಾಯ ತನಿಖಾಧಿಕಾರಿಗಳು ಚನ್ನವೀರಪ್ಪ ಅರಾದ್ಯ, ಗ್ರಾಮಲೆಕ್ಕಿಗರಾದ ರಮೇಶ್ ಗ್ರಾಮ ಸಹಾಯಕರಾದ ರವಿಕುಮಾರ್ ಹಾಜರಿದ್ದರು ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಗುಬ್ಬಿ: ರಾಜಕೀಯವಾಗಿ ಇಡೀ ಯಾದವ ಸಮುದಾಯ ಒಗ್ಗಟ್ಟಿನಿಂದ ಕೂಡಿದ್ದು, ಎಸ್ ಟಿ ಮೀಸಲಾತಿಯನ್ನು ಕಾಡುಗೊಲ್ಲ ಸಮುದಾಯಕ್ಕೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಮೋರ್ಚಾ ಮಾಜಿ ಅಧ್ಯಕ್ಷ ಜಿ ಎನ್ ಬೆಟ್ಟಸ್ವಾಮಿ ಆಗ್ರಹಿಸಿದರು ತಾಲ್ಲೂಕಿನ ಪಂಚಮುಖಿ ದೇವಸ್ಥಾನದಲ್ಲಿ ಕರೆದಿದ್ದ ಕಾಡುಗೊಲ್ಲರ ಸಭೆಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದಲೂ ಸಹ ಕಾಡುಗಳಲ್ಲಿ ವಾಸ ಮಾಡುತ್ತಿರುವಂತಹ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು , ಅವರನ್ನು ಎಸ್ ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಿದರೆ ಅವರ ಜೀವನಕ್ಕೆ ದಾರಿಯಾಗುತ್ತದೆ ಎಂಬ ಸದುದ್ದೇಶದಿಂದ ಎಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಲು ಸಿದ್ಧವಿದ್ದೇವೆ. ಪಕ್ಷಾತೀತವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಸಮುದಾಯವನ್ನು ಮೇಲಕ್ಕೆತ್ತುವ ಕೆಲಸವನ್ನು ಮಾಡಲು ಸಿದ್ಧವಿದ್ದೇವೆ. ಎಲ್ಲ ಜನಪ್ರತಿನಿಧಿಗಳನ್ನು ಶಾಸಕರಿಂದ ಹಿಡಿದು ಮುಖ್ಯಮಂತ್ರಿಯವರೆಗೂ ಸಹ ನಮಗಿರುವಂತಹ ಸಮಸ್ಯೆಗಳನ್ನು ತಿಳಿಹೇಳಿ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಒತ್ತಾಯ ಮತ್ತು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಯಾದವ ಮುಖಂಡ ಜುಂಜೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಇರುವುದು ಒಂದೇ…
ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ. ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್, ಮಹೇಶ್ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. 2014ರ ಜೂನ್ನಲ್ಲಿ ಚೆನ್ನಪ್ಪ ಮೊಮ್ಮಕ್ಕಳಿಗೆ ವಿಲ್ ಮಾಡಿದ್ದರು. ಈ ಪ್ರಕಾರ ಲಕ್ಷ್ಮಮ ಫೈನಾನ್ಸ್ ಸಂಸ್ಥೆ ಬೋಜಮ್ಮಗೆ ಸೇರಬೇಕಿತ್ತು. 2019ರಲ್ಲಿ ಚೆನ್ನಪ್ಪ ಮೃತಪಟ್ಟರು. ಇದಾದ ಮೇಲೆ ಆರೋಪಿಗಳು, 2016ನೇ ಸಾಲಿನಲ್ಲಿ ಚೆನ್ನಪ್ಪ ವಿಲ್ ಮಾಡಿದ್ದಾರೆ ಎಂದು ಒಂದೊಂದಾಗಿ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಡೆತತ್ನೋಟ್ ಸಲ್ಲಿಸಿ ಐದು ದೃಢೀಕೃತ ವಿಲ್ ಪಡೆದಿದ್ದಾರೆ. ಇದರ ಆಧಾರದ ಮೇಲೆ ಲಕ್ಷ್ಮಮ್ಮರ ಫೈನಾನ್ಸ್ ಸಂಸ್ಥೆಯನ್ನು ಸುರೇಶ್ ಮತ್ತು ಮಹೇಶ್ ತಮ್ಮ ಹೆಸರಿಗೆ ಅಧಿಕಾರವನ್ನು ವರ್ಗಾವಣೆ ಮಾಡಿಸಿಕೊಂಡು 50…
ಪಾವಗಡ: ಹೆಲ್ಪ್ ಸೊಸೈಟಿ, ಪಾವಗಡ ಹಾಗೂ ಪ್ರೇರಣಾ ಫೌಂಡೇಶನ್ ಮಧುಗಿರಿ ಹಾಗೂ ರೋಟರಿ ಸಂಸ್ಥೆ ತುಮಕೂರು ವತಿಯಿಂದ ಪಾವಗಡದ ಎಸ್.ಎಸ್.ಕೆ. ಸಮುದಾಯ ಭವನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವತ್ಥ್ ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದ್ದರು, ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಜನಾರ್ಧನ ಆಗಮಿಸಿದ್ದರು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಭಾಗವಹಿಸಿದ್ದರು. ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಎಸ್.ಆರ್., ಕಾರ್ಯದರ್ಶಿ ಶ್ರೀರಾಮಕೃಷ್ಣ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಟ್ಟಶ್ರೀನಿವಾಸ ಮೂರ್ತಿ, ಎಸ್ ಎಸ್ ಕೆ ಸಂಸ್ಥೆ ಅಧ್ಯಕ್ಷರಾದ ಕೆ.ವಿ. ಶ್ರೀನಿವಾಸ, ಅಧ್ಯಾಪಕರಾದ ಹರೀಶ್, ಶ್ರೀಮತಿ ನಾಗಲಕ್ಷ್ಮಿ ವಿದ್ಯಾರ್ಥಿ ಮುಖಂಡ ನಂದೀಶ್ ನಾಯ್ಕ ಉಪಸ್ಥಿತರಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಮಧುಗಿರಿ: ಶಾಸಕರಾದ ಎಂ.ವಿ.ವೀರಭದ್ರಯ್ಯ ರವರು ಗೋಪಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸರ್ಕಾರಿ ಗೋಮಾಳದ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆಯ ಮಧ್ಯೆ ಇದ್ದ ಸಮಸ್ಯೆಯನ್ನು ಸ್ಥಳದಲ್ಲಿಯೇ ನಿಂತು ಅಧಿಕಾರಿಗಳಿಗಳೊಂದಿಗೆ ಪರಿಶೀಲಿಸಿದರು. ಸಾಗುವಳಿದಾರರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಸಹಕರಿಸಿ ಎಂದು ಇದೇ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.ಶಾಸಕರ ಸೂಚನೆಗೆ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಯಾವುದೇ ತೊಂದರೆಯನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಎ.ಸಿ.ಎಫ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಬ್ಬಿ: ತುಮಕೂರು ಅಶೋಕ ನಗರದಲ್ಲಿರುವ ಜಿಲ್ಲೆಯ ಹೆಸರಾಂತ ಮಹೇಶ್ ಪಿ.ಯು.ಕಾಲೇಜಿನಿಂದ ಆಗಮಿಸಿದ್ದ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿರವರು ತಾಲೂಕಿನಲ್ಲಿರುವ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಮಹೇಶ್ ಪಿ.ಯು. ವಿದ್ಯಾಸಂಸ್ಥೆ ಒಂದೇ ಶಾಖೆ ಇರುವುದಾಗಿ ತಿಳಿಸಿದರು. ಗುಬ್ಬಿ ಪಟ್ಟಣದ ಹೆಸರಾಂತ ಪ್ರಿಯಾ ಆಂಗ್ಲ ಶಾಲೆ, ನಿಟ್ಟೂರು ಸಿದ್ದಶ್ರೀ, ವಿದ್ಯಾಶಾಲೆ ಮತ್ತು ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕ ಹರೀಶ್ ಮತ್ತು ನಾಗಲಕ್ಷ್ಮಿರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು. ಈ ವೇಳೆ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿಮಾತನಾಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ತಮ್ಮ ಮಹೇಶ್ ಪಿ.ಯು. ಕಾಲೇಜು ತುಮಕೂರು ಜಿಲ್ಲಾಧ್ಯಂತ ಒಂದೇ ಶಾಖೆ ಇರುವುದಾಗಿ ಮಾಹಿತಿ ನೀಡಿದರು. ತಮ್ಮ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಹಾಗೂ ಇನ್ನುಳಿದ ವರ್ಷಗಳ ಸಾಲಿನಲ್ಲಿ ಜಿಲ್ಲೆಯಲ್ಲೆ ಉತ್ತಮ…