ತುಮಕೂರು: ನಗರದ ಪ್ರಸಿದ್ಧ ದೇವನೂರು ಚರ್ಚ್ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಚರ್ಚಿನ ಸುತ್ತಮುತ್ತ ಬಣ್ಣ ಬಣ್ಣದ ಲೈಟಿಂಗ್ ಗಳಿಂದ ಆಕರ್ಷಕವಾಗಿ ಸಿಂಗಾರಗೊಳ್ಳಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಚರ್ಚಿನ ಕಾರ್ಯದರ್ಶಿ ಹೇಮಂತ್ ಅವರು, “ಕ್ರಿಸ್ಮಸ್ ಹಬ್ಬವು ಯೇಸು ಕ್ರಿಸ್ತರ ಜನ್ಮದಿನವನ್ನು ಸ್ಮರಿಸುವ ಪ್ರಮುಖ ದಿನ. ಹಬ್ಬದ ಮಹತ್ವವನ್ನು ನೆನಪಿಸಿಕೊಳ್ಳಲು ಚರ್ಚಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ” ಎಂದು ಹೇಳಿದರು.
ಹಬ್ಬದ ದಿನದ ಕಾರ್ಯಕ್ರಮಗಳು:
ಬೆಳಿಗ್ಗೆ 8: ಯೇಸು ಕ್ರಿಸ್ತನ ಆರಾಧನೆ.
ಬೆಳಿಗ್ಗೆ 11:00 – ಸಂಜೆ 7:00: ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೇಕ್ ಕಟಿಂಗ್, ಬಡವರಿಗೆ ಬಟ್ಟೆ ವಿತರಣೆ, ಮತ್ತು ಆರ್ಥಿಕ ಸಹಾಯ.
ಸಮುದಾಯದ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಸಂತೋಷವನ್ನು ಹಂಚಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚರ್ಚಿನ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದು, ಸಮಾರಂಭದ ಸಿದ್ಧತೆಯಲ್ಲಿ ಶ್ರಮಿಸಿದ್ದರು.
ವರದಿ: ನಂದೀಶ್ ನಾಯ್ಕ್ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx