ಸಾಕಷ್ಟು ಜನರು ರಾತ್ರಿ ತಡವಾಗಿ ನಿದ್ರಿಸುತ್ತಾರೆ. ರಾತ್ರಿ 1 ಹಾಗೂ 2 ಗಂಟೆಗಳ ನಂತರ ಮಲಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎನ್ನುವುದನ್ನು ವೈದ್ಯರು ಹೇಳಿದ್ದಾರೆ.
ರಾತ್ರಿ ತಡವಾಗಿ ಮಲಗುವ ಅಭ್ಯಾಸ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ತಡವಾಗಿ ಮಲಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಪ್ರತಿ ದಿನವೂ ತಡವಾಗಿ ಮಲಗುವವರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು.
ತಡವಾಗಿ ಮಲಗುವುದರಿಂದ ದೇಹದ ನೈಸರ್ಗಿಕ ಚಕ್ರ ಹಾಳಾಗುತ್ತದೆ. ಇದು ಹಲವು ರೀತಿಯ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ, ಟೆನ್ಷನ್, ಖಿನ್ನತೆ, ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಬರುತ್ತವೆ.
ಪ್ರತಿದಿನ ತಡವಾಗಿ ಮಲಗುವುದರಿಂದ ದೇಹವು ಹಲವು ಸಮಸ್ಯೆಗಳಿಗೆ ಒಳಗಾಗುತ್ತದೆ. ನಿಧಾನವಾಗಿ ದೇಹ ಹಾಳಾಗಲು ಪ್ರಾರಂಭವಾಗುತ್ತದೆ. ಇದರಿಂದ ದೇಹದ ಹಾರ್ಮೋನ್ ವ್ಯವಸ್ಥೆ ಹಾಳಾಗುತ್ತದೆ. ಜೀರ್ಣಕ್ರಿಯೆಯೂ ಕ್ಷೀಣಿಸುತ್ತದೆ. ಜ್ಞಾಪಕಶಕ್ತಿ, ಮಾನಸಿಕ ಚುರುಕುತನ ಕೂಡ ಕಡಿಮೆಯಾಗುತ್ತದೆ. ಮಾನಸಿಕ ಸಮಸ್ಯೆಗಳು ಬರಬಹುದು. ಜೊತೆಗೆ ಚಯಾಪಚಯ ಕಡಿಮೆಯಾಗುತ್ತದೆ, ಇದರಿಂದ ದೇಹದ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ. ನಿದ್ರೆ ಇಲ್ಲದ ಕಾರಣ, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ
ಮಲಗುವ ಮುನ್ನ ಫೋನ್, ಟ್ಯಾಬ್ ನೋಡಬಾರದು. ಇದು ನಿಮ್ಮ ನಿದ್ರೆಯನ್ನು ಹಾಳುಮಾಡುತ್ತದೆ. ಅದರ ಬದಲು ಪುಸ್ತಕ ಓದುವುದು ಉತ್ತಮ ಇದರಿಂದ ಬೇಗನೇ ನಿಮಗೆ ನಿದ್ರೆ ಬರಲು ಸಹಕಾರವಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx