ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚಿಮೇಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಂದಿಕೇರಾ ಗ್ರಾಮದ ಜನರಿಗೆ ಕೂಡಿಯುವ ನೀರಿನ ವ್ಯವಸ್ಥೆ ಒದಗಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಹಂದಿಕೇರಾ ಅಮೂಲ ಬಿರಾದಾರ ಮನವಿ ಮಾಡಿಕೊಂಡರು.
ಚಿಮೇಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಂದಿಕೇರಾ ಗ್ರಾಮದ ಜನರಿಗೆ ಕೂಡಿಯುವ ನೀರಿನ ಸಮಸ್ಯೆ ಆಗಿದೆ. ಸದ್ಯ ಸದರಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ.
ಇಲ್ಲಿನ ಹನುಮಾನ್ ಮಂದಿರದ ಹತ್ತಿರ ಒಂದು ಬೋರ್ ವೇಲ್ ಇದೆ. ಆದರೆ ಇದರಲ್ಲಿ ನೀರು ಬರುತ್ತಿಲ್ಲ. ಈ ಬೋರ್ ವೆಲ್ ನ್ನು ದುರಸ್ತಿ ಮಾಡಿ ಅಥವಾ ಬೇರೆಯೇ ಬೋರ್ ವೆಲ್ ಕೊರೆಸಿ, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅವರು ಮನವಿಯಲ್ಲಿ ತಿಳಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4