ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಚೌಡೇಶ್ವರಿ ಅಮ್ಮನವರ ಜ್ಯೋತಿ ಉತ್ಸವವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ಹಾಗೂ ಜನತೆಯನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ ಸಲುವಾಗಿ ತೊಗಟವೀರ ಕ್ಷತ್ರಿಯರು ತಮ್ಮ ಕುಲದೇವಿ ಶ್ರೀ ಚೌಡೇಶ್ವರಿ ಅಮ್ಮನವರ ಪಂಚಜ್ಯೋತಿ ಉತ್ಸವವನ್ನು ಶ್ರದ್ಧಾಭಕ್ತಿಗಳಿಂದ ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು, ಅದು ಗ್ರಾಮದ ಸಂಪ್ರದಾಯವಾಗಿ ಬೆಳೆದು ಬಂದಿದೆ.
ಪ್ರತಿ ವರ್ಷ ಯುಗಾದಿ ಹಬ್ಬದ 3ನೇ ದಿನ ಚೌಡೇಶ್ವರಿ ದೇವಿಯ ಪಂಚ ಜ್ಯೋತಿಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ಹಮ್ಮಿಕೊಳ್ಳುವುದು ಗ್ರಾಮದ ಸಂಪ್ರದಾಯಗಳಲ್ಲಿ ಒಂದಾಗಿದೆ. ಎಂದಿನಂತೆ ಈ ವರ್ಷವೂ ಸಹಾ ಈ ಉತ್ಸವ ಮೆರವಣಿಗೆಯು ವಾಧ್ಯವೃಂದ, ಕಲಾತಂಡಗಳೊಂದಿಗೆ ಸಾಗುತ್ತಾ ಆನಂದ ಪದಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಉತ್ಸವವು ಶ್ರೀಚೌಡೇಶ್ವರಿ ಅಮ್ಮನವರ ಮೂರ್ತಿ ಮತ್ತು ಪಂಚಜ್ಯೋತಿಗಳೊಂದಿಗೆ ಪುರದಕಟ್ಟೆಯಿಂದ ಪ್ರಾರಂಭವಾಗಿ ಬಿ.ಹೆಚ್. ರಸ್ತೆಯ ಮೂಲಕ ಸಾಗಿ ಹಳೆಯ ಅಂಚೆಕಟೇರಿ ರಸ್ತೆ. ಎಸ್.ಕೆ.ಪಿ.ಟಿ ರಸ್ತೆಯ ಮೂಲಕ ಅಶ್ವಥನಕಟ್ಟೆಯ ರಸ್ತೆಯಲ್ಲಿ ಸಾಗಿ ಹೊಸ ಚೌಡೇಶ್ವರಿ ದೇವಾಲಯದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾಧಿಗಳು ಬಾಯಿಗೆ ಬೀಗ (ನಾರದ) ಹಾಕಿಕೊಂಡು ಹರಕೆ ತೀರಿಸಿದರು. ಹರಕೆ ಹೊತ್ತ ಮತ್ತಲವು ಭಕ್ತಾಧಿಗಳು ಜ್ಯೋತಿ ಹಾದುಬರುವ ದಾರಿಯುದ್ದಕ್ಕೂ ಉತ್ಸವ ನೋಡಲು ಬಂದಿದ್ದ ಜನಸ್ತೋಮಕ್ಕೆ ಷಾಮಿಯಾನಗಳನ್ನು ಹಾಕಿ ನೆರಳು ಮೂಡಿಸಿ ಅಲ್ಲಲ್ಲಿ ಮಜ್ಜಿಗೆ, ಷರಬತ್ತು, ಅನ್ನಪ್ರಸಾದ ಹಂಚಿಕೆ ಮಾಡಿದರು. ಬಿರು ಬಿಸಿಲನ್ನು ಲೆಕ್ಕಿಸದೆ ಗ್ರಾಮದ ಸಾರ್ವಜನಿಕರ ಜೊತೆಗೆ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ಕೃತಾರ್ಥರಾದರು.
ಜ್ಯೋತಿಗಳ ಪುರಮೆರವಣಿಗೆಯಲ್ಲಿ ಜೋಡಿ ಅಚ್ಚಮ್ಮನಹಳ್ಳಿ ಕಲಾವಿದರ ಕೋಲಾಟ ಮತ್ತು ಸಿದ್ದಾಪುರ ಕಲಾವಿದರ ಡ್ರಮ್ಸ್ ವಾದನ ಆಕರ್ಷಕವಾಗಿತ್ತು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4