Author: admin

ತುಮಕೂರು:  ಸೋಡಿಯಂ ಮೆಟಲ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಡ್ರೋನ್‌ ಪ್ರತಾಪ್ ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಜೈಲಿನಿಂದ ರಿಲೀಸ್ ಮಾಡಲಾಯಿತು. ಕಳೆದ 9 ದಿನಗಳ ಸೆರೆವಾಸದಿಂದ ಡ್ರೋನ್ ಪ್ರತಾಪ್ ಮುಕ್ತನಾಗಿದ್ದಾನೆ.  ಮಧುಗಿರಿ ಉಪಕಾರಾಗೃಹದಿಂದ ಹೊರಬಂದ ಡ್ರೋನ್ ಪ್ರತಾಪ್ ನೀರಿನಲ್ಲಿ ಸೋಡಿಯಂ ಸ್ಪೋಟಿಸಿ ಜೈಲು‌ ಸೇರಿದ್ದನು. ಮಧುಗಿರಿಯ ಜನಕಲೋಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ಸೋಡಿಯಂ ಸ್ಪೋಟಿಸಿದ್ದನು. ಮೊದಲು 3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರೋನ್ ಪ್ರತಾಪ್, ಬಳಿಕ 9 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದನು.  ಜೈಲಿನಿಂದ ಹೊರಬಂದು ಬೆಂಗಳೂರಿನತ್ತ ತೆರಳಿದ್ದಾನೆ. ಜೈಲಿಂದ ಹೊರಬಂದು ನ್ಯಾಯ ಬೇಕು ಎಂದು ಮಾಧ್ಯಮದವರ ಮುಂದೆ  ಡ್ರೋ‌ನ್ ಪ್ರತಾಪ್ ಅಳಲು ತೋಡಿಕೊಂಡನು.  ಮಧುಗಿರಿ ಉಪಕಾರಾಗೃಹದಿಂದ ಡ್ರೋನ್ ಪ್ರತಾಪ್ ಬಿಡುಗಡೆ ನಂತರ, ಒಂದೇ ಒಂದು ಪ್ರಶ್ನೇ ಕೇಳ್ತೀನಿ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ‌‌. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲಾ, ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು.…

Read More

ತುಮಕೂರು:  ತುಮಕೂರಿನ ವ್ಯಕ್ತಿಯೊಬ್ಬರು ವೀಡಿಯೋ ಕಾನ್ಫರೆನ್ಸ್ ಮೂಲಕವೇ ವಂಚನೆಗೆ ಒಳಗಾಗಿ ಬರೋಬ್ಬರಿ 19 ಲಕ್ಷ ರೂ. ಗಳನ್ನು ವ್ಯವಸ್ಥಿತವಾಗಿ ಕಳೆದುಕೊಂಡಿದ್ದು ವಿಚಿತ್ರವಾಗಿ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ತುಮಕೂರು ನಗರದ ಉಪ್ಪಾರಹಳ್ಳಿಯ ಸರ್ಕಾರಿ ನೌಕರ ಬಿ.ಎಸ್.ನಾಗಭೂಷಣ್ ವಂಚನೆಗೆ ಒಳಗಾದವರಾಗಿದ್ದಾರೆ.  ಹಣ ಕಳೆದುಕೊಂಡಿರುವ ಅವರು, ತುಮಕೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ . ಮುಂಬೈ ಕ್ರೈಂ ಬ್ರಾಂಚ್‌ ನ ಸಿಬ್ಬಂದಿ ಎಂದು ವಂಚನೆಗೆ ಒಳಗಾಗಿರುವ ನಾಗಭೂಷಣ್ ಗೆ ದೂರವಾಣಿ ಕರೆ ಮಾಡಿದ್ದಾನೆ. ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಇದನ್ನು ನಂಬಿದ ನಾಗಭೂಷಣ್, ಅರೋಪಿಗಳ ಬಳಿ ಮತ್ತೊಂದು ಸಿಮ್ ಕಾರ್ಡ್ ಇದ್ದು, ಆ ಸಿಮ್ ಕಾರ್ಡ್ ಅನ್ನು ಜನರಿಗೆ ಕಿರುಕುಳ ನೀಡಲು ಉಪಯೋಗಿಸಲಾಗುತ್ತಿದೆ. ನಿಮ್ಮ ಸಿಮ್ ಕಾರ್ಡ್ ಬಳಸಿ ಎರಡೂ ಪ್ರಕರಣಗಳಲ್ಲಿ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಮ್ಮನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ನಾಗಭೂಷಣ್ ಗೆ ಬೆದರಿಕೆಯೊಡ್ಡಿದ್ದಾನೆ. ಇದ್ರಿಂದ ಭಯಗೊಂಡ ನಾಗಭೂಷಣ್…

Read More

ನಾನು ನಿಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ;  ಎಂದಿಗೂ ತೊರೆಯುವುದಿಲ್ಲ; ನಾನು ಯುಗದ ಸಮಾಪ್ತಿ ಆಗುವವರೆಗೂ, ಎಲ್ಲಾ ಕ್ಷಣಗಳಲ್ಲಿಯೂ ನಾನು ನಿಮ್ಮ ಸಂಗಡ ಇರುತ್ತೇನೆ. ಇದು ನನ್ನ ವಾಗ್ದಾನ.                    — ಏಸುಕ್ರಿಸ್ತ  ಭೂಮಿ ಮೇಲೆ ಯಾವಾಗ ಧರ್ಮ ಕ್ಷೀಣವಾಗುತ್ತದೆ; ಪಾಪ ಹೆಚ್ಚಳವಾಗುತ್ತದೆ; ಆಗೆಲ್ಲಾ, ನೀತಿವಂತರನ್ನು ರಕ್ಷಿಸಲು; ದುಷ್ಟರನ್ನು ನಾಶ ಮಾಡಲು; ಧರ್ಮವನ್ನು ಮರು ಸ್ಥಾಪಿಸಲು; ನಾನು ಜನ್ಮ ತಾಳುತ್ತೇನೆ.               – ಪರಮಾತ್ಮ ಶ್ರೀ ಕೃಷ್ಣ 100 ಕೋಟಿಗೂ ಹೆಚ್ಚು ಕ್ರಿಶ್ಚಿಯನ್ನರು ವಿಶ್ವದಲ್ಲಿ ಇಂದು ಏಸುಕ್ರಿಸ್ತನ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಶುಭಾಶಯಗಳು.ಸರ್ವಧರ್ಮಿಯರಿಗಾಗಿ ಯೇಸು ಕ್ರಿಸ್ತನ ಜನನ; ಜೀವನ; ಮರಣ ಮತ್ತು ಪುನರುತ್ಥಾನ ಚರಿತ್ರೆ —   ಒಮ್ಮೆ ಓದಿ… ಭೂಮಿ ಮೇಲೆ ಮಾನವ, ಪ್ರಾಣಿ-ಪಕ್ಷಿಗಳ ಲಕ್ಷಾಂತರ ಜೀವರಾಶಿಗಳ ಸಂಕುಲಗಳು ಹುಟ್ಟುವ ಮುನ್ನವೇ  – ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು (ಪ್ರಕೃತಿ) ಇವುಗಳು ಸೃಷ್ಟಿಯಾಗಿದ್ದವು. ಪ್ರಕೃತಿ ತರವಾಯವಷ್ಟೇ, ಲಕ್ಷಾಂತರ ಜೀವರಾಶಿ ಸಂಕುಲಗಳು ಜನ್ಮ ತಾಳಿದ್ದು. ಆ…

Read More

ಬೆಳಗಾವಿ: ರಾಜ್ಯದ ತೆರಿಗೆದಾರರ ಹಣದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಐತಿಹಾಸಿಕ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭವನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಸಂಸದ ಜಗದೀಶ್ ಶೆಟ್ಟರ್ ಸ್ವಾತಂತ್ರ್ಯ ಪೂರ್ವದ ಭಾರತದ ಕಾಂಗ್ರೆಸ್‌ಗಿಂತ ಇಂದಿನ ಕಾಂಗ್ರೆಸ್‌ ಬಹಳ ಭಿನ್ನವಾಗಿದೆ. ಮಹಾತ್ಮ ಗಾಂಧಿ ಅವರನ್ನು ಗೌರವಿಸಲು ಉದ್ದೇಶಿಸಲಾಗಿದ್ದ ಈ ಕಾರ್ಯಕ್ರಮವು ಪಕ್ಷದ ಸಾಧನೆಗಳನ್ನು ಪ್ರದರ್ಶಿಸುವ ‘ನಕಲಿ ಗಾಂಧಿ’ಗಳ ಸಭೆಯಾಗಿ ಮಾರ್ಪಾಡಾಗಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಶಾಸಕ ಅಭಯ ಪಾಟೀಲ ಮಾತನಾಡಿ, ಮಹಾತ್ಮಾ ಗಾಂಧಿಯವರ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ 250 ಕೋಟಿ ಮತ್ತು ರಾಜ್ಯ ಸರ್ಕಾರದಿಂದ ರೂ. 500 ಕೋಟಿಗೆ ಮನವಿ ಸೇರಿದಂತೆ ಶತಮಾನೋತ್ಸವದ ಅಧಿವೇಶನದ ಅದ್ಧೂರಿ ಆಚರಣೆಯನ್ನು ಈ ಹಿಂದೆ ಪ್ರಸ್ತಾಪಿಸಿದ್ದೆ. ಆ ಸಮಯದಲ್ಲಿ ಕಾಂಗ್ರೆಸ್ ಯಾವುದೇ ಆಸಕ್ತಿ ತೋರಿಸಲಿಲ್ಲ, ಈಗ ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಹೊರಗಿಟ್ಟು ಇದನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು :  ನಗರದಲ್ಲಿ ಚಿರತೆಗಳು ಓಡಾಡುತ್ತಿವೆ ಎಂಬ ವಿಡಿಯೋ ಸಮೇತ   ಮೇಸೆಜ್  ವಾಟ್ಸಾಪ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ಉದ್ಯಾನವನಗಳಲ್ಲಿ ಓಡಾಡುವುದು ವಿರಳವಾಗುತ್ತಿದೆ. ಇತ್ತೀಚಿಗೆ  ಸಿದ್ದಗಂಗಾ ಮಠದ ಆವರಣದಲ್ಲಿ ಮತ್ತು ಸಪ್ತಗಿರಿ ಬಡವಾಣೆಯಲ್ಲಿ ಚಿರತೆಗಳು ಓಡಾಡಿರುವ ಸಿಸಿಟಿವಿ  ದೃಶ್ಯ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಅಕ್ಕ–ಪಕ್ಕದ ಏರಿಯಾದವರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ವಾಟ್ಸಾಪ್ ಮೆಸೆಜ್ ಹರಿದಾಡೋದಕ್ಕೆ ಶುರುವಾಗಿ 20 ದಿನಗಳೇ ಆಗಿದ್ದು, ಗೋಕುಲ ಬಡವಾಣೆ, ಸಿದ್ದರಾಮೇಶವರ ಬಡವಾಣೆ, ಮಂಜುನಾಥನಗರದ ಜನ ಬೆಳಗಿನ ಜಾವ ಹಾಗೇ ಸಂಜೆ ವಾಕ್ ಬರುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಇದಲ್ಲದೇ ಮಕ್ಕಳನ್ನ ಸಂಜೆ 6 ಗಂಟೆ ನಂತರ ಹೊರಗೆ ಕಳಿಸದಂತೆ ನಿಗಾವಹಿಸಿದ್ದಾರೆ. ಒಂದು ರೀತಿ  ಈ ಏರಿಯಾಗಳಲ್ಲಿ ಬೆಳಗ್ಗೆ ಸಂಜೆ 114 ಸೆಕ್ಷನ್ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಚಿರತೆಗಳು ಒಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಷ್ಟು ವೈರಲ್ ಆಗುತ್ತಿದ್ದರು. ಅಧಿಕಾರಿಗಳು ನಮಗೂ ಇದಕ್ಕೂ ಸಂಭಂಧವೇ ಇಲ್ಲ ಎನ್ನುವ ರೀತಿ ಇದ್ದಾರೆ.  ಬಡಾವಣೆಯ ಖಾಲಿ ಸೈಟ್…

Read More

ಪಾವಗಡ : ತಾಲೂಕಿನ ಗುಜ್ಜನಡು ಮುರಾರ್ಜಿ ಶಾಲೆಯ ಕಾಂಪೌಂಡ್ ಹಾಗೂ ದವಡಬೆಟ್ಟ ಗ್ರಾಮದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಗುಜ್ಜನಡು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಆಗ್ರಹಿಸಿದ್ದಾರೆ ಸೋಮವಾರ ಈ ವಿಚಾರವಾಗಿ ಪಾದಯಾತ್ರೆಯನ್ನು ಕೈಗೊಂಡ ಜೆಡಿಎಸ್ ನಾಯಕರುಗಳು ಮಧ್ಯಾಹ್ನ 4ಯ ಸಂದರ್ಭದಲ್ಲಿ ತಾಲೂಕಿನ ಗುಂಡಾರಲಹಳ್ಳಿ ಗ್ರಾಮದ ಬಳಿ ಆಗಮಿಸಿ ನಂತರ ಐದು ಗಂಟೆಗೆ ಪಾವಗಡ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟನೆ ನಡೆಸಿ ,ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ  ಅವರು, ತಾಲೂಕಿನಲ್ಲಿ ಕಳೆದ ಆರು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದೆ, ಸಣ್ಣ ಸಣ್ಣ ಕಾಮಗಾರಿಗಳನ್ನು ನಡೆಸಲು ವರ್ಷಾನುಗಟ್ಟಲೆ ಸಮಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ತಾಲೂಕು ಅಧ್ಯಕ್ಷ ಎನ್.ಎ.ಈರಣ್ಣ, ರಾಜ್ಯ ಉಪಾಧ್ಯಕ್ಷ ಎನ್ತಿಮಾರೆಡ್ಡಿ, ರಾಜ್ಯ ಜೆಡಿಎಸ್ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಸಾಯಿಸುಮನ ಹನುಮಂತರಾಯಪ್ಪ, ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರುಗಳು ಹಾಜರಿದ್ದರು.…

Read More

ಬೆಳಗಾವಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನಕ್ಕೀಗ ಶತಮಾನೋತ್ಸವ ಸಂಭ್ರಮ. ಈ ಸುಸಂದರ್ಭವನ್ನು ಐತಿಹಾಸಿಕವನ್ನಾಗಿಸಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇನ್ನೇನು ಅವಿಸ್ಮರಣೀಯಕ್ಕೆ ಕ್ಷಣಗಣನೆ ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯ ಪ್ರಮುಖ ಬೀದಿಗಳು ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಮಹನೀಯರ ವಿದ್ಯುತ್ ದೀಪಗಳ ಪ್ರತಿಕೃತಿಗಳು ಆಕರ್ಷಣೀಯವಾಗಿವೆ. ಮೈಸೂರು ದಸರಾ ದೃಶ್ಯ ವೈಭವ ನೆನಪಿಸುತ್ತಿದೆ.  ನಗರದ ಪ್ರಮುಖ ಸರ್ಕಲ್​ಗಳಲ್ಲಿ ಕಣ್ಮನ ಸೆಳೆಯುತ್ತಿರುವ ಲೈಟಿಂಗ್: ಕೇಂದ್ರ ಬಸ್ ನಿಲ್ದಾಣದಿಂದ‌, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ, ಕೆಎಲ್ ಇ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿವರೆಗೂ ಹಾಗೂ ಚನ್ನಮ್ಮ ವೃತ್ತದಿಂದ ಲಿಂಗರಾಜ ಕಾಲೇಜು ರಸ್ತೆ, ಸಂಭಾಜಿ ವೃತ್ತ, ಬಸವೇಶ್ವರ ವೃತ್ತ, ಕಾಂಗ್ರೆಸ್ ರಸ್ತೆ, ಉದ್ಯಮಬಾಗ್ ರಸ್ತೆಯಿಂದ ವಿಟಿಯುವರೆಗೆ, ಹಳೆ ಪಿ.ಬಿ.ರಸ್ತೆಯಿಂದ ಯಡಿಯೂರಪ್ಪ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳು, ಒಳ ರಸ್ತೆಗಳು ಸಂಜೆ ಆಗುತ್ತಿದ್ದಂತೆ ನೋಡುಗರನ್ನು ಕಣ್ಮನ ಸೆಳೆಯುತ್ತಿವೆ. ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಹಾಪುರುಷರು, ದೇವಾನುದೇವತೆಗಳು, ಐತಿಹಾಸಿಕ…

Read More

ಹುಬ್ಬಳ್ಳಿ: ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇಲ್ಲ ಎನ್ನುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ. ಸಭಾಪತಿ ತಮ್ಮ ಕೆಲಸ ಮಾಡಿದ್ದಾರೆ ಪೊಲೀಸರು ತನಿಖೆ ಮಾಡಬೇಕು ಎಂದರು. ಹಳೆ ಹುಬ್ಬಳ್ಳಿ ಠಾಣೆ ಇನ್ಸ್ ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ಪತ್ರ ಬರೆದ ವಿಚಾರವಾಗಿ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಬಳಿ ವರದಿ ತರಸಿಕೊಳ್ಳುತ್ತೇನೆ. ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬೆಂಗಳೂರು: ನಗರದಲ್ಲಿ ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೂಚಿಸಿದರು. ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ವರ್ಷ ಅಚ್ಚುಕಟ್ಟಾಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕ್ರಮ ವಹಿಸಲಾಗಿತ್ತು. ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರವಾಗಿರುವುದರಿಂದ ಯಾವುದನ್ನು ನಿರ್ಲಕ್ಷಿಸದೇ ,ಅತ್ಯಂತ ಜವಾಬ್ಧಾರಿಯುತವಾಗಿ ಬಂದೋಬಸ್ತ್ ಕೈಗೊಳ್ಳಬೇಕು ಎಂದರು. ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು. ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ…

Read More

ತುಮಕೂರು: ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದು ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು. “ಸುಶಾಸನ ಸಪ್ತಾಹ–ಪ್ರಶಾಸನ ಗ್ರಾಮಗಳ ಕಡೆಗೆ” ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರ್ಕಾರವು ಪ್ರತೀ ವರ್ಷ ಡಿಸೆಂಬರ್ ಮಾಹೆಯಲ್ಲಿ “ಸುಶಾಸನ ಸಪ್ತಾಹ–ಪ್ರಶಾಸನ ಗ್ರಾಮಗಳ ಕಡೆಗೆ” ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ದೇಶದ ನಾಗರಿಕರಿಗೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸೇರಿದಂತೆ ವಿವಿಧ ಸೇವೆಗಳ ಮಾಹಿತಿಯನ್ನು ನೀಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕಳೆದ 10 ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಬಂದಿವೆ. ಸಾರ್ವಜನಿಕರಿಗೆ ಸಕಾಲದೊಳಗೆ ಸೇವೆಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಆಡಳಿತವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ನಿವೃತ್ತ ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ ಮಾತನಾಡಿ, ಪಾರದರ್ಶಕತೆಯಿಂದ ಆಡಳಿತ ನಡೆಸುವುದು, ಸಮರ್ಪಕ ರೀತಿಯಲ್ಲಿ ಕಡತಗಳ ನಿರ್ವಹಣೆ ಮಾಡುವುದು,…

Read More