ತುಮಕೂರು: ಸೋಡಿಯಂ ಮೆಟಲ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಡ್ರೋನ್ ಪ್ರತಾಪ್ ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಜೈಲಿನಿಂದ ರಿಲೀಸ್ ಮಾಡಲಾಯಿತು.
ಕಳೆದ 9 ದಿನಗಳ ಸೆರೆವಾಸದಿಂದ ಡ್ರೋನ್ ಪ್ರತಾಪ್ ಮುಕ್ತನಾಗಿದ್ದಾನೆ. ಮಧುಗಿರಿ ಉಪಕಾರಾಗೃಹದಿಂದ ಹೊರಬಂದ ಡ್ರೋನ್ ಪ್ರತಾಪ್ ನೀರಿನಲ್ಲಿ ಸೋಡಿಯಂ ಸ್ಪೋಟಿಸಿ ಜೈಲು ಸೇರಿದ್ದನು.
ಮಧುಗಿರಿಯ ಜನಕಲೋಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ಸೋಡಿಯಂ ಸ್ಪೋಟಿಸಿದ್ದನು. ಮೊದಲು 3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರೋನ್ ಪ್ರತಾಪ್, ಬಳಿಕ 9 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದನು. ಜೈಲಿನಿಂದ ಹೊರಬಂದು ಬೆಂಗಳೂರಿನತ್ತ ತೆರಳಿದ್ದಾನೆ.
ಜೈಲಿಂದ ಹೊರಬಂದು ನ್ಯಾಯ ಬೇಕು ಎಂದು ಮಾಧ್ಯಮದವರ ಮುಂದೆ ಡ್ರೋನ್ ಪ್ರತಾಪ್ ಅಳಲು ತೋಡಿಕೊಂಡನು. ಮಧುಗಿರಿ ಉಪಕಾರಾಗೃಹದಿಂದ ಡ್ರೋನ್ ಪ್ರತಾಪ್ ಬಿಡುಗಡೆ ನಂತರ, ಒಂದೇ ಒಂದು ಪ್ರಶ್ನೇ ಕೇಳ್ತೀನಿ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲಾ, ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು. ಐಪಿಸಿ ದೇಶದಲ್ಲೆಲ್ಲ ಒಂದೇ, ಕಾನೂನು ಎಲ್ರಿಗೂ ಒಂದೇ. ಕೆ.ಜಿ.ಗಟ್ಟಲೇ ಸೋಡಿಯಂ ಉಪಯೋಗಿಸಿ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ ಎಂದನು.
ಯಾರಾದ್ರು ಮೊಬೈಲ್ ಕೊಡಿ ಸರ್, ತೋರಿಸ್ತೀನಿ. CRAZY XYZ,MISTER INDIAN HACKER ಯೂಟ್ಯೂಬರ್ ಮಾಡಿದ್ದಾರೆ ಎಂದನು. ನಮ್ಮ ದೇಶದವರೇ, ಜಾಸ್ತಿ ಜನ ಸಬ್ ಸ್ಕ್ರೈಬರ್ ಹೊಂದಿರೋ ಯೂಟ್ಯೂಬ್ ಚಾನೆಲ್ ಅವ್ರು. ಅವ್ರಿಬ್ಬರೇ ಅಂತ ಅಲ್ಲಾ,ತುಂಬಾ ಜನ ಮಾಡಿದ್ದಾರೆ ಎಂದನು.
ಯಾರ ಮೇಲೂ ಕೇಸ್ ಆಗದೇ ಇರೋದು, ಪ್ರಶ್ನೆ ಮಾಡದೇ ಇರೋದು. ನನ್ನ ಮೇಲೆ ಏಕೆ ಅಂತಾ ನೀವೆ ಹುಡುಕಬೇಕು ಎಂದನು. ನಾನು ಮಾಡಿರೋದು ಸೈನ್ಸ್ ಅಂಡ್ ಎಜುಕೇಷನ್ ಪರ್ಪಸ್. ಮೊದಲೇ ಡಿಸ್ಕೈಮರ್ ಹಾಕಿ ಮಾಡಿದ್ದೇನೆ. ಸಿಂಪಲ್ ಸೈನ್ಸ್ ಎಕ್ಸ್‌ಪೆರಿಮೆಂಟ್, ಕಾಲೇಜು, ಸ್ಕೂಲ್ ಗಳಲ್ಲಿ ಸೋಡಿಯಂ ಸುಲಭವಾಗಿ ಸಿಗೋ ಮೆಟಿರಿಯಲ್ ಎಂದನು.
ಅದಕ್ಕೆ ಎಕ್ಸ್‌ಪ್ಲೋಸಿವ್ ಅದು ಇದು ಅಂತಾ ಮಾಡೋದು ಅಗತ್ಯ ಇರಲಿಲ್ಲ. ನನ್ನ ಮೇಲೆ ಆಗಿರೋದು, ಅವರ ಮೇಲೆ ಯಾಕೆ ಆಗಿಲ್ಲಾ. ನನಗಿಂತಾ ಮೊದಲೇ ಅವ್ರೆಲ್ಲಾ ಮಾಡಿದ್ದಾರೆ ಎಂದನು.
ಐಪಿಸಿ ಅಂದರೇ ಇಂಡಿಯಾ ಪೂರ್ತಿ ಒಂದೇ. ಅದು ಅರ್ಟಿಫಿಷಿಯಲ್ ಪಾಂಡ್. ಅವ್ರ ಮೇಲೆ ಏನು ಆಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೇ ಏನು ಎಂದು ಪ್ರಶ್ನಿಸಿದನು. ನನ್ನ ಟಾರ್ಗೆಟ್ ಮಾಡ್ತಾರೆ ಅಂದ್ರೆ ನನಗೆ ನ್ಯಾಯ ಬೇಕು ಸರ್ ಎಂದನು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx