ಪಾವಗಡ: ತಾಲೂಕಿನ ಕೆ.ಟಿ. ಹಳ್ಳಿ ಗ್ರಾಮದ ವಿ.ಎಸ್.ಎಸ್ ಎನ್. ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ದೇವಲಕೆರೆ ಗ್ರಾಮದ ಮದುಶ್ ಅವರನ್ನು ತಾಲೂಕು ಬಿಜೆಪಿ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ನಗರದ ರಾಯಲ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮವನ್ನ ಉದ್ದೇಶಿಸಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್ ಮಾತನಾಡಿ, ನಮ್ಮ ಪಕ್ಷದ ಪ್ರಾಮಾಣಿಕ, ಹಾಗೂ ನಿಷ್ಠಾವಂತ ಕಾರ್ಯಕರ್ತ ಮಧುಶ್ ರಾಜ್ ಕೆ.ಟಿ.ಹಳ್ಳಿ ವಿ. ಎಸ್. ಎಸ್.ಎನ್ ಚುನಾವಣೆಯಲ್ಲಿ ಅತ್ಯಾಧಿಕ 216 ಮತಗಳನ್ನ ಪಡೆದು ಆಯ್ಕೆಯಾಗಿರುವುದು ನಮಗೆ ತುಂಬಾ ಸಂತೋಷದ ವಿಷಯ, ಪಕ್ಷದಲ್ಲಿ ಅನೇಕ ಕಷ್ಟ, ಸಮಸ್ಯೆಗಳನ್ನ ಮಧು ನೋಡಿದ್ದಾನೆ, ಇಂದು ಅ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನ ಅಲಂಕರಿಸಲಿ, ಎಂಬುದು ನಮ್ಮ ಪಕ್ಷದ ಆಶಯ ಎಂದರು.
ಈ ಸಂದರ್ಭದಲ್ಲಿ ಪುರುಷೋತ್ತಮ ರೆಡ್ಡಿ ಮಾತನಾಡಿ, ಪಕ್ಷದ ಹಳೆಯ ಕಷ್ಟ ದಿನಗಳ ಇಬ್ಬರ ಒಡನಾಟವನ್ನ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಬ್ಯಾಡ್ನೂರು ಶಿವು, ದೇವಲಕೆರೆ ಹನುಮಂತರಾಯಪ್ಪ, ಓಬಳೇಶ್, ಬಂಗೆಪ್ಪ, ಕೊಂಡಾಪುರ ತಿಪ್ಪೇಸ್ವಾಮಿ, ಹೊಸಹಳ್ಳಿ ನಾಗರಾಜ್,ಜಾಲೋಡು ತಿಪ್ಪೇಸ್ವಾಮಿ, ಅನಿಲ್, ಅಲ್ಕ್ಂದರಾಜ್, ರಾಘವೇಂದ್ರ, ಚಂದ್ರಶೇಖರ ನಾಯ್ಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4