- ಕುಮಾರ್ ಪೆರ್ನಾಜೆ, ಪುತ್ತೂರು
ನಾವು ನಮ್ಮ ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ಬೆಳೆಸುತ್ತೇವೆ ಪ್ರಕೃತಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಅಲ್ಲವೇ ಭೂಮಿಗೆ ಬಿದ್ದ ಹಣ್ಣು ಭೂಮಿಗೆ ಬಿದ್ದ ಬೀಜ ಎಂದು ವ್ಯರ್ಥವಾಗುವುದಿಲ್ಲ ಎಂಬ ಮಾತು ಎಷ್ಟು ಸತ್ಯ ನಾವು ಇಂದು ಬೀಜ ಹಾಕಿ ಸಸಿ ಮಾಡಲು ನಾನಾ ವಿಧಾನಗಳನ್ನು ಅಳವಡಿಸುತ್ತೇವೆ.

ಪ್ರಾರಂಭದಲ್ಲಿ ಏರುಮಡಿ ಸಾಲು ತದನಂತರ ಓಣಿ ಗಳಲ್ಲಿ ಬೀಜ ಬಿತ್ತುತ್ತಿದ್ದರೆ ಇತ್ತೀಚೆಗೆ ಪೇಪರ್ ಗ್ಲಾಸ್, ಗೆರಟೆ, ಪ್ಲಾಸ್ಟಿಕ್ ಗ್ಲಾಸ್, ತೆಂಗಿನ ಸಿಪ್ಪೆ ಒಂದೇ ಎರಡೇ ಆದರೂ ಮೊಳಕೆ ಹೊಡೆದು ಗಿಡವಾಗುವುದು ಅಷ್ಟೇ ಆದರೆ ಪ್ರಕೃತಿಯಲ್ಲಿ ಇತ್ತೀಚೆಗೆ ಮಳೆ ಸಾಧಾರಣವಾಗಿದ್ದರಿಂದ ಹತ್ತಿ ಕೋಡು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ. ನೆಟ್ಟಣಿಗೆ ಮುಡ್ನೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕುಮಾರ್ ಪೆರ್ನಾಜೆ ತೋಟದಲ್ಲಿ ನೂರಾರು ಗಿಡಗಳು ಮೊಳಕೆ ಒಡೆದು ನೋಡುಗರ ಮನವನ್ನು ಗೆದ್ದಿದೆ. ಯಾವ ರೀತಿಯಲ್ಲಿ ಜೋಡಿಸಿದೆ ಹೊರಭಾಗ ಗಟ್ಟಿಯಾಗಿದ್ದು ಒಳಭಾಗ ಮೆತ್ತನೆಯ ಹಾಸಿಗೆ ಹಾಸಿಗೆಯಂತೆ ಬೀಜಗಳನ್ನು ಪೋಣಿಸಿ ಮೊಳಕೆ ಒಡೆದು ಗಿಡವಾಗಿ ತದನಂತರ ಮಣ್ಣಿಗೆ ವರ್ಗಾಯಿಸಲು ಪ್ರಕೃತಿ ಮಾಡಿದ ಪರಿ ಸೋಜಿಗೆವೇ ಸರಿ.
ಮರ ಅಣಬೆ
ವಾಮನನ ಕೊಡೆಯಂತೆ ಕಂಗೊಳಿಸಿದ ಈ ಅಣಬೆ ಪ್ರಕೃತಿಯಲ್ಲಿ ಏನಿದೆ ಏನಿಲ್ಲ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಗ್ರಾಂಫೋನ್, ಸಿ.ಡಿ ಡಿಸ್ಕ್ ಭಾವಿಸಿದ್ದೀರಾ ಪ್ರಕೃತಿಯಲ್ಲೂ ತಾನೇನು ಕಡಿಮೆ ಇಲ್ಲ ಎಂಬಂತೆ ಮರದಲ್ಲಿ ಕೆತ್ತನೆ ಅಲಂಕಾರ ಎಲ್ಲ ನೋಡಿದ್ದೇವೆ ಆದರೆ ಕೊಂಬೆಗಳು ಮಣ್ಣಾದರು ತನ್ನ ಸೊಬಗನ್ನು ನೀಡಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕುಮಾರ್ ಪೆರ್ನಾಜೆ ತೋಟದಲ್ಲಿ ಕಂಡುಬಂದಿದ್ದು ಕೊರಡು ಕೊನರುವುದಯ್ಯ ಯಾವ ಶಿಲ್ಪಿಯ ಕೈಚಳಕಕ್ಕು ಕಡಿಮೆ ಇಲ್ಲ ಎಂಬಂತೆ ಪ್ರಕೃೃತಿ ನೀಡಿದ ಅದ್ಭುತ ಕೊಡುಗೆ ಹೀಗೂ ಸಾಧ್ಯ ಎಂಬಂತೆ ಸುಂದರ ಬಣ್ಣದ ಚಿತ್ರಣ ಯಾವ ಕಲಾವಿದನಿಂದಲೂ ನಿರೂಪಿಸಲಾಗದ ಅಣಕಾ (ಅಣಬೆ )ಕಲೆಗೂ ಬೆಲೆಕಟ್ಟಲಾಗದು ಎಂಬ ನಿದರ್ಶನವಲ್ಲವೇ ಏನಂತೀರಾ..?
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
