ತುಮಕೂರು : ಒಂದು ಸತ್ಯ ರೀ, ಸಿ.ಟಿ. ರವಿ ಏನ್ ಮಾಡಿದ್ದಾರೆ. ಏನ್ ಮಾಡಿಲ್ಲ ಅನ್ನೊದನ್ನ ತೀರ್ಮಾನ ಅನ್ನೋರು ವಿಧಾನ ಪರಿಷತ್ತಿನ ಸಭಾಪತಿಗಳು. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಎಷ್ಟು ಕಸ್ಟೋಡಿಯನ್ನೋ ಅದೇ ರೀತಿ ಪಾರ್ಲಿಮೆಂಟ್ ನಲ್ಲಿ ನಮ್ಮ ಸ್ವೀಕರ್ ಅಷ್ಟೇ ಕಸ್ಟೋಡಿಯನ್. ಅವರ ತೀರ್ಮಾನ, ಅವರು ಏನ್ ಕೊಟ್ಟಿದ್ದಾರೋ ಸರಿಯಾಗಿ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ, ಆದರೆ ಸಿ.ಟಿ.ರವಿ ಏನಾದ್ರು ಆ ರೀತಿಯಾಗಿ ಮಾತನಾಡಿದ್ದಾರೆ ಅನ್ನೋದು ನಿಮ್ಮ ಪತ್ರಿಕೆಗಳಲ್ಲಿ ನೋಡಿದಿನಿ ಎಂದರು.
ಅದು ನನಗೆ ಅನ್ನಿಸ್ತದೆ ಆತ ಒಬ್ಬ ಬುದ್ದಿವಂತ ರಾಜಕಾರಣಿ. ಆ ಮಟ್ಟಕ್ಕೆ ಮಾತನಾಡ್ತಾನೆ ಅನ್ನೋದು ನನಗೆ ಗೊತ್ತಿಲ್ಲ ಎಂದರು.
ಅದನ್ನ ತೀರ್ಮಾನ ಮಾಡಬೇಕಾದವರು ಸಭಾಪತಿ ಬಸವರಾಜ್ ಹೊರಹಟ್ಟಿ ಮಾಡ್ತಾರೆ. ಅದು ಆದ ಮೇಲೆ ಅವರನ್ನ ಕರೆದುಕೊಂಡು ಹೋಗಿ ಮಾನಸಿಕ ಹಿಂದೆ ಇದೆಯಲ್ಲ. ಅದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರೋದಿಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx