ತುಮಕೂರು: ತುಮಕೂರಿನ ವ್ಯಕ್ತಿಯೊಬ್ಬರು ವೀಡಿಯೋ ಕಾನ್ಫರೆನ್ಸ್ ಮೂಲಕವೇ ವಂಚನೆಗೆ ಒಳಗಾಗಿ ಬರೋಬ್ಬರಿ 19 ಲಕ್ಷ ರೂ. ಗಳನ್ನು ವ್ಯವಸ್ಥಿತವಾಗಿ ಕಳೆದುಕೊಂಡಿದ್ದು ವಿಚಿತ್ರವಾಗಿ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ತುಮಕೂರು ನಗರದ ಉಪ್ಪಾರಹಳ್ಳಿಯ ಸರ್ಕಾರಿ ನೌಕರ ಬಿ.ಎಸ್.ನಾಗಭೂಷಣ್ ವಂಚನೆಗೆ ಒಳಗಾದವರಾಗಿದ್ದಾರೆ. ಹಣ ಕಳೆದುಕೊಂಡಿರುವ ಅವರು, ತುಮಕೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .
ಮುಂಬೈ ಕ್ರೈಂ ಬ್ರಾಂಚ್ ನ ಸಿಬ್ಬಂದಿ ಎಂದು ವಂಚನೆಗೆ ಒಳಗಾಗಿರುವ ನಾಗಭೂಷಣ್ ಗೆ ದೂರವಾಣಿ ಕರೆ ಮಾಡಿದ್ದಾನೆ. ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಇದನ್ನು ನಂಬಿದ ನಾಗಭೂಷಣ್, ಅರೋಪಿಗಳ ಬಳಿ ಮತ್ತೊಂದು ಸಿಮ್ ಕಾರ್ಡ್ ಇದ್ದು, ಆ ಸಿಮ್ ಕಾರ್ಡ್ ಅನ್ನು ಜನರಿಗೆ ಕಿರುಕುಳ ನೀಡಲು ಉಪಯೋಗಿಸಲಾಗುತ್ತಿದೆ. ನಿಮ್ಮ ಸಿಮ್ ಕಾರ್ಡ್ ಬಳಸಿ ಎರಡೂ ಪ್ರಕರಣಗಳಲ್ಲಿ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಮ್ಮನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ನಾಗಭೂಷಣ್ ಗೆ ಬೆದರಿಕೆಯೊಡ್ಡಿದ್ದಾನೆ.
ಇದ್ರಿಂದ ಭಯಗೊಂಡ ನಾಗಭೂಷಣ್ ಗೆ ಕೆಲಸ ಸಮಯದ ನಂತರ ಅಧಿಕಾರಿ ಎಂಬ ಅನಾಮಿಕ ವ್ಯಕ್ತಿಯು ವಿಡಿಯೋ ಕರೆ ಮಾಡಿದ್ದಾನೆ ಮತ್ತು ಪೊಲೀಸ್ ಸಮವಸ್ತ್ರದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಇನ್ನಷ್ಟು ಭೀತಿ ಗೊಳಿಸಿದ್ದಾನೆ. ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ತಿಳಿಸಿದ್ದಾನೆ. ಅಲ್ಲದೆ ಮರುದಿನ ಬೆಳಗ್ಗೆ 8:30ಕ್ಕೆ ಪುನಃ ಕರೆ ಮಾಡಿದ್ದಾನೆ ಮತ್ತು ವಿಚಾರಣೆಯ ನೆಪವೊಡ್ಡಿ ವಿಡಿಯೋ ಕಾನ್ಫರೆನ್ಸ್ ಕರೆಯಲ್ಲಿ ಆರು ಗಂಟೆಗಳ ಕಾಲ ನಾಗಭೂಷಣ್ ಅವರನ್ನು ವಿಚಾರಣೆ ನಡೆಸಿದ್ದಾನೆ. ಅವರ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾನೆ.
ಅಲ್ಲದೆ ವಂಚಕರು ತನ್ನ ಬ್ಯಾಂಕ್ ಖಾತೆಗೆ ನಾಗಭೂಷಣ್ ಅವರ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದು ವಿಡಿಯೋ ಕಾಲ್ ಕಟ್ ಮಾಡಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx