Subscribe to Updates
Get the latest creative news from FooBar about art, design and business.
- ಕಲುಷಿತ ನೀರು, ಮಾಲಿನ್ಯ ದೂರಿಗೆ ಕಂಟ್ರೋಲ್ ರೂಮ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ಬಂದಕುಂಟೆ ನಾಗರಾಜು: ಅಂಬೇಡ್ಕರ್ ಹೋರಾಟದ ರಥಕ್ಕೆ ತುಮಕೂರಿನಲ್ಲಿ ಸಾರಥ್ಯ ನೀಡಿದ ಮಹಾನ್ ಚೇತನ: ದಂಡಿನ ಶಿವರ ಕುಮಾರ್
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ: ಪ್ರೊ.ಕೆ.ಚಂದ್ರಣ್ಣ
- ಹೆದ್ದಾರಿಯಲ್ಲಿನ ಅನಧಿಕೃತ ಶೆಡ್ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ
- ತುಮಕೂರು: ಜ.8ರಿಂದ ಗೊಲ್ಲರಹಟ್ಟಿಗಳಲ್ಲಿ ಜನ ಜಾಗೃತಿ ಕಾರ್ಯಕ್ರಮ
- ತುಮಕೂರಿನಲ್ಲಿ ರಾಜ್ಯ ಮಟ್ಟದ ಕರ್ನಾಟಕ ಕ್ರೀಡಾಕೂಟ: ಜ. 16ರಿಂದ ಕ್ರೀಡಾ ಹಬ್ಬ ಆರಂಭ
- ಹೊಳೆನರಸೀಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಕುಮಾರ್ ಭೇಟಿ: ಅಧಿಕಾರಿಗಳಿಗೆ ತರಾಟೆ
- ತಿಪಟೂರು: ಜನವರಿ 8 ರಿಂದ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ 17ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ
Author: admin
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಚೌಡೇಶ್ವರಿ ಅಮ್ಮನವರ ಜ್ಯೋತಿ ಉತ್ಸವವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ಹಾಗೂ ಜನತೆಯನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ ಸಲುವಾಗಿ ತೊಗಟವೀರ ಕ್ಷತ್ರಿಯರು ತಮ್ಮ ಕುಲದೇವಿ ಶ್ರೀ ಚೌಡೇಶ್ವರಿ ಅಮ್ಮನವರ ಪಂಚಜ್ಯೋತಿ ಉತ್ಸವವನ್ನು ಶ್ರದ್ಧಾಭಕ್ತಿಗಳಿಂದ ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು, ಅದು ಗ್ರಾಮದ ಸಂಪ್ರದಾಯವಾಗಿ ಬೆಳೆದು ಬಂದಿದೆ. ಪ್ರತಿ ವರ್ಷ ಯುಗಾದಿ ಹಬ್ಬದ 3ನೇ ದಿನ ಚೌಡೇಶ್ವರಿ ದೇವಿಯ ಪಂಚ ಜ್ಯೋತಿಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ಹಮ್ಮಿಕೊಳ್ಳುವುದು ಗ್ರಾಮದ ಸಂಪ್ರದಾಯಗಳಲ್ಲಿ ಒಂದಾಗಿದೆ. ಎಂದಿನಂತೆ ಈ ವರ್ಷವೂ ಸಹಾ ಈ ಉತ್ಸವ ಮೆರವಣಿಗೆಯು ವಾಧ್ಯವೃಂದ, ಕಲಾತಂಡಗಳೊಂದಿಗೆ ಸಾಗುತ್ತಾ ಆನಂದ ಪದಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಉತ್ಸವವು ಶ್ರೀಚೌಡೇಶ್ವರಿ ಅಮ್ಮನವರ ಮೂರ್ತಿ ಮತ್ತು ಪಂಚಜ್ಯೋತಿಗಳೊಂದಿಗೆ ಪುರದಕಟ್ಟೆಯಿಂದ ಪ್ರಾರಂಭವಾಗಿ ಬಿ.ಹೆಚ್. ರಸ್ತೆಯ ಮೂಲಕ ಸಾಗಿ ಹಳೆಯ ಅಂಚೆಕಟೇರಿ ರಸ್ತೆ. ಎಸ್.ಕೆ.ಪಿ.ಟಿ ರಸ್ತೆಯ ಮೂಲಕ ಅಶ್ವಥನಕಟ್ಟೆಯ ರಸ್ತೆಯಲ್ಲಿ ಸಾಗಿ ಹೊಸ ಚೌಡೇಶ್ವರಿ ದೇವಾಲಯದಲ್ಲಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾಧಿಗಳು ಬಾಯಿಗೆ…
ಕೊರಟಗೆರೆ : 112 ವರ್ಷಗಳವರೆಗೂ ಸಹಿತ ನಿರಂತರವಾಗಿ ದಾಸೋಹದ ಮುಖಾಂತರವಾಗಿ ತಮ್ಮ ಕಾಯಕವನ್ನು ದೇವರ ಕೆಲಸವೆಂದು ತಿಳಿದು, ಕಾಯಕವೇ ಕೈಲಾಸವೆಂಬಂತೆ ಶ್ರೀ ಮಠವನ್ನು ನಡೆಸಿಕೊಂಡು ಬಂದಿರುವ ತ್ರಿವಿಧ ದಾಸೋಹಿಗಳಾದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ನಮಗೆಲ್ಲ ಆದರ್ಶ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ನುಡಿದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಹಾಗೂ ಸಮಸ್ತ ಭಕ್ತಾದಿಗಳಿಂದ ಆಯೋಜಿಸಿದ್ದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮೆಲ್ಲರಿಗೂ ಸಹಿತ ಆರಾಧ್ಯದೈವವಾಗಿ, ನಡೆದಾಡುವ ದೇವರಾಗಿ ನಮ್ಮ ಬದುಕಿನುದ್ದಕ್ಕೂ ಕಾಯಕವನ್ನೇ ಕೈಲಾಸವೆಂದು ನಂಬಿ ನಿರಂತರವಾಗಿ ಸದ್ಭಕ್ತರ ಸೇವೆಯಲ್ಲಿಯೇ ತೊಡಗಿಸಿಕೊಂಡು ನಮಗೆಲ್ಲ ಆದರ್ಶಗಳನ್ನು ನೀಡಿರುವ ಪೂಜ್ಯರಿಗೆ ಭಕ್ತಿ ಪೂರಕ ನಮನ ಸಲ್ಲಿಸುತ್ತಾ ಅವರ ಮಾರ್ಗದರ್ಶನದಂತೆ ನಡೆಯೋಣ ಎಂದರು. ಶ್ರೀಗಳ ಜೀವನದ ತತ್ತ್ವಗಳು ಯುವ ಜನತೆಗೆ ಮಾರ್ಗ ದರ್ಶಕವಾಗಬೇಕು” ಎಂದು ಅವರು ಶುಭ ಹಾರೈಸಿದರು. ಅಕ್ಷರ ಮತ್ತು ಅನ್ನ ದಾಸೋಹ ಸಾವಿರಾರು ವಿದ್ಯಾರ್ಥಿಗಳ…
ತುಮಕೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ತುಮಕೂರಿನ ಅಧಿಕ ಜಿಲ್ಲಾ ನ್ಯಾಯಾಲಯದ ಎಫ್ ಟಿ ಎಸ್ ಸಿ ಪೋಕ್ಸೋ ನ್ಯಾಯಾಲಯವು ಜೀವಾವಧಿ ಶಿಕ್ಷೆ(ಸಾಯುವರೆಗೂ) ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಂಕ್ರಾಂತಿ ದಿನ ನೊಂದ ಬಾಲಕಿ ರಂಗೋಲಿ ತರಲು ಸಮೀಪದ ಹಳ್ಳಿಗೆ ಹೋಗುತ್ತಿದ್ದ ವೇಳೆ ಪ್ರಕರಣದ ಅಪರಾಧಿ ಶ್ರೀರಾಮ್ ಎಂಬಾತ ಸ್ಕೂಟಿಯಲ್ಲಿ ಬಾಲಕಿಗೆ ಡ್ರಾಪ್ ಕೊಡುವುದಾಗಿ ಬಾಲಕಿಗೆ ಹೇಳಿದ್ದಾನೆ. ಬಾಲಕಿ ಬರುವುದಿಲ್ಲ ಎಂದರೂ ಆಕೆಯನ್ನು ಪುಸಲಾಯಿಸಿ ಹಳ್ಳಿಗೆ ಕರೆದೊಯ್ದು ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸಂಬಂಧ ತನಿಖಾಧಿಕಾರಿ ಗಿರೀಶ್, ಅಪರಾಧಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಿಗಳಿಂದ ಶ್ರೀರಾಮನ ವಿರುದ್ಧದ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿ ಶ್ರೀರಾಮನಿಗೆ ಜೀವಾವಧಿ…
ತುಮಕೂರು: ಜಿಲ್ಲೆ ಪಾವಗಡ ತಾಲ್ಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಚರ್ಚ್ ಉದ್ಘಾಟನೆಗೆ ಗ್ರಾಮಸ್ಥರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಕೆ.ವಿ. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು. ಎಸ್.ಪಿ. ಅಶೋಕ್ ಮಾತನಾಡಿ, “ಗ್ರಾಮೀಣ ಭಾಗದ ಜನರು ಕಾನೂನಿನ ಕುರಿತು ಅರಿವಿರಬೇಕು. ಯಾವುದೇ ಸಮಸ್ಯೆ ಎದುರಾದಾಗ 112 ಸಹಾಯವಾಣಿಗೆ ಕರೆ ಮಾಡಿದರೆ, ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯನ್ನು ಕಾಪಾಡಲು ಸಹಕರಿಸಬೇಕು” ಎಂದು ತಿಳಿಸಿದರು. ಅವರು ಗ್ರಾಮಸ್ಥರಿಂದ ಚರ್ಚ್ ಕುರಿತ ಮಾಹಿತಿ ಸಂಗ್ರಹಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ, “ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ಕಾನೂನು ಜಾಗೃತಿ ಮೂಡಿಸಲಾಗುವುದು. ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಪೊಲೀಸರ ನೆರವು ಪಡೆಯಬೇಕು, ಕಾನೂನು ಕೈಗೆ ತೆಗೆದುಕೊಳ್ಳಬಾರದು” ಎಂದು ಎಸ್.ಪಿ. ತಿಳಿಸಿದರು. ಶಾಂತಿ ಸಭೆಯಲ್ಲಿ…
ತುಮಕೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಮತ್ತು ತ್ಯಾಗದ ಮಹತ್ವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹಾಗೂ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವ ಕಾರ್ಯವನ್ನು ಎಂದು ನೆನಪಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ತುಮಕೂರಿನ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಇಂದು ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ನಿವೃತ್ತ ಪೊಲೀಸರ ಸಹಾಯಕ್ಕಾಗಿ ಬಳಸಿಕೊಳ್ಳಲಾಗುವುದು ಎಂದರು. ಕ್ಷೇಮ ನಿಧಿಯಲ್ಲಿ ಇರಿಸಲಾಗುವ ಈ ಹಣವನ್ನು ನಿವೃತ್ತ ಪೊಲೀಸರ ಕುಟುಂಬದ ಆರ್ಥಿಕ ಸಹಾಯಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಂಗಳೂರು: ಕರ್ನಾಟಕ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ಬರೆ ಮತ್ತೆ ಜನರನ್ನು ಕಂಗಾಲು ಮಾಡಿದೆ. ಡೀಸೆಲ್ ಬೆಲೆ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಸದ್ಯ ಡಿಸೇಲ್ 88.99 ರೂ. ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ 90 ರೂ. ಆಗಲಿದೆ. ಇತ್ತೀಚೆಗೆ ಹಾಲಿನ ಬೆಲೆ ಏರಿಕೆಯಾಗಿತ್ತು.ಇದರ ಬೆನ್ನಲ್ಲೇ ಇದೀಗ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಚಿಕ್ಕಮಗಳೂರು: 7 ವರ್ಷದ ಮಗಳು ಸೇರಿ ಒಂದೇ ಮನೆಯಲ್ಲಿದ್ದ ಮೂವರಿಗೆ ಗುಂಡು ಹಾರಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ. ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮಗಳು ಖುಷಿ(7) ಹತ್ಯೆಗೀಡಾದವರಾಗಿದ್ದಾರೆ. ಖುಷಿಯ ತಂದೆ ರತ್ನಾಕರ್ ಎಂಬಾತ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ರತ್ನಾಕರ್ ನ ಪತ್ನಿ 2 ವರ್ಷಗಳ ಹಿಂದೆ ಮೋಸ ಮಾಡಿ ಹೋಗಿದ್ದಳು. ಶಾಲೆಯಲ್ಲಿ ಸಹಪಾಠಿಗಳು ನಿಮ್ಮ ಅಮ್ಮ ಎಲ್ಲಿ ಎಂದು ಮಗಳ ಬಳಿ ವಿಚಾರಿಸಿದಾಗ ನೊಂದ ಮಗಳು ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಮಗಳು ತನ್ನ ಅಮ್ಮನ ಫೋಟೋವನ್ನು ಆಲ್ಬಾಂನಿಂದ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ಸಹಪಾಠಿಗಳಿಗೆ ತೋರಿಸಿದ್ದಳು ಎಂದು ಹತ್ಯೆಯ ಬಳಿಕ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿಟ್ಟಿದ್ದಾನೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ವೈಜ್ಞಾನಿಕ ಅನ್ವೇಷಣೆಗಳು ತಕ್ಷಣ ಯಶಸ್ಸನ್ನು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾಣುಶಾಸ್ತ್ರಜ್ಞನು ಸಹನಶೀಲತೆ, ಧೈರ್ಯ, ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದು ಹಿರಿಯ ವಿಜ್ಞಾನಿ ಡಾ. ಶಿವಾಜಿ ಜಾಧವ್ ತಿಳಿಸಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ‘21ನೇ ಶತಮಾನದ ಜೈವಿಕಾಣುಶಾಸ್ತ್ರ: ಹೊಸ ಆವಿಷ್ಕಾರಗಳು ಮತ್ತು ಅನ್ವಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಂಕೆಗಳಿಗಿಂತ ಜ್ಞಾನ ಮಹತ್ವದ್ದು. ಅಂಕೆಗಳು ಪ್ರಾರಂಭಿಕ ಅವಕಾಶಗಳನ್ನು ನೀಡಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುವುದು ಆಳವಾದ ಜ್ಞಾನ ಮತ್ತು ತಜ್ಞತೆ. ಜೈವಿಕಾಣುಶಾಸ್ತ್ರದಲ್ಲಿ ಸೂಕ್ಷ್ಮಮಜೀವಿಗಳು, ರೋಗಗಳು, ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ತಿಳುವಳಿಕೆ ಅನಿವಾರ್ಯ ಎಂದರು. ನಿರಂತರ ಅಧ್ಯಯನ ಮತ್ತು ಕುತೂಹಲ ಅತ್ಯಗತ್ಯ. ಜೈವಿಕಾಣುಶಾಸ್ತ್ರದ ಕ್ಷೇತ್ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಮ್ಮ ಜೀವನದ ಅರಿವನ್ನು ವಿಸ್ತರಿಸುತ್ತವೆ. ನಾವು ಹೆಚ್ಚು ತಿಳಿಯಲು, ಅಧ್ಯಯನ ಮಾಡಲು, ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲು, ಮತ್ತು ವೈಜ್ಞಾನಿಕ ಚರ್ಚೆಗಳಲ್ಲಿ ತೊಡಗಲು…
ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ / ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಪ್ರವೇಶ ಕಲ್ಪಿಸಲಾಗುವ ವಸತಿ ಶಾಲೆಗಳಲ್ಲಿ ಶೇ.75ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ)ಗಳಿಗೆ ಹಾಗೂ ಶೇ25ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ಮೀರಿರಬಾರದು. ವಸತಿ ಶಾಲೆ 6ನೇ ತರಗತಿ ಪ್ರವೇಶಕ್ಕಾಗಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ವಿಳಾಸ Admission for Morarji desai residential schoolನಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್…
ತುಮಕೂರು: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು IISc, IIT & NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಿಗಾಗಿ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ 15,000 ರೂ.ಗಳ ಶಿಷ್ಯವೇತನ ನೀಡಲಾಗುವುದು. ಆಸಕ್ತರು ಏಪ್ರಿಲ್ 11ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತುಮಕೂರು, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ/ ಪಾವಗಡ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ/ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4