Subscribe to Updates
Get the latest creative news from FooBar about art, design and business.
- ಬಿಡದಿಯಲ್ಲಿ ರೈತರು ರಸ್ತೆ ತಡೆ ಮಾಡಬಾರದು, ನನಗೆ ಯಾವುದೇ ಪ್ರತಿಷ್ಠೆ ಇಲ್ಲ: ಸಿಎಂ ಡಿ.ಕೆ.ಶಿವಕುಮಾರ್
- ಬೀದರ್: ಅಮಲ್ಲಾಪುರ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಹೋರಾಟಗಾರರ ಎಚ್ಚರಿಕೆ
- ವೈನ್ ಶಾಪ್ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!
- ಗಿಟಾರ್ ಬ್ಯಾಗ್ ಗೆ ಹೆಲ್ಮೆಟ್ ಹಾಕಿಲ್ಲವೆಂದು ₹500 ದಂಡ!
- ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಕೋರ್ಟ್ನಲ್ಲಿ ಹಿನ್ನಡೆ
- ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್
- ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!
- ಮರಗಳ ಮಾರಣಹೋಮದಿಂದ ಮಳೆ ಕೊರತೆ: ನ್ಯಾ.ಜಯಂತ್ ಕುಮಾರ್ ಕಳವಳ
Author: admin
ಜೂಜು ಅಡ್ಡೆ (Gambling) ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಬಿ ಪೊಲೀಸರ ದಾಳಿ ನಡೆಸಿದ್ದು, 19 ಜನರನ್ನು ಬಂಧಿಸಲಾಗಿದೆ. ಆಂಧ್ರದ ಖ್ಯಾತ ನಟ ಹಾಗೂ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ ಬಾಲಾಜಿ ಮತ್ತು ವೈಎಸ್ ಆರ್ ಪಕ್ಷದ ಸಂಚಾಲಕ ಎಂದು ಹೇಳಿಕೊಂಡಿರುವ ಶ್ರೀರಾಮರೆಡ್ಡಿ ಸೇರಿದಂತೆ 19 ಜನರನ್ನು ಅರೆಸ್ಟ್ ಮಾಡಲಾಗಿದೆ.ಆಂಧ್ರದ ಗಡಿ ನಗರಗೆರೆ ಗ್ರಾಮದ ಬಿಎನ್ ಆರ್ ಕಂಫರ್ಟ್ ರೆಸ್ಟೋರೆಂಟ್ ನಲ್ಲಿ ಹೈಟೆಕ್ ಜೂಜು ನಡೆಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಬಂಧಿತರಿಂದ 1,56,750 ರೂಪಾಯಿ ಹಣ, 8 ಕಾರುಗಳು, 3 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಗುಡಿಬಂಡೆ ನ್ಯಾಯಾಲಯಕ್ಕೆ (Court) ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಕೊರಟಗೆರೆ: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುವ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ಸೇವಾ ಭದ್ರತೆಯಿಲ್ಲದೆ ಇರುವುದು ಶೋಚನೀಯವಾಗಿದ್ದು ಸರ್ಕಾರ ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಭದ್ರತೆಯೊಂದಿಗೆ ಸವಲತ್ತು ನೀಡಬೇಕಿದೆ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳು ತಿಳಿಸಿದರು. ಕೊರಟಗೆರೆ ಪಟ್ಟಣದ ಬೈಪಾಸ್ ಬೆಂಗಳೂರು- ಕೊರಟಗೆರೆ ರಸ್ತೆಯಲ್ಲಿರುವ ನವೀನ್ ಕಂಫರ್ಟ್ ಕಾಮಧೇನು ವೆಜ್ ಹೋಟೆಲ್ ಸಭಾಂಗಣದಲ್ಲಿ ನವರಸ ನಾಯಕ ಜಗ್ಗೇಶ್ ರವರ 59ನೇ ಹುಟ್ಟು ಹಬ್ಬದ ಅಂಗವಾಗಿ ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗ, ನೂತನವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕಾರಂಗದಲ್ಲಿ ವೃತ್ತಿ ಧರ್ಮ ಬದ್ದತೆಯನ್ನು ಬಿಟ್ಟು ಕೊಡದೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಪತ್ರಕರ್ತರಿಗೆ ಸೇವಾ ಭದ್ರತೆ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತರು ನಿಷ್ಪಕ್ಷಪಾತ ವರದಿ ಮಾಡುವ ಮೂಲಕ ಸಮಾಜದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಸಮರ್ಪಕವಾಗಿ ಕಾರ್ಯನಿರ್ವಸಲು ಸಹಕಾರಿಯಾಗಿದ್ದು, ಮುಂದಿನ…
ನಿನ್ನೆ ತಾನೆ ಮೊದಲ ಲಿರಿಕಲ್ ಸಾಂಗ್ ರಿಲೀಸ್ (Toofan Lyrical Song) ಮಾಡುವ ಮೂಲಕ ಬಿರುಗಾಳಿ ಎಬ್ಬಿಸಲು ಸಜ್ಜಾಗಿರುವ ಕ್ಲ್ಯೂ ನೀಡಿದೆ ‘ಕೆಜಿಎಫ್ 2’ ಚಿತ್ರತಂಡ. ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಕೆಜಿಎಫ್ 2’ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಏಪ್ರಿಲ್ ನಲ್ಲಿ ‘ಕೆಜಿಎಫ್ 2’ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ‘ಕೆಜಿಎಫ್ 2’ (KGF2) ಜೊತೆಗೆ ಬಾಕ್ಸಾಫೀಸ್ ಕಾಳಗ ಮಾಡಲು ಯಾವ ಸಿನಿಮಾಗಳು ಸಹ ಧೈರ್ಯ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈಗ ‘ಕೆಜಿಎಫ್ 2’ ಚಿತ್ರಕ್ಕೆ ಸವಾಲೆಸೆಯಲು ತಮಿಳಿನ ಸ್ಟಾರ್ ನಟ ವಿಜಯ್ ಸಿನಿಮಾ ಸಜ್ಜಾಗಿದೆ. ಇಷ್ಟು ದಿನ ಗಾಸಿಪ್ ರೂಪದಲ್ಲಿ ಇದ್ದ ಈ ಸುದ್ದಿ ಈಗ ಅಧಿಕೃತವಾಗಿದೆ. ಹೌದು, ಇತ್ತ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ‘ಕೆಜಿಎಫ್ 2’ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ಅತ್ತ ತಮಿಳಿನ ಬಹು ನಿರೀಕ್ಷಿತ ಸಿನಿಮಾ ‘ಬೀಸ್ಟ್’ (Beast) ಕೂಡ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ…
ನೀರಿನ ರಾಜಕಾರಣ ಮಾಡಿ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಗೆ ಬಿಜೆಪಿ ಟಾಂಗ್ ನೀಡಿದೆ. ಮೇಕೆದಾಟು ಯೋಜನೆ ವಿಚಾರವಾಗಿ ಮಂಗಳವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ‘ಮೇಕೆದಾಟು ಯೋಜನೆ(Mekedatu Project)ಯನ್ನು ಜಾರಿಗೊಳಿಸಲು ಬಿಡುವುದಿಲ್ಲವೆಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು?’ ಅಂತಾ ಪ್ರಶ್ನಿಸಿದೆ. ‘ರಾಹುಲ್ ಗಾಂಧಿ(Rahul Gandhi)ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ(Mekedatu Padayatre) ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ?’ ಅಂತಾ ಟೀಕಿಸಿದೆ. ರಾಜಕೀಯ ಲಾಭಕ್ಕಾಗಿ ಡಿಕೆಶಿ(DK Shivakumar)ಯವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ #ಸುಳ್ಳಿನಜಾತ್ರೆ…
ತಮಿಳುನಾಡು ಮೇಕೆದಾಟು (Mekedatu) ಯೋಜನೆ ವಿಚಾರವಾಗಿ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಇಂದು ಕಾನೂನು ಹಾಗೂ ತಾಂತ್ರಿಕ ಸಲಹೆ ಪಡೆದು ನಾಳೆ ಸದನದಲ್ಲಿ ನಿರ್ಣಯ ತರಲಾಗುವುದು ಎಂದು ತಿಳಿಸಿದರು. ಶೂನ್ಯ ವೇಳೆಯಲ್ಲಿ ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರು ಹಾಗೂ ವಿದ್ಯುತ್ (Electricity) ಉತ್ಪಾದನೆಗಾಗಿ ಯೋಜನೆ ಆಗಿದ್ದು, ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಇಲ್ಲ. ತಮಿಳುನಾಡು ಹೆಚ್ಚುವರಿ ನೀರನ್ನ ಬಳಕೆ ಮಾಡಿ ಯೋಜನೆ ರೂಪಿಸುತ್ತಿದ್ದಾರೆ. ಹೊಗೆನಕಲ್ ಎರಡನೇ ಹಂತವನ್ನು ತೆಗೆದುಕೊಳ್ಳುವ ಮಾತು ನಮ್ಮ ನೀರಿನ ಹಕ್ಕಿನ ಮೇಲೆ ಹೊಡೆತ ಆಗಿದೆ. ಅದಕ್ಕಾಗಿ ವಿರೋಧ ಮಾಡಿದ್ದೇವೆ ಮುಂದೆಯೂ ಮಾಡುತ್ತೇವೆ ಎಂದರು. ನಾವು ಕಾವೇರಿ (Kaveri Water) ನೀರನ್ನು ಬಳಕೆ ಮಾಡುವ ಎಲ್ಲ ಸಂದರ್ಭದಲ್ಲಿ ತಮಿಳುನಾಡಿನಿಂದ ಅಡ್ಡಿಯಾಗುತ್ತಿದೆ. ನಮ್ಮ ನೀರಿನ ಹಕ್ಕು ಪಡೆದುಕೊಳ್ಳಲು ನಾವು ಪರಿತಪಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಸರಿಯಲ್ಲ. ಇದನ್ನು ಪ್ರಬಲವಾಗಿ ತೆಗೆದುಕೊಂಡು ಹೋಗುತ್ತೇವೆ ಎಂದರು. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ. ನಮ್ಮ ಡಿಪಿಆರ್…
ಮೈಸೂರು: ಡಾ. ಪುನೀತ್ ರಾಜ್ ಕುಮಾರ್ (Puneeth Rajkumar)... ಈ ಹೆಸರು ಪ್ರತಿಯೊಬ್ಬರ ಉಸಿರು. ‘ಅಪ್ಪು’ ಮಾಡಿದ ಸಾಧನೆಗೆ ಇದೀಗ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಈ ಮೂಲಕ ‘ಕರುನಾಡ ರತ್ನ’ವನ್ನು ಮತ್ತೊಮ್ಮೆ ನೆನೆಯಲಾಗಿದೆ. ಮೈಸೂರು ವಿವಿ 102ನೇ ಘಟಿಕೋತ್ಸವ(102nd Convocation of University of Mysore)ದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ‘ಅಪ್ಪು’ ಪತ್ನಿ ಅಶ್ವಿನಿಯವರು ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿವಿಯಿಂದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್(Doctorate) ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್ ಕುಟುಂಬವೇ ಹಾಜರಿತ್ತು. ಈ ವೇಳೆ ಪ್ರತಿಯೊಬ್ಬರೂ ಭಾವುಕರಾಗಿ ಅಗಲಿದ ‘ಕರುನಾಡ ರತ್ನ’ವನ್ನು ನೆನೆದರು. ಗಣ್ಯರ ಸಾಲಿನಲ್ಲಿ ಕುಳಿತುಕೊಂಡಿದ್ದ ಪುನೀತ್ ರಾಜ್ ಕುಮಾರ್ ಸಹೋದರಿಯರು, ‘ಅಪ್ಪು’ ಪರವಾಗಿ ಅವರ ಪತ್ನಿ ಅಶ್ವಿನಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ವರನಟ ಡಾ.ರಾಜ್…
ಮಧುಗಿರಿ: ಪ್ರೇರಣಾ ಫೌಂಡೇಶನ್ ಮಧುಗಿರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಹಾಗೂ ಮಹೇಶ್ ಶಿಕ್ಷಣ ಸಂಸ್ಥೆ ಅಶೋಕ ನಗರ ತುಮಕೂರು ವತಿಯಿಂದ ಮಧುಗಿರಿ ಕನ್ನಡ ಭವನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಎಸ್.ಆರ್. ಅವರು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಫೌಂಡೇಶನ್ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶ ಹಾಗೂ ಮಧುಗಿರಿ ತಾಲ್ಲೂಕು ಮಕ್ಕಳು ರಾಜ್ಯದಲ್ಲಿ ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಾರ್ಧನ ರವರು ಪರೀಕ್ಷಾ ಸಿದ್ಧತಾ ಕಾರ್ಯಾಗಾರದ ಬಗ್ಗೆ ವಿದ್ಯಾರ್ಥಿಗಳೂಂದಿಗೆ ಸಂವಾದ ನಡೆಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಹನಾ ನಾಗೇಶ್, ಮಾರುತಿ ಇಂಟರ್ನೆಟ್ ಸಂಸ್ಧೆಯ ರಮೇಶ್, ಮಹೇಶ್ ಶಿಕ್ಷಣ ಸಂಸ್ಥೆಯ…
ಪಾವಗಡ: ಇತ್ತೀಚೆಗೆ ಪಾವಗಡ ಸಮೀಪ ಪಳವಳ್ಳಿ ಕಟ್ಟೆ ಮೇಲೆ ಬಸ್ ಅಪಘಾತವಾಗಿ 6 ಜನ ಮೃತಪಟ್ಟು, 30ಕ್ಕೂ ಹೆಚ್ಚು ಗಾಯಾಳುಗಳು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸಾವು ಬದುಕಿನ ನಡುವೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುಗಳ ಪೈಕಿ ಮಹೇಂದ್ರ ಎಂಬ ವಿದ್ಯಾರ್ಥಿಗೆ ಶಸ್ತ್ರ ಚಿಕಿತ್ಸೆಗೆ ನೆರವು ಕೋರಿ ಪಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಇಂದು ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಕೆ.ಎನ್.ಆರ್. ಅಭಿಮಾನಿ ಬಳಗ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಅರ್ಥಿಕ ಸಹಾಯವನ್ನು ಹೆಲ್ಪಿಂಗ್ ಹ್ಯಾಂಡ್ ಸಂಘಟನೆ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ನೆರವು ವಿತರಿಸಿ ಮಾತನಾಡಿದ ಕೆ.ಎನ್.ಆರ್.ಅಭಿಮಾನ ಬಳಗದ ಅಧ್ಯಕ್ಷ ಡಿ.ಸಿ.ಸಿ. ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ ಇಪ್ಪತ್ತು ಲಕ್ಷ ಹಾಗೂ ಗಾಯಾಲುಗಳಿಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವಂತೆ ಈ ಮೂಲಕ ಒತ್ತಾಯಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡುತ್ತ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಆದರೆ,…
ತುಮಕೂರು: ಜಿಲ್ಲೆಯಲ್ಲಿ ಎರಡು ತಲೆಮಾರುಗಳಿಂದ ಭೂಮಿ ವಸತಿಗಳ ಸಮಸ್ಯೆಗಳನ್ನು ತಾಲ್ಲೂಕು ಮತ್ತು ತುಮಕೂರು ಜಿಲ್ಲಾಡಳಿತ ಬಗೆಹರಿಸಿರುವುದಿಲ್ಲ ಈ ಹಿನ್ನೆಲೆಯಲ್ಲಿ ಹಂದ್ರಾಳ್ ನಾಗಭೂಷನ್ ಅವರ ನೇತೃತ್ವದಲ್ಲಿ ನಿನ್ನೆಯಿಂದ ಆಹೋರಾತ್ರಿ ಧರಣಿ ಆರಂಭವಾಗಿದೆ. ಮೊದಲ ದಿನದ ಧರಣಿಗೆ ಚಾಲನೆ ನೀಡಿದ ಸಂದರ್ಭ, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಸಿರಿಮನೆ ನಾಗರಾಜು, ಬೆಂಗಳೂರು ನಗರ ಅಧ್ಯಕ್ಷರಾದ ಮರಿಯಪ್ಪ, ಚಿಂತಕರಾದ ಸಿ.ಯತಿರಾಜು, ದೊರೈರಾಜು, ಬೀದಿಬದಿ ವ್ಯಾಪಾರಿಗಳ ಜಿಲ್ಲಾದ್ಯಕ್ಷರಾದ ಭದ್ರೇಗೌಡ್ರು, ಉಪಾಧ್ಯಕ್ಷರಾದ ಮಂಜುನಾಥ್, ದಯಾನಂದ್, ಲಂ,ಕ,ನಿ,ವೇ ತುಮಕೂರು ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷರಾದ ಕುಣಿಗಲ್ ನರಸಿಂಹಮೂರ್ತಿ ಇತರರುಗಳು ಹಾಜರಿದ್ದರು. ಧರಣಿ ವೇಳೆ ಮಳೆಯಾಗಿದ್ದು, ಈ ವೇಳೆ ಮಹಾನಗರ ಪಾಲಿಕೆಯು ಧರಣಿ ಸ್ಥಳದ ಪಕ್ಕದ ಗಾಜಿನ ಮನೆಯಲ್ಲಿ ಆಶ್ರಯ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಮತ್ತು ಸಿಬ್ಬಂದಿಗೆ ಧರಣಿ ನಿರತರು ಧನ್ಯವಾದಗಳನ್ನು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪರವಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳದಲ್ಲಿ ಜಿಲ್ಲಾ ಸಂಚಾಲಕ ಹಂದ್ರಾಳ್ ನಾಗಭೂಷಣ್, ಯತಿರಾಜ್, ಸಿರಿಮನೆ ನಾಗರಾಜು,…
ಬೆಂಗಳೂರು: ಬೆಂಗಳೂರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂಎಲ್ ಎ ಸತೀಶ್ ರೆಡ್ಡಿ ಅವರ ಭಾಗದಲ್ಲಿ ರಸ್ತೆಯ ಸ್ಥಿತಿ ತೀವ್ರ ಹದಗೆಟ್ಟಿದೆ, ಬಾಲಾಜಿ ಲೇಔಟ್ ಹೊಂಗಸಂದ್ರ ಹನುಮಾನ್ ದೇವಸ್ಥಾನ ಹತ್ತಿರ ಸರ್ಕಾರಿ ಪ್ರಾಥಮಿಕ ಶಾಲೆ ಆರನೇಯ ರಸ್ತೆ ಮುಖ್ಯ ರಸ್ತೆ ಮೊದಲನೇ ಅಡ್ಡರಸ್ತೆ 1 ವಾರದ ಹಿಂದೆ ಈ ರಸ್ತೆಯನ್ನು ಅಗೆದು ಬಿಬಿಎಂಪಿ ಅಧಿಕಾರಿಗಳು ಈ ಸ್ಥಿತಿಗೆ ತಂದಿದ್ದಾರೆ. ಇಲ್ಲಿನ ಜನರು ಪ್ರತಿದಿನ ಕೆಲಸ ಕಾರ್ಯಗಳಿಗೆ ಹೋಗಲು ಬಹಳ ಕಷ್ಟಪಟ್ಟು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬಿದ್ದು ಅನೇಕರಿಗೆ ಗಾಯಗಳು ಸಂಭವಿಸಿದೆ. ಈ ರಸ್ತೆಯಲ್ಲಿ ಪ್ರಯಾಣಿಸಲು ವಾಹನ ಸವಾರರು, ಸ್ಥಳೀಯರು ಹರಸಾಹಸಪಡುವಂತಾಗಿದೆ. ಸಾಕಷ್ಟು ಸಂಖ್ಯೆಯ ಜನರು ಇಲ್ಲಿ ವಾಹನ ಚಲಾಯಿಸಲು ಸಾಧ್ಯವಾಗದೇ, ವಾಹನದಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸುವಂತಾಗಿದೆ. ಇನ್ನೂ ರಸ್ತೆ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಕೂಡ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇಲ್ಲಿನ ಶಾಸಕರು ಸತೀಶ್ ರೆಡ್ಡಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯ ಭಾರತೀಯವರು ಸಂಬಂಧಪಟ್ಟ ಅಧಿಕಾರಿಗಳ…