ತುಮಕೂರು : ನಗರದಲ್ಲಿ ಚಿರತೆಗಳು ಓಡಾಡುತ್ತಿವೆ ಎಂಬ ವಿಡಿಯೋ ಸಮೇತ ಮೇಸೆಜ್ ವಾಟ್ಸಾಪ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ಉದ್ಯಾನವನಗಳಲ್ಲಿ ಓಡಾಡುವುದು ವಿರಳವಾಗುತ್ತಿದೆ.
ಇತ್ತೀಚಿಗೆ ಸಿದ್ದಗಂಗಾ ಮಠದ ಆವರಣದಲ್ಲಿ ಮತ್ತು ಸಪ್ತಗಿರಿ ಬಡವಾಣೆಯಲ್ಲಿ ಚಿರತೆಗಳು ಓಡಾಡಿರುವ ಸಿಸಿಟಿವಿ ದೃಶ್ಯ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಅಕ್ಕ–ಪಕ್ಕದ ಏರಿಯಾದವರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ವಾಟ್ಸಾಪ್ ಮೆಸೆಜ್ ಹರಿದಾಡೋದಕ್ಕೆ ಶುರುವಾಗಿ 20 ದಿನಗಳೇ ಆಗಿದ್ದು, ಗೋಕುಲ ಬಡವಾಣೆ, ಸಿದ್ದರಾಮೇಶವರ ಬಡವಾಣೆ, ಮಂಜುನಾಥನಗರದ ಜನ ಬೆಳಗಿನ ಜಾವ ಹಾಗೇ ಸಂಜೆ ವಾಕ್ ಬರುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಇದಲ್ಲದೇ ಮಕ್ಕಳನ್ನ ಸಂಜೆ 6 ಗಂಟೆ ನಂತರ ಹೊರಗೆ ಕಳಿಸದಂತೆ ನಿಗಾವಹಿಸಿದ್ದಾರೆ. ಒಂದು ರೀತಿ ಈ ಏರಿಯಾಗಳಲ್ಲಿ ಬೆಳಗ್ಗೆ ಸಂಜೆ 114 ಸೆಕ್ಷನ್ ರೀತಿಯ ವಾತಾವರಣ ಸೃಷ್ಟಿಯಾಗಿದೆ.
ಚಿರತೆಗಳು ಒಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಷ್ಟು ವೈರಲ್ ಆಗುತ್ತಿದ್ದರು. ಅಧಿಕಾರಿಗಳು ನಮಗೂ ಇದಕ್ಕೂ ಸಂಭಂಧವೇ ಇಲ್ಲ ಎನ್ನುವ ರೀತಿ ಇದ್ದಾರೆ. ಬಡಾವಣೆಯ ಖಾಲಿ ಸೈಟ್ ಗಳಲ್ಲಿ ಬೆಳೆದು ನಿಂತಿರುವ ಪೊದೆಗಳಲ್ಲಿ ಎಂತಹ ದೊಡ್ಡ ಪ್ರಾಣಿ ಬಂದು ಅಡಗಿ ಕೂತರು ಗೊತ್ತಾಗಲ್ಲ,ಇದರಿಂದ ನಮಗೆ ಭಯದ ಆತಂಕ ಸೃಷ್ಟಿಯಾಗಿದೆ, ನಿವೇಶನಗಳಲ್ಲಿ ಬೆಳೆದು ನಿಂತಿರುವ ಬೆಲೆಗಳನ್ನ ಕ್ಲಿನ್ ಮಾಡಿಸದೆ ನಿವೇಶನ ಮಾಲೀಕರಿಗೆ ಯಾವುದೇ ನೋಟಿಸ್ ಕೋಡದೆ ಪಾಲಿಕೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಏರಿಯಾಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ ಚಿರತೆಗಳಿಗೆ ನಾಯಿಗಳೇ ಅಂತ್ಯಂತ ಪ್ರಿಯವಾದ ಆಹಾರ. ಅಧಿಕಾರಿಗಳು ಏರಿಯಾಗಳಿಗೆ ಭೇಟಿ ಕೊಟ್ಟು ಜನರಿಗೆ ಶುರುವಾಗಿರುವ ಆತಂಕ ದೂರಮಾಡಬೇಕು. ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx