Subscribe to Updates
Get the latest creative news from FooBar about art, design and business.
- ಬಿಡದಿಯಲ್ಲಿ ರೈತರು ರಸ್ತೆ ತಡೆ ಮಾಡಬಾರದು, ನನಗೆ ಯಾವುದೇ ಪ್ರತಿಷ್ಠೆ ಇಲ್ಲ: ಸಿಎಂ ಡಿ.ಕೆ.ಶಿವಕುಮಾರ್
- ಬೀದರ್: ಅಮಲ್ಲಾಪುರ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಹೋರಾಟಗಾರರ ಎಚ್ಚರಿಕೆ
- ವೈನ್ ಶಾಪ್ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!
- ಗಿಟಾರ್ ಬ್ಯಾಗ್ ಗೆ ಹೆಲ್ಮೆಟ್ ಹಾಕಿಲ್ಲವೆಂದು ₹500 ದಂಡ!
- ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಕೋರ್ಟ್ನಲ್ಲಿ ಹಿನ್ನಡೆ
- ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್
- ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!
- ಮರಗಳ ಮಾರಣಹೋಮದಿಂದ ಮಳೆ ಕೊರತೆ: ನ್ಯಾ.ಜಯಂತ್ ಕುಮಾರ್ ಕಳವಳ
Author: admin
ತುರುವೇಕೆರೆ: ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಬ್ಬರು ಆಶಾ ಕಾರ್ಯಕರ್ತೆಯರಿಗೆ “ಉತ್ತಮ ಆಶಾ ಕಾರ್ಯಕರ್ತೆಯರು” ಪ್ರಶಸ್ತಿ ಪ್ರದಾನ ಮಾಡಲಾಯಿತು. ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಶಾರದಮ್ಮ ಹಾಗೂ ಎನ್.ಎಸ್.ವಿ ಆಪರೇಷನ್ ಮಾಡಿಸಿ ಸಾಧನೆ ಮೆರೆದಿದ್ದ ಲತಾ ಅವರನ್ನು ಉತ್ತಮ ಆಶಾ ಕಾರ್ಯಕರ್ತೆಯರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 1 ರಲ್ಲಿನ ಬಿ ಎಲ್ ಗೌಡ ನಗರದ ವಾಣಿ ವಿಲಾಸ ಪುರ , ಹೊಸದುರ್ಗ ನಗರಕ್ಕೆ ತೆರಳುವ ಪ್ರಧಾನರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ, ಭಕ್ತರು ಹಾಗೂ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ಈ ದೇವಸ್ಥಾನಕ್ಕೆ ಬರುವಂತಹ ಆಂಜನೇಯ ಸ್ವಾಮಿ ಭಕ್ತರಿಗೆ ಇಲ್ಲಿ ಕೈ, ಕಾಲು, ಮುಖ ತೊಳೆಯಲು ಕೂಡ ಯಾವುದೇ ವ್ಯವಸ್ಥೆಗಳಿಲ್ಲ.ಸರ್ಕಾರದಡಿಯಲ್ಲಿರುವ ಈ ದೇವಸ್ಥಾನವನ್ನು ನಿರ್ವಹಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇದೆ. ಆದರೆ ಇದು ಬಳಸಲು ಯೋಗ್ಯವಾಗಿಲ್ಲ. ಈ ಪ್ರದೇಶದಲ್ಲಿ ಕೊಳಚೆ ನೀರಿದ್ದು, ಹಂದಿಗಳ ವಾಸಸ್ಥಳವಾಗಿ ದುರ್ವಾಸನೆಯಿಂದ ಕೂಡಿದೆ. ಇಲ್ಲಿ ಜನರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ನೀರಿಗೆ ಸೂಕ್ತವಾದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು. ಇಲ್ಲಿ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ, ಬೀದಿ ಬದಿ…
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಸರ್ಕಾರ ರಚಿಸಲು ಸಿದ್ಧತೆ ಆರಂಭಿಸಿದೆ. ಮಾರ್ಚ್ 25 ರಂದು ಸರ್ಕಾರ ರಚನೆಗಾಗಿ ‘ಪ್ರಮಾಣ ವಚನ ಸ್ವೀಕಾರ ಸಮಾರಂಭ’ ಆಯೋಜಿಸಲಾಗಿದೆ. ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆಯೊಳಗೆ ರಾಜ್ಯದ 27 ಸಾವಿರಕ್ಕೂ ಹೆಚ್ಚು ಶಕ್ತಿ ಕೇಂದ್ರದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಗುರುವಾರ ಸಂಜೆ ಬಿಜೆಪಿ(BJP) ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಕ್ಷಕರಾಗಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುವರ್ ದಾಸ್ ಸಹ ವೀಕ್ಷಕರಾಗಿ ಭಾಗವಹಿಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ವಿಧಿವಿಧಾನಗಳು ಸಭೆಯಲ್ಲಿ ಪೂರ್ಣಗೊಳ್ಳಲಿವೆ. ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಷಾ ಚರ್ಚೆ…
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಟೋಲ್ ಪ್ಲಾಜಾ ಬಳಿ ವಾಸಿಸುವ ಜನರಿಗೆ ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಿದೆ. ಆಧಾರ್ ಕಾರ್ಡ್ ಹೊಂದಿರುವ ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯ ಜನರಿಗೆ ಸರ್ಕಾರ ಪಾಸ್ ಗಳನ್ನು ನೀಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ 60 ಕಿಮೀ ಪ್ರದೇಶದಲ್ಲಿ ಕೇವಲ ಒಂದು ಟೋಲ್ ಪ್ಲಾಜಾ(Toll Plaza) ಇರುತ್ತದೆ ಎಂದು ಭರವಸೆ ನೀಡಿದರು. 60 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಎರಡನೇ ಟೋಲ್ ಪ್ಲಾಜಾ ಇದ್ದರೆ ಮುಂದಿನ ಮೂರು ತಿಂಗಳೊಳಗೆ ಅದನ್ನು ಮುಚ್ಚಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಯಾವ ಜನರು ಟೋಲ್ ಪ್ಲಾಜಾದಲ್ಲಿ ರಿಯಾಯಿತಿ ಸಿಗಲಿದೆ – ರಾಷ್ಟ್ರಪತಿ – ಉಪರಾಷ್ಟ್ರಪತಿ – ಪ್ರಧಾನ ಮಂತ್ರಿ – ಮುಖ್ಯಮಂತ್ರಿ – ಮಂತ್ರಿಗಳು – ಸಂಸತ್ತಿನ ಸದಸ್ಯ – ನ್ಯಾಯಾಧೀಶರು-ನ್ಯಾಯಾಧೀಶರು – ರಕ್ಷಣಾ ಸಚಿವಾಲಯಕ್ಕೆ ಸೇರಿದ ವಾಹನಗಳು – ಪೊಲೀಸ್…
ಮುಂಬೈನ ಥಾಣೆಯಲ್ಲಿರುವ ಪುಷ್ಪಕ್ ಗ್ರೂಪ್‌ನ ಘಟಕದ ಪುಷ್ಪಕ್ ಬುಲಿಯನ್‌ಗೆ ಸೇರಿದ ಸುಮಾರು 6.45 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನ ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ ಎಂದು ತಿಳಿಸಿದೆ. ಇವುಗಳಲ್ಲಿ ಥಾಣೆಯಲ್ಲಿರುವ ನೀಲಾಂಬರಿ ಯೋಜನೆಯಲ್ಲಿ 11 ಫ್ಲಾಟ್‌ಗಳು ಸೇರಿವೆ, ಇದು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ್ದು, ಇದು ಶ್ರೀಧರ್ ಮಾಧವ್ ಪಾಟಂಕರ್ ಅವರ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿದೆ. ಪಾಟಂಕರ್ ಮಹಾ ಸಿಎಂ ಉದ್ಧವ್ ಠಾಕ್ರೆ ಸೋದರ ಮಾವ 2017 ರ ಮಾರ್ಚ್‌ನಲ್ಲಿ ಪುಷ್ಪಕ್ ಬುಲಿಯನ್ ಮತ್ತು ಇತರ ಸಮೂಹ ಕಂಪನಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (PMLA ) ಅಡಿಯಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಇಡಿ ತಿಳಿಸಿದೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು ಮಹೇಶ್ ಪಟೇಲ್, ಚಂದ್ರಕಾಂತ್ ಪಟೇಲ್, ಅವರ ಕುಟುಂಬ ಸದಸ್ಯರು ಮತ್ತು ಅವರ ನಿಯಂತ್ರಣದಲ್ಲಿರುವ ಕಂಪನಿಗಳ ಒಡೆತನದ 21.46 ಕೋಟಿ ರೂಪಾಯಿ ಮೌಲ್ಯದ ಇತರ ಆಸ್ತಿಗಳನ್ನು ಜಪ್ತಿ…
ಬಿಬಿಎಂಪಿ(BBMP) ಖಾರ್ಯವೈಖರಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೊರೊನಾ 1, 2 ಮತ್ತು 3ನೇ ಅಲೆಯ ವೇಳೆ ಸೋಂಕಿತರ ಚಿಕಿತ್ಸೆ ನೀಡಲು ಆಯುಷ್ ಮತ್ತು ದಂತ ವೈದ್ಯರನ್ನು ನೇಮಕ ಮಾಡಿಕೊಂಡಿದ್ದ ಬಿಬಿಎಂಪಿ ಇದೀಗ ನಮಗೆ ನಿಮ್ಮ ಅಗತ್ಯವಿಲ್ಲವೆಂದು ಹೇಳಿದೆ. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್ ಮಾಡಿದ್ದು, ಬಿಬಿಎಂಪಿ ಅಧಿಕಾರಿಗಳನ್ನು(BBMP Officers) ತರಾಟೆಗೆ ತೆಗೆದುಕೊಂಡಿದ್ದಾರೆ.‘ಆಗತ್ಯ ಇದ್ದಾಗ ಕೆಲಸ ಮಾಡಿಸಿಕೊಂಡು, ಅಗತ್ಯ ಇಲ್ಲದಿದ್ದಾಗ ಮನೆಗೆ ಹೋಗಿ ಎನ್ನುವುದು ಯಾವ ನ್ಯಾಯ? ಕೋವಿಡ್(COVID-19) 1, 2 ಮತ್ತು 3ನೇ ಅಲೆಯ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್, ದಂತ ವೈದ್ಯರನ್ನು ಬಿಬಿಎಂಪಿ(BBMP) ನೇಮಕ ಮಾಡಿಕೊಂಡಿತ್ತು’ ಎಂದು ಟ್ವೀಟ್ ಮಾಡಿದ್ದಾರೆ. ‘2 ವರ್ಷ ರಾಜ್ಯಕ್ಕೆ ಕಷ್ಟವಿದ್ದಾಗ ಇವರ ಸೇವೆ ಪಡೆದು, ಈಗ ಎಕಾಏಕಿ ಬೇಡ ಎನ್ನುವುದು ಸರಿಯಲ್ಲ. ಆದಷ್ಟು ಇವರ ಸೇವೆಯನ್ನು ಮುಂದುವರೆಸಬೇಕು ಹಾಗೂ ಬಿಬಿಎಂಪಿ(BBMP) ವತಿಯಿಂದ ಬೆಂಗಳೂರಿನ ಎಲ್ಲಾ ವಾರ್ಡುಗಳಲ್ಲಿ ತೆರೆಯಲಿರುವ ನಮ್ಮ ಕ್ಲಿನಿಕ್ ಗಳಿಗೆ ಆದರೂ ಇವರ ಸೇವೆಯನ್ನು…
ಸರ್ಕಾರ ಮತ್ತೆ ಜನರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಪೆಟ್ರೋಲಿಯಂ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರ ಜಾರಿಯಾಗಲಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಕಂಡಿದೆ. ಮಂಗಳವಾರ ಡೀಸೆಲ್ 0.79 ಪೈಸೆ, ಪೆಟ್ರೋಲ್ 0.84 ಪೈಸೆ ಹೆಚ್ಚಳ ಆಗಿದ್ರೆ, ಬುಧವಾರ ಮತ್ತೆ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 79 ಪೈಸೆ ಮತ್ತೆ ಏರಿಕೆಯಾಗಿದೆ. ಒಟ್ಟಿನಲ್ಲಿ ಎರಡು ದಿನದಲ್ಲಿ ಪೆಟ್ರೋಲ್ ಬೆಲೆ 1.68, ಡೀಸೆಲ್ ಬೆಲೆ 1.58 ಕ್ಕೆ ಏರಿಕೆಯಾದಂತಾಗಿದೆ. ಬುಧವಾರದಿಂದ ಪೆಟ್ರೋಲ್ ದರ (Petrol Price) 102.26, ಡೀಸೆಲ್ 86.59 ರೂಪಾಯಿ, ಹಾಗೂ ಸ್ಪೀಡ್ ಪೆಟ್ರೋಲ್ ಹೊಸ ದರ 106.67, ಗ್ರೀನ್ ಡೀಸೆಲ್ ದರ 90.08 ರೂ. ಇರಲಿದೆ. ನಿರಂತರವಾಗಿ ಏರಿಕೆಯಾಗ್ತಿರುವ ಇಂಧನ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅಗತ್ಯವಸ್ತುಗಳ…
ತುಮಕೂರು: ತೆಂಗಿನ ಕಾಯಿ ಕೀಳಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ. ತನ್ನ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತೋಟದ ಮುಳ್ಳು ತಂತಿಯ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ವಿಚಾರ ತಿಳಿಯದೇ ವ್ಯಕ್ತಿಯು ತೆಂಗಿನ ಕಾಯಿ ತೆಗೆದುಕೊಳ್ಳಲು ಹೋಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ನಟರಾಜು ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವರದಿ: ಮಂಜುನಾಥ್ ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು ಗ್ರಾಮಾಂತರ : ಅರಣ್ಯ ಇಲಾಖೆ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಕುಂದೂರಿನಲ್ಲಿ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿರುವ ಶಾಸಕ ಡಿ.ಸಿ.ಗೌರಿಶಂಕರ್ ಜಂಟಿ ಸರ್ವೇ ಆಗುವವರೆಗೂ ಸ್ಥಳ ಕಾಲಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಊರ್ಡಿಗೆರೆ ಹೋಬಳಿಯ ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ವಸತಿ ರಹಿತರು ಗುಡಿಸಲು ಹಾಕಿಕೊಂಡು ವಾಸವಿದ್ದರು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಈ ಸ್ಥಳಕ್ಕೆ ಅರಣ್ಯ ಇಲಾಖೆಗೆ ಸೇರಿದ್ದು, ಕೂಡಲೇ ಗುಡಿಸಲನ್ನು ತೆರವುಗೊಳಿಸಬೇಕೆಂದು ತಿಳಿಸಿ ಅವರ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವಿಚಾರವಾಗಿ ಗುಡಿಸಲು ನಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಷಯ ವ್ಯಾಪಕವಾಗಿ ಹರಡುತ್ತಿದ್ದಂತೆ ಸುದ್ದಿ ತಿಳಿದು ಖುದ್ದು ಸ್ಥಳಕ್ಕೆ ಬುಧವಾರ ಬೆಳಗಿನ ಜಾವ ಭೇಟಿ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್ ಅಲ್ಲಿಯ ಸ್ಥಳ ಪರಿಶೀಲನೆ ನಡೆಸಿ, ಸ್ಥಳದ ದಾಖಲೆ ಪರಿಶೀಲನೆ ಮಾಡಿದರು.…
ಪಾಟ್ನಾ: ಬಿಹಾರದ ಮುಸ್ಲಿಂ ಕುಟುಂಬವೊಂದು (Muslim Family) ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿಶ್ವದ ಅತಿ ದೊಡ್ಡ ಹಿಂದೂ ಮಂದಿರ ವಿರಾಟ್ ರಾಮಾಯಣ ದೇವಾಲಯಕ್ಕೆ 2.5 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದೆ (Virat Ramayan Mandir). ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ: ಗುವಾಹಟಿಯಲ್ಲಿ ವಾಸಿಸುತ್ತಿರುವ ಪೂರ್ವ ಚಂಪಾರಣ್‌ನ ಉದ್ಯಮಿ ಇಶ್ತಿಯಾಕ್ ಅಹ್ಮದ್ ಖಾನ್ ಅವರು, ಈ ಭೂಮಿಯನ್ನು ದಾನ ಮಾಡಿದ್ದಾರೆ ಎಂದು ಮಹಾವೀರ ಮಂದಿರ ಟ್ರಸ್ಟ್‌ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ( Kishore Kunal) ತಿಳಿಸಿದ್ದಾರೆ. ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿ ದಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ವ ಚಂಪಾರಣ್‌ನ ಕೇಸರಿಯಾ ಉಪವಿಭಾಗದ ರಿಜಿಸ್ಟ್ರಾರ್ ಕಚೇರಿಯಲ್ಲಿ ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ (Virat Ramayan Mandir). ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯದ ಉದಾಹರಣೆ : ಇಶ್ತಿಯಾಕ್ ಅಹ್ಮದ್ ಖಾನ್ ಮತ್ತು ಅವರ ಕುಟುಂಬದವರ ಈ ದೇಣಿಗೆಯು…