ಬೀದರ್: ರಾಷ್ಟ್ರೀಯ ಹೆದ್ದಾರಿಯ ಬೀದರ್ ನಿಂದ ಔರಾದ ಹೋಗುವ ಸಂತಪುರ್ ಬಸವೇಶ್ವರ ವೃತ್ತ ಬಳಿ ಮತ್ತು ಮಸ್ಕಲ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸುವಂತೆ ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಔರಾದ್ (ಬಾ) ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು.
ಈ ಭಾಗದಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ವಯಸ್ಕರು ಓಡಾಡುತ್ತಿದ್ದಾರೆ. ಇಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಸುವಂತೆ ಮನವಿ ಮಾಡಲಾಯಿತು.
ಸಮಿತಿಯ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಪಾಟೀಲ್ ಅವರು ಮೂರು ನಾಲ್ಕು ದಿನದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಸಂದರ್ಭದಲ್ಲಿ ಗಣಪತಿ, ವಾಸುದೇವ್, ಮಲ್ಲಿಕಾರ್ಜುನ್ ಜೋನೆಕೇರಿ ಮತು ಕಾಶಿನಾಥ್ ಗಾಯಕ್ವಾಡ್ ಮತ್ತು ತುಕಾರಾಮ ಹಸನ್ಮುಖಿ, ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರು ಔರಾದ ಹಾಗೂ ಇನ್ನಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx