ಔರಾದ್: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಸರಕಾರಿ ಪ್ರೌಢ ಶಾಲೆಯ 1,500 ವಿದ್ಯಾರ್ಥಿಗಳಿಗೆ ಎಬಿವಿಪಿ ಹಿರಿಯ ಕಾರ್ಯಕರ್ತ ಅಶೋಕ ಶೆಂಬೆಳ್ಳಿ ಅವರು ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡಿದರು.
ಸೋಮವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ, ಆದರ್ಶ ವಿದ್ಯಾಲಯ, ಯನಗುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಂತರ ಮಾತನಾಡಿದ ಅಶೋಕ ಶೆಂಬೆಳ್ಳಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬ ಆತಂಕದಿಂದ ಹೊರಬರಬೇಕು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು. ಯಾರು ಮೊಬೈಲ್ ಗೀಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಉತ್ತಮ ಅಭ್ಯಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಬಿಸಿಯೂಟ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ ಹಂತವಾಗಿದೆ. ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದರು. ಅಶೋಕ ಶೆಂಬೆಳ್ಳಿ ಅವರು ತಮ್ಮ ಜನ್ಮದಿನ ನಿಮಿತ್ತ ತಾಲೂಕಿನ 1,500 ವಿದ್ಯಾರ್ಥಿಗಳಿಗೆ ಪ್ಯಾಡ್ ಮತ್ತು ಪೆನ್ನುಗಳು ನೀಡಿರುವುದು ಮಾದರಿಯಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಮುಖ್ಯಗುರು ಮಹಾದೇವ ಬಿಜಾಪೂರೆ, ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ದೃಷ್ಟಿಕೋನದಿಂದ ಅಶೋಕ ಶೆಂಬೆಳ್ಳಿ ಅವರು ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡಿದ್ದಾರೆ. ಅವರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಾಂಶುಪಾಲ ಇನಾಯತ್ ಅಲೀ ಸೌದಾಗರ್, ಮಹಾದೇವ ಚಿಟಗೀರೆ, ವಿಶ್ವನಾಥ ಬಿರಾದಾರ್, ರಾಜಕುಮಾರ ಡೊಂಗರೆ, ಅನಿಲ ಕಟ್ಟೆ, ಮೋಹನರಡ್ಡಿ, ನಾಗನಾಥ ಸುರಂಗೆ, ನೀಲಗಂಗಾ ಚಿಟಮೇ, ಬಸವರಾಜ ಶೇಷಾರಾವ, ಪತ್ರಕರ್ತ ಅಂಬಾದಾಸ ನೇಳಗೆ, ಶಶಿಕಾಂತ ರ್ಯಾಕಲೆ, ಅನಿಲ ಮೇತ್ರೆ, ದೇವಾನಂದ ಸೂರ್ಯವಂಶಿ, ಮಹಾದೇವ ಶಿಂಧೆ, ಸುರೇಶ ಮರ್ತುಳೆ, ಮಲ್ಲಿಕಾರ್ಜುನ ಟೇಕರಾಜ, ಲಕ್ಷ್ಮೀಕಾಂತ ಚಾರೆ ಸೇರಿದಂತೆ ಅನೇಕರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4