Subscribe to Updates
Get the latest creative news from FooBar about art, design and business.
- ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ
- ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ
- ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ: ಸರಗೂರಿನಲ್ಲಿ ಅಧಿಕರ್ನಾಟಕ ಮಹಾಸಭಾ ಸಭೆ
- ಸರಗೂರು: ಎಸ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ — ಪ್ರತಿಭಟನೆಯ ಎಚ್ಚರಿಕೆ
- ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ
- ಸರಗೂರು: ಸಾಧಕ ಪ್ರಸನ್ನ ಕುಮಾರ್ ಅವರಿಗೆ ‘ಪಟ್ಟಣದ ಸ್ನೇಹಿತರು’ ಬಳಗದಿಂದ ಸನ್ಮಾನ
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
Author: admin
ತುಮಕೂರು: ಜಿಲ್ಲೆ ತುಮಕೂರು ತಾಲ್ಲೂಕು, ಬೆಳಧರ ಶಾಲೆಯು ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ಶಾಲೆಯಾಗಿದ್ದು, ಸುಮಾರು 10–15 ಹಳ್ಳಿಗಳ ಕೃಷಿಕರ, ಬಡ ಅಲ್ಪಸಂಖ್ಯಾತ ಮಕ್ಕಳು, ಪರಿಶಿಷ್ಟಜಾತಿ ಪಂಗಡದ ಅತೀ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದೆ. ಕೋರಾ ಹೋಬಳಿಯಲ್ಲಿಯೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಕನ್ನಡ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತಹ ಶಾಲೆಯ ಮಕ್ಕಳಿಗೆ ಸುರಕ್ಷತೆ ಇಲ್ಲದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯಾಗಿದೆ ಎಂದು ತುಮಕೂರಿನ ಕಾಳಜಿ ಫೌಂಡೇಶನ್ ಟೀಕಿಸಿದೆ. ಈ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಲಗತ್ತಾಗಿರುವಂತೆ ಕಾನೂನು ಬಾಹಿರ ಕಲ್ಯಾಣ ಮಂಟಪದವರು ಶಾಲಾ ಆಟದ ಮೈದಾನವನ್ನೇ ಪಾರ್ಕಿಂಗ್ ಮಾಡಿಕೊಂಡಿರುವ ಪರಿಣಾಮ ಸ್ವಚ್ಛಂದವಾಗಿ ಅಭ್ಯಾಸ ಮಾಡಬೇಕಾದ ಮಕ್ಕಳು, ಕಲ್ಯಾಣ ಮಂಟಪದ ಸದ್ದುಗದ್ದಲಗಳ ನಡುವೆ, ವಾಹನಗಳಿಂದ ಭಯಭೀತರಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವುದು ಬೇಸರವೆನಿಸುತ್ತಿದೆ. ಕಾಂಪೌಂಡ್ ನಿರ್ಮಾಣಕ್ಕೆ ಹಣವಿಲ್ಲ ಎಂದಿರುವ ತುಮಕೂರು ಜಿಲ್ಲಾಡಳಿತ ಜನವರಿ 10, 2025ರ ಒಳಗೆ ಕಾಂಪೌಂಡ್ ಕಾಮಗಾರಿ ಪ್ರಾರಂಭ ಮಾಡದೇ ಇದ್ದಲ್ಲಿ, ನಾವು ಸಹ ಎಸ್.ಡಿ.ಎಂ.ಸಿ. ಮನವಿ ಮೇರೆಗೆ ಶಾಲೆ ಆಟದ ಮೈದಾನಕ್ಕೆ ಕಾಂಪೌಂಡ್…
ತುಮಕೂರು: ಬೆಳಧರ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಜಿಲ್ಲಾಡಳಿತದಲ್ಲಿ ಹಣವಿಲ್ಲ: ಭಿಕ್ಷಾಟನೆಗೆ ಮುಂದಾದ ವಿವಿಧ ಸಂಘಟನೆಗಳು
ತುಮಕೂರು: ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಹಣವಿಲ್ಲವೆಂದು ಕೈತೊಳೆದುಕೊಂಡಿರುವ ತುಮಕೂರು ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಡುವ ಬಗ್ಗೆ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು, ಬೆಳಧರ ಶಾಲೆಯು ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ಶಾಲೆಯಾಗಿದ್ದು, ಸುಮಾರು 10–15 ಹಳ್ಳಿಗಳ ಕೃಷಿಕರ, ಬಡ ಅಲ್ಪಸಂಖ್ಯಾತ ಮಕ್ಕಳು, ಪರಿಶಿಷ್ಟಜಾತಿ ಪಂಗಡದ ಅತೀ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದ್ದು ಕೋರಾ ಹೋಬಳಿಯಲ್ಲಿಯೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಕನ್ನಡ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ಶಾಲೆಗೆ ಆಟದ ಮೈದಾನ ಇಲ್ಲವೆಂದು ಮನಗಂಡ ಅಂದಿನ ಸರ್ಕಾರ ಶಾಲೆಗೆ ಲಗತ್ತಾಗಿದ್ದ 2 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಶಾಲಾ ಆಟದ ಮೈದಾನಕ್ಕೆಂದು 1959ರಲ್ಲಿಯೇ ಗ್ರಾಮಠಾಣಾಗೆ ಲಗತ್ತು ಮಾಡಿ ಶಾಲೆಯ ಸ್ವಾಧೀನಕ್ಕೆ ಅಂದರೆ ಮಕ್ಕಳ ಶೈಕ್ಷಣಿಕೆ ಚಟುವಟಿಕೆಗಳು ಮತ್ತು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ಶಾಲಾ ಸುಪರ್ಧಿಗೆ ಕೊಟ್ಟಿತ್ತು.…
ಕೊರಟಗೆರೆ : ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಾಲ್ಲೂಕಿನ ಪ್ರತಿ ಅರ್ಹ ಫಲಾನುಭವಿಗಳಿಗೂ ತಲುಪಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದು ಕೊರಟಗೆರೆ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅದ್ಯಕ್ಷ ಬಿ.ಸಿ.ವೆಂಕಟೇಶ್ಮೂರ್ತಿ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸಮಿತಿಯ ನೂತನ ಆಡಳಿತ ಕಚೇರಿಯನ್ನು ಪ್ರಾರಂಭಿಸಿ ಮಾತನಾಡಿ, ಸರ್ಕಾರದ ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ ಈ ಅನುಷ್ಠಾನ ಸಮಿತಿಯು ಕಾರ್ಯನಿರ್ವಹಿಸಲಿದ್ದು, ನನ್ನೊಂದಿಗೆ 15 ಉಪಾಧ್ಯಕ್ಷರನ್ನು ಈ ಸಮಿತಿಯಲ್ಲಿ ನೇಮಕ ಮಾಡಿದ್ದು, ನಾವೆಲ್ಲರು ಒಟ್ಟುಗೂಡಿ ಈ ಕಾರ್ಯಕ್ರಮಕ್ಕೆ ಯಾವುದೇ ಕುಂದು–ಕೊರತೆ ಬಾರದಂತೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ ಎಂದರು. ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸರ್ಕಾರವು ಜಾರಿಗೊಳಿಸಿರುವ 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ವೆಂಕಟೇಶ್ ಮೂರ್ತಿ ರವರ ಅಧ್ಯಕ್ಷತೆಯಲ್ಲಿ 15 ಉಪಾಧ್ಯಕ್ಷರ ಸಮಿತಿಯನ್ನು ಸರ್ಕಾರವು ರಚನೆ ಮಾಡಿದ್ದು, ಈ ಸಮಿತಿಗೆ ತಾಲ್ಲೂಕು ಆಡಳಿತ ಸೇರಿದಂತೆ ವಿವಿದ ಇಲಾಖೆಗಳು ಸಹಕಾರ ನೀಡಲಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ…
ತುಮಕೂರು: ಬೆವಿಕಂ ಶಿರಾ ಉಪ ವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 22ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶಿರಾ ನಗರ, ಯಲಿಯೂರು, ಮದಲೂರು, ಬಂದಕುಂಟೆ, ಕೊಟ್ಟ, ಭೂವನಹಳ್ಳಿ, ಗೌಡಗೆರೆ, ಲಕ್ಷ್ಮೀಮಸಾಗರ ಪಂಚಾಯತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಈ. ಶಾಂತರಾಜು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ತುಮಕೂರು: ಚೇಳೂರು-ತುಮಕೂರು ಮಾರ್ಗದ ಮುಖ್ಯ ರಸ್ತೆಯ ದುಸ್ಥಿತಿ ನೋಡಿದರೆ “ರಸ್ತೆ ಗುಂಡಿಯೊಳಗೋ, ಗುಂಡಿಯೇ ರಸ್ತೆಯೋ” ಅಂತ ತಿಳಿಯದೇ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಕಂಡು ಬರುತ್ತದೆ. ರಸ್ತೆಯಾದ್ಯಂತ ಗುಂಡಿಗಳೇ ಕಾಣುತ್ತಿದ್ದು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವವರಿಗೆ ಈ ಗುಂಡಿಮಯ ರಸ್ತೆ, ಅಕ್ಷರಶಃ ನರಕ ತೋರಿಸುತ್ತದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ರಸ್ತೆ ಅವ್ಯವಸ್ಥೆ ಸರಿಪಡಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. ಪ್ರತಿನಿತ್ಯ ಇಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತವೆ, ದ್ವಿಚಕ್ರವಾಹನ ಸವಾರರ ಪಾಡಂತೂ ಹೇಳತೀರದು ಎನ್ನುವಂತಾಗಿದೆ. ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಳವಾಗುತ್ತಿವೆ. ಸರಕು ಮತ್ತು ಪ್ರಯಾಣಿಕರ ವಾಹನಗಳು ಗುಂಡಿಗಳಿಂದಾಗಿ ಹಾನಿಗೊಳಗಾಗುತ್ತಿವೆ. ಸುಗಮ ಸಂಚಾರ ಸಾಧ್ಯವಾಗದೇ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಗುಂಡಿಮಯ ರಸ್ತೆಯಲ್ಲಿ ಧೂಳಿನ ಮಳೆಯೇ ಸುರಿಯುವಂತೆ ಧೂಳು ಕಂಡು ಬಂದಿದೆ. ಸಂಬಂಧಿತ ಪ್ರಾಧಿಕಾರಗಳಾದ ಪಿಡಬ್ಲ್ಯೂಡಿ (PWD) ಮತ್ತು ಸ್ಥಳೀಯ ಆಡಳಿತ ಇಷ್ಟೆಲ್ಲ ಸಮಸ್ಯೆಗಳ ಅರಿವಿದ್ದರೂ, ಜಾಣ ಕುರುಡು ವಹಿಸಿದ್ದಾರೆ. ಈ ರಸ್ತೆ ಸಮಸ್ಯೆಯ ವಿರುದ್ಧ ಜನ ರಸ್ತೆಗಿಳಿಯದೇ…
ಬೆಂಗಳೂರು: ರಾಜ್ಯದಲ್ಲಿ ಏನೇ ಆದರೂ ನಾನೇ ಕಾರಣನಾ? ಬಿಜೆಪಿಯವರ ಮನೆಯಲ್ಲಿ, ಪಕ್ಷದಲ್ಲಿ ಅಷ್ಟೇ ಯಾಕೆ, ಅವರ ಹೊಟ್ಟೆ ಒಳಗೆ ಏನಾದ್ರೂ ನಾನೇ ಕಾರಣನಾ? ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಆಕ್ಷೇಪಾರ್ಹ ಪದಬಳಕೆ ಸಂಬಂಧ ಮಾತನಾಡಿದ ಅವರು, ಅವರ ಪಕ್ಷ, ಅವರ ಮುಖಂಡರ ಸಂಸ್ಕ್ರತಿ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪೊಲೀಸ್ ಉಂಟು, ಕೋರ್ಟ್ ಉಂಟು, ಅಪರಾಧ ಉಂಟು. ರಾಜ್ಯದಲ್ಲಿ ಏನೇ ಆದರೂ ನಾನೇ ಕಾರಣ, ಅವರ ಪಕ್ಷ, ಹೊರಗಡೆ, ಮನೆ, ಹೊಟ್ಟೆ ಒಳಗೆ ಏನಾದ್ರೂ ಎಲ್ಲದಕ್ಕೂ ನಾನೇ ಕಾರಣ. ನನ್ನ ನೆನಸಿಕೊಂಡಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನಿಗೆ, ಕೋರ್ಟ್‌ಗೆ ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಮಾತನಾಡಿದ್ದು ಸರೀನಾ ಎಂದು ಕೇಳಿ? ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಎನ್ನುವುದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ…
ಹಿರಿಯೂರು: ಖಾಸಗಿ ಬಸ್ಸೊಂದು ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗುಯಿಲಾಳ್ ಟೋಲ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಖಾಸಗಿ ಬಸ್ ನ ಟಯರ್ ಸ್ಫೋಟಗೊಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹತ್ತಿಕೊಂಡ ತಕ್ಷಣವೇ ಎಚ್ಚೆತ್ತ ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಇದರಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಖಾಸಗಿ ಬಸ್ಸು ದಾವಣಗೆರೆಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿತ್ತು. ಬಸ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ಬಂಧನವಾಗಿ ಕೋರ್ಟ್ ಆದೇಶದಂತೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯ ಬಳಿಕ ಅಂದು ನಡೆದ ಘಟನೆಯೇನು ಎಂಬ ಬಗ್ಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿ.ಟಿ.ರವಿ ಮಾತನಾಡಿದರು. ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಬಂದು ನನ್ನನ್ನು ಪ್ರತ್ಯೇಕವಾಗಿ ಬಂಧಿಸಿದರು. ಬಂಧನ ಬಳಿಕ ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ. ರಾತ್ರಿಯಿಡೀ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು, ಪೊಲೀಸರಿಗೆ ನಾನು ಪದೇ ಪದೇ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಏನೋ ಪಿಸುಪಿಸು ಮಾತನಾಡುತ್ತಿದ್ದರು. ನನ್ನ ತಲೆಗೆ ಪೆಟ್ಟಾಗಿದ್ದರಿಂದ ತಲೆ ಸುತ್ತು ಬಂದಂತೆ, ವಾಂತಿ ಬಂದಂತೆ ಆಗುತ್ತಿತ್ತು.…
ಬೆಂಗಳೂರು: ನೆಲಮಂಗಲದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ 6 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕಾರ್‌ನ ಮೇಲೆ ಕಂಟೇನರ್ ಲಾರಿ ಉರುಳಿ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಘಟನೆ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಕಾರಿನ ಮೇಲೆ ಕಂಟೇನರ್ ಬಿದ್ದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸೇರಿ ಒಟ್ಟು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ತುಮಕೂರು ಬೆಂಗಳೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಆಗಮಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ತುಮಕೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿಗೆ ಕರ್ನಾಟಕ ರಣಧೀರರ ವೇದಿಕೆ (ರಿ.) ಕೊಡಮಾಡುವ ರಾಣಿಚೆನ್ನಭೈರಾದೇವಿ ಪ್ರಶಸ್ತಿ– 2024ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಭಾಜನರಾಗಿದ್ದಾರೆ. ಕನ್ನಡ ನಾಡು–ನುಡಿ, ನೆಲ, ಜಲ, ಭಾಷೆ, ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿರುವವರಿಗೆ ಈ ಪ್ರಶಸ್ತಿ ನೀಡಲಾಗುವುದು. ಇತ್ತೀಚೆಗೆನೆಲಮಂಗಲದಲ್ಲಿ ನಡೆದ 5ನೇ ವರ್ಷದ ಕನ್ನಡರಾಜ್ಯೋತ್ಸವ ಹಾಗೂ ಭುವನೇಶ್ವರಿ ಹಬ್ಬ ಮತ್ತು ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ 2024ರ ಸಮಾರಂಭದಲ್ಲಿ ಪ್ರಶಸ್ತಿ ನೀಡಿಗೌರವಿಸಲಾಯಿತು. ಕರ್ನಾಟಕ ರಣಧೀರರ ವೇದಿಕೆ (ರಿ.) ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪಗೌಡ ಕೆ.ಎಸ್.,ಮತ್ತಿತರಗಣ್ಯರು ಈ ಸಂದರ್ಭ ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx