Subscribe to Updates
Get the latest creative news from FooBar about art, design and business.
- ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ: ಸರಗೂರಿನಲ್ಲಿ ಅಧಿಕರ್ನಾಟಕ ಮಹಾಸಭಾ ಸಭೆ
- ಸರಗೂರು: ಎಸ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ — ಪ್ರತಿಭಟನೆಯ ಎಚ್ಚರಿಕೆ
- ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ
- ಸರಗೂರು: ಸಾಧಕ ಪ್ರಸನ್ನ ಕುಮಾರ್ ಅವರಿಗೆ ‘ಪಟ್ಟಣದ ಸ್ನೇಹಿತರು’ ಬಳಗದಿಂದ ಸನ್ಮಾನ
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
- ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
- ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
Author: admin
ಬೀದರ್: ರಾಷ್ಟ್ರೀಯ ಹೆದ್ದಾರಿಯ ಬೀದರ್ ನಿಂದ ಔರಾದ ಹೋಗುವ ಸಂತಪುರ್ ಬಸವೇಶ್ವರ ವೃತ್ತ ಬಳಿ ಮತ್ತು ಮಸ್ಕಲ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸುವಂತೆ ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಔರಾದ್ (ಬಾ) ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು. ಈ ಭಾಗದಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ವಯಸ್ಕರು ಓಡಾಡುತ್ತಿದ್ದಾರೆ. ಇಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸುವಂತೆ ಮನವಿ ಮಾಡಲಾಯಿತು. ಸಮಿತಿಯ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಪಾಟೀಲ್ ಅವರು ಮೂರು ನಾಲ್ಕು ದಿನದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಸಂದರ್ಭದಲ್ಲಿ ಗಣಪತಿ, ವಾಸುದೇವ್, ಮಲ್ಲಿಕಾರ್ಜುನ್ ಜೋನೆಕೇರಿ ಮತು ಕಾಶಿನಾಥ್ ಗಾಯಕ್ವಾಡ್ ಮತ್ತು ತುಕಾರಾಮ ಹಸನ್ಮುಖಿ, ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರು ಔರಾದ ಹಾಗೂ ಇನ್ನಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ತುಮಕೂರಿನಲ್ಲಿ ವಿವಿಧ ಮಠಾಧೀಶರು ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತುಮಕೂರಿನ ಟೌನ್ ಹಾಲ್ ಸರ್ಕಲ್ ನಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ಐದಕ್ಕೂ ಹೆಚ್ಚು ಮಠಾಧೀಶರು ಹಾಗೂ ಬಿಜೆಪಿ ಶಾಸಕ ಜ್ಯೋತಿ ಗಣೇಶ ಹಾಗೂ ಮಾಜಿ ಶಾಸಕ ಸೊಗಡು ಶಿವಣ್ಣ ಹಾಗೂ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಹಿರೇಮಠದ ಶಿವಾನಂದ ಸ್ವಾಮೀಜಿ, ವಿವೇಕಾನಂದ ಆಶ್ರಮದ ವೀರೇಶನಂದ ಶ್ರೀ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿ ಇದ್ದರೂ ಜಮಾಯಿಸಿದ ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಪೂರಕವಾದ ವ್ಯವಸ್ಥೆ ಆಗಬೇಕಿದೆ ಎಂದು ಆಗ್ರಹಿಸಿದರು. ಹಿಂದೂಗಳ ಮೇಲೆ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿದ ಸ್ವಾಮೀಜಿಗಳು ಅಂತರಾಷ್ಟ್ರೀಯ ಮಠದಲ್ಲಿ ಈ ಕುರಿತು ಗಂಭೀರ ಚರ್ಚೆಯಾಗಬೇಕಿದೆ. ಅಲ್ಲದೆ ವಿದೇಶಗಳಲ್ಲಿ ಹಿಂದುಗಳ ರಕ್ಷಣೆಗೆ ಪೂರಕ ವ್ಯವಸ್ಥೆ ಲಭ್ಯವಾಗಬೇಕಿದೆ…
ತಿಪಟೂರು: ಶ್ರೀ ಸತ್ಯ ಗಣಪತಿ ವಿಸರ್ಜನ ಮಹೋತ್ಸವದ ಅಂಗವಾಗಿ ಡಿಸೆಂಬರ್ 7ರಂದು ನಗರದ ಕಲಾ ಕೃತಿ ತಂಡದಿಂದ ಕೆ.ಆರ್. ಬಡಾವಣೆ, ಬಯಲು ರಂಗ ಮಂದಿರದಲ್ಲಿ ಕಲ್ಪತರು ನಾಡಹಬ್ಬ ಕಲ್ಪೋತ್ಸವ 2024 ನಡೆಯಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದಲ್ಲಿ ಸಾಹಿತ್ಯ ನಾಡೋಜ ಬರಗೂರು ರಾಮಚಂದ್ರಪ್ಪ ಅವರಿಗೆ ಕಲ್ಪತರು ರತ್ನ ಪ್ರಶಸ್ತಿ ಮಾಡಲಾಗುವುದು ಎಂದು ಕಲಾ ಕೃತಿ ತಂಡದ ಅಧ್ಯಕ್ಷರಾದ ಡಾ. ಶ್ರೀಧರ್ ತಿಳಿಸಿದರು. ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರೋನ ಸಂದರ್ಭದಲ್ಲಿ ಹೆತ್ತವರನ್ನು ಕಳೆದುಕೊಂಡ ತಿಪಟೂರು ತಾಲೂಕಿನ 1200ಕ್ಕೂ ಹೆಚ್ಚು ಮಕ್ಕಳಿಗೆ ಸತ್ಯಕುಮಾರ್ ರಿಲೀಫ್ ಫೌಂಡೇಶನ್ ನಿಂದ ಉಚಿತ ಶಾಲಾ ಪರಿಕರಗಳನ್ನು ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ, ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ತಂಡದಿಂದ…
ಶ್ರೀ ಕ್ಷೇತ್ರ ಧರ್ಮಸ್ಥಳ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೋತ್ಸವ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜ್ಯಸಭಾ ಸದಸ್ಯರಾದ ರಾಜರ್ಷಿ, ಡಾ. ಡಿ .ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ . ವಿ.ಹೆಗಡೆ ಅವರ ಮಾರ್ಗದರ್ಶನದಲ್ಲಿ ವೈಭವದಿಂದ ನಡೆದು ಸಂಪನ್ನಗೊಂಡಿತು. ಈ ಅಂಗವಾಗಿ ನವೆಂಬರ್ 21ರಂದು 92ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ನವೆಂಬರ್ 30ರಂದು ಸಾಹಿತ್ಯ ಸಮ್ಮೇಳನಗಳು ಜರುಗಿದವು. ನವೆಂಬರ್ 26 ರಂದು ಹೊಸ ಕಟ್ಟೆ ಉತ್ಸವ ,ನವೆಂಬರ್ 27ರಂದು ಕೆರೆಕಟ್ಟೆ ಉತ್ಸವ, ನಂಬರ್ 28ರಂದು ಲಲಿತೋ ಧ್ಯಾನೋತ್ಸವ, ನಂಬರ್ 29ರಂದು ಕಂಚಿ ಮಾರುಕಟ್ಟೆ ಉತ್ಸವ , ನಂಬರ್ 30ರಂದು ಗೌರಿ, ಮಾರುಕಟ್ಟೆ ಉತ್ಸವ ಹಾಗೂ ಡಿಸೆಂಬರ್ 1 ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ನಡೆಯಿತು. ವಸ್ತು ಪ್ರದರ್ಶನದಲ್ಲಿ 300ಕ್ಕೂ ಹೆಚ್ಚಿನ ರೀತಿಯ ಮಳಿಗೆಗಳು ಕಾರ್ಯ ಆರಂಭ ಮಾಡಿದವು. ರತ್ನಗಿರಿ ಬೆಟ್ಟದ ಮೇಲಿನ ಬಾಹುಬಲಿ ಮೂರ್ತಿ…
ಥಾಣೆ: ಅಕ್ರಮವಾಗಿ ತಂಗಿದ್ದ ಐವರು ಬಾಂಗ್ಲಾದೇಶದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ವಿದೇಶಿ ಪ್ರಜೆಗಳ ಕಾಯಿದೆ ಮತ್ತು ಭಾರತೀಯ ಪಾಸ್ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮೀರಾ ರೋಡ್ ಮತ್ತು ನಯಾ ನಗರ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಎರಡು ಎಫ್ ಐಆರ್ಗಳನ್ನು ದಾಖಲಿಸಲಾಗಿದೆ. ಖಚಿತ ಸುಳಿವಿನ ಮೇರೆಗೆ ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ನಿಗ್ರಹ ದಳದ ಸಿಬ್ಬಂದಿ ಮೀರಾ ರಸ್ತೆ ಮತ್ತು ನಯಾನಗರ ಪ್ರದೇಶದ ಎರಡು ವಸತಿ ಆವರಣಗಳ ಮೇಲೆ ದಾಳಿ ನಡೆಸಿ ಐವರು ಮಹಿಳೆಯರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವೇಳೆ ಒಂದೆರಡು ಕೊಠಡಿಗಳಲ್ಲಿ ವಾಸಿಸುತ್ತಿರುವ ಮಹಿಳೆಯರೊಂದಿಗೆ ಸಂವಹನ ನಡೆಸಲು ಹಿಂದೇಟು ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾರೆ ಇಲ್ಲಿ ಉಳಿಯಲು ಅವರು ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ನವದೆಹಲಿ: ಅಮೆರಿಕ ಡಾಲರ್ ಎದುರು ಮಂಗಳವಾರ ರೂಪಾಯಿ ಮೌಲ್ಯವು 4 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ 84.76ಕ್ಕೆ ತಲುಪಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಇದಾಗಿದೆ. ಅಮೆರಿಕನ್ ಡಾಲರ್ ಎದುರು ಸೋಮವಾರ ರೂಪಾಯಿ ಮೌಲ್ಯ 12 ಪೈಸೆಯಷ್ಟು ಕುಸಿದು, 184.72ಕ್ಕೆ ತಲುಪಿತ್ತು. ರಷ್ಯಾ ಮತ್ತು ಚೀನಾ ಕಳೆದ ಕೆಲವು ವರ್ಷಗಳಿಂದ ಡಾಲರ್ ಗೆ ಪರ್ಯಾಯ ಹುಡುಕುತ್ತಿವೆ. ಅಥವಾ ತಮ್ಮದೇ ಆದ ಬ್ರಿಕ್ಸ್ ಕರೆನ್ಸಿಯನ್ನು ತರಲು ಯತ್ನಿಸುತ್ತಿವೆ. ಭಾರತ ಇದುವರೆಗೆ ಈ ಕ್ರಮದ ಭಾಗವಾಗಿಲ್ಲ. ರೂಪಾಯಿ ಅಂತಾರಾಷ್ಟ್ರೀಯವಾಗಲು ಭಾರತ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಆ ಬಿಐ ಮಾಜಿ ಗವರ್ನರ್ ಸುಬ್ಬಾರಾವ್ ಅಭಿಪ್ರಾಯಪಟ್ಟಿದ್ದಾರೆ. ಕುಸಿತಕ್ಕೆ ಕಾರಣವೇನು?: ಬ್ರಿಕ್ಸ್ ರಾಷ್ಟ್ರಗಳು ಅಮೆರಿಕದ ಡಾಲರ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಆ ದೇಶಗಳ ಆಮದುಗಳ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸಬೇಕಾಗುತ್ತದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆಯ…
ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ ನ ಟೈರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಸ್ ನಿಲ್ದಾಣದ ಬಳಿ ನಡೆದಿದೆ. ಅಜಯ್, ಜಿತೇಂದ್ರ ಎಂಬ ಇಬ್ಬರು ಪ್ರಯಾಣಿಕರು ಗಾಯಗೊಂಡವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಪೋ–33 ಎಜಿಎಸ್ ಲೇಔಟ್ ಹರೇಹಳ್ಳಿಗೆ ಸೇರಿದ ಬಸ್ ಇದಾಗಿದ್ದು, ಐಟಿಪಿಎಲ್ ನಿಂದ ಸಿಲ್ಕ್ ಬೋರ್ಡ್ ಗೆ ಬಸ್ ತೆರಳುತ್ತಿತ್ತು. ಚಲಿಸುತ್ತಿದ್ದ ಬಿಎಂಟಿಸಿ ಬಸ್ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ನೀರಿನ ದರ ಏರಿಕೆ ಮಾಡುವಂತೆ ಜಲಮಂಡಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ನೀರಿನ ದರ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಮುಂದಿನ ದಿನಗಳಲ್ಲಿ ನೀರಿನ ದರ ಪರಿಷ್ಕರಣೆ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಕರೆಯಲಿದ್ದು, ದರ ಪರಿಷ್ಕರಣೆ ಪ್ರಸ್ತಾವನೆಗೆ ಸಂಪೂರ್ಣ ಬೆಂಬಲ ನೀಡುವಂತೆ ಎಲ್ಲ ಜನಪತ್ರಿನಿಧಿಗಳಿಗೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನವಿ ಮಾಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ ಜಲಮಂಡಳಿ ನೌಕರರು, ಸಿಬ್ಬಂದಿಗಳ ವೇತನ ಹೆಚ್ಚಳವಾಗಿದೆ. ಜಲಮಂಡಳಿಗೆ ಪ್ರತಿ ತಿಂಗಳು 81 ಕೋಟಿ ಹೊರೆಯಾಗುತ್ತಿದೆ, ಆದ್ದರಿಂದ ನೀರಿನ ದರ ಹೆಚ್ಚಳ ಮಾಡಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಹರಿದ್ವಾರ: ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ, ಸ್ನಾನ ಮಾಡಬಹುದು ಎಂದು ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ ಹೇಲಿದೆ. ಉತ್ತರ ಪ್ರದೇಶ ಗಡಿಯಲ್ಲಿ ಬರುವ ಗಂಗಾ ನದಿಯಲ್ಲಿ ಪ್ರತಿ ವರ್ಷ 8 ಕಡೆ ನೀರನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ನವೆಂಬರ್ ತಿಂಗಳ ಪರೀಕ್ಷೆಯಲ್ಲಿ ಗಂಗಾ ನದಿಯ ನೀರು ‘ಬಿ’ ಕೆಟಗರಿ ಎಂದು ಕಂಡುಬಂದಿದೆ. ನದಿಯ ನೀರನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ‘ಎ’ ಕೆಟಗರಿ ಕನಿಷ್ಠ ವಿಷಕಾರಿಯಾಗಿದೆ. ಅಂದರೆ ನೀರನ್ನು ಸೋಂಕುನಿವಾರಣೆಗೊಳಿಸಿದ ನಂತರ ಕುಡಿಯಲು ಬಳಸಬಹುದು. ‘ಇ’ ಕೆಟಗರಿ ಅತ್ಯಂತ ವಿಷಕಾರಿಯಾಗಿದೆ ಎಂದು ಯುಕೆಪಿಸಿಬಿಯ ಪ್ರಾದೇಶಿಕ ಅಧಿಕಾರಿ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ. ಗಂಗಾ ನದಿಯ ಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯ ಅರ್ಚಕ ಉಜ್ಜಲ್ ಪಂಡಿತ್ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಮಾನವರ ತ್ಯಾಜ್ಯದಿಂದ ಗಂಗೆ ಮಲಿನಗೊಳ್ಳುತ್ತಿದ್ದಾಳೆ ಎಂದಿದ್ದಾರೆ. ಕೇವಲ ಗಂಗಾಜಲದಿಂದ ಸ್ನಾನ ಮಾಡುವುದರಿಂದ ನಮ್ಮ ದೇಹದ ರೋಗಗಳು ವಾಸಿಯಾಗುತ್ತದೆ. ಅದರಿಂದ ಕ್ಯಾನ್ಸರ್‌ನಂತಹ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಈಗ ಗಂಗಾಜಲ ಅಶುದ್ಧವಾಗಿರುವುದಕ್ಕೆ ಮಾನವ ತ್ಯಾಜ್ಯದಿಂದ…
ಹಸುವನ್ನು ಎಲ್ಲರೂ ಶುದ್ಧ ಸಸ್ಯಾಹಾರಿ ಅಂತ ಅಂದುಕೊಂಡಿದ್ದೇವೆ ಆದ್ರೆ, ಕೆಲವೊಮ್ಮೆ ಹಸುಗಳು ಮಾಂಸವನ್ನೂ ತಿನ್ನಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಸುವೊಂದು ಕೋಳಿಯನ್ನು ಜೀವಂತವಾಗಿ ಜಗಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಜನರು ಅಚ್ಚರಿಗೀಡಾಗಿದ್ದಾರೆ. ಈ ವಿಡಿಯೋ ಹಳೆಯ ವಿಡಿಯೋವಾಗಿದ್ದರೂ, ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಹಸು ಸಸ್ಯಾಹಾರಿ, ಈ ವಿಡಿಯೋ ಆಘಾತಕಾರಿಯಾಗಿದೆ ಅಂತ ಕೆಲವು ಸಸ್ಯಾಹಾರಿಗಳು ಈ ವಿಡಿಯೋವನ್ನ ಪೋಸ್ಟ್ ಮಾಡಿದವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಉರಿದು ಬೀಳುತ್ತಿರುವುದನ್ನು ನೋಡಬಹುದಾಗಿದೆ. ಮೂಕ ಪ್ರಾಣಿಗಳಿಗೆ ಹಸಿವಿನ ಚಿಂತೆಯೇ ಹೊರತು, ಮಾಂಸವೋ ಸಸ್ಯವೋ ಅನ್ನೋದಲ್ಲ. ಪ್ರಕೃತಿ ದತ್ತವಾಗಿ ಹಸು ಸಸ್ಯಾಹಾರಿ ಪ್ರಾಣಿ. ಯಾಕೆಂದರೆ ಹಸು ಚಪ್ಪಟೆ ಹಲ್ಲನ್ನು ಹೊಂದಿದೆ. ಕೋರೆ ಹಲ್ಲು ಹೊಂದಿರುವ ಪ್ರಾಣಿಗಳು ಮಾತ್ರವೇ ಮಾಂಸಾಹಾರ ಅಥವಾ ಮಿಶ್ರಾಹಾರಿಗಳಾಗಿರಲು ಸಾಧ್ಯ. ಹೀಗಾಗಿ ಹಸು ಕೋಳಿಯನ್ನ ಜಗಿಯುತ್ತಿರುವ ದೃಶ್ಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಅಪರೂಪಕ್ಕೆ ಇಂತಹ ಘಟನೆಗಳಾಗುವುದು ಸಹಜ, ಯಾಕೆಂದ್ರೆ…