Author: admin

ಸಾಕಷ್ಟು ಜನರು ರಾತ್ರಿ ತಡವಾಗಿ ನಿದ್ರಿಸುತ್ತಾರೆ. ರಾತ್ರಿ 1 ಹಾಗೂ 2 ಗಂಟೆಗಳ ನಂತರ ಮಲಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎನ್ನುವುದನ್ನು ವೈದ್ಯರು ಹೇಳಿದ್ದಾರೆ. ರಾತ್ರಿ ತಡವಾಗಿ ಮಲಗುವ ಅಭ್ಯಾಸ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ತಡವಾಗಿ ಮಲಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಪ್ರತಿ ದಿನವೂ ತಡವಾಗಿ ಮಲಗುವವರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ತಡವಾಗಿ ಮಲಗುವುದರಿಂದ ದೇಹದ ನೈಸರ್ಗಿಕ ಚಕ್ರ ಹಾಳಾಗುತ್ತದೆ. ಇದು ಹಲವು ರೀತಿಯ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ, ಟೆನ್ಷನ್, ಖಿನ್ನತೆ, ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಬರುತ್ತವೆ. ಪ್ರತಿದಿನ ತಡವಾಗಿ ಮಲಗುವುದರಿಂದ ದೇಹವು ಹಲವು ಸಮಸ್ಯೆಗಳಿಗೆ ಒಳಗಾಗುತ್ತದೆ. ನಿಧಾನವಾಗಿ ದೇಹ ಹಾಳಾಗಲು ಪ್ರಾರಂಭವಾಗುತ್ತದೆ. ಇದರಿಂದ ದೇಹದ ಹಾರ್ಮೋನ್ ವ್ಯವಸ್ಥೆ ಹಾಳಾಗುತ್ತದೆ. ಜೀರ್ಣಕ್ರಿಯೆಯೂ ಕ್ಷೀಣಿಸುತ್ತದೆ. ಜ್ಞಾಪಕಶಕ್ತಿ, ಮಾನಸಿಕ ಚುರುಕುತನ ಕೂಡ ಕಡಿಮೆಯಾಗುತ್ತದೆ. ಮಾನಸಿಕ ಸಮಸ್ಯೆಗಳು ಬರಬಹುದು. ಜೊತೆಗೆ ಚಯಾಪಚಯ ಕಡಿಮೆಯಾಗುತ್ತದೆ, ಇದರಿಂದ ದೇಹದ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ. ನಿದ್ರೆ…

Read More

ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ಹೋಗಿದ್ದರು. ಇದೀಗ ಅವರು ದೊಡ್ಮನೆಗೆ ಹೋಗಲು ಕಿಚ್ಚ ಸುದೀಪ್ ಅವರ ಬಳಿ ಮತ್ತೊಮ್ಮೆ ಅವಕಾಶ ಕೇಳಿದ್ದಾರೆ. ಮನೆ ಒಳಗೆ ಹೋಗಬೇಕಾಗುವಾಗ ನನ್ನ ಸಂಸ್ಥೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇತ್ತು. ನನ್ನ ಪತ್ನಿ ಹಾಗೂ ತಂಡದವರನ್ನು ನಂಬಿ ನನ್ನ ಕಂಪನಿ ಕೊಟ್ಟು ಹೋದೆ. ಗೆಳೆಯರು ಇದನ್ನು ತುಂಬಾ ಮಿಸ್ಯೂಸ್ ಮಾಡಿಕೊಂಡರು. ಯಾವಾಗ ಕಷ್ಟ ಆಗುತ್ತದೆ ಎಂದಾಗ ನನ್ನನ್ನು ಕರೆಯಿರಿ ಎಂದು ಹೇಳಿದ್ದೆ. ಅವರಿಗೆ ಆಗದ್ದೇ ಇದ್ದಾಗ ನನ್ನನ್ನು ಕರೆದರು. ನಾನು ಬಂದು ನನ್ನ ಕಂಟ್ರೋಲ್ ಗೆ ತೆಗೆದುಕೊಂಡೆ ಎಂದು ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಕಾರಣ ಏನು ಅನ್ನೋದನ್ನ ವಿವರಿಸಿದ್ದಾರೆ. ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗಲು ಕಿಚ್ಚ ಸುದೀಪ್ ಅವರ ಬಳಿ ಗೋಲ್ಡ್ ಸುರೇಶ್ ಕೇಳಿದ್ದಾರೆ. ಆದರೆ ಕಿಚ್ಚ ಸುದೀಪ್ ನೋ ಎಂದು ಹೇಳಿದ್ದು, ಚೈತ್ರಾನ ಒಂದು ದಿನ ಹೊರ ಬಿಟ್ಟು ಅವರನ್ನ ಕಂಟ್ರೋಲ್ ಮಾಡಕ್ಕೆ…

Read More

ಹೈದರಾಬಾದ್ : ಅಲ್ಲು ಅರ್ಜುನ್ ಅವರ ಹೈದರಾಬಾದ್ ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆಯ ಬಳಿಕ ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಮನೆ ಬಿಟ್ಟು ತೆರಳಿದ್ದಾರೆ ಎಂದು ಹೇಳಲಾಗಿದೆ. ಅಲ್ಲು ಅರ್ಜುನ್ ನಿವಾಸಕ್ಕೆ ಇಸ್ಮಾನಿಯಾ ಯೂನಿವರ್ಸಿಟಿ ಜಾಯಿಂಟ್ ಆ್ಯಕ್ಷನ್ ಕಮಿಟಿಯವರು ಈ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ದಾಳಿ ಬಳಿಕ ಅಲ್ಲು ಅರ್ಜುನ್ ಭಯಗೊಂಡಿದ್ದಾರೆ. ಅಲ್ಲು ಅರ್ಜುನ್ ಮಕ್ಕಳಾದ ಅಲ್ಲು ಅರ್ಹಾ, ಅಲ್ಲು ಅಯಾನ್ ಕಾರು ಹತ್ತಿ ವೇಗವಾಗಿ ಹೊರಟಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಈ ವರ್ಷ ‘ಪುಷ್ಪ 2’ ಚಿತ್ರದ ಮೂಲಕ ದೊಡ್ಡ ಯಶಸ್ಸು ಸಿಕ್ಕಿತ್ತು. ಆದರೆ, ಚಿತ್ರ ಪ್ರದರ್ಶನ್ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಅವರ ತಲೆಗೆ ಸುತ್ತಿದೆ. ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಆದರೂ ಅವರು ಜೈಲು ಸೇರುವ ಭೀತಿಯಲ್ಲಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಮೆಕ್ಸಿಕೊ: ಡಬ್ಲ್ಯೂ ಡಬ್ಲ್ಯೂಇ ಸೂಪರ್ ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ (66) ನಿಧನರಾಗಿದ್ದಾರೆ. ಡಿಸೆಂಬರ್ 20ರಂದು ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು. ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಲುಚಾ ಲಿಬ್ರೆ ಎಎಎ ವರ್ಲ್ಡ್ ವೈಡ್ ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದ ಡಬ್ಲ್ಯೂ ಡಬ್ಲ್ಯೂಇ ಸಮಾನವೆಂದು ಪರಿಗಣಿಸಲಾಗುತ್ತದೆ. ರೇ ಮಿಸ್ಟೀರಿಯೊ ಸೀನಿಯರ್ ಅವರು 1990 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ವ್ರೆಸ್ಲಿಂಗ್ ನ ಸ್ಟಾರ್ ಕೇಡ್ನಂತಹ ಈವೆಂಟ್ ಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬ್ರೆಜಿಲ್: 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಅಂಗಡಿಗೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಬ್ರೆಜಿಲ್ನ ಪ್ರವಾಸಿ ನಗರವಾದ ಗ್ರಾಮಡೊದಲ್ಲಿ ನಡೆದಿದೆ. ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿಯೂ ಸಾವನ್ನಪ್ಪಿದ್ದಾರೆ. ವಿಮಾನ ಪತನಗೊಂಡ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಈ ಬೆಂಕಿಯಿಂದ ಅನೇಕರು ಗಾಯಗೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ವಿಮಾನ ಹಲವು ಕಟ್ಟಡಗಳಿಗೆ ತಾಗಿಕೊಂಡು ಬಂದು ಅಂಗಡಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಒಟ್ಟು 12 ಜನರು ಗಾಯಗೊಂಡಿದ್ದಾರೆ. ಬೆಂಕಿ ಹಾಗೂ ಹೊಗೆಯಿಂದಾಗಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಉಸಿರಾಟದ ಸಮಸ್ಯೆ ಎದುರಿಸಬೇಕಾಯಿತು. ವಿಮಾನವು ಸ್ಥಳೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಹೇಳಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಮೈಸೂರು: ಭಾರತೀಯ ಜೈನ್ ಮಿಲನ್ ನ ಮೈಸೂರು  ಜೈನ್ ಮಿಲನ್  ಜಿನ ಭಜನೆಗೆ ಹೊಸ ರೂಪ ನೀಡಿದ್ದು, ಇದು ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ  ಶ್ರೀಗಳವರ ಕೊಡುಗೆ ಇದಾಗಿದೆ ಎಂದು ಭಾರತೀಯ ಜೈನ ಮಿಲನ್ ನ ರಾಶಿಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ  ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು. ಅವರಿಂದು ಭಾರತೀಯ ಜೈನ್  ಮಿಲನ್ ವಲಯ — 8 ರ ಮೈಸೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಮ್ಮ  ಜಿನಭಜನೆಗಳು,ಜೈನ ಸಂಸ್ಕಾರ ,ಸಂಸ್ಕೃತಿಯನ್ನು ಉಳಿಸುವಂತಹ ಕೆಲಸ ಮೈಸೂರು ಜೈನ ಮಿಲನ್ ಮಾಡುತ್ತಿದೆ, ಇದಕ್ಕೆ ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ ಶ್ರೀ ಗಳವರ ಕೊಡುಗೆ ಅವಿಸ್ಮರಣೆಯ, ಕಳೆದು ಬಾರಿ ಎಲ್ಲಾ ಜೈನ ಮಠಗಳಲ್ಲಿ ಜಿನಭಜನೆಗಳು  ನಡೆದಿದ್ದು, ಎಲ್ಲಾ ಭಟ್ಟಾರಕರು ಸಹಕಾರ ನೀಡಿದ್ದಾರೆ. ಇದರಿಂದ ಜನ ಖುಷಿ ಪಡುತ್ತಿದ್ದಾರೆ ಎಂದರು.  ಬಹುಮಾನಕ್ಕಾಗಿ ಹಾಡುವುದು ಬೇಡ, ಸ್ಪರ್ಧೆಗಾಗಿ ಹಾಡಿ…

Read More

ತುಮಕೂರು: ನಗರದ ಪ್ರಸಿದ್ಧ ದೇವನೂರು ಚರ್ಚ್ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಚರ್ಚಿನ ಸುತ್ತಮುತ್ತ ಬಣ್ಣ ಬಣ್ಣದ ಲೈಟಿಂಗ್‌ ಗಳಿಂದ ಆಕರ್ಷಕವಾಗಿ ಸಿಂಗಾರಗೊಳ್ಳಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಚರ್ಚಿನ ಕಾರ್ಯದರ್ಶಿ ಹೇಮಂತ್ ಅವರು, “ಕ್ರಿಸ್ಮಸ್ ಹಬ್ಬವು ಯೇಸು ಕ್ರಿಸ್ತರ ಜನ್ಮದಿನವನ್ನು ಸ್ಮರಿಸುವ ಪ್ರಮುಖ ದಿನ. ಹಬ್ಬದ ಮಹತ್ವವನ್ನು ನೆನಪಿಸಿಕೊಳ್ಳಲು ಚರ್ಚಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ” ಎಂದು ಹೇಳಿದರು. ಹಬ್ಬದ ದಿನದ ಕಾರ್ಯಕ್ರಮಗಳು: ಬೆಳಿಗ್ಗೆ 8: ಯೇಸು ಕ್ರಿಸ್ತನ ಆರಾಧನೆ. ಬೆಳಿಗ್ಗೆ 11:00 – ಸಂಜೆ 7:00: ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೇಕ್ ಕಟಿಂಗ್, ಬಡವರಿಗೆ ಬಟ್ಟೆ ವಿತರಣೆ, ಮತ್ತು ಆರ್ಥಿಕ ಸಹಾಯ. ಸಮುದಾಯದ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಸಂತೋಷವನ್ನು ಹಂಚಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಚರ್ಚಿನ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದು, ಸಮಾರಂಭದ…

Read More

ತುಮಕೂರು: ಕೊರಟಗೆರೆ ತಾಲ್ಲೂಕಿನ ವಿವಿಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯಿಂದ ವಶ ಪಡಿಸಿಕೊಂಡಿದ್ದ ಮದ್ಯ ನಾಶ ಪಡಿಸಲಾಯಿತು. ಕಳೆದ ಸುಮಾರು ವರ್ಷಗಳಿಂದ ಚುನಾವಣೆ ಸಮಯದಲ್ಲಿ ಸೇರಿದಂತೆ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ 7 ಪ್ರಕರಣಗಳು ಹಾಗೂ ಅಬಕಾರಿ ಇಲಾಖೆಯ 5 ಪ್ರಕರಣಗಳಲ್ಲಿ ಸುಮಾರು ಮದ್ಯ ವಶಕ್ಕೆ ಪಡೆಯಲಾಗಿತ್ತು. 64 ಲೀಟರ್ ನಷ್ಟು ಮದ್ಯ ಮತ್ತು 2 ಲೀಟರ್ ಬಿಯರ್ ಸೇರಿ 30 ಸಾವಿರ ಬೆಲೆಯ ಮದ್ಯವನ್ನು ತಾಲ್ಲೂಕಿನ ಬೋಡಬಂಡೆನಹಳ್ಳಿ ಬಳಿ ಇರುವ ಕಸವಿಲೇವಾರಿ ಘಟಕದಲ್ಲಿ ದೀಪಕ್ ನೇತೃತ್ವದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಆದೇಶದಂತೆ ಮದ್ಯ ನಾಶ ಮಾಡಲಾಯಿತು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಸರಗೂರು: ದೇವರ ಹೆಸರು ಹೇಳಿದರೆ ಮುಕ್ತಿ ಸಿಗುತ್ತದೆ. ಅಂಬೇಡ್ಕರ್ ಹೆಸರು ಹೇಳಿದರೆ ಮುಕ್ತಿ ಸಿಗಲ್ಲ ಎಂದರೆ, ಇದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾಡಿದ ಅವಮಾನ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಕಿಡಿಕಾರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಡದೇ ಇದ್ದಿದ್ದರೆ ಅಮಿತ್ ಶಾ ಗೃಹ ಮಂತ್ರಿಯೂ ಆಗುತ್ತಿರಲಿಲ್ಲ. ಆದರೆ ಇಂದು ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆಗ್ರಹಿಸಿದರು. ಗೃಹ ಸಚಿವ ಅಮಿತ್ ಶಾ ಎದುರಾಳಿ ಪಕ್ಷವನ್ನು ಎದುರಿಸುವ ಸಲುವಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಂಡಿದ್ದಾರೆ. ಮತ್ತೊಂದು ಪಕ್ಷವನ್ನು ಮಣಿಸಲು ಬಾಬಾ ಸಾಹೇಬರನ್ನು ಬಳಸಿಕೊಂಡರೆ ಸಹಿಸಲು ಅದನ್ನು ಸಾಧ್ಯವಿಲ್ಲ .ವಿವಾದ ಕಿಡಿ ಅಕ್ಷಮ್ಯ ಅಪರಾಧ. ಈ ಮೊಂಡುತನದ ಹೇಳಿಕೆಯನ್ನು…

Read More

ತುಮಕೂರು : ನಗರದ ತಿಲಕ್ ಪಾರ್ಕ್ ಪೊಲೀಸರು ಪತ್ರಕರ್ತನ ಸೋಗಿನಲ್ಲಿ ಗಾಂಜಾ ಸಾಗಿಸುತ್ತಿದ್ದವನನ್ನು ಬಂಧಿಸಿ ಒಂದು ಕಾರು, ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಶೈಕ್ಷಣಿಕ ನಗರಿ ತುಮಕೂರು ನಗರದಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಅನ್ನೋ ಆರೋಪ ಪದೇ ಪದೇ ಕೇಳಿಬರ್ತಾನೆ ಇದೆ. ನಗರದಲ್ಲಿ ಗಾಂಜಾ ದಂಧೆಕೋರರು ಹೆಚ್ಚಾಗಿದ್ದು, ಬೇರೆ ಬೇರೆ ರೂಪದಲ್ಲಿ ಅವುಗಳನ್ನ ಮಾರಾಟ ಮಾಡ್ತಿದ್ದಾರೆ. ಹೀಗಾಗಿ ನಿಷೇಧಿತ ಗಾಂಜಾ ಮತ್ತು ಡ್ರಗ್ಸ್ ಸುಲಭವಾಗಿ ಯುವಕರ ಕೈ ಸೇರುತ್ತಿವೆ. ಇದರಿಂದ ಅಹಿತಕರ ಘಟನೆಗಳು ನಡೆಯೋದು ಕೂಡ ಹೆಚ್ಚಾಗಿದ್ದು, ನಗರದ ಶಾಂತಿಗೆ ಧಕ್ಕೆಯುಂಟಾಗ್ತಿದೆ ಅಂತಾ ತುಮಕೂರಿನ ನಾಗರಿಕರು ಆರೋಪಿಸುತ್ತಿದ್ದರು. ಅದರಲ್ಲಿಯೂ ನಗರದ ತಿಲಕ್ ಪಾರ್ಕ್ ಮತ್ತು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೇ ಈ ರೀತಿ ಪ್ರಕರಣಗಳು ಬೆಳಕಿಗೆ ಬರ್ತಿದ್ವು. ಹೀಗಾಗಿ ಇಂತಹ ಕ್ರಿಮಿಗಳನ್ನ ಮಟ್ಟಹಾಕಬೇಕು ಅಂತಾ ಪೊಲೀಸರು ಪಣತೊಟ್ಟಿದ್ದು, ಇದೀಗ ತಿಲಕ್ ಪಾರ್ಕ್ ಪೊಲೀಸರು ಭರ್ಜರಿ ಭೇಟೆಯನ್ನೇ ಆಡಿದ್ದಾರೆ. ಪತ್ರಕರ್ತನ ಸೋಗಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ದಂಧೆಕೋರನನ್ನ…

Read More