Author: admin

ತುಮಕೂರು:  ಬೆಸ್ಕಾಂ ನಗರ ಉಪ ವಿಭಾಗ-1ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಮಾರ್ಚ್ 18 ರಿಂದ 26ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ನಡೆಯಲಿದೆ. ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಿ.ಎಚ್.ಪಾಳ್ಯ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಔರಾದ್: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಸರಕಾರಿ ಪ್ರೌಢ ಶಾಲೆಯ 1,500 ವಿದ್ಯಾರ್ಥಿಗಳಿಗೆ ಎಬಿವಿಪಿ ಹಿರಿಯ ಕಾರ್ಯಕರ್ತ ಅಶೋಕ ಶೆಂಬೆಳ್ಳಿ ಅವರು ಪ್ಯಾಡ್ ಮತ್ತು ಪೆನ್ನುಗಳು  ವಿತರಣೆ ಮಾಡಿದರು. ಸೋಮವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ, ಆದರ್ಶ ವಿದ್ಯಾಲಯ, ಯನಗುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಂತರ ಮಾತನಾಡಿದ ಅಶೋಕ ಶೆಂಬೆಳ್ಳಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬ ಆತಂಕದಿಂದ ಹೊರಬರಬೇಕು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು. ಯಾರು ಮೊಬೈಲ್‌ ಗೀಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಉತ್ತಮ ಅಭ್ಯಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ಬಿಸಿಯೂಟ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ…

Read More

ಕೊರಟಗೆರೆ: ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ 50ನೇ ವರ್ಷದ  ಜನ್ಮದಿನದ ಪ್ರಯುಕ್ತ 13 ಸರ್ಕಾರಿ ಶಾಲಾ ಮಕ್ಕಳಿಗೆ ಅಭಿಮಾನಿಗಳು ಕಲಿಕಾ ಸಾಮಗ್ರಿಗಳು ಹಾಗೂ ಸಿಹಿ ವಿತರಣೆ  ಮಾಡಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ ಹಾಗೂ ಗ್ರಾಮದ ಅಪ್ಪು ಅಪ್ಪಟ ಅಭಿಮಾನಿಗಳಿಂದ ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ಬೆಟ್ಟದ ಹೂವು ಡಾ.ಪುನೀತ್ ರಾಜಕುಮಾರ್ ಜನುಮದಿನದ  ಪ್ರತಿ ವರ್ಷವು ಇಂತಹ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನ ಆಯೋಜನೆ  ಮಾಡುತ್ತಿದ್ದಾರೆ. ಅಪ್ಪು ಅಪ್ಪಟ ಅಭಿಮಾನಿ  ಬೈಚಾಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ ಮಾತನಾಡಿ, ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಪುಣ್ಯ. ಅವರು ನಮ್ಮ ಮನಸ್ಸಿನಲ್ಲಿ ಎಂದೆಂದಿಗೂ ಅಜರಾಮರ. ಅವರ ನೆನಪಿಗಾಗಿ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ  ಉಪಯೋಗವಾಗುವ ಕಲಿಕಾ ಸಾಮಗ್ರಿಗಳನ್ನು…

Read More

ತುಮಕೂರು: ಕೇವಲ ಒಬ್ಬ ವಿದ್ಯಾರ್ಥಿನಿಗೆ ಸರಕಾರಿ ಪ್ರಾಥಮಿಕ ಶಾಲೆಯೊಂದು ನಡೆಯುತ್ತಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದ್ದೇವಳ್ಳಿ ಗ್ರಾಮದಲ್ಲಿದೆ. ಗ್ರಾಮದಲ್ಲಿರುವ ಈ ಸರಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯವಿದೆ. ಸರಕಾರಿ ಪ್ರಾಥಮಿಕ ಬಿಸಿಯೂಟ, ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲಾ ರೀತಿ ಸೌಲಭ್ಯಗಳಿವೆ. ಇಲ್ಲಿ ಒಂದನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿನಿ ಮಾತ್ರ 2024–25ನೇ ಸಾಲಿಗೆ ದಾಖಲಾಗಿದ್ದಾಳೆ. ಅಲ್ಲದೆ 5ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಗಳು ದಾಖಲಾತಿ ಆಗಿಲ್ಲ. ಒಬ್ಬ ವಿದ್ಯಾಥಿಗೆ ಶಾಲೆ ನಡೆಯುತ್ತಿದೆ. ಕೊರೊನಾ ಸಮಯದಲ್ಲಿ ಶಾಲೆಯಲ್ಲಿ 10 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ದಾಖಲಾತಿ ಹೆಚ್ಚಿಸಬೇಕೇಂಬ ಅಭಿಲಾಶೆ ಶಿಕ್ಷಕಿ ಪದ್ಮ ಅವರದ್ದಾಗಿತ್ತು. ಆದ್ರೆ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಾಲೆಯಿಂದ ಬಂದಿದ್ದ ಮಕ್ಕಳು ಕೊರೊನ ಇಳಿಮುಖವಾದ ನಂತರ ವಾಪಸ್ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಯಾವ್ದೆ ದಾಖಲಾತಿ ಇಲ್ಲದ್ದಾಗಿದೆ. ಕಳೆದ ಎರಡು ವಷದಿಂದ ಮೂವರು ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಆಗಿದ್ದರು.. ಆದ್ರೆ ಈ ವರ್ಷ ಕೇವಲ ಒಬ್ಬ ವಿದ್ಯಾರ್ಥಿನಿ…

Read More

ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚಿಮೇಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಂದಿಕೇರಾ ಗ್ರಾಮದ ಜನರಿಗೆ ಕೂಡಿಯುವ ನೀರಿನ ವ್ಯವಸ್ಥೆ ಒದಗಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಹಂದಿಕೇರಾ ಅಮೂಲ ಬಿರಾದಾರ ಮನವಿ ಮಾಡಿಕೊಂಡರು. ಚಿಮೇಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಂದಿಕೇರಾ ಗ್ರಾಮದ ಜನರಿಗೆ ಕೂಡಿಯುವ ನೀರಿನ ಸಮಸ್ಯೆ ಆಗಿದೆ. ಸದ್ಯ ಸದರಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಇಲ್ಲಿನ ಹನುಮಾನ್ ಮಂದಿರದ ಹತ್ತಿರ ಒಂದು ಬೋರ್ ವೇಲ್ ಇದೆ. ಆದರೆ ಇದರಲ್ಲಿ ನೀರು ಬರುತ್ತಿಲ್ಲ. ಈ ಬೋರ್ ವೆಲ್ ನ್ನು ದುರಸ್ತಿ ಮಾಡಿ ಅಥವಾ ಬೇರೆಯೇ ಬೋರ್ ವೆಲ್ ಕೊರೆಸಿ, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅವರು ಮನವಿಯಲ್ಲಿ ತಿಳಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4…

Read More

ಬೀದರ್: ವಾಕಿಂಗ್ ಹೋಗುತ್ತಿದ್ದ ಯುವಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೀದರ್ ಜಿಲ್ಲಾ ಔರಾದ ತಾಲೂಕಿನ ಸಂತಪೂರ –ಮಸ್ಕಲ್ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಮಸ್ಕಲ್ ಗ್ರಾಮದ ನವನಾಥ ರಾಮಣ್ಣ (32) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಸಂತಪೂರ ಗ್ರಾಮದ ರಾಹುಲ್ ಎಂಬ ಯುವಕನನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಸಂಜೆ ಸ್ನೇಹಿತನೊಂದಿಗೆ ವಾಕಿಂಗ್ ಹೋಗುತ್ತಿದ್ದ ರಾಹುಲ್ ಗೆ ಎದುರಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಪಾವಗಡ: ತಾಲೂಕಿನ ಕೆ.ಟಿ. ಹಳ್ಳಿ ಗ್ರಾಮದ ವಿ.ಎಸ್.ಎಸ್ ಎನ್. ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ದೇವಲಕೆರೆ ಗ್ರಾಮದ ಮದುಶ್ ಅವರನ್ನು ತಾಲೂಕು ಬಿಜೆಪಿ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ನಗರದ ರಾಯಲ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮವನ್ನ ಉದ್ದೇಶಿಸಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್ ಮಾತನಾಡಿ, ನಮ್ಮ ಪಕ್ಷದ ಪ್ರಾಮಾಣಿಕ, ಹಾಗೂ ನಿಷ್ಠಾವಂತ ಕಾರ್ಯಕರ್ತ ಮಧುಶ್ ರಾಜ್ ಕೆ.ಟಿ.ಹಳ್ಳಿ ವಿ. ಎಸ್. ಎಸ್.ಎನ್ ಚುನಾವಣೆಯಲ್ಲಿ ಅತ್ಯಾಧಿಕ 216 ಮತಗಳನ್ನ ಪಡೆದು ಆಯ್ಕೆಯಾಗಿರುವುದು ನಮಗೆ ತುಂಬಾ ಸಂತೋಷದ ವಿಷಯ, ಪಕ್ಷದಲ್ಲಿ ಅನೇಕ ಕಷ್ಟ, ಸಮಸ್ಯೆಗಳನ್ನ ಮಧು ನೋಡಿದ್ದಾನೆ, ಇಂದು ಅ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನ ಅಲಂಕರಿಸಲಿ, ಎಂಬುದು ನಮ್ಮ ಪಕ್ಷದ ಆಶಯ ಎಂದರು. ಈ ಸಂದರ್ಭದಲ್ಲಿ ಪುರುಷೋತ್ತಮ ರೆಡ್ಡಿ ಮಾತನಾಡಿ, ಪಕ್ಷದ ಹಳೆಯ ಕಷ್ಟ ದಿನಗಳ ಇಬ್ಬರ ಒಡನಾಟವನ್ನ ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಬ್ಯಾಡ್ನೂರು ಶಿವು, ದೇವಲಕೆರೆ ಹನುಮಂತರಾಯಪ್ಪ, ಓಬಳೇಶ್,…

Read More

ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದಲ್ಲಿರುವ ಅಂಗನವಾಡಿ ಕೇಂದ್ರ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಮಾದರಿಯಾಗಿದ್ದು, ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಎನ್ನುವವರು ಅನುಪಯುಕ್ತ ಪ್ಲಾಸ್ಟಿಕ್ ಅನ್ನು ಬಳಸಿಕೊಂಡು ಆಕರ್ಷಕ ವಸ್ತುಗಳನ್ನು ತಯಾರಿಸಿದ್ದು ಮತ್ತು ಮಕ್ಕಳಿಗೆ ಉತ್ತಮ ವಾತಾವರಣವನ್ನು ಅಂಗನವಾಡಿಯಲ್ಲಿ ಕಲ್ಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅಂಗನವಾಡಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಮಕ್ಕಳಿಂದ ಕಲಿಕೆಯ ಪ್ರಗತಿ ವೀಕ್ಷಿಸಿ, ಸಾರ್ವಜನಿಕರಿಂದ ಗೃಹಲಕ್ಷ್ಮಿ ಹಣ ಪಾವತಿ ಬಗ್ಗೆ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಚೇತನ್ ಕುಮಾರ್ ಎಂ.ಎನ್., ಸಿಡಿಪಿಒ ಡಿ.ಜಿ ಸುನೀತಾ, ಕಾರ್ಯ ಕರ್ತ ಸುಶೀಲಮ್ಮ, ಮೇಲ್ವಿಚಾರಣೆ ಭಾಗ್ಯಲಕ್ಷ್ಮಿ ಹಾಜರಿದ್ದರು. ಇದಕ್ಕೂ ಮೊದಲು ಅವರು ಪಟ್ಟಣದ ಬೀದಿ ಬದಿಯ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿಯಿಂದ ಸಾಲ ಸೌಲಭ್ಯ ವಿತರಣೆ ಮಾಡಿದ್ದು ಸೌಲಭ್ಯ ಪಡೆದಾ ಫಲಾನುಭವಿಗಳಿಂದ ಮಾಹಿತಿ ಪಡೆದರು, ನಂತರ ತಿರುಮಣಿಯ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು,…

Read More

ವಾಷಿಂಗ್ಟನ್:  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳುಗಳಿಂದ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್  ಮತ್ತು ಬುಜ್ ವಿಲ್ಮೋರ್ ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ ಭೂಮಿಗೆ ತಲುಪಲಿದ್ದಾರೆ. ಫ್ಲೋರಿಡಾದ ಕಡಲ ತೀರದಲ್ಲಿ ಅವರು ಲ್ಯಾಂಡ್  ಆಗುವ ನಿರೀಕ್ಷೆಯಿದೆ. ನಾಸಾ ಮತ್ತು ಸ್ಪೇಸ್ ಎಕ್ಸ್ ಜಂಟಿ ಪ್ರಯತ್ನದ ಮೂಲಕ ವಾಪಸ್ ಕರೆ ತರುವ ಕಾರ್ಯಾಚರಣೆ ಇದಾಗಿದೆ ಎಂದು ನಾಸಾ ತಿಳಿಸಿದೆ. ಸುನಿತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ ಎಕ್ಸ್‌ ನಲ್ಲಿ ಫಾಲ್ಕನ್ 9 ರಾಕೆಟ್ ಅನ್ನು ಮಾ. 15ರಂದು ಉಡಾವಣೆ ಮಾಡಲಾಗಿತ್ತು. ಮಾ.16ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ ಎಕ್ಸ್ ತಲುಪಿದ್ದು, ಸುನಿತಾ ವಿಲಿಯಮ್ಸ್ ಹಾಗೂ ಬುಜ್‌ ರನ್ನು ಭೂಮಿಗೆ ವಾಪಾಸ್ ಕರೆತರುವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

2025 ಇಸವಿಯ ಮೊದಲ ಸೂರ್ಯಗ್ರಹಣ ಮಾರ್ಚ್ 29ರಂದು ಸಂಭವಿಸಲಿದೆ. ಆದ್ರೆ ಈ ಗ್ರಹಣವು ಭಾರತದಲ್ಲಿ ಕಾಣಿಸಲ್ಲ. ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣ ಇನ್ನೊಂದರ ಮೇಲೆ ಬಿದ್ದಾಗ ಗ್ರಹಣ ನಡೆಯುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದು ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ನಡೆಯುತ್ತದೆ. ಈ ಬಾರಿಯ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್ಲ್ಯಾಂಡ್, ವೆಸ್ಟರ್ಟ್ ಯುರೋಪ್ ನಲ್ಲಿ ಈ ಗ್ರಹಣ ಕಾಣಿಸಿಕೊಳ್ಳಲಿದೆ. ಗ್ರಹಣ ಅನ್ನೋದು ಪ್ರಕೃತಿಯ ವಿಸ್ಮಯವಾಗಿದೆ. ಇದರಲ್ಲಿ ಯಾವುದೇ ಮೌಢ್ಯತೆಗಳನ್ನು ಆಚರಿಸದೇ ಸಾರ್ವಜನಿಕರು ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More