ಪಾವಗಡ : ತಾಲೂಕಿನ ಗುಜ್ಜನಡು ಮುರಾರ್ಜಿ ಶಾಲೆಯ ಕಾಂಪೌಂಡ್ ಹಾಗೂ ದವಡಬೆಟ್ಟ ಗ್ರಾಮದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಗುಜ್ಜನಡು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಆಗ್ರಹಿಸಿದ್ದಾರೆ
ಸೋಮವಾರ ಈ ವಿಚಾರವಾಗಿ ಪಾದಯಾತ್ರೆಯನ್ನು ಕೈಗೊಂಡ ಜೆಡಿಎಸ್ ನಾಯಕರುಗಳು ಮಧ್ಯಾಹ್ನ 4ಯ ಸಂದರ್ಭದಲ್ಲಿ ತಾಲೂಕಿನ ಗುಂಡಾರಲಹಳ್ಳಿ ಗ್ರಾಮದ ಬಳಿ ಆಗಮಿಸಿ ನಂತರ ಐದು ಗಂಟೆಗೆ ಪಾವಗಡ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟನೆ ನಡೆಸಿ ,ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ಆರು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದೆ, ಸಣ್ಣ ಸಣ್ಣ ಕಾಮಗಾರಿಗಳನ್ನು ನಡೆಸಲು ವರ್ಷಾನುಗಟ್ಟಲೆ ಸಮಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ತಾಲೂಕು ಅಧ್ಯಕ್ಷ ಎನ್.ಎ.ಈರಣ್ಣ, ರಾಜ್ಯ ಉಪಾಧ್ಯಕ್ಷ ಎನ್ತಿಮಾರೆಡ್ಡಿ, ರಾಜ್ಯ ಜೆಡಿಎಸ್ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಸಾಯಿಸುಮನ ಹನುಮಂತರಾಯಪ್ಪ, ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರುಗಳು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx