ಶ್ರೀ ಕ್ಷೇತ್ರ ಧರ್ಮಸ್ಥಳ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೋತ್ಸವ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜ್ಯಸಭಾ ಸದಸ್ಯರಾದ ರಾಜರ್ಷಿ, ಡಾ. ಡಿ .ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ . ವಿ.ಹೆಗಡೆ ಅವರ ಮಾರ್ಗದರ್ಶನದಲ್ಲಿ ವೈಭವದಿಂದ ನಡೆದು ಸಂಪನ್ನಗೊಂಡಿತು.
ಈ ಅಂಗವಾಗಿ ನವೆಂಬರ್ 21ರಂದು 92ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ನವೆಂಬರ್ 30ರಂದು ಸಾಹಿತ್ಯ ಸಮ್ಮೇಳನಗಳು ಜರುಗಿದವು.
ನವೆಂಬರ್ 26 ರಂದು ಹೊಸ ಕಟ್ಟೆ ಉತ್ಸವ ,ನವೆಂಬರ್ 27ರಂದು ಕೆರೆಕಟ್ಟೆ ಉತ್ಸವ, ನಂಬರ್ 28ರಂದು ಲಲಿತೋ ಧ್ಯಾನೋತ್ಸವ, ನಂಬರ್ 29ರಂದು ಕಂಚಿ ಮಾರುಕಟ್ಟೆ ಉತ್ಸವ , ನಂಬರ್ 30ರಂದು ಗೌರಿ, ಮಾರುಕಟ್ಟೆ ಉತ್ಸವ ಹಾಗೂ ಡಿಸೆಂಬರ್ 1 ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣಪೂಜೆ ನಡೆಯಿತು.
ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ನಡೆಯಿತು. ವಸ್ತು ಪ್ರದರ್ಶನದಲ್ಲಿ 300ಕ್ಕೂ ಹೆಚ್ಚಿನ ರೀತಿಯ ಮಳಿಗೆಗಳು ಕಾರ್ಯ ಆರಂಭ ಮಾಡಿದವು. ರತ್ನಗಿರಿ ಬೆಟ್ಟದ ಮೇಲಿನ ಬಾಹುಬಲಿ ಮೂರ್ತಿ ಹೆಚ್ಚಿನ ಆಕರ್ಷಣೆ ಹೊಂದಿದ್ದು ರತ್ನಗಿರಿಯಿಂದ ಹೊರನೋಟದ ಪ್ರಕೃತಿಯ ಸೌಂದರ್ಯ ಜನರನ್ನು ಹೆಚ್ಚು ಆಕರ್ಷಿಸಿತು.
ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ .ಯತೀಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲಲಿತ ಘೋಷ್ಠಿಯಲ್ಲಿ ನಾದಸ್ವರ ವಾದನ ,ಸಾತ್ವಿಕ ಸಂಗೀತ ನೃತ್ಯಾರ್ಚನೆ ಯನ್ನ ಮಂಗಳೂರಿನ ನಾಟ್ಯಾರಾದನ ಕಲಾ ಕೇಂದ್ರದಿಂದ ಮಾಯಾ ವಿಲಾಸ ನೃತ್ಯ ರೂಪಕ ಮಂಗಳೂರಿನ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ ಭಟ್ ರವರಿಂದ ನಡೆಯಿತು.
ಸರ್ವ ಧರ್ಮ ಸಮ್ಮೇಳನವನ್ನ ರಾಜ್ಯಗೃಹ ಸಚಿವ ಡಾ.ಜಿ .ಪರಮೇಶ್ವರ್ ಉದ್ಘಾಟಿಸಿದರು. ಕೈಲಾಸ ಅಶ್ರಮ ಮಹಾ ಸಂಸ್ಥಾನದ ಶ್ರೀ ಜಯಂದ್ರಪುರಿ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಡಾ. ಜಿ.ಬಿ.ಹರೀಶ್, ಡಾ.ಎಂ.ಎನ್ .ಜೋಸೆಫ, ಮೇಹತಾಬ್ ಇಬ್ರಾಹಿಂ ಸಾಬ್ ಉಪನ್ಯಾಸ ನೀಡಿದರು. ಸಾಹಿತ್ಯ ಸಮ್ಮೇಳನವನ್ನು ವಿದ್ವಾಂಸ ಡಾ.ರಾ.ಗಣೇಶ್ ಉದ್ಘಾಟಿಸಿದರು. ಸಂಶೋಧಕ, ಲೇಖಕ ಡಾ.ಪಾಧೆ ಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಮೀಳಾ ಮಾಧವ್, ಡಾ.ಬಿ.ವಿ.ವಸಂತಕುಮಾರ್, ಪ್ರೊ. ಮೊರಬದ ಮಲ್ಲಿಕಾರ್ಜುನ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ ಧರ್ಮಸ್ಥಳ ಸುರೇಂದ್ರ ಕುಮಾರ್, ಜಿನ ಭಜನಾ ಕಾರ್ಯಕ್ರಮ ರೂವಾರಿಗಳು, ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ , ಸುಪ್ರಿಯಾ ಹರ್ಷೀಂದ್ರ ಕುಮಾರ್, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಸಂಶೋಧಕರು ಅಭಿಮಾನಿಗಳು ಸೇರಿದಂತೆ ನಾಡಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಈ ಲಕ್ಷ ದೀಪೋತ್ಸವ , ಸಾಹಿತ್ಯ ಸಮ್ಮೇಳನ ,ವಸ್ತು ಪ್ರದರ್ಶನ ಕಾರ್ಯಕ್ರಮದ ಸವಿ ಸವಿದರು .ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನ ಕಾರ್ಯಕ್ರಮಗಳು ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಿದವು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx