Author: admin

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ವೇಳೆ ದೇಶದ ಯಾವುದೇ ಭಾಗದಲ್ಲೂ ಹಿಂದೂಗಳು ಅಶಾಂತಿ ಉಂಟುಮಾಡಿಲ್ಲ. ಆದ್ರೆ ರಾಜ್ಯದ ಮದ್ದೂರು, ನಾಗಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿದರು. ಇಸ್ಲಾಂ ಧರ್ಮದಲ್ಲಿ ನಿಜವಾದ ಸೋದರತ್ವದ ಮೌಲ್ಯಗಳು ಕಾಣಿಸುತ್ತಿಲ್ಲ. ಈಗ ಕರ್ನಾಟಕದಲ್ಲಿ ಸಾಬ್ರ ಸರ್ಕಾರವೇ ಆಡಳಿತ ನಡೆಸುತ್ತಿದೆ. ನಮ್ಮ ಮುಖ್ಯಮಂತ್ರಿ ದಸರಾ ವೇಳೆ ಚಾಮುಂಡೇಶ್ವರಿಯ ಕುಂಕುಮ ಹಚ್ಚಿಕೊಳ್ಳುವುದಿಲ್ಲ, ಆದರೆ ಮುಸ್ಲಿಂ ಕಾರ್ಯಕ್ರಮಗಳಲ್ಲಿ ಟೋಪಿ ಧರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು. 2028ರಲ್ಲಿ ಸನಾತನ ಧರ್ಮ ರಕ್ಷಣೆ ಮಾಡುವ ಶಕ್ತಿಯೇ ಅಧಿಕಾರಕ್ಕೆ ಬರಬೇಕು, ಹಿಂದೂಗಳ ದೇವಾಲಯಗಳು, ಕುಂಕುಮ ಮತ್ತು ಸಂಸ್ಕೃತಿಯ ರಕ್ಷಣೆ ಅಗತ್ಯವಾಗಿದೆ. ಇನ್ನೂ ನನಗೂ ಒಂದು ಅವಕಾಶ ಕೊಡಿ ಮಾದರಿ ಆಡಳಿತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಆಗುವ…

Read More

ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅ.1ರಿಂದ ರೈತರ ನೋಂದಣಿ ಆರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್‌ ಗೆ 4,886 ನಿಗದಿಪಡಿಸಲಾಗಿದೆ. ನೋಂದಣಿ ಮಾಡಿಸಲು ಡಿಸೆಂಬರ್ 15ರ ವರೆಗೆ ಕಾಲಾವಕಾಶವಿದೆ. 2026ನೇ ಜನವರಿ 1ರಿಂದ ಮಾರ್ಚ್‌ 31ರ ವರೆಗೆ ರಾಗಿ ಖರೀದಿ ನಡೆಯಲಿದೆ. 11 ನೋಂದಣಿ ಕೇಂದ್ರ: ಚಿಕ್ಕನಾಯಕನಹಳ್ಳಿ ಹೊಸ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಎಪಿಎಂಸಿ ಗೋದಾಮು, ಹುಳಿಯಾರು ಎಪಿಎಂಸಿ, ಕುಣಿಗಲ್ ಎಪಿಎಂಸಿ (2 ಕೇಂದ್ರ), ತಿಪಟೂರು ಎಪಿಎಂಸಿ, ತುರುವೇಕೆರೆ ಎಪಿಎಂಸಿ, ಗುಬ್ಬಿ ಎಪಿಎಂಸಿ, ಮಧುಗಿರಿ ಎಪಿಎಂಸಿ, ಶಿರಾ ಎಪಿಎಂಸಿ, ಕೊರಟಗೆರೆ ಅಕ್ಕಿರಾಂಪುರ ಪಿಡಿಎಸ್ ಗೋದಾಮು, ತುಮಕೂರು ಬಟವಾಡಿ ಎಪಿಎಂಸಿ ಗೋದಾಮಿನಲ್ಲಿ ರೈತರು ನೋಂದಣಿ ಮಾಡಿಸಬಹುದು. ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ನೋಂದಣಿಗೆ ಅಗತ್ಯ ಕ್ರಮಕ್ಕೆ ನಿರ್ದೇಶಿಸಿದರು. ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ…

Read More

ಕುಣಿಗಲ್‌: ಬೆಸ್ಕಾಂ ಸಿಬ್ಬಂದಿ ಯಡವಟ್ಟಿನಿಂದಾಗಿ ಜಾತಿವಾರು ಸಮೀಕ್ಷೆಗೆ ಸರಿಯಾದ ಮನೆ ವಿಳಾಸ ಸಿಗುತ್ತಿಲ್ಲ ಎಂದು ಆರೋಪಿಸಿದ ಸಮೀಕ್ಷೆದಾರರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಪಟ್ಟಣದ ಕುವೆಂಪು ನಗರದಲ್ಲಿ ಸಮೀಕ್ಷೆಗೆ 20 ಶಿಕ್ಷಕರ ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಮನೆ ವಿಳಾಸ ಹುಡುಕಲಾಗದೆ, ಜಿಪಿಎಸ್ ಲೊಕೇಶನ್ ಹಾಕಿದರೆ ಅಂಚೆಪಾಳ್ಯ, ಊರಾಚೆ, ಮರದ ಕೆಳಗೆ ತೋರಿಸುತ್ತಿತ್ತು. ಇದರಿಂದ ಬೇಸತ್ತ ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಮೇಲ್ವಿಚಾರಕ ಮಹೇಶ್ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಅಗತ್ಯ ಸಿಬ್ಬಂದಿ ಕಳಿಸುವ ಭರವಸೆ ನೀಡಿದ್ದರು. ಶನಿವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಶಿಕ್ಷಕರು ಸಮೀಕ್ಷೆಗೆ ಬಂದಾಗ ಒಬ್ಬರೇ ಬೆಸ್ಕಾಂ ಸಿಬ್ಬಂದಿ ಇದ್ದು, ಸರಿಯಾದ ಮಾಹಿತಿ ಕೊಡಲು ವಿಫಲವಾದ ಕಾರಣ ಬೇಸತ್ತ ಶಿಕ್ಷಕರು ಎಸ್‌ ಬಿಐ ಬ್ಯಾಂಕ್‌ ಬಳಿ ಜಮಾವಣೆಗೊಂಡು ಬೆಸ್ಕಾಂ ಸಿಬ್ಬಂದಿ ನಡೆ ಖಂಡಿಸಿ ಧರಣಿಗೆ ಮುಂದಾದರು. ಮೇಲ್ವಿಚಾರಕ ಮಹೇಶ್ ಮಾತನಾಡಿ, ಬೆಸ್ಕಾಂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್ ಹಾಕಿದ್ದಾರೆ. ಜಿಪಿಎಸ್ ವಿಳಾಸ ಹುಡುಕಲು ಹೋದರೆ…

Read More

ಕುಣಿಗಲ್: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆತುರವಾಗಿ ವರದಿ ಪಡೆದು ಒಕ್ಕಲಿಗರ ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು. ಪಟ್ಟಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಮಾಹಿತಿ ಮತ್ತು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು,  ಸರ್ಕಾರ ಹಠಕ್ಕೆ ಬಿದ್ದು ಸಮೀಕ್ಷೆ ಮಾಡುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಶೇ.70ರಷ್ಟು ಮುಗಿದಿದ್ದರೂ, ಗೊಂದಲಗಳು ನಿವಾರಣೆಯಾಗಿಲ್ಲ. ಸಮೀಕ್ಷೆ ವರದಿ ರಾಜಕೀಯ ಮೀಸಲಾತಿಗೆ ಪೂರಕವಾಗಿದ್ದು, ಸರ್ಕಾರಕ್ಕೆ ಸಮೀಕ್ಷೆ ಮುಗಿಸಿ ವರದಿ ಪಡೆಯಲು ಆತುರ ಯಾಕೆ? ಒಂದು ವೇಳೆ ವರದಿ ಆಧರಿಸಿ ಒಕ್ಕಲಿಗರ ಶೇ.4 ಮೀಸಲಾತಿಗೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ಮುಖ್ಯಮಂತ್ರಿ ತಮ್ಮ ಸಮುದಾಯದವರಿಗೆ ‘ಕುರುಬ’ ಎಂದು ಮಾತ್ರ ಬರೆಸಲು ಸೂಚನೆ ನೀಡಿದ್ದಾರೆ. ಆದರೆ ಕೆಲ ಒಕ್ಕಲಿಗರು ಪ್ರತಿಷ್ಠೆಯಿಂದಾಗಿ ಸಮೀಕ್ಷೆಯ ಸೂಕ್ಷ್ಮಗಳ ಅರಿವಿಲ್ಲದೆ ಮಾಹಿತಿ ನೀಡುತ್ತಿದ್ದಾರೆ. ಸಮೀಕ್ಷೆಯ ನೂನ್ಯತೆಗಳನ್ನು ಸರಿಪಡಿಸಿ, ಸಮೀಕ್ಷೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದರು. ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ…

Read More

ಕೊರಟಗೆರೆ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಅರಸಾಪುರ ಬಳಿ ನಡೆದಿದೆ. ಅರಸಾಪುರದ ಶಕುಂತಲಮ್ಮ(39), ಗಂಗಮ್ಮ(36) ಮೃತಪಟ್ಟವರು ಎಂದು ಗುರುತಿಸಲಾಗಿದೆ. ದನ ಮೇಯಿಸಲೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಕೃಷಿಹೊಂಡದ ಬಳಿಯಲ್ಲಿ ಮೃತರ ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗಳು ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೆಳಧರ ಬಳಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು  ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಗೋವಿಂದಪ್ಪ (60), ಬೈಚಾಪುರದ ಶಿವಶಂಕ‌ (28) ಎಂದು ಗುರುತಿಸಲಾಗಿದೆ. ಕತ್ತಿನಾಗೇನಹಳ್ಳಿಯ ಗೋಪಾಲ್ (28), ರೆಡ್ಡಿಹಳ್ಳಿಯ ಶಂಕರ್ (28) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಧರ್ಮಸ್ಥಳಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ‘ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಟಿಪ್ಪು ಸುಲ್ತಾನ್‌ ನನ್ನ ಬಹಳ ಅವಹೇಳನಕಾರಿಯಾಗಿ ತೋರಿಸಲಾಗುತ್ತೆ. ಆದ್ರೆ ನಾನು ಓದಿರುವ ಪ್ರಕಾರ ಕನ್ನಂಬಾಡಿ ಕಟ್ಟೆಯನ್ನ ಪ್ರಾರಂಭ ಮಾಡಿದ್ದೇ ಅವನು. ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಕಾಲದಲ್ಲಿ ಅದನ್ನ ಸಂಪೂರ್ಣ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಸಬೇಕು, ಅದನ್ನ ತಿರುಚಬಾರದು ಎಂದು ಮಾಜಿ ಸಚಿವ ಕೆ.ಎನ್​.ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಒಡೆಯರ್ ಕಾಲದಲ್ಲಿ ಕೆಆರ್ ಎಸ್  ಸಂಪೂರ್ಣ ಮಾಡಬೇಕಾದ್ರೆ ಹಣಕಾಸಿನ‌ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು‌ ಹೋಗಿ ಬಾಂಬೆಯಲ್ಲಿ ಮಾರ್ತಾರೆ. ನಾವು ಇದನ್ನ ಮರೆಯಬಾರದು ಎಂದೂ ರಾಜಣ್ಣ ತಿಳಿದ್ದಾರೆ. ಟಿಪ್ಪು ಸುಲ್ತಾನ್‌ ನಾಲ್ಕು ಯುದ್ಧ ಮಾಡ್ತಾನೆ. 3ನೇ ಯುದ್ದದಲ್ಲಿ ಸೋತು ಬಿಡ್ತಾನೆ. ಈ ವೇಳೆ ಬ್ರಿಟಿಷ್‌ನವರು 3 ಕೋಟಿ 30 ಲಕ್ಷ ಯುದ್ಧದ ಖರ್ಚು ಕೇಳಿದ್ದಕ್ಕೆ ಆತ ಮಕ್ಕಳನ್ನು ಅಡವಿಡುತ್ತಾನೆ. ಜೈಲಿನಲ್ಲಿ ಇಟ್ಟ ಮಕ್ಕಳನ್ನ ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ, 4ನೇ ಯುದ್ಧದಲ್ಲಿ ಮೀರ್‌ ಸಾದಿಕ್‌ ಕಥೆಯಿಂದಾಗಿ ಸೋಲುತ್ತಾನೆ. ಟಿಪ್ಪು ಸುಲ್ತಾನ್‌ ಗೆ ಮೀರ್‌ ಸಾದಿಕ್‌…

Read More

ತುಮಕೂರು: ಸಕಾರಣವಿಲ್ಲದೆ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ ಕುಣಿಗಲ್ ತಾಲ್ಲೂಕು ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕರು ನಗರದಲ್ಲಿರುವ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಡೇರಿ ಆಡಳಿತ ಮಂಡಳಿ ನಿರ್ಣಯ ಧಿಕ್ಕರಿಸಿ, ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿದೆ. ಹೊಸದಾಗಿ ಡೇರಿ ಕಾರ್ಯದರ್ಶಿ ನೇಮಕ ಮಾಡಿದ ನಂತರ ಈ ರೀತಿ ಮಾಡಲಾಗಿದೆ. ಎಲ್ಲ ರೀತಿಯಲ್ಲೂ ನಿಯಮ ಪಾಲನೆಯಾಗಿದ್ದರೂ ಉದ್ದೇಶಪೂರ್ವಕವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇದಕ್ಕೆ ಕಾರಣಕರ್ತರಾದ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸೂಪರ್ ಸೀಡ್ ಮಾಡುವ ಮುನ್ನ ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಪಾಲಿಸಿಲ್ಲ. ಸಂಘಕ್ಕೆ ನೋಟಿಸ್ ಸಹ ನೀಡದೆ, ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ವಯೋ ನಿವೃತ್ತಿಯಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ನಿಯಮಬದ್ಧವಾಗಿ ಮಾಡಿರುವ ನೇಮಕಕ್ಕೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು. ಜೆಡಿಎಸ್‌, ಬಿಜೆಪಿ ಮುಖಂಡರ…

Read More

ಕೊರಟಗೆರೆ : ಈ ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು, ದೇಶದಲ್ಲಿ ಯಾರು ಕೂಡ ಉಪವಾಸ ಇರಬಾರದು ಎನ್ನುವ ಉದ್ದೇಶದಿಂದ ರೈತ ಬಿಸಿಲಿನಲ್ಲಿ ದುಡಿದು ನಮಗೆಲ್ಲ ಅನ್ನ ಕೊಡುತ್ತಾನೆ. ಪ್ರತಿನಿತ್ಯ ನಾವು ಅನ್ನದಾತನನ್ನ ಸ್ಮರಿಸಬೇಕಿದೆ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೆಚ್.ವಿ.ಪಾಳ್ಯ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಕೃಷಿ ಮಂಥನ ಮತ್ತು ಬೆಳೆ ಕ್ಷೇತ್ರೋತ್ಸವ, ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ರೈತನ ಪರಿಸ್ಥಿತಿ ಯಾರು ಕೇಳೋದಿಲ್ಲ. ಇವತ್ತಿನ ಯುವ ಪೀಳಿಗೆ ಕೃಷಿಯ ಕಡೆ ಹೆಚ್ಚು ಒತ್ತು ನೀಡುವ ಸಲುವಾಗಿ ಜಿಕೆವಿಕೆ ಸೇರಿ ಗ್ರಾಮೀಣ ಭಾಗದ ರೈತರಿಗೆ ಇವತ್ತಿನ ಮಳೆಯ ಅನುಗುಣವಾಗಿ ಬೆಳೆ ಬೆಳೆಯುವುದರ ಬಗ್ಗೆ ಕಳೆದ…

Read More

ಮೈಸೂರಿನ ವಿಜ್ಞಾನ ಶಿಕ್ಷಕರಾದ ಶ್ರೀ ಮಲ್ಲೇಶ್ ರವರಿಗೆ ಮೊದಲು ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಕೊನೆಯಲ್ಲಿ ಶಿಕ್ಷಕರು ಓಲ್ಟರ್ ಕೇಳಿದ್ದ ಒಂದು ಪ್ರಶ್ನೆಯನ್ನು ಉಲ್ಲೇಖಿಸಿರುತ್ತೀರಿ. ಬಹಳ ಸಂತೋಷವಾಯಿತು. ವಿಜ್ಞಾನ ಆಸಕ್ತರಿಗೆ ಇಂತಹ ವಿಷಯಗಳು ಮತ್ತಷ್ಟು ತಿಳಿಯುವ ಅಥವಾ ತಿಳಿದಿದ್ದನ್ನು ತಿಳಿಸುವ ಉತ್ಸುಕತೆ ಉಂಟಾಗುತ್ತದೆ. ಈಗ ವಿಚಾರಕ್ಕೆ ಬರುವುದಾದರೆ, ರಾತ್ರಿಯ ಆಕಾಶದಲ್ಲಿ ಹಲವಾರು ಕೋಟಿ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿ ಇದ್ದರೂ, ಅವುಗಳಿಂದ ನಿರಂತರ ಬೆಳಕು ಬರುತ್ತಿದ್ದರೂ ಕೂಡ ಆಗಸದ ಬಣ್ಣ ಮಾತ್ರ ಕಪ್ಪು ಏಕೆ? ಈ ಪ್ರಶ್ನೆಗೆ ನನಗೆ ತಿಳಿದಿರುವ ಅತ್ಯಂತ ಸಮಾಧಾನಕರ ಉತ್ತರ ತಿಳಿಸಲು ಬಯಸುತ್ತೇನೆ. ಇದನ್ನು ತಿಳಿಯುವ ಮೊದಲು, ಈ ಸಂದರ್ಭದಲ್ಲಿ ನಾನು ಬಹಳ ಹಿಂದೆ ನಕ್ಷತ್ರಗಳ ‘ಟ್ರಯಾಂಗಲ್ ಥಿಯರಿ’ (ನಕ್ಷತ್ರಗಳ ತ್ರಿಕೋನ ಸಿದ್ಧಾಂತ) ಬಗ್ಗೆ ಒಂದು ಸಣ್ಣ ಚಿತ್ರಸಹಿತ ಲೇಖನ ಬರೆದಿದ್ದೆ. ಅದು ಬಾಲವಿಜ್ಞಾನ ಎಂಬ ಮಾಸ ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಆ ಸಿದ್ಧಾಂತವನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಕ್ಷಮೆ ಇರಲಿ ಈ ಸಿದ್ಧಾಂತದ ಬಗ್ಗೆ ಬಹುಶಃ ಶಿಕ್ಷಕರಿಗೆ…

Read More