ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ಹೋಗಿದ್ದರು. ಇದೀಗ ಅವರು ದೊಡ್ಮನೆಗೆ ಹೋಗಲು ಕಿಚ್ಚ ಸುದೀಪ್ ಅವರ ಬಳಿ ಮತ್ತೊಮ್ಮೆ ಅವಕಾಶ ಕೇಳಿದ್ದಾರೆ.
ಮನೆ ಒಳಗೆ ಹೋಗಬೇಕಾಗುವಾಗ ನನ್ನ ಸಂಸ್ಥೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇತ್ತು. ನನ್ನ ಪತ್ನಿ ಹಾಗೂ ತಂಡದವರನ್ನು ನಂಬಿ ನನ್ನ ಕಂಪನಿ ಕೊಟ್ಟು ಹೋದೆ. ಗೆಳೆಯರು ಇದನ್ನು ತುಂಬಾ ಮಿಸ್ಯೂಸ್ ಮಾಡಿಕೊಂಡರು. ಯಾವಾಗ ಕಷ್ಟ ಆಗುತ್ತದೆ ಎಂದಾಗ ನನ್ನನ್ನು ಕರೆಯಿರಿ ಎಂದು ಹೇಳಿದ್ದೆ. ಅವರಿಗೆ ಆಗದ್ದೇ ಇದ್ದಾಗ ನನ್ನನ್ನು ಕರೆದರು. ನಾನು ಬಂದು ನನ್ನ ಕಂಟ್ರೋಲ್ ಗೆ ತೆಗೆದುಕೊಂಡೆ ಎಂದು ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಕಾರಣ ಏನು ಅನ್ನೋದನ್ನ ವಿವರಿಸಿದ್ದಾರೆ.
ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗಲು ಕಿಚ್ಚ ಸುದೀಪ್ ಅವರ ಬಳಿ ಗೋಲ್ಡ್ ಸುರೇಶ್ ಕೇಳಿದ್ದಾರೆ. ಆದರೆ ಕಿಚ್ಚ ಸುದೀಪ್ ನೋ ಎಂದು ಹೇಳಿದ್ದು, ಚೈತ್ರಾನ ಒಂದು ದಿನ ಹೊರ ಬಿಟ್ಟು ಅವರನ್ನ ಕಂಟ್ರೋಲ್ ಮಾಡಕ್ಕೆ ಆಗುತ್ತಿಲ್ಲ. ನೀವು ಇಡೀ ಪ್ರಪಂಚ ನೋಡಿ ಬಂದವರು ನಿಮ್ಮನ್ನು ಬಿಟ್ಟರೆ ಅಷ್ಟೇ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx