Subscribe to Updates
Get the latest creative news from FooBar about art, design and business.
- ಉತ್ತಮ ಆಡಳಿತದಿಂದ ಸರ್ವತೋಮುಖ ಪ್ರಗತಿ ಸಾಧ್ಯ: ಕೆ.ಮಂಜುನಾಥ್
- ಪಾವಗಡ ತಾ.ಪಂ ಇ.ಒ. ಉತ್ತಮ್ ಕುಮಾರ್ ವಿರುದ್ಧ ಪಿಡಿಒಗಳ ದೂರು..!
- ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ: 100 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಸಂಕಲ್ಪ ಯಾತ್ರೆ
- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಾವಶ್ಯಕ: ಡಾ.ಹನುಮಂತನಾಥ ಸ್ವಾಮೀಜಿ ಕರೆ
- ಕ್ಯಾನ್ಸರ್ ಪೀಡಿತ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಸಾವಿರ ರೂ. ನೆರವು
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
Author: admin
ವರದಿ: ಹಾದನೂರು ಚಂದ್ರ ಸರಗೂರು: ಕೊಂಬಿಂಗ್ ಕಾರ್ಯಾಚರಣೆ ನಡೆಯುವ ವೇಳೆ ಗಾಬರಿಗೊಂಡ ಹುಲಿ ಕಾಡಿನತ್ತ ಓಡುವಾಗ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬಡಗಲುಪುರ ಸಮೀಪ ನಡೆದಿದೆ. ತಾಲೂಕಿನ ಬಡಗಲುಪುರ ಸಮೀಪದ ಹಾದನೂರು ಗ್ರಾಮದ ಮಹದೇವಗೌಡ ಹುಲಿ ದಾಳಿಗೆ ತುತ್ತಾದವರು. ಮಹದೇವ ಎಂದಿನಂತೆ ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸಲು ತೆರಳಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯು ಹುಲಿ ಸೆರೆಗೆ ಅಭಿಮನ್ಯು ಮತ್ತು ಭಗೀರಥ ಎಂಬ ಸಾಕಾನೆಗಳ ಮೂಲಕ ಕೊಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಕಾಣಿಸಿಕೊಂಡ ಹುಲಿ, ಸಾಕಾನೆಗಳ ಕಂಡು ಕಾಡಿನತ್ತ ಓಡುವ ವೇಳೆ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಮಹದೇವನನ್ನು ಕಂಡು ಗಾಬರಿಯಿಂದ ಆತನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಹದೇವ ಗೌಡ ಎಂಬವರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕಣ್ಣು ಕಿತ್ತು ಬಂದಿದೆ. ಕೈ ಮೂಳು ಮುರಿದೆ . ಬಡಗಲುಪುರ ಹಾಗೂ ಹಾದನೂರು ಸುತ್ತಮುತ್ತಲಿನ…
ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ವಾಸಿಯಾದ ಟಿ.ಕೆ.ಮೊಹಮ್ಮದ್ ಅದೇ ಗ್ರಾಮದ ಮಂಜಮ್ಮ ಎಂಬುವವರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನವನ್ನು ಕ್ರಯಕ್ಕೆ ಖರೀದಿ ಮಾಡಿದ್ದು. ಕೊರಟಗೆರೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ದಿನಾಂಕ:01/08/2025 ರಂದು ನೋಂದಣಿಯಾಗಿರುತ್ತದೆ. ಕ್ರಯ ಪತ್ರದಂತೆ ಸದರಿ ಮನೆ ಮತ್ತು ಖಾಲಿ ನಿವೇಶನದ ಖಾತೆಯನ್ನು ಮಂಜಮ್ಮ ರವರ ಹೆಸರಿನಿಂದ ತನ್ನ ಹೆಸರಿಗೆ ಬದಲಾವಣೆ ಮಾಡಿಕೊಡುವಂತೆ ತೋವಿನಕೆರೆ ಗ್ರಾಮ ಪಂಚಾಯಿತಿಗೆ ದಿನಾಂಕ:12/08/2025 ರಂದು ಟಿ.ಕೆ.ಮೊಹಮ್ಮದ್ ರವರು ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಡದ ಕಾರಣ ದೂರುದಾರ ಟಿ.ಕೆ. ಮೊಹಮ್ಮದ್ ರವರು ದಿನಾಂಕ: 09/10/2025 ರಂದು ತೋವಿನಕರೆ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ, ಬಿಲ್ ಕಲೆಕ್ಟರ್ ಮಾರುತಿ ರವರನ್ನ ಸಂಪರ್ಕಿಸಿದಾಗ, ಮಾರುತಿರವರು ಖಾತೆ ಬದಲಾವಣೆ ಮಾಡಿಕೊಡಲು 10,800 ರೂ. ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ತದನಂತರ ದಿನಾಂಕ:14/10/2025 ರಂದು ದೂರುದಾರ ಟಿ.ಕೆ.ಮೊಹಮ್ಮದ್ ಮತ್ತೊಮ್ಮೆ ಗ್ರಾಮ…
ಕೊರಟಗೆರೆ: ಗ್ರಾಮ ದೇವತೆಗಳು ಊರಿನ ಎಲ್ಲಾ ಜಾತಿ ಜನರನ್ನು ಒಗ್ಗೂಡಿಸಿ ಧಾರ್ಮಿಕ ಆಚರಣೆಯನ್ನು ಆಚರಿಸುವ ಮೂಲಕ ಸೌಹಾರ್ದತೆಯನ್ನು ಮೂಡಿಸುವುದರೊಂದಿಗೆ ದೇವಿಯು ಊರಿನ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ನೆಮ್ಮದಿಯಾಗಿ ಬಾಳುತ್ತಾರೆ ಎಂದು ಎಲೆರಾಂಪುರದ ನರಸಿಂಹಗಿರಿ ಶ್ರೀ ಕ್ಷೇತ್ರದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ಅವರು ತಾಲೂಕಿನ ಕೋಳಾಲ ಹೋಬಳಿಯ ಹನುಮಂತಯ್ಯನ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ದೊಡ್ಡಮ್ಮ ದೇವಿಯ 48 ನೇ ದಿನದ ಮಂಡಲ ಪೂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮ ದೇವತೆಗಳ ಪ್ರತಿಷ್ಠಾಪನೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ, ಗ್ರಾಮ ದೇವತೆಯು ನಮ್ಮ ಗ್ರಾಮವನ್ನು ದುಷ್ಠಶಕ್ತಿಗಳಿಂದ ಮತ್ತು ರೋಗರುಜಿನಗಳಿಂದ ರಕ್ಷಿಸುತ್ತಾಳೆ ಎನ್ನುವ ನಂಬಿಕೆಯಲ್ಲಿ ಗ್ರಾಮದ ಪ್ರತಿಯೊಬ್ಬ ಜಾತಿ ಧರ್ಮದ ಕುಟುಂಬವು ತನ್ನ ಕೈಲಾದ ಸೇವೆಯನ್ನು ಗ್ರಾಮಸ್ಥರೊಂದಿಗೆ ಒಟ್ಟಾಗಿ ಆಚರಿಸುತ್ತಾರೆ ಎಂದರು. ಹನುಮಂತಯ್ಯಪಾಳ್ಯದಂತಹ ಸಣ್ಣ ಗ್ರಾಮದಲ್ಲಿ ಬೃಹತ್ ದೊಡ್ಡಮ್ಮ ದೇವಿಯ ದೇವಾಲಯವು ನಿರ್ಮಾಣವಾಗಿರುವುದು ಈ ಊರಿನ ಜನರ ಸೇವಾ ಮನೋಭಾವ ಮತ್ತು ಭಕ್ತಿಯನ್ನು ತೋರಿಸುತ್ತದೆ, ಇದಕ್ಕೆ ನೀಲೇಶ್…
ಬೀದರ್: ಔರಾದ್ ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಕ್ರೀಡಾಂಗಣಕ್ಕೆ ಶ್ರೀ ಅಮರೇಶ್ವರ ಹೆಸರಿಡಬೇಕು ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನ್ಸನ್ ಘೋಡೆ ಹಾಗೂ ಲಿಂಗಾಯತ ಮುಖಂಡ ಸಂಗು ದ್ಯಾಡೆ ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಔರಾದ್ ಪಟ್ಟಣ ಉದ್ಭವಲಿಂಗ ಶ್ರೀ ಅಮರೇಶ್ವರರಿಂದ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಸಂಬಂಧಪಟ್ಟವರಿಗೆ ಶ್ರೀ ಅಮರೇಶ್ವರ ಹೆಸರಿಡಲು ನಿರ್ದೇಶನ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. ಈ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಈ ಕುರಿತು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಘೋಡೆ ತಿಳಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ವರದಿ: ಹಾದನೂರು ಚಂದ್ರ ಸರಗೂರು: ಗೂಡ್ಸ್ ಆಟೋ ಪಲ್ಟಿಯಾಗಿ 15 ಮಂದಿಗೆ ಗಾಯಗೊಂಡು ಅದರಲ್ಲಿ 3 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಪಟ್ಟಣದ ಹುಣಸೂರು ಬೇಗೂರು ರಸ್ತೆಯ ಕಬಿನಿ ಬಲದಂಡೆ ನಾಲೆಯ ಬಳಿ ನಡೆದಿದೆ. ಕೋತ್ತೆಗಾಲ ಗ್ರಾಪಂ ವ್ಯಾಪ್ತಿಯ ಗೊತ್ತಗಾಲಹುಂಡಿ ಗ್ರಾಮದ ಜನರು ಬೇರೆ ಊರಿಗೆ ಶುಂಠಿ ಕೆಲಸ ಮಾಡಲು ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಒಂದೇ ಗ್ರಾಮದ ನಿವಾಸಿಗಳಾದ ಇವರು ಪ್ರತಿದಿನವೂ ಕೂಲಿ ಕೆಲಸ ಹೋಗುತ್ತಿದ್ದಾರೆ, ಆದರೆ ಬುಧವಾರ ಬೆಳಗ್ಗೆ ಗ್ರಾಮದಿಂದ ಸರಗೂರು ಪಟ್ಟಣ ಮಾರ್ಗವಾಗಿ ಬೇರೆ ಊರಿಗಳಿಗೆ ತೆರಳುತ್ತಿದ್ದ ವೇಳೆ ಕಬಿನಿ ಬಲದಂಡೆ ನಾಲೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಪಲ್ಟಿಯಾಗಿದೆ. ತಕ್ಷಣ ಸ್ಥಳೀಯರು ಆಟೋದ ಕೆಳಗೆ ಸಿಲುಕಿಕೊಂಡಿದ್ದ ವ್ಯಕ್ತಿಗಳನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ 7:30 ಸಮಯದಲ್ಲಿ ಅಪಘಾತ ಸಂಭವಿಸಿತ್ತು. ಆದರೆ 9 ಗಂಟೆಯಾದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ,…
ತುಮಕೂರು: ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದಿಂದ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಎಲೆಕ್ಟ್ರೋಕೆಮಿಸ್ಟ್ರಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗುರುವಾರದಂದು ಮಾಡಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವೃತ್ತ ಸಹ ಪ್ರಾಧ್ಯಾಪಕರಾದ ಸುಬ್ಬಯ್ಯ ಅವರು ರಸಾಯನ ಶಾಸ್ತ್ರವನ್ನ ರಸವತ್ತಾಗಿ ಹಾಗೂ ಉತ್ತೇಜಭರಿತವಾಗಿ ಬೋಧಿಸಿ, ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೇಮಲತಾ ಪಿ. ಮಾತನಾಡಿ, ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುವ ಕಾರ್ಯಕ್ರಮ ಆಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಮನ್ನೆ.ಎಂ.ವಿ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕೆ.ವಿನೋದ, ರಸಾಯನಶಾಸ್ತ್ರ ವಿಭಾಗ ಸುಪ್ರಿಯಾ ಪಿ.ಹರಳೆ ಫ್ಯಾಕಲ್ಟಿ, ಐಕ್ಯೂಎಸಿ ಸಂಯೋಜಕರು ಹಾಗೂ ಎಂಕಾಂ ವಿಭಾಗದ ಮುಖ್ಯಸ್ಥರಾದ ಸೈಯದ್ ಬಾಬು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ…
ಮೈಸೂರು: ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದು, ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025 ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ. ನಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು, ತನ್ಮೂಲಕ ಎಲ್ಲರೂ ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಬುದ್ಧ, ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ…
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಜೀವನ ಪಯಣದ ಕುರಿತ ಪುಸ್ತಕ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ. ಶಿವಕುಮಾರ್’ ಬಿಡುಗಡೆಯಾಗಿದೆ. ನಿರ್ದೇಶಕ ಕೆ.ಎಂ.ರಘು ರಚಿಸಿರುವ ಪುಸ್ತಕ ಬೆಂಗಳೂರಿನ ಎಫ್ ಕೆಸಿಸಿಐ ಸಭಾಂಗಣದಲ್ಲಿ ನಿನ್ನೆ ಲೋಕಾರ್ಪಣೆಗೊಂಡಿತು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಹಜವಾಗಿ ಡಿ.ಕೆ.ಶಿವಕುಮಾರ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಆಗಾಗ ಹಿಂದುತ್ವದ ಬಗ್ಗೆ ಮೃಧು ಧೋರಣೆ ತಳೆಯುತ್ತಾರೆ, ಬಿಜೆಪಿಗೆ ಹೋಗಲು ಅವರಿಗೆ ಆಫರ್ ಇದೆ, ಅವರಿಗೂ ಮನಸ್ಸಾಗಿತ್ತು ಎಂಬ ಮಾತುಗಳು ಬಿಜೆಪಿ ನಾಯಕರಿಂದ ಈ ಹಿಂದೆ ಕೇಳಿಬಂದಿದ್ದವು. ಒಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಹೇಳಿದ್ದರು. ಕೇಸರಿ ಪಕ್ಷದಿಂದ ನನಗೆ ಆಫರ್ ಬಂದಿದ್ದು ನಿಜ ಎಂದು ಸ್ವತಃ ಡಿ ಕೆ ಶಿವಕುಮಾರ್ ಅವರೇ ಈಗ ಹೇಳಿದ್ದಾರೆ. 2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ನನ್ನನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳಾಗಿತ್ತು ಎಂದಿದ್ದಾರೆ. ನಿನ್ನೆ ತಮ್ಮ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಬೆಂಗಳೂರಿನ ಮೂವರು…
ಹುಳಿಯಾರು: ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯವಹಿಸಿರುವ ಬಗ್ಗೆ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಆರನೇ ದಿನಕ್ಕೆ ಕಾಲಿಟ್ಟಿತು. ಕರ ನಿರಾಕರಣೆ ಚಳುವಳಿ ಹಾಗೂ ಪ್ರತಿಭಟನೆ ಆರಂಭಿಸಿ ಆರು ದಿನಗಳು ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಬಾರದ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿಯನ್ನು ಹೊಸಹಳ್ಳಿ ಚಂದ್ರಪ್ಪ ಟೀಕಿಸಿದರು. ಪಟ್ಟಣ ಪಂಚಾಯಿತಿ ಜೀವಂತವಾಗಿಲ್ಲ, ಕೇವಲ ಕಲ್ಕಟ್ಟಡ ಮತ್ತು ನಾಮಕಾವಸ್ಥೆ ಕಚೇರಿ ಎಂದು ದೂರಿದರು. ರೈತ ಹೋರಾಟಕ್ಕೆ ಜಿಲ್ಲಾಡಳಿತ, ಶಾಸಕರು ಮತ್ತು ತಹಶೀಲ್ದಾರ್ ತಕ್ಷಣ ಬಂದು ಸಮಸ್ಯೆ ಆಲಿಸಬೇಕಿತ್ತು. ಆದರೆ ತಹಶೀಲ್ದಾರರು ರಾಜಕಾರಣ ಮಾಡುತ್ತಾ ಶಾಸಕರ ಹಿಂದೆ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು. ನಾಲ್ಕು ದಿನಗಳಲ್ಲಿ ಪ್ರತಿಭಟನಾಕಾರರ ಹೋರಾಟಕ್ಕೆ ಯಾರೂ ಸ್ಪಂದಿಸದಿದ್ದಲ್ಲಿ, ಪ್ರತಿಭಟನೆಯ 11ನೇ ದಿನದಿಂದ ಉಪವಾಸ ಕೂರುವ ಮೂಲಕ ಚಳವಳಿಯನ್ನು ಉಗ್ರರೂಪಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಸೋಮಜ್ಜನ ಪಾಳ್ಯದ ಬೀರಲಿಂಗಯ್ಯ, ಕಲ್ಲಹಳ್ಳಿ…
ಕೊರಟಗೆರೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ವತಿಯಿಂದ ಬಿಎ ವಿದ್ಯಾರ್ಥಿಗಳಿಗೆ ಇಟಲಿಯ ಏಕೀಕರಣ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರವೀಂದ್ರ ಶರ್ಮ ಟಿ.ವಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಯುರೋಪಿನ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದ ಇಟಲಿಯ ಏಕೀಕರಣದ ವಿವಿಧ ಹಂತಗಳ ಹೋರಾಟವನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ಅರ್ಥೈಸಿದ್ದು ಉಪನ್ಯಾಸದ ಪ್ರಯೋಜವನ್ನು ವಿದ್ಯಾರ್ಥಿಗಳು ಪಡೆದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈರಪ್ಪನಾಯಕ ಕಾರ್ಯಕ್ರಮ ಉದ್ಘಾಟಿಸಿ ಇಟಲಿಯ ಏಕೀಕರಣ ಉಪನ್ಯಾಸದ ಬಗ್ಗೆ ವಿವರಿಸಿದರು. ವಿಭಾಗದ ಮುಖ್ಯಸ್ಥ ಡಾ.ರೇಣುಕಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕ ಡಾ.ಚೈತಾಲಿ, ಡಾ.ಅಮಿತಾ, ಡಾ.ಅಶ್ವಾಕ್ ಅಹಮದ್, ಗೋವಿಂದರಾಜು, ಡಾ.ರಮೇಶ್, ಶ್ರೀರಂಗನಾಥ ಮೂರ್ತಿ ಸೇರಿದಂತೆ ಇತರರು ಇದ್ದರು. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…