ಬೆಳಗಾವಿ: 1999 ರಲ್ಲಿ ಶ್ರೀ ರಮೇಶ್ ಕತ್ತಿ ಅವರ ಮಾರ್ಗದರ್ಶನದಲ್ಲಿ ಜೆ ಎಸ್ ಸಪ್ತಸಾಗರ ಅವರ ಮನೆಯಲ್ಲಿ 300 ಸದಸ್ಯರಿಂದ ಪ್ರಾರಂಭವಾದ ಹುಲ್ಲೋಳಿಯ ಹರಿಹಂತ ಸೌಹಾದ೯ ಸಹಕಾರಿ ನಿ. ಸಂಸ್ಥೆಯು 17675 ಸದಸ್ಯರ ಸಹಕಾರ ಹಾಗೂಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಇಂದು 25ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ಕಾಲಿಡುತ್ತಿದ್ದು ಈ ಬೆಳ್ಳಿಮೋತ್ಸವದ ಸಂಭ್ರಮಾಚರಣೆ ಇದೇ 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಭರಮಪ್ಪಾ ಬಾ ಚೌಗಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ಇನ್ನೊಬ್ಬ ಸದಸ್ಯ ಪಿ.ಆರ್. ಚೌಗಲಾ ಅವರು ಮಾತನಾಡಿ, ಸಂಸ್ಥೆಯು 25 ವಷ೯ಗಳ ಹಿಂದೆ 2,000 ಜನಸಂಖ್ಯೆ ಇರುವ ಕುಗ್ರಾಮದಲ್ಲಿ ಜನರ ಆರ್ಥಿಕ ಮಟ್ಟ ಸುಧಾರಣೆಗಾಗಿ ಪ್ರಾರಂಭವಾಯಿತು. ಈ ಸಂಸ್ಥೆಯು ಇಂದು 25ನೇ ವರ್ಷಕ್ಕೆ ಕಾಲಿಡುತ್ತಿದ್ದು ಆದುದರಿಂದ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ. ಪ್ರಮುಖವಾಗಿ ಈ ಬೆಳ್ಳಿ ಮಹೋತ್ಸವದ ಸವಿನೆನಪಿಗಾಗಿ ಬ್ಯಾಂಕಿನ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಹಾಗೂ ಕ್ಯಾಶ್ ಬ್ಯಾಗ್ ವಿತರಣೆ ಮಾಡಲಾಗುವುದು . ಒಂದು ಸಾವಿರ ಶೇರುಬಂಡವಾಳ ಹೊಂದಿದ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಹಾಗೂ ನೂರರು ಶೇರು ಬಂಡವಾಳ ಹೊಂದಿದ ಸದಸ್ಯರಿಗೆ ಒಂದು ಕ್ಯಾಶ್ ಬ್ಯಾಕ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆನಂದ್ ಚೌಗುಲಾ ಮಾತನಾಡಿ, ಅರಿಹಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಬೆಳ್ಳಿ ಹಬ್ಬದ ಮಹೋತ್ಸವ ಆಯೋಜಿಸಲಾಗಿದ್ದು ನಾಂದಣಿಯ ಪ.ಪೂ. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾಯ೯ ಮಹಾಸ್ವಾಮಿಗಳು, ಶ್ರವಣಬೆಳಗೊಳದ ಪ.ಪೂ.ಸ್ವಸ್ತಿ ಶ್ರೀ ಅಭಿನವ ಚಾರುಕೀತಿ೯ ಭಟ್ಟಾರಕ ಪಟ್ಟಾಚಾಯ೯ ಮಹಾಸ್ವಾಮಿಗಳು, ಹುಕ್ಕೇರಿಯ ಪ.ಪೂ. ಶ್ರೀ ಚಂದ್ರಶೇಖರ ಶಿವಾಚಾಯ೯ ಮಹಾಸ್ವಾಮಿಗಳು, ಕ್ಯಾರಗುಡ್ಡದ ಪ.ಪೂ. ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿಮಾಜಿ ಸಂಸದ ರಮೇಶ್ ಕತ್ತಿ ಅವರ ಅಧ್ಯಕ್ಷತೆಯಲ್ಲಿ, ಡಿ.ಸುಧಾಕರ್ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವರು ಕರ್ನಾಟಕ ಸರ್ಕಾರ ಇವರು ಹರಿಹಂತ ಸಭಾಭವನದ ಅಡಿಗಲ್ಲು ಅನಾವರಣ ಮಾಡಲಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರು ಬೆಳ್ಳಿ ನಾಣ್ಯವನ್ನು ವಿತರಣೆ ಮಾಡಲಿದ್ದು, ಡಿ. ಸುಧಾಕರ್ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವರು ಕರ್ನಾಟಕ ಸರ್ಕಾರ ಇವರು ಅರಿಹಂತ ಸಭಾಭವನದ ಅಡಿಗಲ್ಲು ಅನಾವರಣ ಮಾಡುವರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು ಅಭಯ್ ಪಾಟೀಲ್ ಅವರು ಸಂಸ್ಥೆಯ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಹುಕ್ಕೇರಿ ಶಾಸಕರು ನಿಖಿಲ್ ಕತ್ತಿ, ಚಿಕ್ಕೋಡಿ ಸಂಸದರು ಕು.ಪ್ರಿಯಾಂಕ ಸ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧಾನ್ಯ ಕುಮಾರ್ ಗುಂಡೆ, ಮಾಜಿ ಶಾಸಕರು ಬೆಳಗಾವಿ ಉತ್ತರ ಸಂಜಯ್ ಪಾಟೀಲ್, ಅತಿಥಿಗಳಾಗಿ ಜಗದೀಶ್ ಕವಟಿಗಿಮಠ, ಉತ್ತಮ ಪಾಟೀಲ್, ವಿನೋದ್ ದೊಡ್ಡಣ್ಣವರ್, ಪಾರೀಸ ಉಗಾರೆ, ರವಿಚಂದ್ರ ಪಾಟೀಲ ಉಪಸ್ಥಿತರಿರುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಾಹುಬಲಿ ಭ ನಾಗನೂರಿ, ಸದಸ್ಯರುಗಳಾದ Krwa ರವೀಂದ್ರ ಚ ಚೌಗಲಾ, ಜೈಪಾಲ ಸ ಚೌಗಲಾ. ರಾಮಪ್ಪ ನಾ ಗೋಟುರಿ. ಜಿನ್ನಪ್ಪ ಶಾ ಸಪ್ತಸಾಗರ, ಅಶೋಕ ಚಿಂ ಚೌಗಲಾ, ಪ್ರಕಾಶ್ ದೇ ಚೌಗಲಾ, ಪದ್ಮನಾಭ ಚೌಗಲಾ. ಬಾಬು ಅಕ್ಕಿವಾಟೆ, ಶೃತಿ ಅ ಪಾಟೀಲ್, ಸುಮತಿ ಜ ಚೌಗಲಾ, ಮಾಯಪ್ಪ ಹೂ ಹೊಳೆಪ್ಪಗೋಳ, ಬಸವರಾಜ ಪಾಟೀಲ್, ಬಾಳಪ್ಪ ಸಾ ಸಂಕೇಶ್ವರಿ, ಅರುಣ್ ಭೂ ಚೌಗಲಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx