Author: admin

ಬೀದರ್:  ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಜಾನುವಾರು ಅನುವಂಶಿಕ ಸಂಪನ್ಮೂಲಗಳ ಬ್ಯುರೋ (ನ್ಯಾಷನಲ್ ಬ್ಯುರೋ ಆಫ್ ಎನಿಮಲ್ ಜೆನೆಟಿಕ್ ರಿಸೊಸ್ರ್ಸ್), ಕರ್ನಾಲ್, ಹರಿಯಾಣದಲ್ಲಿ 2024ನೇ ಸಾಲಿನ ರಾಷ್ಟ್ರಮಟ್ಟದ ಜಾನುವಾರು ತಿಳಿ ಸಂರಕ್ಷಣೆ ಪ್ರಶಸ್ತಿಯನ್ನು ಬೀದರನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರವು ದೇವಣಿ ತಳಿ ಸಂರಕ್ಷಣೆಗಾಗಿ ಪಡೆದುಕೊಂಡಿದೆ ಎಂದು ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣ ತಿಳಿಸಿದರು. 23ನೇ ಡಿಸೆಂಬರ್.2024 ರಂದು ಕರ್ನಾಲ್, ಹರಿಯಾಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ (ರಾಷ್ಟ್ರೀಯ ಕೃಷಿಕರ ದಿನ) ಈ ಪ್ರಶಸ್ತಿಯನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನಾ ನಿರ್ದೇಶಕರಾದ ಡಾ. ಬಿ.ವಿ.ಶಿವಪ್ರಕಾಶ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ಪ್ರಕಾಶಕುಮಾರ ರಾಠೋಡ ಅವರು ಸ್ವೀಕರಿಸಿದ್ದಾರೆಂದರು. ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ), ಬೀದರವು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನೆ ಮತ್ತು ವಿಸ್ತರಣಾ…

Read More

ಬೆಳಗಾವಿ:  1999 ರಲ್ಲಿ  ಶ್ರೀ ರಮೇಶ್ ಕತ್ತಿ ಅವರ ಮಾರ್ಗದರ್ಶನದಲ್ಲಿ ಜೆ ಎಸ್ ಸಪ್ತಸಾಗರ  ಅವರ ಮನೆಯಲ್ಲಿ 300 ಸದಸ್ಯರಿಂದ ಪ್ರಾರಂಭವಾದ ಹುಲ್ಲೋಳಿಯ ಹರಿಹಂತ ಸೌಹಾದ೯ ಸಹಕಾರಿ ನಿ.  ಸಂಸ್ಥೆಯು 17675 ಸದಸ್ಯರ ಸಹಕಾರ ಹಾಗೂಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಇಂದು 25ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ಕಾಲಿಡುತ್ತಿದ್ದು ಈ ಬೆಳ್ಳಿಮೋತ್ಸವದ ಸಂಭ್ರಮಾಚರಣೆ  ಇದೇ 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಭರಮಪ್ಪಾ ಬಾ ಚೌಗಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಇನ್ನೊಬ್ಬ ಸದಸ್ಯ  ಪಿ.ಆರ್. ಚೌಗಲಾ ಅವರು ಮಾತನಾಡಿ,  ಸಂಸ್ಥೆಯು 25 ವಷ೯ಗಳ ಹಿಂದೆ  2,000 ಜನಸಂಖ್ಯೆ ಇರುವ ಕುಗ್ರಾಮದಲ್ಲಿ ಜನರ ಆರ್ಥಿಕ ಮಟ್ಟ ಸುಧಾರಣೆಗಾಗಿ ಪ್ರಾರಂಭವಾಯಿತು.  ಈ ಸಂಸ್ಥೆಯು ಇಂದು 25ನೇ ವರ್ಷಕ್ಕೆ ಕಾಲಿಡುತ್ತಿದ್ದು ಆದುದರಿಂದ ಬೆಳ್ಳಿ ಮಹೋತ್ಸವವನ್ನು  ಆಚರಿಸುತ್ತಿದೆ.  ಪ್ರಮುಖವಾಗಿ ಈ ಬೆಳ್ಳಿ ಮಹೋತ್ಸವದ ಸವಿನೆನಪಿಗಾಗಿ ಬ್ಯಾಂಕಿನ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಹಾಗೂ ಕ್ಯಾಶ್ ಬ್ಯಾಗ್ ವಿತರಣೆ ಮಾಡಲಾಗುವುದು . ಒಂದು ಸಾವಿರ ಶೇರುಬಂಡವಾಳ ಹೊಂದಿದ ಸದಸ್ಯರಿಗೆ…

Read More

ಉದ್ಯೋಗ ಖಾತ್ರಿ ಯೋಜನೆ ಕೃಷಿ ಕಾರ್ಮಿಕರು ಹಾಗೂ ರೈತರಿಗೆ ಅನುಕೂಲವಾಗಲಿ ಎಂದೂ ಸರ್ಕಾರ ಜಾರಿಗೆತಂದಿತ್ತು, ಆದರೆ ಕಾರ್ಮಿಕರಿಗೆ ಉದ್ಯೋಗ ನೀಡದೆ ಯಂತ್ರಗಳಿಂದ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಐ.ಡಿ. ಹಳ್ಳಿ ಪಂಚಾಯತಿ ಕೆರೆ ಹೂಳು ಎತ್ತಲು ಕಾರ್ಮಿಕರಿಗೆ ಆದ್ಯತೆ ನೀಡಿದರಿಂದ ಇಲ್ಲಿ ಹೆಚ್ಚು ಮಹಿಳಾ ಕಾರ್ಮಿಕರು ಕಾಳಜಿಯಿಂದ ಮಾಡುತ್ತಿರುವುದು ಕಂಡು ಬಂದಿದೆ, ಎಲ್ಲಾ ಕಡೆ ಕೆರೆ — ಕಟ್ಟೆ ಹೂಳು ಎತ್ತುವ ಕೆಲಸ ನೀಡಿದ್ದರು ಆದರೆ ಕಾರ್ಮಿಕರಿಗೆ ಕೆಲಸ ನೀಡದೆ . ಯಂತ್ರದಿಂದ (ಜೆ.ಸಿ.ಬಿ.) ಮಾಡಿಸುವ ಹಣ ರುಚಿ ನೋಡಿರುವ ಗುತ್ತಿಗೆದಾರರಿಗೆ ನೀಡುತ್ತಿರುವುದರಿಂದ ನರೇಗ ಯೋಜನೆ ಹಳ್ಳ ಹಿಡಿಸುತ್ತಿರುವುದು ಯಾರು ಎಂಬುದು ಗಮನಿಸಿದವರಿಗೆ ತಿಳಿಯುತ್ತದೆ. ಇನ್ನು ನರೇಗ. ಯೋಜನೆ ರೈತರಿಗೆ ಆದ್ಯತೆ ನೀಡುವುದರಿಂದ ಕೃಷಿಯಲ್ಲಿ ನಷ್ಟ ಹೊಂದಿದವರು, ಈ ಯೋಜನೆಯಲ್ಲಿ ಸುಧಾರಣೆ ಆಗಲಿ ಎಂದರೆ ಇದರಲೂ ರೈತರಿಗೆ ಆದ್ಯತೆ ನೀಡದೆ, ನರೇಗ ಯೋಜನೆಯಲ್ಲಿ ಹಣ ರುಚಿ ನೋಡಿರುವ ಗುತ್ತಿಗೆದಾರರು  ಕೆಲಸದ ಒತ್ತಡದಿಂದ ಇರುವ ಜಮೀನ್ದಾರರ  ಜಮೀನಿನಲ್ಲಿ,  ನರೇಗ ಯೋಜನೆ ಬಗ್ಗೆ ಅರಿವು ಇಲ್ಲದ ರೈತರ…

Read More

ಹೊಸಪೇಟೆ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವಾಗಿದ್ದು, ಈ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ 73 ಪ್ರಯಾಣಿಕರನ್ನು ಪೊಲೀಸರು ತಪಾಸಣೆ ನಡೆಸಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು 90 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿರುವುದಾಗಿ ದೂರು ನೀಡಿದ ನಂತರ ಪೊಲೀಸರು ಬಸ್ಸಿನಲ್ಲಿದ್ದ 73 ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದಾರೆ. ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬಸ್ಸಿನಲ್ಲಿರುವವರೇ ಯಾರೋ ತನ್ನ ಚಿನ್ನ ಎಗರಿಸಿದ್ದಾರೆ ಎಂದು ಮಹಿಳೆ ಹೇಳಿದ್ದು, ಬಸ್ ನ್ನು ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಹೋಗಲು ಹೇಳಿದ್ದಾರೆ. ಅದರಂತೆ ಬಸ್ ಚಾಲಕ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದು, ಪೊಲೀಸರು ಎಲ್ಲಾ ಪ್ರಯಾಣಿಕರ ಸಾಮಾನುಗಳನ್ನು ಹುಡುಕಿದರೂ ಕದ್ದ ಚಿನ್ನ ಪತ್ತೆಯಾಗಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯಾಣಿಕರನ್ನು ಸಮಾಧಾನಪಡಿಸಿ ಅದೇ ಬಸ್ನಲ್ಲಿ ಕೊಪ್ಪಳಕ್ಕೆ ವಾಪಸ್ ಕಳುಹಿಸಿದ್ದಾರೆ. ಪಟ್ಟಣ ಪೊಲೀಸ್…

Read More

ತಿಪಟೂರು: ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿಯಲ್ಲಿ ತಿಪಟೂರು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರಾದ ಪವನ್ ರವರ ಸಮ್ಮುಖದಲ್ಲಿ ತಾಲ್ಲೂಕಿನ ಮಾದರಿ ಕೃಷಿ ರೈತರಿಗೆ ಅನುದಾನ ಮಂಜುರಾತಿ ಪತ್ರದ ವಿತರಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕರಾದ ಪವನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ವಿಶೇಷವಾಗಿ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ರಾಜ್ಯದ ಎಲ್ಲ ರೈತಾಪಿ ವರ್ಗದವರನ್ನು ಮಾದರಿ ಕೃಷಿ ರೈತರನ್ನಾಗಿ ಬದಲಿಸಲು ಅವಿರತ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು. ಇದರೊಟ್ಟಿಗೆ ಕೃಷಿ ಇಲಾಖೆ ವತಿಯಿಂದ ತಾಲ್ಲೂಕಿನ ರೈತರು ಕೃಷಿ ಯಂತ್ರೋಪಕರಣದ ಖರೀದಿಗೆ ಹಾಗೂ ಸಿರಿಧಾನ್ಯ ಬೆಳೆಗಳಿಗೆ ಸಿಗುವ ಅನುದಾನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಮಾತನಾಡಿ, ಸಂಸ್ಥೆಯು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಕೃಷಿ ವಿಭಾಗದಲ್ಲಿ ರೈತರನ್ನು ಮಾದರಿ ಕೃಷಿ ರೈತರನ್ನಾಗಿ ಬದಲಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ…

Read More

ತುಮಕೂರು : ಒಂದು ಸತ್ಯ ರೀ, ಸಿ.ಟಿ. ರವಿ ಏನ್ ಮಾಡಿದ್ದಾರೆ. ಏನ್ ಮಾಡಿಲ್ಲ ಅನ್ನೊದನ್ನ ತೀರ್ಮಾನ ಅನ್ನೋರು ವಿಧಾನ ಪರಿಷತ್ತಿನ ಸಭಾಪತಿಗಳು. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಎಷ್ಟು ಕಸ್ಟೋಡಿಯನ್ನೋ ಅದೇ ರೀತಿ ಪಾರ್ಲಿಮೆಂಟ್ ನಲ್ಲಿ ನಮ್ಮ ಸ್ವೀಕರ್ ಅಷ್ಟೇ ಕಸ್ಟೋಡಿಯನ್. ಅವರ ತೀರ್ಮಾನ, ಅವರು ಏನ್ ಕೊಟ್ಟಿದ್ದಾರೋ ಸರಿಯಾಗಿ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ, ಆದರೆ ಸಿ.ಟಿ.ರವಿ ಏನಾದ್ರು ಆ ರೀತಿಯಾಗಿ ಮಾತನಾಡಿದ್ದಾರೆ ಅನ್ನೋದು ನಿಮ್ಮ ಪತ್ರಿಕೆಗಳಲ್ಲಿ ನೋಡಿದಿನಿ ಎಂದರು. ಅದು ನನಗೆ ಅನ್ನಿಸ್ತದೆ ಆತ ಒಬ್ಬ ಬುದ್ದಿವಂತ ರಾಜಕಾರಣಿ. ಆ ಮಟ್ಟಕ್ಕೆ ಮಾತನಾಡ್ತಾನೆ ಅನ್ನೋದು ನನಗೆ ಗೊತ್ತಿಲ್ಲ ಎಂದರು. ಅದನ್ನ ತೀರ್ಮಾನ ಮಾಡಬೇಕಾದವರು ಸಭಾಪತಿ ಬಸವರಾಜ್ ಹೊರಹಟ್ಟಿ ಮಾಡ್ತಾರೆ. ಅದು ಆದ ಮೇಲೆ ಅವರನ್ನ ಕರೆದುಕೊಂಡು ಹೋಗಿ ಮಾನಸಿಕ ಹಿಂದೆ ಇದೆಯಲ್ಲ. ಅದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರೋದಿಲ್ಲ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು:  ಈಗಾಗಲೇ ಬೆಂಗಳೂರು ಹಾಗೂ ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವೇಳೆ ಆದಂತಹ  ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೆ. ಈ ಕುರಿತು ಸವಿಸ್ತಾರವಾಗಿ ಪತ್ರವನ್ನು ಸಹ ಬರೆದಿದ್ದೆ. ಎಷ್ಟು ಕಾಮಗಾರಿ ಆಗಿದೆ ಎಂಬ ಬಗ್ಗೆ ಎಲ್ಲವನ್ನು ಹೇಳಿದ್ದೆ.  ನವೆಂಬರ್ 20ರಂದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಹೆದ್ದಾರಿಯ ಬಗ್ಗೆ ಸಂಪೂರ್ಣ ಎಂಟು ಹತ್ತು ಪೇಜ್ ವರದಿಯನ್ನು ನಮ್ಮ ಅಧಿಕಾರಿಗಳು ನೀಡಿದ್ದರು.  ಮೂರು ವರ್ಷದಲ್ಲಿ 256 ಜನ ಸಾವನಪ್ಪಿದ್ದರು. ಎಲ್ಲಿ ಅಪಘಾತಗಳು ಆಗುತ್ತಿದ್ದವು  ಅದೇ ಸ್ಥಳದಲ್ಲಿ ಪದೇ ಪದೇ ಆಗುತ್ತಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಎರಡು ದಿನಗಳ ಹಿಂದೆ ನೆಲಮಂಗಲ ಕಾರಿನ ಮೇಲೆ ಟ್ರಕ್ ಉರುಳಿ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟ ಪ್ರಕರಣದ ಹಿನ್ನೆಲೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನವರಿ ಎರಡರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ನಡೆಸಿ, ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒತ್ತಡ…

Read More

ಪಾವಗಡ: ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟು, ರಸ್ತೆ ತುಂಬಾ ಕೊಳಚೆ ನೀರು ಹರಿದಾಡುತ್ತಿರುವ ಘಟನೆ ಪಾವಗಡ ತಾಲ್ಲೂಕಿನ ಕೋಟಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಚರಂಡಿ ವ್ಯವಸ್ಥೆ ಇಲ್ಲದ ಕೊಳಚೆ ನೀರು ರಸ್ತೆ ತುಂಬಾ ಹರಿಯುತ್ತಿದೆ ಇದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಸ್ತೆಯಲ್ಲೇ ಚರಂಡಿಯ ಕೊಳಚೆ ನೀರು ಹರಿದಾಡುತ್ತಿರುವುದರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕ್ಷಣವೇ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಪುಣೆ: ಫುಟ್ಪಾತ್ ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ವೊಂದು ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ವೈಭವಿ ಪವಾರ್ (1), ವೈಭವ್ ಪವಾರ್ (2) ಮತ್ತು ವಿಶಾಲ್ ಪವಾರ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ವಘೋಲಿ ಪ್ರದೇಶದ ಫುಟ್ಪಾತ್ನಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ನಂತರ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಶ್ನಂದ್ ಫಾಟಾ ಪ್ರದೇಶದ ಬಳಿಯ ಫುಟ್ ಪಾತ್ ನಲ್ಲಿ ಹಲವರು ಮಲಗಿದ್ದರು, ಬಹುತೇಕ ಮಂದಿ ದಿನಗೂಲಿ ಕಾರ್ಮಿಕರಾಗಿದ್ದಾರೆಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬಹುಸಂಸ್ಕೃತಿಯ ನಮ್ಮ ದೇಶದ ಸಂವಿಧಾನ ಜನಜೀವನ ವಿಧಾನದ ರಕ್ಷಣೆ ಮತ್ತು ಅದರ ಬೆಳವಣಿಗೆ ಆಧಾರದಲ್ಲಿ ರೂಪಿತಗೊಂಡಿದೆ. ಕಾಲದ ಅಗತ್ಯಾನುಸಾರ ಕೆಲ ಪ್ರಗತಿ ಪರ ಮತ್ತು ಜೀವಪರ ಹೊಸತು ಅಂಶಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳುವ ಶಕ್ತಿ ಕೂಡ ಅದಕ್ಕಿದೆ. ಹೀಗಾಗಿ ಹಲವು ಪ್ರಮುಖ ಸಂದರ್ಭದಲ್ಲಿ ಕಾಲದ ಅಗತ್ಯಾನುಸಾರ ತಿದ್ದುಪಡಿ ಕೂಡ ಸಾಧ್ಯವಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯ ಸಂವಿಧಾನದ ಮೂಲ ಧರ್ಮ. ಹೀಗಾಗಿ ಸಂವಿಧಾನ ನಮ್ಮ ದೇಶದ ರಾಜಧರ್ಮವೇ ಆಗಿದೆ. ಇದರ ಮೇಲೆ ದುರಾಕ್ರಮಣದ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮಾತುಗಳ ಹುನ್ನಾರದ ಹಿಂದಿರುವ ಮೂಲ ಪ್ರೇರಣಾ ಶಕ್ತಿ ನಿರಂಕುಶ ಪ್ರಭುತ್ವದ ಪ್ರತಿಷ್ಠಾನ ಮಾಡುವ ಸಂಕಲ್ಪ ತೊಟ್ಟ ಸಂಘ ಪರಿವಾರದ್ದು. ಅದರ ರಾಜಕೀಯ ಘಟಕ ಭಾಜಪ ಇದನ್ನು ಕಾರ್ಯರೂಪಕ್ಕೆ ತರಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸಂವಿಧಾನ ಕರಡು ಸಮಿತಿ ಅಧ್ಯಕ್ಷ, ಸಂವಿಧಾನ ಶಿಲ್ಪಿ ಎಂದೇ ಹೆಸರಾದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು…

Read More