Subscribe to Updates
Get the latest creative news from FooBar about art, design and business.
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
- ತುಮಕೂರು: ವಿಮೆ ಹಣ, ಮದ್ಯದ ಅಮಲಿಗೆ ನಡೆದಿದ್ದ 3 ಭೀಕರ ಕೊಲೆ ಕೇಸ್ ಭೇದಿಸಿದ ಪೊಲೀಸರು; 7 ಮಂದಿ ಬಂಧನ
- ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ
- ತುಮಕೂರು: ಆನ್ಲೈನ್ ಕೌನ್ಸಿಲಿಂಗ್ ಮೂಲಕ 41 ಸರ್ಕಾರಿ ನೌಕರರ ವರ್ಗಾವಣೆ
- ವೃದ್ದೆಯನ್ನು ಕೊಲೆ ಮಾಡಿ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
- ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ
Author: admin
ಸರಗೂರು: ಜನ ಸಂಪರ್ಕ ಸಭೆ ಅಂದರೆ, ಬರಿ ಆಶ್ವಾಸನೆ ಸಭೆ ಆಗಬಾರದು, ಅದು ಕಾರ್ಯರೂಪಕ್ಕೆ ಬರಬೇಕು ಮತ್ತು ಪ್ರತಿ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸಿಗಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜನ ಸಂಪರ್ಕ ಸಭೆ ಪೂರ್ವಭಾವಿ ಸಭೆಯನ್ನು ಶುಕ್ರವಾರದಂದು ಶಾಸಕರು ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರ ಸಭೆ ಕರೆದು, ಚರ್ಚಿಸಿ ಮಾತನಾಡಿದರು. ನನಗೆ ಈ ಬಾರಿ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಹೆಚ್ಚಿನ ಫಲಿತಾಂಶ ಬರಬೇಕು. ಸರ್ಕಾರದ ಸೌಲಭ್ಯಗಳನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶ ದೊರೆಯುವ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಬಿಇಓ ರವರಿಗೆ ಸೂಚನೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ನೌಕರರಾದ ಶಿಕ್ಷಕರು ಮಕ್ಕಳಿಗೆ ಇಲ್ಲಿ ವ್ಯಾಸಂಗ ಮಾಡಬೇಡಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಂದು ಹೇಳಿರುವ ನನ್ನ ಗಮನಕ್ಕೆ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡರು.…
ಸರಗೂರು: ಬಡವರು ಮತ್ತು ದಮನಿತರನ್ನು ಬೆಂಬಲಿಸುವಲ್ಲಿ ಅವರು ಕರುಣಾಮಯಿಯಾಗಿದ್ದರು ಮತ್ತು ಆಶ್ರಯ ಅಗತ್ಯವಿರುವ ಸಾವಿರಾರು ಜನರಿಗೆ ಅವಕಾಶಗಳನ್ನು ಒದಗಿಸಿದರು ಎಂದು ಅಖಿವೀಲಿಂ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಹಾಗೂ ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗ ಗೌರವಾಧ್ಯಕ್ಷ ಡಿ.ಜಿ.ಶಿವರಾಜಪ್ಪ ತಿಳಿಸಿದರು. ಪಟ್ಟಣದ ಜೆಎಸ್ಎಸ್ ಶಿವರಾತ್ರಿ ಶಿವಾನುಭವ ಮಂಗಳ ಮಂಟಪದಲ್ಲಿ ಸೂತ್ತೂರು ಶ್ರೀಗಳ 110 ನೇ ವರ್ಷದ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಶುಕ್ರವಾರದಂದು ರಾಜೇಂದ್ರ ಮಹಾಸ್ವಾಮಿಗಳ ಬಳಗವತಿಯಿಂದ ಹಮ್ಮಿಕೊಂಡಿದ್ದು ಶ್ರೀಗಳ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು. ಎಲ್ಲರ ಒಳಿತಿನಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದ ಅವರು, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಶ್ರೀಮಠದ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದರು — ಆ ಅವಧಿಯಲ್ಲಿ ಹಲವು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ನಡೆದವು. ಅವರು ಎಲ್ಲರ ಒಳಿತನ್ನು ಹೊರತುಪಡಿಸಿ ಬೇರೇನನ್ನೂ ಬಯಸಲಿಲ್ಲ. ಅವರಿಗೆ ಕೇವಲ ಹನ್ನೆರಡು ವರ್ಷ ವಯಸ್ಸಾಗಿದ್ದಾಗ ಪವಿತ್ರ ಸ್ಥಾನವನ್ನು ಅಲಂಕರಿಸಿದರು. ಅವರು ತಮ್ಮ ಗುರು ಮಂತ್ರ ಮಹರ್ಷಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾಸ್ವಾಮೀಜಿ ಅವರೊಂದಿಗೆ ಶ್ರೀಮಠದ…
ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಪಂ ವ್ಯಾಪ್ತಿಯ ಜಯನಗರ ಗ್ರಾಮದ ಜಯರಾಜು ರವರಿಗೆ ಸೇರಿದ ತಂಬಾಕು ಬ್ಯಾರನ್ ಗೆ ಗುರುವಾರದಂದು ಸಂಜೆ ಬೆಂಕಿ ತಗಲಿ ಲಕ್ಷಾಂತರ ರೂ. ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಹೆಚ್.ಡಿ.ಕೋಟೆ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಬ್ಯಾರನ್ ಗೆ ಮತ್ತು ಅಕ್ಕ ಪಕ್ಕದ ಮನೆಗಳಿಗೆ ಆಗುವ ಅನಾಹುತವನ್ನು ತಡೆದಿದ್ದಾರೆ. ಜಯರಾಜು ರವರಿಗೆ ಸೇರಿದ ತಂಬಾಕು ಬ್ಯಾರನ್ ನಲ್ಲಿ ತಂಬಾಕು ಸೊಪ್ಪು, ರಿಪರ್ ಗಳು ಕೋಲು, ಓಲೆ ಸರ ನೆತ್ತಿಸರ, ಮತ್ತು ಪೈಪ್ ಸೆಟ್ ಹಂಚುಗಳು, ಹಾಗೂ ಕಿಟಕಿ ಬಾಗಿಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿಸಿದರು. ಸರಿಯಾದ ಸಮಯಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಯರಾಜುರವರ ಕುಟುಂಬದವರು ಹಾಗೂ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಎಮ್.ಜಿ.ಸೋಮಣ್ಣರವರು ಹಾಗೂ ಸಿಬ್ಬಂದಿಗಳಾದ ಮಂಜು ಎಸ್, ಅರುಣ್ ಕುಮಾರ್, ಪುಂಡಲೀಕ ಲಮಾಣಿ, ಬಾಳಕೃಷ್ಣ ರವಳೋಜೆ, ಹಾಗೂ ಅಗ್ನಿಶಾಮಕ ಚಾಲಕರಾದ ಸುನೀಲ್ ಕುಮಾರ್…
ಬೆಂಗಳೂರು: ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆ ಸಂಬಂಧ ಸರ್ಕಾರಕ್ಕೆ ವಿವರವಾದ ಮಾಹಿತಿ ಜೊತೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರ ನಮಗೆ ಅನುಮತಿ ಕೊಟ್ಟರೆ ನಾಯಿಗಳಿಗೆ ಪ್ರತ್ಯೇಕ ನಿರ್ವಹಣೆ ಮಾಡೋ ಬಗ್ಗೆ ತೀರ್ಮಾನ ಮಾಡುವುದಾಗಿ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ 53 ನಾಯಿಗಳು ಇವೆ. ನಾಯಿಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ. ಶಾಸಕರು ವಾಕಿಂಗ್ ಮಾಡಬೇಕಾದ್ರೆ, ಜನರು ವಿಸಿಟ್ ಮಾಡಿದಾಗ ತೊಂದರೆ ಆಗ್ತಿದೆ. ಹೀಗಾಗಿ ನಾವು ಅವುಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡೋ ಪ್ಲ್ಯಾನ್ ಇದೆ ಎಂದಿದ್ದಾರೆ. ಖಾಸಗಿ ಎಸ್ ಜಿಒಗೆ ಕೊಟ್ಟು ಇವುಗಳಲ್ಲಿ ಸಾಕುವ ವ್ಯವಸ್ಥೆ ಮಾಡುವ ತೀರ್ಮಾನವಾಗಿ ಚರ್ಚೆ ಆಗಿವೆ. ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಸರ್ಕಾರಕ್ಕೆ ರವಾನೆ ಮಾಡಿದ್ದೇವೆ. ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟರೆ ಅನುಷ್ಟಾನ ಮಾಡ್ತೇವೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಟೋಕಿಯೋ(ಜಪಾನ್): ಭಾರತವು ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಗಳಲ್ಲಿ ಪಾರ ದರ್ಶಕತೆ ಹೊಂದಿದ್ದು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದರು. ಭಾರತ ಮತ್ತು ಜಪಾನ್ ನಡುವಿನ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ, ಆರ್ಥಿಕ ಸ್ಥಿರತೆ ನೀತಿಗಳಲ್ಲಿ ಪಾರದರ್ಶಕತೆ ಮತ್ತು ಭವಿಷ್ಯವಾಣಿಯನ್ನು ಹೊಂದಿದೆ. ಭಾರತ ಇಂದು ವಿಶ್ವದಲ್ಲೇ 3ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಂಡವಾಳವು ಕೇವಲ ಬೆಳೆಯುವುದಿಲ್ಲ. ಅದು ಗುಣಿಸುತ್ತದೆ. ಕಳೆದ 12 ವರ್ಷಗಳಲ್ಲಿ ಆಗಿರುವ ಬೆಳವಣಿಗೆ ಮತ್ತು ಪರಿವರ್ತನೆ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಾವು ಜಾಗತಿಕ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡುತ್ತೇವೆ. ಮಾರುಕಟ್ಟೆಗಳು ಬಲವಾದ ಆದಾಯವನ್ನು ನೀಡುತ್ತದೆ. ಸುಧಾರಣೆ, ರೂಪಾಂತರ, ಕಾರ್ಯಕ್ಷಮತೆಯ ನಮ ವಿಧಾನವು ಪ್ರಗತಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಜೆಟ್ರೊ ಹೇಳುವಂತೆ ಶೇ.80ರಷ್ಟು ಕಂಪನಿಗಳು ಭಾರತದಲ್ಲಿ ವಿಸ್ತರಿಸಲು ಬಯಸುತ್ತಿವೆ. ಶೇ.75ರಷ್ಟು ಕಂಪನಿಗಳು ಲಾಭ ಗಳಿಸುತ್ತಿವೆ. ನಮಲ್ಲಿ ಬಂಡವಾಳ ಹೂಡಿದರೆ ಅದು ಕೇವಲ ಬೆಳೆಯುವುದಲ್ಲ ಗುಣಿಸುತ್ತಾ ಹೋಗುತ್ತದೆ. ಅಂದರೆ ನಿಮ…
ಬೆಂಗಳೂರು: ಧರ್ಮಸ್ಥಳದ ವಿಚಾರಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ನ್ಯಾಯಾಲಯದ ಅದೇಶದ ಮೇರೆಗೆ ಎಸ್ ಐಟಿ ರಚನೆ ಮಾಡಲಾಗಿದೆ. ಅದನ್ನು ತಪ್ಪು ಎನ್ನುವುದಾದರೆ, ನ್ಯಾಯಾಲಯದಲ್ಲೇ ಪ್ರಶ್ನೆ ಮಾಡಬೇಕಿತ್ತು ಎಂದು ಲೋಕೋ ಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯಸರ್ಕಾರವನ್ನು ಟೀಕಿಸಲು ಸರಿಯಾದ ವಿಚಾರಗಳಿಲ್ಲ. ಹೀಗಾಗಿ ಅನಗತ್ಯವಾಗಿ ವಿವಾದ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮೊದಲೆಲ್ಲಾ ಗ್ಯಾರಂಟಿ ಯೋಜನೆಗಳ ವಿರುದ್ದ ಟೀಕೆ ಮಾಡುವ ಪ್ರಯತ್ನ ಮಾಡಿದರು. ಅದನ್ನು ಯಾರೂ ಕೇಳಲಿಲ್ಲ. ಅನಂತರ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುವ ಪ್ರಯತ್ನ ಮಾಡಿದರು. ಅದರಿಂದ ಯಾವುದೇ ಪ್ರಯೋಜನವಾಗದಿದ್ದಾಗ, ಈಗ ಧರ್ಮಸ್ಥಳದ ವಿಚಾರ ಹಿಡಿದು ಕೊಂಡಿದ್ದಾರೆ ಎಂದರು. ಇದರಲ್ಲಿ ಕಾಂಗ್ರೆಸ್‌ನ ಪಾತ್ರ ಏನೂ ಇಲ್ಲ. ರಾಜ್ಯಸರ್ಕಾರಕ್ಕೆ ಇದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ದೂರು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಅದರ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ. ಬಿಜೆಪಿಯವರು ದಿಕ್ಕು…
ಬೆಂಗಳೂರು: ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಅರಣ್ಯ ಇಲಾಖೆಯು, ಬೆಂಗಳೂರುನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಕಳೆದ ಆ.22ರಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಅವರು, ಬೆಂಗಳೂರುನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದು, ನಿಯಮ ಉಲ್ಲಂಘನೆ ಮಾಡಿರುವ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರ್ದೇಶನ ಮಾಡಿದ್ದಾರೆ. ನಟ ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್ ಗೆ ನೀಡಾಗಿತ್ತು. ನಂತರ ಭೋಗ್ಯದ ಅವಧಿ ವಿಸ್ತರಣೆ ಮಾಡಿಕೊಳ್ಳಲಾಗಿತ್ತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಅವರ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ ಇದ್ದನ್ನು ಮಾರಾಟ ಮಾಡಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ತಿಳಿಸಿದ್ದರೆಂದು ತಿಳಿದುಬಂದಿದೆ. ಆದರೆ ಈವರೆಗೆ ಸ್ಟುಡಿಯೋ ಯಥಾಸ್ಥಿತಿಯಲ್ಲೇ ಇದೆ. ಇದರ ಅಭಿವೃದ್ಧಿಯಾಗಿಲ್ಲ. ಈಗ ಬಾಲಕೃಷ್ಣ ಮೊಮಗ…
ಬೆಂಗಳೂರು: ಕುಡುಕರ ಗುಂಪೊಂದು ಪಿಎಸ್‍ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ. ರಾಜಗೋಪಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಒಂದರ ಬಳಿ ರಾಜಗೋಪಾಲನಗರ ಸಬ್ ಇನ್ಸ್‌ಪೆಕ್ಟರ್ ಮುರಳಿ ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಮುರಳಿ ಅವರ ಕೈಗೆ ಗಾಯವಾಗಿದೆ. ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಮದ್ಯಪಾನ ಮಾಡುತ್ತಿದ್ದರು. ಬಾರ್ ಕ್ಲೋಸ್ ಆಗಿದ್ದರೂ ಸಹ, ಕೈನಲ್ಲಿ ಗ್ಲಾಸ್ ಹಿಡಿದು ಪುಂಡ ಮದ್ಯ ಸೇವಿಸುತ್ತಿದ್ದರು. ಕಾರಿನ ವಿಂಡೋ ಗ್ಲಾಸ್ ಇಳಿಸುವಂತೆ ಪಿಎಸ್ ಐ ಹೇಳಿದ್ದಾರೆ. ಈ ವೇಳೆ, ಏಕಾಏಕಿ ಕಾರನ್ನು ರಿವರ್ಸ್ ತೆಗೆದು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಪಿಎಸ್ ಐ ಕೈಗೆ ಗಾಯವಾಗಿದೆ. ಕಾರು ಜಾನ್ಸನ್ ಎಂಬವನಿಗೆ ಸೇರಿರುವುದು ಎಂದು ತಿಳಿದು ಬಂದಿದೆ. ಪೊಲೀಸರು ಪುಂಡರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಹಾಸನ: ಒಂಟಿ ಸಲಗವೊಂದು ಮರವನ್ನು ರಸ್ತೆಗೆ ಬೀಳಿಸಿದ ಪರಿಣಾಮ ವಾಹನ ಸವಾರರು ಪರದಾಡಿರುವ ಘಟನೆ ಸಕಲೇಶಪುರದ ಹಳ್ಳಿಬೈಲು ಗ್ರಾಮದ ಬಳಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಒಂಟಿಸಲಗ ಬೈನೆ ಮರವನ್ನು ನೆಲಕ್ಕುರುಳಿಸಿ, ಆರಾಮವಾಗಿ ತಿನ್ನುತ್ತಾ ನಿಂತಿದೆ. ಇದರಿಂದಾಗಿ ವಾಹನ ಸವಾರರು ಪರದಾಡಿದ್ದು, ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಬಳಿಕ ವಿಡಿಯೋ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಚಾಲಕರು ಒತ್ತಾಯಿಸಿದ್ದರು. ಸ್ಥಳಕ್ಕೆ ಇಟಿಎಫ್ ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಸಲಗವನ್ನು ಕಾಡಿಗೆ ಓಡಿಸಿದ್ದಾರೆ. ಬಳಿಕ ಸುರಿಯುತ್ತಿರುವ ಮಳೆಯಲ್ಲಿಯೇ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಹಿರಿಯ ನಟ ಹರೀಶ್ ರಾಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಟ ಧ್ರುವ ಸರ್ಜಾ ಹಿರಿಯ ನಟನಿಗೆ ಸಹಾಯ ನೀಡಲು ಮುಂದಾಗಿದ್ದಾರೆ. ನಟ ಹರೀಶ್ ರಾಯ್ ಅವರ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಧ್ರುವ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ನಟ ಧ್ರುವ ಸರ್ಜಾ ಅವರಿಗೆ ಹರೀಶ್ ರಾಯ್ ಧನ್ಯವಾದವನ್ನ ಹೇಳಿದ್ದಾರೆ. ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಹೊಟ್ಟೆಗೆ ಹರಡಿ ಈಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ರೆ ವಾಸಿಯಾಗುವ ಭರವಸೆಯನ್ನ ವೈದ್ಯರು ನೀಡಿದ್ದಾರೆ. ಹರೀಶ್ ರಾಯ್ ಅವರಿಗೆ ನೀಡಬೇಕಾದ ಚಿಕಿತ್ಸೆ ದುಬಾರಿಯಾಗಿದ್ದು, ಒಂದೊಂದು ಇಂಜೆಕ್ಷನ್ ಬೆಲೆ ಮೂರುವರೆ ಲಕ್ಷ ರೂಪಾಯಿಗಳದ್ದು ಎಂದು ವರದಿಗಳಿಂದ ತಿಳಿದು ಬಂದಿದೆ. ಹರೀಶ್ ರಾಯ್ ಅವರಿಗೆ ತುರ್ತಾಗಿ ಚಿಕಿತ್ಸೆ ಕೂಡಾ ಪ್ರಾರಂಭಿಸಬೇಕಿದೆ ಎಂದು ವೈದ್ಯರು ಸಲಹೆಯನ್ನ ನೀಡಿದ್ದಾರಂತೆ. ಹೀಗಾಗಿ ಚಿತ್ರರಂಗದವರ ನೆರವನ್ನ ಹರೀಶ್ ರಾಯ್ ಕೇಳಿದ್ದರು.ಹರೀಶ್ ರಾಯ್ ಕಷ್ಟದ ಈ ಸಂದರ್ಭಕ್ಕೆ ನಟ ಧ್ರುವ ಸರ್ಜಾ ಮಿಡಿದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…