Subscribe to Updates
Get the latest creative news from FooBar about art, design and business.
- ತಿಪಟೂರಿನಲ್ಲಿ 2078ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯ ಹೆಗ್ಗಡೆಯವರ ಕೊಡುಗೆ ಅನನ್ಯ: ಡಾ. ಶ್ರೀಧರ್
- ಖಾಸಗಿ ಆಂಬುಲೆನ್ಸ್ ಸೇವೆ ಶುಲ್ಕ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗೆ ಕರವೇ ಮನವಿ
- ಕೊರಟಗೆರೆ: ಮಾದಕ ವ್ಯಸನ ತಡೆಗೆ ‘ಸ್ವಾಸ್ಥ್ಯ ಸಂಕಲ್ಪ’ ಜಾಗೃತಿ
- ಕೊರಟಗೆರೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಆರಂಭ ; ಜು.29ರವರೆಗೆ ಮನೆ-ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ–ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಹಕರಿಸಲು ಮನವಿ
- ಬೀದರ್: ರಾಡ್ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
Author: admin
ಮಧುಗಿರಿ: ಶಾಸಕರಾದ ಎಂ.ವಿ.ವೀರಭದ್ರಯ್ಯ ರವರು ಗೋಪಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸರ್ಕಾರಿ ಗೋಮಾಳದ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆಯ ಮಧ್ಯೆ ಇದ್ದ ಸಮಸ್ಯೆಯನ್ನು ಸ್ಥಳದಲ್ಲಿಯೇ ನಿಂತು ಅಧಿಕಾರಿಗಳಿಗಳೊಂದಿಗೆ ಪರಿಶೀಲಿಸಿದರು. ಸಾಗುವಳಿದಾರರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಸಹಕರಿಸಿ ಎಂದು ಇದೇ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.ಶಾಸಕರ ಸೂಚನೆಗೆ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಯಾವುದೇ ತೊಂದರೆಯನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಎ.ಸಿ.ಎಫ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಬ್ಬಿ: ತುಮಕೂರು ಅಶೋಕ ನಗರದಲ್ಲಿರುವ ಜಿಲ್ಲೆಯ ಹೆಸರಾಂತ ಮಹೇಶ್ ಪಿ.ಯು.ಕಾಲೇಜಿನಿಂದ ಆಗಮಿಸಿದ್ದ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿರವರು ತಾಲೂಕಿನಲ್ಲಿರುವ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಮಹೇಶ್ ಪಿ.ಯು. ವಿದ್ಯಾಸಂಸ್ಥೆ ಒಂದೇ ಶಾಖೆ ಇರುವುದಾಗಿ ತಿಳಿಸಿದರು. ಗುಬ್ಬಿ ಪಟ್ಟಣದ ಹೆಸರಾಂತ ಪ್ರಿಯಾ ಆಂಗ್ಲ ಶಾಲೆ, ನಿಟ್ಟೂರು ಸಿದ್ದಶ್ರೀ, ವಿದ್ಯಾಶಾಲೆ ಮತ್ತು ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕ ಹರೀಶ್ ಮತ್ತು ನಾಗಲಕ್ಷ್ಮಿರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು. ಈ ವೇಳೆ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿಮಾತನಾಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ತಮ್ಮ ಮಹೇಶ್ ಪಿ.ಯು. ಕಾಲೇಜು ತುಮಕೂರು ಜಿಲ್ಲಾಧ್ಯಂತ ಒಂದೇ ಶಾಖೆ ಇರುವುದಾಗಿ ಮಾಹಿತಿ ನೀಡಿದರು. ತಮ್ಮ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಹಾಗೂ ಇನ್ನುಳಿದ ವರ್ಷಗಳ ಸಾಲಿನಲ್ಲಿ ಜಿಲ್ಲೆಯಲ್ಲೆ ಉತ್ತಮ…
ತುರುವೇಕೆರೆ: ಬಜೆಟ್ ಮೇಲಿನ ವಿಕಲಚೇತನ ನಿರೀಕ್ಷೆ ಹುಸಿಯಾಗಿದೆ. ವಿಕಲಚೇತನರ ಜನಸಂಖ್ಯೆ ಅನುಗುಣವಾಗಿ ವಿಕಲಚೇತನರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಶ್ರೀವಿವೇಕಾನಂದ ಅಂಗವಿಕಲರ ಸಂಘದ ಕಾರ್ಯದರ್ಶಿ ಎಂ.ಪಿ. ನಟೇಶ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಕಲಚೇತನರಿಗೆ ಅನೇಕ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಕಲಚೇತನರ ಬಗ್ಗೆ ಒಲವು ತೋರಿ, ಅನೇಕ ಭರವಸೆಗಳೊಂದಿಗೆ ನಿರೀಕ್ಷೆಯಲ್ಲಿದ್ದವರಿಗೆ ಬಹಳ ನೋವಾಗಿದೆ. ಶೇ. 75%ಹೆಚ್ಚು ಮನೋವೈಕಲ್ಯ ಹೊಂದಿದ್ದವರಿಗೆ 1,400 ರೂ. ಗಳಿಂದ, 2,000 ರೂ.ಗಳಿಗೆ ಮಾಶಾಸನ ಹೆಚ್ಚಿಸುವ ಭರವಸೆ ಮತ್ತು ಬಸ್ ಪಾಸ್ ಪ್ರಸ್ತುತ ದರದಲ್ಲಿಯೇ ಹೆಚ್ಚಿನ ದೂರದ ಪ್ರಯಾಣ ನೀಡುವುದರ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಗಳು ಹುಸಿಯಾಗಿವೆ. ಸದನದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಆದರೆ ಅಂಗವಿಕಲರ ಸಮಸ್ಯೆಯ ಬಗ್ಗೆ ಯಾರು ಪರಿಗಣಿಸಲಿಲ್ಲ. ಶೇ.75% ಮತ್ತು 25%ನ ತಾರತಮ್ಯವನ್ನು ಹೋಗಲಾಡಿಸಬೇಕು. ಗ್ರಾಮೀಣ ಪ್ರದೇಶದ ಪುನರ್ವಸತಿ ಕೇಂದ್ರಗಳ ಕಾರ್ಯಕರ್ತರ…
ತುರುವೇಕೆರೆ: ಬಜೆಟ್ ಮೇಲಿನ ವಿಕಲಚೇತನ ನಿರೀಕ್ಷೆ ಹುಸಿಯಾಗಿದೆ. ವಿಕಲಚೇತನರ ಜನಸಂಖ್ಯೆ ಅನುಗುಣವಾಗಿ ವಿಕಲಚೇತನರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಶ್ರೀವಿವೇಕಾನಂದ ಅಂಗವಿಕಲರ ಸಂಘದ ಕಾರ್ಯದರ್ಶಿ ಎಂ.ಪಿ. ನಟೇಶ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಕಲಚೇತನರಿಗೆ ಅನೇಕ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಕಲಚೇತನರ ಬಗ್ಗೆ ಒಲವು ತೋರಿ, ಅನೇಕ ಭರವಸೆಗಳೊಂದಿಗೆ ನಿರೀಕ್ಷೆಯಲ್ಲಿದ್ದವರಿಗೆ ಬಹಳ ನೋವಾಗಿದೆ. ಶೇ. 75%ಹೆಚ್ಚು ಮನೋವೈಕಲ್ಯ ಹೊಂದಿದ್ದವರಿಗೆ 1,400 ರೂ. ಗಳಿಂದ, 2,000 ರೂ.ಗಳಿಗೆ ಮಾಶಾಸನ ಹೆಚ್ಚಿಸುವ ಭರವಸೆ ಮತ್ತು ಬಸ್ ಪಾಸ್ ಪ್ರಸ್ತುತ ದರದಲ್ಲಿಯೇ ಹೆಚ್ಚಿನ ದೂರದ ಪ್ರಯಾಣ ನೀಡುವುದರ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಗಳು ಹುಸಿಯಾಗಿವೆ. ಸದನದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಆದರೆ ಅಂಗವಿಕಲರ ಸಮಸ್ಯೆಯ ಬಗ್ಗೆ ಯಾರು ಪರಿಗಣಿಸಲಿಲ್ಲ. ಶೇ.75% ಮತ್ತು 25%ನ ತಾರತಮ್ಯವನ್ನು ಹೋಗಲಾಡಿಸಬೇಕು. ಗ್ರಾಮೀಣ ಪ್ರದೇಶದ ಪುನರ್ವಸತಿ ಕೇಂದ್ರಗಳ ಕಾರ್ಯಕರ್ತರ…
ಚಿಕ್ಕಹೊಮ್ಮ ಯೂಥ್ಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿಯಾ ರಾಜ್ಯ ಹಾಗೂ ಮೈಸೂರು ಜಿಲ್ಲಾ ಅಸಂಘಟಿತ ವಲಯ ಸಹಯೋಗದ ವತಿಯಿಂದ ಚಿಕ್ಕಹೊಮ್ಮ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು. ಮೈಸೂರು ಮತ್ತು ಚಾಮರಾಜನಗರ ಮದನ್ ರವರು ಚಿಕ್ಕಹೊಮ್ಮ ಗ್ರಾಮದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಇ- ಶ್ರಮ್ ವಿತರಣೆ ಮಾಡಿದರು. ಇದೆ ಸಂದರ್ಭದಲ್ಲಿ ಚಿಕ್ಕಹೊಮ್ಮ ಯೂಥ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮದನ್, ಸಿ.ಎಸ್, ಕಾರ್ಯದರ್ಶಿ ರಾಜು ಕೆ., ರಾಜ್ಯ ಅಸಂಘಟಿತ ವಲಯದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ , ಉಪಾಧ್ಯಕ್ಷರಾದ ಸುನಿಲ್ ನಾರಾಯಣ್, ಮೈಸೂರು ಜಿಲ್ಲಾ ಅಸಂಘಟಿತ ವಲಯದ ಅಧ್ಯಕ್ಷರಾದ ನಾಗರಾಜು, ಅಭಿ, ಮಧುಸೂದನ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು . ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ತಿಪಟೂರು: ನಗರದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಇಂದು ಕಾಂಗ್ರೆಸ್ ವತಿಯಿಂದ ಡಿಜಿಟಲ್ ಸದಸ್ಯತ್ವ ಹಾಗೂ ನೋಂದಣಿ ಕಾರ್ಯಾಗಾರ ಸಭೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆಯನ್ನು ನೀಡಲಾಯಿತು. ಕಾಂಗ್ರೆಸ್ ಮಾಜಿ ಶಾಸಕ ಷಡಕ್ಷರಿ ಕಾಂಗ್ರೆಸ್ ಮುಖಂಡ ಲೋಕೇಶ್ವರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಹಿಳಾ ಮುಖಂಡರಾದ ಸುಮಯ್ಯ ತಬ್ರಿಜ್ ಅವರು ಡಿಜಿಟಲ್ ಸದಸ್ಯತ್ವದ ಬಗ್ಗೆ ಗ್ರಾಮ ಪಂಚಾಯಿತಿವಾರು ಸದಸ್ಯತ್ವ ನೋಂದಣಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಡೆನೂರು ಕಾಂತರಾಜ್, ಕೆಪಿಸಿಸಿ ಸದಸ್ಯ ಯೋಗೇಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಗೆನಹಳ್ಳಿ ಸುರೇಶ್, ನಗರಸಭೆ ಸದಸ್ಯ ಯೋಗೇಶ್, ತಾಲೂಕಿನ ಕಾಂಗ್ರೆಸ್ ಸದಸ್ಯರುಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸರಗೂರು: ಪಟ್ಟಣದ ಅರಣ್ಯ ಇಲಾಖೆ ಮುಂಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಸರಿಯಾದ ವಸತಿ ಹಾಗೂ ಊಟದ ವ್ಯವಸ್ಥೆಯೇ ದೊರೆಯುತ್ತಿಲ್ಲ. ಜೊತೆಗೆ ಹಾಸ್ಟೆಲ್ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಹಾಸ್ಟೆಲ್ ವಾರ್ಡನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಡುಗೆ ಸಿಬ್ಬಂದಿ ಕೂಡ ತೀವ್ರ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಹಾಸ್ಟೆಲ್ ಪಕ್ಕದಲ್ಲಿ ಅಂಬೇಡ್ಕರ್ ಭವನ ಇದೆ. ಮದುವೆ ಇನ್ನಿತರ ಕಾರ್ಯಕ್ರಮ ನಡೆದರೆ, ಬೆಳಿಗ್ಗೆ ಮತ್ತು ಸಂಜೆ ಭವನದಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ಅಲ್ಲಿಂದಲೇ ಊಟವನ್ನು ತೆಗೆದುಕೊಂಡು ಬಂದು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡುತ್ತಾರೆ. ವಾರ್ಡನ್ ಗೆ ಈ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದರೆ, ನಾಳೆ ಬಂದು ಸರಿ ಮಾಡುತ್ತೇನೆ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಕೂಡ…
ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುಮಕೂರು ಹಾಗೂ ತಾಲೂಕು ಆಡಳಿತ ತಾಲೂಕು ಪಂಚಾಯತ್ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ತುರುವೇಕೆರೆ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಗುಲಾಬಿ ಆಂದೋಲನಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವಿಪ್ರಕಾಶ್, ತಂಬಾಕು ಸೇವನೆ ಮಾಡುವವರಿಂದ ಅಕ್ಕಪಕ್ಕದಲ್ಲಿರುವ ಜನರಿಗೂ ತೊಂದರೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ಬಾಯಿ ಕ್ಯಾನ್ಸರ್, ಬ್ರೈನ್ ಟ್ಯೂಮರ್, ಕಣ್ಣಿನಲ್ಲಿ ಪೊರೆ ಇನ್ನೂ ಅನೇಕ ಕಾಯಿಲೆಗಳು ಬರುತ್ತದೆ ಎಂದರು. ಮಾಯಸಂದ್ರ ಸರ್ಕಾರಿ ವೈದ್ಯಾಧಿಕಾರಿಯಾಗಿ ಡಾ.ಸ್ವರೂಪ ಮಾತನಾಡಿ, ತಂಬಾಕು ಸೇವನೆಯಿಂದ ದೂರ ಉಳಿಯಲು ವಿದ್ಯಾರ್ಥಿಗಳ ಮೂಲಕವೇ ಈ ಗುಲಾಬಿ ಆಂದೋಲನ ಮಾಡಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ನಿಮ್ಮಂತ ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡುವವರಿಗೆ ಇದು ಅಪಾಯ ಎಂಬ ಮನವರಿಕೆಯಾಗಬೇಕು ಎಂದರು. ಇದೇ ವೇಳೆ ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟುಗಳಿಗೆ ಗುಲಾಬಿ ನೀಡಿ ತಂಬಾಕು ಬಿಡಿ ಎಂಬ ಘೋಷಣೆಯೊಂದಿಗೆ ರಸ್ತೆಯ…
ಆಸ್ಟ್ರೇಲಿಯಾದ ಸಿಡ್ನಿಯ ಬೀದಿಯಲ್ಲಿ ಕುತೂಹಲದಿಂದ ಕಾಣುವ ಜೀವಿ ಪತ್ತೆಯಾಗಿದ್ದು, ಭ್ರೂಣವನ್ನು ಹೋಲುವ ವಿಲಕ್ಷಣ ‘ಏಲಿಯನ್ ತರಹದ’ ಜೀವಿ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ ಭ್ರೂಣವನ್ನು ಹೋಲುವ ಈ ವಿಚಿತ್ರ ಪ್ರಾಣಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ಬಳಕೆದಾರ ಹ್ಯಾರಿ ಹೇಯ್ಸ್ ಎಂಬುವವರು ಹಂಚಿಕೊಂಡಿದ್ದಾರೆ. ಫೆಬ್ರವರಿ 28 ರಂದು ಬೆಳಿಗ್ಗೆ ಸಿಡ್ನಿಯ ಮಾರಿಕ್‌ವಿಲ್ಲೆ ಉಪನಗರದ ಮೂಲಕ ಜಾಗಿಂಗ್ ಮಾಡುತ್ತಿದ್ದಾಗ ಈ ವಿಚಿತ್ರವಾಗಿ ಕಾಣುವ ಜೀವಿಯನ್ನು (Alien) ಕಂಡಿದ್ದೇನೆ ಎಂದು ಹ್ಯಾರಿ ಹೇಯ್ಸ್ ತಿಳಿಸಿದ್ದಾರೆ. ಈ ವಿಡಿಯೋ ಕ್ಲಿಪ್ 1,144 ಲೈಕ್ ಗಳನ್ನು ಪಡೆದಿದೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಅತ್ಯಂತ ಜನನಿಬಿಡ ನಗರವಾದ ಸಿಡ್ನಿಯಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ದೇಶದ ಪೂರ್ವ ಭಾಗದಾದ್ಯಂತ ಪ್ರವಾಹದಿಂದ ಸತ್ತವರ ಸಂಖ್ಯೆ ಶನಿವಾರ (ಮಾರ್ಚ್ 5) ದಂದು 17 ಕ್ಕೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ತುಮಕೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಟ್ಟ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನ ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು, ಕೊರೊನಾ ಸೋಂಕಿತರನ್ನು ಆರೈಕೆ ಮಾಡಿದ ಗುತ್ತಿಗೆ ನೌಕರರನ್ನು ಮುಂದುವರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ. ತುಮಕೂರು ಘಟಕದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ರವರ ನೇತೃತ್ವದಲ್ಲಿ ಗುತ್ತಿಗೆ ನೌಕರರ ನೇತೃತ್ವದ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಿದ ಕೊರೊನಾ ವಾರಿಯರ್ಸ್ ಗಳ ಗುತ್ತಿಗೆ ಅವಧಿ ಈ ತಿಂಗಳು ಮುಗಿಯುತ್ತಿದ್ದು, ಇರುವವರೆಗೂ ಅಲ್ಪ ಅವಧಿಗೆ ಕೆಲಸ ನಿರ್ವಹಿಸಿದ ನಾವು, ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದೇವೆ. ಆದರೆ ಈಗ ಗುತ್ತಿಗೆ ಅವಧಿ ಮುಗಿದು ಈ ತಿಂಗಳು ಅವರ ಸೇವೆ ಕೊನೆಗೊಳ್ಳಲಿದೆ. ಸರ್ಕಾರ ಗುತ್ತಿಗೆ ನೌಕರರ ಸೇವೆಯನ್ನು ಗುರುತಿಸಿ ಕೆಲಸದಲ್ಲಿ ಮುಂದುವರಿಸಲು ಮುಂದಾಗಬೇಕು…