Subscribe to Updates
Get the latest creative news from FooBar about art, design and business.
- ತಿಪಟೂರಿನಲ್ಲಿ 2078ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯ ಹೆಗ್ಗಡೆಯವರ ಕೊಡುಗೆ ಅನನ್ಯ: ಡಾ. ಶ್ರೀಧರ್
- ಖಾಸಗಿ ಆಂಬುಲೆನ್ಸ್ ಸೇವೆ ಶುಲ್ಕ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗೆ ಕರವೇ ಮನವಿ
- ಕೊರಟಗೆರೆ: ಮಾದಕ ವ್ಯಸನ ತಡೆಗೆ ‘ಸ್ವಾಸ್ಥ್ಯ ಸಂಕಲ್ಪ’ ಜಾಗೃತಿ
- ಕೊರಟಗೆರೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಆರಂಭ ; ಜು.29ರವರೆಗೆ ಮನೆ-ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ–ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಹಕರಿಸಲು ಮನವಿ
- ಬೀದರ್: ರಾಡ್ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
Author: admin
ಶಿವಮೊಗ್ಗ: ಕೋಟೆ ಪ್ರಖಂಡದ ಬಜರಂಗದಳ ಸಹಸಂಯೋಜಕ ಹರ್ಷ ಕಗ್ಗೊಲೆ ಖಂಡಿಸಿ ಬಜರಂಗದಳ ತಾಲೂಕು ಪ್ರಖಂಡದಿಂದ ಶನಿಮಹಾತ್ಮ ವೃತದಿಂದ ತಾಲೂಕು ಕಚೇರಿಯ ವರೆಗೆ ತೆರಳಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಸುಮನ್ ಮಾತನಾಡಿ, ಹರ್ಷ ಕೊಲೆಯ ಹಿಂದೆ SDPI , PFI, CFI ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿದರು. ಆರೋಪಿಗಳನ್ನು ಗಲ್ಲಿಗೇರಿಸಬೇಕು ಹರ್ಷರವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಮಾಂಜಿ, ಅಲಕುಂದ್ರಾಜ್, ಬಜರಂಗದಳ ಪದಾಧಿಕಾರಿಗಳಾದ ರಾಕೇಶ್ , ವಾಸು, ಕಾರ್ತಿಕ್, ವಿನೋದ್ , ಶ್ರೀನಾಥ್ , ನಾಗೇಶ್ ಇದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ(Shivamogga Youth Murder Case) ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ನಾನೇಂದ್ರ(Araga Jnanendra) ಹೇಳಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಮಾಹಿತಿ ಪ್ರಕಾರ ಈ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಭಜರಂಗ ದಳ(Bajrang Dal)ದ ಕಾರ್ಯಕರ್ತ ಹರ್ಷರನ್ನು ಬರ್ಬರವಾಗಿ ಹತ್ಯೆ(Youth Murder Case) ಮಾಡಲಾಗಿದೆ. ನಾವು ಹರ್ಷ ಅವರ ಪೋಷಕರು ಮತ್ತು ಸಹೋದರಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರಿಗೆ ನಾವು ಭರವಸೆ ನೀಡಿದ್ದೇವೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಬಗ್ಗೆ ಸಿಎಂ(Basavaraj Bommai)ಗೆ ವಿವರಣೆ ಕೊಟ್ಟಿದ್ದೇನೆ. ಈ ಬಗ್ಗೆ ಚರ್ಚಿಸಲು ಮತ್ತೆ ಸಭೆ ಸೇರೋಣವೆಂದು…
ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಹಳೆ ದ್ವೇಷವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಹರ್ಷ ಅವರ ಕೊಲೆಗೆ ಕಳೆದ ಆರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಗಲಾಟೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಒಂದು ಕೋಮಿನ ಯುವಕರ ಗುಂಪು ಹಾಗೂ ಹರ್ಷ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಂದು ಯಾವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. ಯಾರು ಜಗಳವಾಡಿದ್ದರು ಎಂಬಿತ್ಯಾದಿ ಅಂಶಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಹರ್ಷ ಅವರ ಕೊಲೆಗೆ ಹಳೆ ದ್ವೇಷ ಕಾರಣವೇ ಅಥವಾ ಬೇರೆ ಕಾರಣವಿರಬಹುದೇ ಎಂಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹರ್ಷ ಅವರ ಸ್ನೇಹಿತರು, ನೆರೆಹೊರೆಯವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೂವರು ವಶಕ್ಕೆ: ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇದುವರೆಗಿನ ತನಿಖೆ ಪ್ರಕಾರ, ಕೊಲೆಗೆ ಹಳೆಯ…
ತುಮಕೂರು: ಶಿವಮೊಗ್ಗ ನಗರದ ಭಾರತಿ ನಗರದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತನ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸೋಮವಾರ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು. ಹತ್ಯೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಜಿ.ಕೆ ಶ್ರೀನಿವಾಸ್, ರಾಜ್ಯದಲ್ಲಿ ಪದೇಪದೇ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಕೂಡಲೇ ಸರ್ಕಾರ ಆರೋಪಿಗಳನ್ನು ಬಂಧಿಸಿ ಎನ್ ಕೌಂಟರ್ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಪರ ಸಂಘಟನೆಯಲ್ಲಿ ಕೆಲಸ ಮಾಡುವ ಹುಡುಗರು ಬಡ ಹಾಗೂ ಮಧ್ಯಮ ವರ್ಗದ ಕಾರ್ಯಕರ್ತರ ಮೇಲೆ ಪದೇ ಪದೇ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಉತ್ತರಪ್ರದೇಶದ ಯೋಗಿ…
ತಿಪಟೂರು: ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ, ಸಚಿವ ಈಶ್ವರಪ್ಪರವರ ಹೇಳಿಕೆ ವಿರೋಧಿಸಿ, ಬೃಹತ್ ಪ್ರತಿಭಟನೆ ನಡೆಯಿತು. ನಗರಸಭಾ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಮಾಜಿ ಶಾಸಕ ಕೆ.ಷಡಕ್ಷರಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜ್ ಮತ್ತು ನಗರಸಭೆ ಸದಸ್ಯೆ ಮೇಘನ ಭೂಷಣ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರುಕೆಪಿಸಿಸಿ ಸದಸ್ಯ ಯೋಗೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಸುರೇಶ್, ಕೆಎಂಎಫ್ ನಿರ್ದೇಶಕ ಪ್ರಕಾಶ್, ನಗರಸಭಾ ಸದಸ್ಯರಾದ ಯೋಗೀಶ್, ವಿನುತಾ ತಿಲಕ್ ಕುಮಾರ್ ಮತ್ತು ಕೋಟೆ ಪ್ರಭು, ಎಪಿಎಂಸಿ ಸದಸ್ಯರಾದ ಬಜಗೂರು ಮಂಜುನಾಥ್, ರವೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರ ಮೂರ್ತಿ, ಪಿ ಎಲ್ ಡಿ ಅಧ್ಯಕ್ಷ ಪ್ರಕಾಶ್, ಯುವ ಮುಖಂಡ ನಿಖಿಲ್ ರಾಜ್, ಮುಖಂಡರುಗಳಾದ ಕಾಂತರಾಜ್, ರೇಣು, ಅಣ್ಣಯ್ಯ, ಯೋಗಾನಂದ್, ಪ್ರಕಾಶ್ ಯಾದವ್, ಪ್ರಸಾದ್, ಸಿದ್ದೇಶ್ ಲೋಕ್ ನಾಥ್ ಸಿಂಗ್, ಭರತ್, ಉಮೇಶ್, ಕುಮಾರಸ್ವಾಮಿ,ಬಸವರಾಜ್, ಹೇಮಂತ್ ಮತ್ತು ಸುನಿಲ್ ಸೇರಿದಂತೆ ಚುನಾಯಿತ…
ತುಮಕೂರು: ತುರುವೇಕೆರೆ ಪಟ್ಟಣದಲ್ಲಿ, ಕಾಂಗ್ರೆಸ್ ಮುಖಂಡ ಚೌದ್ರಿ ಟಿ, ರಂಗಪ್ಪ ನವರ ನೇತೃತ್ವದಲ್ಲಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಮಾಡಿದ ಅಪಮಾನ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿತು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ,ನೂರಾರು ಸಂಖ್ಯೆಯ ಪಕ್ಷದ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ, ತಾಲ್ಲೂಕು ತಹಸೀಲ್ದಾರ್ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಈಶ್ವರಪ್ಪ ವಿರುದ್ಧ ಘೋಷಣೆ ಕೂಗುತ್ತಾ, ಬಿತ್ತಿ ಪತ್ರಗಳನ್ನು ಹಿಡಿದು ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ, ವಜಾಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎ. ಐ.ಸಿ.ಸಿ. ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಡಿ.ಕೆ. ಅವರ ತಂದೆಯವರ ಬಗ್ಗೆಯೂ ಅಸಂವಿಧಾನಿಕ ಪದವನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ದೇಶದ್ರೋಹದ ಮಾತುಗಳನ್ನಾಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇವರನ್ನು ಈ ಕೂಡಲೇ ರಾಜ್ಯಸರ್ಕಾರವು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಶಾಸಕ ಸ್ಥಾನವನ್ನು ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು. ಬಿ.ಎಸ್.ವಸಂತಕುಮಾರ್, ಟಿ.ಎನ್. ಶಿವರಾಜ್, ಸಮಾಜ ಸೇವಕ…
ನಂಜನಗೂಡು: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆರವುಗೊಳಿಸಿ ಅವಮಾನಿಸಿದ ಘಟನೆಯ ವಿರುದ್ಧ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಗ್ರಾಮದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ನಂಜನಗೂಡು ತಾಲ್ಲೂಕಿನ ಹೇಡಿಯಾಲ ಸುತ್ತಮುತ್ತಲಿನ ಗ್ರಾಮವಾದ ಹಾದನೂರು ಮುಳ್ಳೂರು , ವಡೆಯನಪುರ ಹೇಡಿಯಾಲ ಗ್ರಾಮಸ್ಥರು ಬೆಂಬಲ ನೀಡಿದರು. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ನಂಜನಗೂಡು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ ರಾಜ್ ಮಾತನಾಡಿ, ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನಿಸಿದ ಬಗ್ಗೆ ಎಸ್ ಸಿ, ಎಸ್ ಟಿ ಶಾಸಕರು ಸಚಿವರು ಸದನದಲ್ಲಿ ಮಾತನಾಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಮಹೇಶ್ ಮಾತನಾಡಿ, ಮೊನ್ನೆ ನಡೆದ ವಿಧಾನಸೌಧ ಚಲೋ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿರವರು ಇನ್ನೂ ಮೂರು ದಿನಗಳಲ್ಲಿ ಅವನ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು…
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆ ಯುವಕನ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಿನ್ನೆರಾತ್ರಿ ಕೊಲೆಯಾದ ಹಿಂದೂಪರ ಸಂಘಟನೆಯ ಹರ್ಷ ಅವರ ಮೃತದೇಹದ ಮೆರವಣಿಗೆ ಮೆಗ್ಗಾನ್ ಆಸ್ಪತ್ರೆಯಿಂದ ಬಸವನ ಬೀದಿಯ ಹರ್ಷ ನಿವಾಸದವರೆಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಂದು ಗುಂಪಿನಿಂದ ಕಲ್ಲು ತೂರಾಟ ನಡೆದಿದೆ. ರವಿವರ್ಮ ಬೀದಿ, ಸಿದ್ದಯ್ಯ ರಸ್ತೆ ಮುಂತಾದ ಕಡೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಉದ್ರಿಕ್ತರು ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು. ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು. ಮೆರವಣಿಗೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗವಹಿಸಿದ್ದು, ಹರ್ಷ ಅವರ ಅಂತ್ಯ ಸಂಸ್ಕಾರ ಬಿಎಸ್ ರಸ್ತೆಯ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ವರದಿ ಆಂಟೋನಿ…
ತಿಪಟೂರು: ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಸಂತ ಶ್ರೀ ಸೇವಾಲಾಲ್ ರವರ 283 ನೇ ಜಯಂತಿ ಆಚರಿಸಲಾಯಿತು. ನಗರದ ಕೆ.ಆರ್.ಬಡಾವಣೆಯಲ್ಲಿರುವ ಯಶಸ್ವಿನಿ ವೃದ್ಧಾಶ್ರಮಕ್ಕೆ ಹಣ್ಣು ಮತ್ತು ಬ್ರೆಡ್ ಗಳನ್ನು ವಿತರಿಸಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ, ಸಿಹಿಯನ್ನು ವಿತರಿಸಲಾಯಿತು. ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಟರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಯೋಜಕ ಮತ್ತು ಅಧ್ಯಕ್ಷ ಬಿ.ಟಿ.ಕುಮಾರ್, ಪದಾಧಿಕಾರಿ ಬೆಸ್ಕಾಂ ಚೇತನ್ ,ಆಶ್ರಮದ ಕಲ್ಪನಾ, ವಿದ್ಯಾರ್ಥಿ ಘಟಕದ ರಾಖಿ ರಾಥೋಡ್ ಮತ್ತು ರಾಹುಲ್ ಸೇರಿದಂತೆ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಸಿರಾ: ಧ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿರಾ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪಾಂಡುರಂಗಪ್ಪ ಹೇಳಿದರು ಜಿಲ್ಲೆಯ ಸಿರಾ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಗತ್ತೇ ಒಂದು ಕುಟುಂಬ ಎನ್ನುವ ತತ್ತ್ವದಡಿ ಸೇವೆ ಮಾಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ. ಮನಸ್ಸು ಏರುಪೇರು ಆದಾಗ ಶಾರೀರಿಕವಾಗಿ ನಾವು ತೊಂದರೆಗೀಡಾಗುತ್ತೇವೆ. ಆರೋಗ್ಯವಂತರಾಗಿರಬೇಕಾದರೆ ಧ್ಯಾನ ಬಹಳ ಅವಶ್ಯಕವಿದೆ. ಮನಸ್ಸಿನ ಆರೋಗ್ಯ ಅಷ್ಟೇ ಮುಖ್ಯವಾಗಿದೆ. ಮನಸ್ಸು ಆರೋಗ್ಯವಾಗಿರಬೇಕಾದರೆ ಅಧ್ಯಾತ್ಮ ಜ್ಞಾನ ಒಳ್ಳೆಯ ಚಿಂತನೆಗಳು ಮುಖ್ಯವಾಗಿವೆ. ನಾವು ಏನು ನೋಡುತ್ತಿದ್ದೇವೋ ಇದೇನು ಶಾಶ್ವತವಲ್ಲ, ಧ್ಯಾನ ಒಂದು ಅದ್ಭುತವಾದ ಶಕ್ತಿ ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನ ಗೊಂದಲ ದೂರವಾಗುತ್ತವೆ ಎಂದರು. ಬ್ರಹ್ಮಕುಮಾರಿ ಆಧ್ಯಾತ್ಮಿಕ ಪ್ರವಚನಕ ರಾಜಯೋಗಿ ಡಾ.ಮಹೇಂದ್ರಪ್ಪ ಪಿ.ಹೆಚ್. ಮಾತನಾಡಿ, ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಧ್ಯಾನ ಮನಸ್ಸಿನ ಆರೋಗ್ಯವನ್ನು ಸದೃಢ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು…