Author: admin

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಪರಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜಣ್ಣ, ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಲಿಖಿತ ಮನವಿ ನೀಡಿದರು. ಬಳಿಕ ರಾಜಣ್ಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪರಮೇಶ್ವರ ಅವರು, ಈ ವಿಚಾರದಲ್ಲಿ ನಾನು ದೂರು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಬೇಕು. ನಾನು ಮನವಿ ಮಾತ್ರ ಸ್ವೀಕರಿಸಿದ್ದೇನೆ. ಈ ಮನವಿ ಆಧಾರದ ಮೇಲೆ ಕಾನೂನು ತಜ್ಞರ ಜೊತೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೀದರ್: ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾ.27 ಹಾಗೂ 28 ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರಾಧ್ಯಕ್ಷ ಮಂದಾಕೃಷ್ಣ ಮಾದಿಗ ಅವರ ಮಾರ್ಗದರ್ಶನದಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾ.27ರಂದು ಕಾರ್ಯಾಗಾರ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಜರುಗುವುದು. ಹಾಗೆಯೇ ಮಾ.28ರಂದು ಒಳ ಮೀಸಲಾತಿ ಬೆಂಬಲಿಸುವ ಎಲ್ಲ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಐಎಎಸ್, ಐಪಿಎಸ್, ಕೆಎಎಸ್ ಹಾಲಿ ಮತ್ತು ಮಾಜಿ ಅಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕ, ಸಚಿವರು ಜೊತೆಗೆ ಮಾದರ ಚನ್ನಯ ಸ್ವಾಮಿಜಿ ಅವರು ಸೇರಿದಂತೆ ಇತರೆ ಮಠಾಧೀಶರು ಪಾಲ್ಗೊಳ್ಳುವರು ಎಂದು ತಿಳಿಸಿದರು ಅಂದು ಮಧ್ಯಾಹ್ನದ ಬಳಿಕ ಮುಂದಿನ ಹೋರಾಟದ ಬಗ್ಗೆ ಮಂದಾಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮೇಲಿನ ಎಲ್ಲ ಮಹನೀಯರ ಜೊತೆ ಮುಂದಿನ ಹೋರಾಟದ…

Read More

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದ್ದು, ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಡಿಆರ್ ಐ ಪರ ವಕೀಲ ಮಧು ರಾವ್ ಅವರು ವಾದ ಮಂಡನೆ ಮಾಡಿದ್ದಾರೆ. ರನ್ಯಾ ರಾವ್ ಪರ ಹಿರಿಯ ವಕೀಲ ಕಿರಣ್ ಜವಳಿ ಪ್ರತಿವಾದ ಮಾಡಿದ್ದಾರೆ. ಎರಡೂ ಕಡೆಯ ವಾದವನ್ನು ಕೋರ್ಟ್ ಆಲಿಸಿತು. ಮಾರ್ಚ್ 27ರಂದು ರನ್ಯಾ ಅವರ ಜಾಮೀನು ಬಗ್ಗೆ ಆದೇಶ ಪ್ರಕಟವಾಗಲಿದ್ದು, ಜಾಮೀನು ಸಿಗುತ್ತದೆಯೇ ಅಥವಾ ನಟಿಗೆ ಜೈಲೇ ಗತಿಯೇ ಎನ್ನುವುದನ್ನು ಕಾದು ನೋಡಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಹನಿಟ್ರ್ಯಾಪ್ ಮಾಡಲು ಬಂದಿದ್ದ ಇಬ್ಬರು ಹುಡುಗಿಯರು ಸಚಿವ ರಾಜಣ್ಣ ಅವರ ಬೆಂಗಳೂರಿನ ಮನೆಯ ಬಳಿ ಬಂದು ʼನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆʼ ಎಂದಿದ್ದಳು. ಈ ಬಗ್ಗೆ ಸ್ವತಃ ರಾಜಣ್ಣ ಅವರೆ ಹೇಳಿಕೆ ನೀಡಿದ್ದು, ಎರಡು ಬಾರಿ ನನ್ನನ್ನು ಭೇಟಿಯಾಗಿದ್ದರು. ʼಮೊದಲ ದಿನ ಒಬ್ಬ ಹುಡುಗ ಬಂದಿದ್ದ, ಎರಡು ಸಲವೂ ಹುಡುಗ ಅವನೇ ಆಗಿದ್ದ, ಆದ್ರೆ ಎರಡೂ ಸಲ ಹೆಣ್ಣು ಮಕ್ಕಳು ಬೇರೆ ಬೇರೆ ಇದ್ದರು. ಹುಡುಗಿಯರು ಒಂದು ಜೀನ್ಸ್ ಬ್ಲೂ ಟಾಪ್ ಹಾಕಿದ್ದರು. ಹುಡುಗಿಯು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದರುʼ ಎಂದಿದ್ದಾರೆ. ಮೊದಲು ಬಂದಾಗ ಹೈಕೋರ್ಟ್ ಲಾಯರ್ ಎಂದು ಹೇಳಿರಲಿಲ್ಲ. ಎರಡನೇ ಬಂದಾಗ ಲಾಯರ್ ಎಂದು ಹೇಳಿಕೊಂಡಿದ್ದಳು. ಯಾವುದೆ ಪ್ರಕರಣದ ಬಗ್ಗೆ ಮಾತನಾಡಲು ಅಲ್ಲ, ಬದಲಾಗಿ ನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆ ಎಂದು ಹೇಳಿದ್ದಳು. ಅವರ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ. ಈ ಕುರಿತಂತೆ ಎಲ್ಲವೂ ದೂರಿನಲ್ಲಿ ಬರೆದಿದ್ದೇನೆ ಎಂದರು. ಗೃಹಮಂತ್ರಿಗೆ ದೂರು ಕೊಡುತ್ತೇನೆ, ಆ ದೂರಿನಲ್ಲಿ…

Read More

ಬೀದರ್: ನಗರದ ಹಳೆ ನಾವದಗೇರಿಯ ಶೆಟರ್ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 3,99,534 ರೂ. ಮೌಲ್ಯದ ಸುಮಾರು 117 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೋಮವಾರ ಅನೌಪಚಾರಿಕ ಪಡಿತರ ಪ್ರದೇಶದ ಆಹಾರ ನಿರೀಕ್ಷಕ ಉಪನಿರ್ದೇಶಕರು ಹಾಗೂ ಜಿಲ್ಲಾ ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ನಗರದ ಹಳೆ ನಾವದಗೇರಿ ಹತ್ತಿರ ಒಂದು ಶೆಟರ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಪಡಿತರ ಆಹಾರ ಧಾನ್ಯ ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಎಸ್ಪಿ ಪ್ರದೀಪ್ ಗುಂಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ ಅವರ ನಿರ್ದೇಶನದಂತೆ ಹಾಗೂ ಪ್ರಭಾರಿ ಪೊಲೀಸ್ ಉಪಾಧೀಕ್ಷಕ ಎಮ್.ಡಿ.ಸನಾದಿ ಅವರ ಮಾರ್ಗದರ್ಶನದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿದ್ದಣ್ಣ ಗಿರಿಗೌಡರ್ ಮತ್ತು ತಂಡ ದಾಳಿ ನಡೆಸಿತ್ತು. ನಾವದಗೇರಿಯ ರಸ್ತೆ…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ರಾಜ್ಯದ ಹಿಂದುಳಿವ ವರ್ಗಗಳ ಮೀಸಲಾತಿಗೆ ಶ್ರಮಿಸಿದ ಎಲ್.ಜಿ.ಹಾವನೂರು ರವರನ್ನು ಆ ವರ್ಗಗಳು ನೆನೆಯದಿರುವುದು ಬೇಸರದ ಸಂಗತಿ ಎಂದು ಲೇಖಕ ಹೊ.ಮ.ನಾಗರಾಜು ತಿಳಿಸಿದರು. ನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸರು ಪ್ರಥಮ ಆಯೋಗವನ್ನು ರಚಿಸಿ ಅದಕ್ಕೆ ಹಾವನೂರರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಅದರನ್ವಯ ಹಾವನೂರರು ಸುಮಾರು 400 ಗ್ರಾಮಗಳು ಮೂರು ಲಕ್ಷದ ಐವತ್ತು ಸಾವಿರ ಜನರನ್ನು ಖುದ್ದು ಬೇಟಿ ಮಾಡಿ ಅವರ ಸ್ಥಿತಿಗತಿಗಳನ್ನು ತಿಳಿದು, ಇವರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಜೀವನ ಶೋಚನೀಯವಾಗಿದೆ. ಇವರ ಪ್ರಗತಿ ಕ್ರಮ ಕೈಗೊಳ್ಳವುದು ಅನಿವಾರ್ಯ ಎಂಬ ಅಂಶಗಳುಳ್ಳ ಹಾವನೂರು ವರದಿಯನ್ನು 1975 ರಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆ ನಂತರ ಈ ವರದಿಯ ಆಧಾರದ ಮೇಲೆ ಹಲವು ಸೌಲಭ್ಯಗಳು ಸಂಬಂದಿಸಿದ ವರ್ಗಗಳಿಗೆ ದೊರೆಯುತ್ತವೆ. ಆದರೆ ಈ ವರ್ಗಗಳು ದೇವರಾಜು ಅರಸರನ್ನಾಗಲಿ ಅಥವಾ ಹಾವನೂರರನ್ನಾಗಲಿ ಸ್ಮರಿಸುವ ಸೌಜನ್ಯವನ್ನು ತೋರಿಸುತ್ತಿಲ್ಲ. ಸರ್ಕಾರಗಳು ಸಹಾ ಹಾವನೂರ ವ್ಯಕ್ತಿತ್ವ ಮತ್ತು…

Read More

ಕನ್ನಡದ ದಿ ವಿಲನ್ ಚಿತ್ರದ ನಟಿ ಆ್ಯಮಿ ಜಾಕ್ಸನ್ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭವಾರ್ತೆಯನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಗಂಡು ಮಗುವನ್ನು ಪಡೆದ ಆ್ಯಮಿ ಮತ್ತು ಎಡ್ ವೆಸ್ಟ್ವಿಕ್ ದಂಪತಿ ಖುಷಿಯಲ್ಲಿದ್ದಾರೆ. ಇದೀಗ ಮಗುವನ್ನು ಹಿಡಿದುಕೊಂಡು ಪತಿಯ ಜೊತೆ ನಟಿ ಪೋಸ್ ಮಾಡಿರುವ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗನಿಗೆ ‘ಆಸ್ಕರ್ ಅಲೆಕ್ಸಾಂಡರ್ ವೆಸ್ಟ್ವಿಕ್’ ಹೆಸರಿಡಲಾಗಿದೆ. ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ… ರಾಜಣ್ಣ ದೂರು ಕೊಟ್ಟರೆ ತನಿಖೆ ಮಾಡ್ತೀವಿ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರು ನೀಡದ ಬಗ್ಗೆ ನೀವು ರಾಜಣ್ಣರನ್ನ ಕೇಳಬೇಕು. ಅವರಿಗೆ ಯಾವಾಗ ಕೊಡಬೇಕು ಅನ್ನಿಸುತ್ತೆ ಕೊಡ್ತಾರೆ ಎಂದರು. ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ, ದೂರು ಕೊಡಲಿಲ್ಲ ಅಂದ್ರೆ ಅವರನ್ನೇ ಕೇಳಿ, ನನ್ನ ಕೆಲಸ ತನಿಖೆ ಘೋಷಣೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ತನಿಖೆ ತೀರ್ಮಾನ ಮಾಡ್ತಾರೆ. ದೂರು ಬಂದರೆ ತನಿಖೆ ಮಾಡೋದಾಗಿ ಅವರು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ತನ್ನ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದ ವ್ಯಕ್ತಿಗೆ ಕೊಳಕು ಭಾಷೆಯಲ್ಲಿ ಭೈರತಿ ಸುರೇಶ್ ನಿಂದಿಸಿರುವ ಕೆಲವು ಸ್ಕ್ರೀನ್ ಶಾಟ್ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಬೈರತಿ ಸುರೇಶ್ ಅವಾಚ್ಯವಾಗಿ ನಿಂದಿಸಿರುವ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನೀರು ಉಚಿತ ಪೂರೈಸುವ ಟ್ಯಾಂಕರ್ ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ವ್ಯಕ್ತಿಯೊಬ್ಬ, ಇದೆಲ್ಲಾ ನಾಟಕ, ಜನ ಮೂರ್ಖರೆಂದು ಕಮೆಂಟ್ ಮಾಡಿದ್ದರು. ಈ ಕಮೆಂಟ್ಗೆ ಭೈರತಿ ಸುರೇಶ್, ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಅಡ್ರೆಸ್ ಹಾಕು, ಸೂ… ಎಂದೆಲ್ಲ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಕಮೆಂಟ್ಗಳನ್ನು ಯಾರೋ ಸ್ಕ್ರೀನ್ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದು, ಈ ಸ್ಕ್ರೀನ್ ಶಾಟ್’ಗಳು ವೈರಲ್ ಆಗಿದೆ. ಇದರ ಬೆನ್ನಲ್ಲೇ ಫೇಸ್ಬುಕ್ನಿಂದ…

Read More

ಬೆಳಗಾವಿ: ನವಜಾತ ಶಿಶುವನ್ನು ಕೊಂದು ತಿಪ್ಪೆಗೆಸೆದ ಆರೋಪದ ಮೇಲೆ ಯುವ ಜೋಡಿಯೊಂದನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಕಿತ್ತೂರು ಬಳಿಯ ಅಂಬಡಗಟ್ಟಿ ಗ್ರಾಮದ ಮಹಾಬಲೇಶ್ ಕಾಮೋಜಿ (31) ಮತ್ತು ಸಿಮ್ರಾನ್ ಅಲಿಯಾಸ್ ಮುಸ್ಕಾನ್ (22) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಸಂಬಂಧದಲ್ಲಿದ್ದರು, ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ವಿವಾಹಕ್ಕೂ ಮುನ್ನವೇ ಯುವತಿ ಗರ್ಭಣಿಯಾಗಿದ್ದು, ಮಾರ್ಚ್ 5 ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ತನ್ನ ವೇದನೆಯನ್ನು ಮಹಾಬಲೇಶ್ ಬಳಿ ಹೇಳಿಕೊಂಡಿದ್ದು, ಆತ ಹೇಳಿದಂತೆ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಗುವಿನ ಅಳುವಿನಿಂದ ಇತರರಿಗೆ ತಿಳಿಯುತ್ತದೆ ಎಂದು ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ಈ ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ. ಇದಾದ ಬಳಿಕ ಶಿಶುವನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಿಪ್ಪೆಗೆಸದು ಇದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಈ ನಡುವೆ ಅಕ್ಕಪಕ್ಕದವರು ಶಿಶು ಬಿದ್ದಿದ್ದನ್ನ ಗಮನಿಸಿ ಕಿತ್ತೂರು…

Read More