Subscribe to Updates
Get the latest creative news from FooBar about art, design and business.
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
Author: admin
ತುಮಕೂರು: ಆಕಸ್ಮಿಕವಾಗಿ ಮೃತಪಟ್ಟ ಜಾನುವಾರು ಮಾಲಿಕರಿಗೆ ಪರಿಹಾರ ನೀಡುವ ಕಾರ್ಯ ವಿಳಂಬವಾಗುತ್ತಿದ್ದು, ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಡಿ 72.64 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ತುಮಕೂರು ಜಿಲ್ಲೆಯಲ್ಲಿ 2022ರ ಫೆಬ್ರುವರಿಯಿಂದ 2025ರ ಜುಲೈ 25ರ ವರೆಗೆ ಒಟ್ಟು 3,175 ರಾಸುಗಳು ಮೃತಪಟ್ಟಿದ್ದು, ಇದರಲ್ಲಿ 1,388 ಜಾನುವಾರು ಮಾಲೀಕರಿಗೆ ಪರಿಹಾರದ ಹಣ ತಲುಪಿಲ್ಲ. 1,787 ಜಾನುವಾರುಗಳಿಗೆ 31.76 ಕೋಟಿ ಪರಿಹಾರ ನೀಡಲಾಗಿದೆ. 2025ರ ಮೊದಲ ಆರು ತಿಂಗಳಲ್ಲಿ 1,259 ರಾಸುಗಳು ಆಕಸ್ಮಿಕವಾಗಿ ಜೀವ ಬಿಟ್ಟಿವೆ. ಕಳೆದ ನವೆಂಬರ್‌ನಿಂದ ಈವರೆಗೆ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಹೆಚ್ಚುಕಡಿಮೆ ಒಂದು ವರ್ಷದಿಂದ ಹಣ ಬಂದಿಲ್ಲ ಎಂದು ತಿಳಿದು ಬಂದಿದೆ. ಗಂಭೀರ ಕಾಯಿಲೆ, ವಿಪತ್ತು, ಅವಘಡ, ಹಾವು ಕಡಿತ ಸೇರಿ ಇತರೆ ಕಾಯಿಲೆಗೆ ತುತ್ತಾದ ಜಾನುವಾರುಗಳಿಗೆ ಪರಿಹಾರ ನೀಡಿ, ರೈತರಿಗೆ ನೆರವಾಗುವ ಉದ್ದೇಶದಿಂದ ಅನುಗ್ರಹ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಈ ಹಿಂದೆ ಮೃತಪಟ್ಟ, ಎಮ್ಮೆ, ಹೋರಿ, ಹಸು, ಎತ್ತುಗಳಿಗೆ ತಲಾ 710 ಸಾವಿರ…
ತುರುವೇಕೆರೆ: ತಾಲ್ಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ಕಾರಣ ಕೆಲವೆಡೆ ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿದೆ. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಒಬ್ಬೇನಾಗಸಂದ್ರದ ಲಲಿತಮ್ಮ ಅವರ ಮನೆಯ ಗೋಡೆ ಮಳೆಗೆ ಕುಸಿದು, ದವಸ, ದಾನ್ಯ, ಶೀಟ್ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ. ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ –ಸೊಪ್ಪನಹಳ್ಳಿ ನಡುವಿನ ಕೊಂಡಜ್ಜಿ ಹಳ್ಳ ರಸ್ತೆ ಮೇಲೆ ಹರಿಯುತ್ತಿದೆ. ಐದಾರು ವರ್ಷದ ಹಿಂದೆ ಇದೇ ಜಾಗದಲ್ಲಿ ಹಳ್ಳದಾಟುವಾಗ ಕಾರುಕೊಚ್ಚಿ ಹೋಗಿ ಚಾಲಕ ಸಾವನ್ನಪ್ಪಿದ್ದರೂ ಈವರೆಗೆ ರಸ್ತೆ ಸೇತುವೆ ನಿರ್ಮಾಣವಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ನೀರು ರಭಸವಾಗಿ ಹರಿಯುತ್ತಿದೆ. ಪ್ರಕೃತಿಯ ಈ ಸೌಂದರ್ಯ ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಜನರು ಬರುತ್ತಿದ್ದಾರೆ. ಪೊಲೀಸರು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರಿಗೇಹಳ್ಳಿಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದ್ದು ಈ ಭಾಗಗಳಲ್ಲಿ ರಾತ್ರಿ ಸಂಚರಿಸಲು ವಾಹನ ಸವಾರರು ಹಾಗೂ ಜನರು ಪರದಾಡುವಂತಾಗಿದೆ. ತುರುವೇಕೆರೆಯ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ…
ಬೀದರ್: ಆಟೋದಲ್ಲಿ ಬ್ಯಾಗ್ ಮರೆತು ಹೋಗಿದ್ದ ವ್ಯಕ್ತಿಯೊಬ್ಬರು ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಸಹಾಯದೊಂದಿಗೆ ಆಟೋವನ್ನು ಪತ್ತೆ ಹಚ್ಚಿದ ಘಟನೆ ನಡೆದಿದ್ದು, ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಬ್ಯಾಗ್ ನ್ನು ಆಟೋ ಚಾಲಕ ವಾರಸುದಾರರಿಗೆ ವಾಪಸ್ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಬೀದರ್ ನಿವಾಸಿಯೊಬ್ಬರು ಯಶವಂತಪೂರದಿಂದ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದು, ರೈಲ್ವೆ ನಿಲ್ದಾಣದಿಂದ ನ್ಯೂ ಆದರ್ಶ ಪ್ರಯಾಣಿಸಿದ್ದರು. ಈ ವೇಳೆ ತಮ್ಮ ಬ್ಯಾಗನ್ನು ಆಟೋದಲ್ಲಿ ಮರೆತು ಮನೆಗೆ ಹೋಗಿದ್ದಾರೆ. ಮನೆಗೆ ಹೋದ ವೇಳೆ ಬ್ಯಾಗ್ ಮರೆತಿರುವುದು ಅರಿವಾಗಿದೆ. ತಕ್ಷಣವೇ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಅಳವಡಿಸಿರುವ AI ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಗೆ ಬಂದು AI ಸಿ.ಸಿ. ಟಿವಿ ಕಮಾಂಡ್ ಸೆಂಟರ್ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷವರ್ಧನ ರವರಿಗೆ ಮಾಹಿತಿ ನೀಡಿದ್ದಾರೆ. ಹರ್ಷವರ್ಧನ್ ಅವರು ಆಟೋವನ್ನು ಪತ್ತೆ ಹಚ್ಚಿ ಆಟೋವನ್ನು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ, ವಾರಸುದಾರರ ಬ್ಯಾಗನ್ನು ಆಟೋ ಚಾಲಕರ ಮುಖಾಂತರ…
ಸರಗೂರು: ಅಡಹಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಮನೆಗೆ ಗುರುವಾರದಂದು ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಎರಡು ಕರುಗಳು ಹಾಗೂ ಅಪಾರ ಪ್ರಮಾಣದ ಬೆಳೆ ಮತ್ತು ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಹಳ್ಳಿ ಗ್ರಾಮದ ದೇವೇಗೌಡ ರವರ ಮಗನಾದ ದೇವಶ್ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಗುರುವಾರ ರಾತ್ರಿ 11 :30 ಗಂಟೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮವಾಗಿ 2 ಕರು ಮೃತಪಟ್ಟಿವೆ. ಮನೆಗೆ ಬೇಕಾದ ವಸ್ತುಗಳು ಹಾಗೂ ಬೆಳೆದ ಬೆಳೆ ನಷ್ಟ ಉಂಟಾಗಿದೆ. ಕೊಟ್ಟಿಗೆ ಮನೆಯಲ್ಲಿದ್ದ 10 ಮೂಟೆ ಜೋಳ, 15 ಮೂಟೆ ಗೇಲ್, ಹುರುಳಿ, 2 ಚೀಲ ಹೆಸರು, ಅಲಸಂದೆ ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳು ಸುಟ್ಟು ಅಪಾರ ಪ್ರಮಾಣದ ಹಾನಿಯಾಗಿವೆ. ಇನ್ನೂ ಒಂದು ಹಸು ಜೀವಂತ ಇದೆ ಆದರೆ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ನಷ್ಟ ಪರಿಹಾರ ನೀಡಬೇಕು ಎಂದು ನೊಂದ ರೈತ…
ನೆಲಮಂಗಲ: ಸರ್ಕಾರವೇ ಪರೀಕ್ಷಾ ಶುಲ್ಕ ವಿನಾಯಿತಿ ನೀಡಿದ್ದರೂ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ ಗಂಭೀರ ಆರೋಪದ ಮೇಲೆ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ದ್ವಿತೀಯ ದರ್ಜೆ ಸಹಾಯಕ (SDA) ಸಿದ್ದಲಿಂಗಮೂರ್ತಿ ಆರ್. ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ (ಬೆಂಗಳೂರು ಗ್ರಾಮಾಂತರ) ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರೇಗೌಡ ಈ ಅಕ್ರಮದ ಬಗ್ಗೆ ದೂರು ದಾಖಲಿಸಿದ್ದರು. 2025ರ ಎಸ್ ಎಸ್ ಎಲ್ ಸಿ ಪರೀಕ್ಷೆ–1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ–2 ಮತ್ತು ಪರೀಕ್ಷೆ–3ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಶುಲ್ಕ ವಿನಾಯಿತಿ ನೀಡಿತ್ತು. ಆದಾಗ್ಯೂ, ಆರೋಪಿ ನೌಕರ ಸಿದ್ದಲಿಂಗಮೂರ್ತಿ, ಪರೀಕ್ಷೆ–2 ಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ ₹1200 ಮತ್ತು ಪರೀಕ್ಷೆ–3 ಕ್ಕಾಗಿ ₹20 ರಂತೆ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿರುವುದು ದೂರಿನಲ್ಲಿ ಆರೋಪಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ವಿದ್ಯಾರ್ಥಿಗಳ ಲಿಖಿತ…
ಸರಗೂರು: ನಮ್ಮ ಹಲಸೂರು ಗ್ರಾಮದ ಮಗಳು ಎಚ್.ಎನ್.ಸವಿತಾ ಒಲಿಂಪಿಕ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ತಾಲೂಕು ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ ಎಂದು ಗ್ರಾಪಂ ಅಧ್ಯಕ್ಷ ಹಲಸೂರು ಟಿ. ಕುಮಾರ್ ತಿಳಿಸಿದರು. ತಾಲೂಕಿನ ಕೊತ್ತೇಗಾಲ ಗ್ರಾ.ಪಂ. ವ್ಯಾಪ್ತಿಯ ಹಲಸೂರು ಗ್ರಾಮದ ಲಿಂಗಪ್ಪನಾಯಕ ಮಗಳಾದ ಎಚ್.ಎನ್. ಸವಿತಾ ಎಂಬುವರು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಉದಯೋನ್ಮುಖ ಕ್ರೀಡಾಪಟು ಕರ್ನಾಟಕ ರಾಜ್ಯ ವಿಶೇಷ ಒಲಂಪಿಕ್ಸ್ ನ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಸುದ್ದಿ ಗಮನಕ್ಕೆ ಬಂದ ಕೂಡಲೇ ಗ್ರಾ.ಪಂ. ಆಡಳಿತ ಮತ್ತು ಮುಖಂಡರು ಸನ್ಮಾನಿಸಿ ಮಾತನಾಡಿದರು. ಎಚ್.ಎನ್. ಸವಿತಾ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು ಇವರು ಎಚ್.ಡಿ.ಕೋಟೆ ತಾಲೂಕು ಹಲಸೂರು ಗ್ರಾಮದ ನಿಂಗಪ್ಪನಾಯಕ ಮತ್ತು ರಾಧಾ ದಂಪತಿಯ ಪುತ್ರಿ. ನಮ್ಮ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಂತಹ ಪ್ರತಿಭೆಯನ್ನು ಗುರುತಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದಗಳು ಎಂದು ತಿಳಿಸಿದರು. ಲಿಂಗಪ್ಪನಾಯಕರವರ ಮಗಳು ನಮ್ಮ ತಾಲೂಕು ಹಾಗೂ ಗ್ರಾಮಗೆ…
ಸರಗೂರು: ಸರ್ಕಾರ ಹಕ್ಕು ಪತ್ರ ನೀಡಿದೆ, ತಾಲೂಕು ಆಡಳಿತ ತಡೆಹಿಡಿದಿದ್ದಾರೆ. ಕೇಳಿದರೂ ಶಾಸಕರು ಮೇಲೆ ಹೇಳುತ್ತಾರೆ ಅವರನ್ನು ಕೇಳಿದರೆ, ಇವರಿಗೆ ಹೇಳುತ್ತಿದ್ದಾರೆ ನಮ್ಮ ಸಮಸ್ಯೆ ಯಾರಿಗೆ ಹೇಳಬೇಕೋ ನಮ್ಮ ಗೊತ್ತಾಗುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಗ್ರಾಮೀಣ ಮಹೇಶ್ ಕಿಡಿಕಾರಿದರು. ಸರಗೂರು ತಾಲೂಕಿನ ಹೊಸಬೀರ್ವಾಳು ಗ್ರಾಮಸ್ಥರು ಶುಕ್ರವಾರದಂದು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ, ಸರಗೂರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರು ಮಾತನಾಡಿದರು. ನಮ್ಮ ತಾತ ತಂದೆ ಕಾಲದ ಗಾದೆ ಇದೆ “ದೇವರು ವರ ಕೊಟ್ಟರು ಪೂಜಾರಿ ಕೊಡುತ್ತಿಲ್ಲ” ಗಾದೆ ಸುಳ್ಳಾಗದು ಅಂತೆಯೇ ಕಂದಾಯ ಇಲಾಖೆ ಅಧಿಕಾರಿಗಳು ಅದನ್ನು ನಿಜಾ ಮಾಡಿ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಜಾಪುರದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಮುತುವರ್ಜಿ ವಹಿಸಿ 1,11,111 ಹಕ್ಕು ಪತ್ರಗಳನ್ನು ವಿತರಿಸಿದೆ. ಅದರಲ್ಲಿ ಸರಗೂರು ತಾಲೂಕು ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ಸಹ…
ಬೀದರ್: ಬಿಹಾರದ ಕುಚಯಕೋಟ್ ವಿಧಾನಸಭಾ ಕ್ಷೆತ್ರದ ಚುನಾವಣೆ ಸಂಯೋಜಕರಾಗಿ ಔರಾದ್ ತಾಲೂಕಿನವರೆ ಆದ ಭಾರತ ರಾಷ್ಟ್ರಿಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ರತ್ನದೀಪ ಕಸ್ತೂರೆರವರನ್ನು ನೇಮಕ ಮಾಡಲಾಗಿದೆ. ಕಿಸಾನ್ ವಿಭಾಗದ ರಾಷ್ಟ್ರ ಉಪಾಧ್ಯಕ್ಷರಾದ ಅಖಿಲೇಶ್ ಶುಕ್ಲಾರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರತ್ನದೀಪ ಕಸ್ತೂರೆ ವಿವಿಧ ಚುನಾವಣೆಗಳಲ್ಲಿ ಪಕ್ಷದ ಪರ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಜೋಜನಾ ಗ್ರಾಮದ ರೈತ ಹಣಮಂತ ಗಣಪತಿ ರಾಘೋಳೆ ಎಂಬುವವರಿಗೆ ಸೇರಿದ ರಾಶಿ ಮಾಡಲು ಕೂಡಿಟ್ಟ ಸೋಯಾ ಬಣವಿಗೆ ದುಷ್ಕರ್ಮಿಗಳು ಗುರುವಾರ ಸಂಜೆ 8 ಗಂಟೆ ಸುಮಾರಿಗೆ ಬೆಂಕಿಯಿಟ್ಟಿದ್ದಾರೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬಣಮೆಗೆ ಕಿಡಿ ಇಟ್ಟ ಪರಿಣಾಮ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 30 ಕ್ವಿಂಟಾಲ್ ಗಿಂತಲೂ ಹೆಚ್ಚಿನ ಫಸಲು ಬರುವ ಅಂದಾಜು ₹1.50 ಲಕ್ಷ ಮೌಲ್ಯದ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರೈತ ಹನುಮಂತ್ ರಾಗೋಳೆ ಅವರು ಜೋಜನಾ ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಕ್ಕದ ಲಿಂಗದಳ್ಳಿ (ಕೆ) ಗ್ರಾಮದ ಸರ್ವೇ ನಂ–19 ರಲ್ಲಿ ಬೆಳೆದಿದ್ದ ಸೋಯಾಅವರೆ ಕಟಾವಿ ಮಾಡಿ ಸಂಗ್ರಹಿಸಿ ಬಣವಿಗೆ ಬೆಂಕಿ ಇಡಲಾಗಿದೆ. ಸೋಯಾಅವರೆ ಬಣವಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಗ್ನಿಗೆ ಸುಟ್ಟು ಕರಕಲಾದ ಸೋಯಾ ಬೆಳೆಯ ಪರಿಹಾರ ನೀಡಬೇಕಾಗಿ ರೈತರು ಮನವಿ…
ಈಗ ನಾವು ಒಮ್ಮೆ ಕಲ್ಪಿಸಿಕೊಳ್ಳೋಣ, ನಾವು ಈ ಭೂಮಿಯ ಮೇಲೆ ಸುಮಾರು 1 ಸಾವಿರ ವರ್ಷ ಮುಂದೆ ಹೋಗಿದ್ದೇವೆಂದು ಆಗ ಈ ಜಗತ್ತು ಹೇಗಿರಬಹುದು? ಆಗ ಮನುಷ್ಯ ತಂತ್ರಜ್ಞಾನ ವಿಷಯದಲ್ಲಿ ವಿಪರೀತ ಮುಂದುವರೆದು ಯಾವುದಕ್ಕೂ ಕೊರತೆ ಇರದ ಜಗತ್ತಿನಲ್ಲಿ ಜೀವಿಸುತ್ತಿದ್ದಾನೆ ಎಂಬುದಾಗಿಯೇ? ಒಂದು ರೀತಿಯ ಸ್ವರ್ಗ ಜೀವನದ ಹಾಗೆ? ಹಾಗೆಯೇ ಮಂಗಳ ಮತ್ತು ನಮ್ಮ ಉಪಗ್ರಹ ಚಂದ್ರನ ಮೇಲೆ ಮನುಷ್ಯ ವಸಾಹತು ಹಾಕಿ ಅಲ್ಲಿಯೂ ವಾಸಿಸುತ್ತಿರುತ್ತಾನೆ ಎಂಬುದಾಗಿಯೇ? ಇಂತಹ ಸಂಗತಿಗಳನ್ನು ನಾವು ಭವಿಷ್ಯದಲ್ಲಿ ನಿಜವಾಗಬಹುದು ಎಂದು ಹೇಗೆ ಅಂದುಕೊಳ್ಳುತ್ತೇವೆಯೋ ಹಾಗೆಯೇ ಇವೆಲ್ಲವೂ ಯಾವುದೂ ಸಾಧ್ಯವಾಗದೆ ಕೇವಲ ಕಲ್ಪನೆ ಅಥವಾ ಕನಸೂ ಆಗಬಹುದು ಎಂಬ ಸತ್ಯವನ್ನು ಮೊದಲು ತಿಳಿಯಬೇಕಾಗುತ್ತದೆ. ಇದು ಹೇಗೆಂದು ತಿಳಿಯುವ ಪ್ರಯತ್ನ ಮಾಡಿದರೆ ನಮಗೇ ಒಂದೊಂದು ತಿಳಿಯುತ್ತಾ ಹೋಗುತ್ತದೆ ಆದರೆ ಸ್ವಲ್ಪ ಆಳವಾಗಿ ಯೋಚಿಸಬೇಕು ಅಷ್ಟೇ. ಮೊದಲನೆಯದಾಗಿ, ನಮ್ಮ ಮುಂದಿರುವ ಈಗಿರುವ ಜಗತ್ತನ್ನು ಒಮ್ಮೆ ಅವಲೋಕಿಸಿ ನೋಡಿ, ಪ್ರಪಂಚದ ಎಲ್ಲಿಯಾದರೂ ಒಂದು ಕಡೆ ಅಥವಾ ಹಲವು ಕಡೆ, ಹಲವು ವರ್ಷಗಳಿಂದ…