nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೈದಿದ್ದ ಆರೋಪಿ ಸೆರೆ

    August 25, 2026

    ಮತದಾರರ ಕರಡು ಪಟ್ಟಿ ಪ್ರಕಟ: 2.37 ಲಕ್ಷ ಮತದಾರರು ಕರಡಿನಿಂದ ಡಿಲೀಟ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ಕೊನೆಯ ದಿನ

    August 25, 2026

    “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

    August 25, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೈದಿದ್ದ ಆರೋಪಿ ಸೆರೆ
    • ಮತದಾರರ ಕರಡು ಪಟ್ಟಿ ಪ್ರಕಟ: 2.37 ಲಕ್ಷ ಮತದಾರರು ಕರಡಿನಿಂದ ಡಿಲೀಟ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ಕೊನೆಯ ದಿನ
    • “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು
    • ಕರ್ನಾಟಕ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ ಗುತ್ತಿಗೆದಾರ ಅಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
    • ಮಹಿಳಾ ಪಿಎಸ್ ಐಗೆ ಬಿಜೆಪಿ ಶಾಸಕನ ಪುತ್ರಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್, ಎಫ್ ಐಆರ್ ದಾಖಲಾಗಿದ್ದರೂ ಆಗಿಲ್ಲ ಬಂಧನ
    • ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ
    • ಜಲಾಶಯಕ್ಕೆ ನೀರಿನ ಒಳ ಹರಿವು ಆಧಾರದಲ್ಲಿ ರಾಗಿ ಬೆಳೆಗೆ — ಸಾಲು ಕೆರೆಗಳಿಗೆ ನೀರು: ಶಾಸಕ ಡಾ. ಎಚ್.ಡಿ. ರಂಗನಾಥ್
    • ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯ: ಕವಿರತ್ನ ಕಾಳಿದಾಸ ಪ.ಸ.ಸಂಘ ಸಭೆಯಲ್ಲಿ ಡಾ. ಹುಲಿನಾಯ್ಕರ್ ಸಲಹೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈತನ ಮೇಲೆ ಭೀಕರ ದಾಳಿ ನಡೆಸಿದ ಹುಲಿ: ಕಣ್ಣು, ಮುಖ ವಿರೂಪಗೊಂಡು ಗಂಭೀರ ಸ್ಥಿತಿಯಲ್ಲಿ ರೈತ
    ಜಿಲ್ಲಾ ಸುದ್ದಿ October 17, 2025

    ರೈತನ ಮೇಲೆ ಭೀಕರ ದಾಳಿ ನಡೆಸಿದ ಹುಲಿ: ಕಣ್ಣು, ಮುಖ ವಿರೂಪಗೊಂಡು ಗಂಭೀರ ಸ್ಥಿತಿಯಲ್ಲಿ ರೈತ

    By adminOctober 17, 2025No Comments2 Mins Read
    tiger attack

    ವರದಿ: ಹಾದನೂರು ಚಂದ್ರ

    ಸರಗೂರು: ಕೊಂಬಿಂಗ್‌ ಕಾರ್ಯಾಚರಣೆ ನಡೆಯುವ ವೇಳೆ ಗಾಬರಿಗೊಂಡ ಹುಲಿ ಕಾಡಿನತ್ತ ಓಡುವಾಗ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬಡಗಲುಪುರ ಸಮೀಪ ನಡೆದಿದೆ.

    ತಾಲೂಕಿನ ಬಡಗಲುಪುರ ಸಮೀಪದ ಹಾದನೂರು ಗ್ರಾಮದ ಮಹದೇವಗೌಡ ಹುಲಿ ದಾಳಿಗೆ ತುತ್ತಾದವರು. ಮಹದೇವ ಎಂದಿನಂತೆ ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸಲು ತೆರಳಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯು ಹುಲಿ ಸೆರೆಗೆ ಅಭಿಮನ್ಯು ಮತ್ತು ಭಗೀರಥ ಎಂಬ ಸಾಕಾನೆಗಳ ಮೂಲಕ ಕೊಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಕಾಣಿಸಿಕೊಂಡ ಹುಲಿ, ಸಾಕಾನೆಗಳ‌ ಕಂಡು ಕಾಡಿನತ್ತ ಓಡುವ ವೇಳೆ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಮಹದೇವನನ್ನು ಕಂಡು ಗಾಬರಿಯಿಂದ ಆತನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಹದೇವ ಗೌಡ ಎಂಬವರ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕಣ್ಣು ಕಿತ್ತು ಬಂದಿದೆ. ಕೈ ಮೂಳು ಮುರಿದೆ .

    ಬಡಗಲುಪುರ ಹಾಗೂ ಹಾದನೂರು ಸುತ್ತಮುತ್ತಲಿನ ಜಮೀನು ಹಾಗೂ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಹುಲಿ ಕಾಣಿಸಿಕೊಳ್ಳುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಹೀಗಾಗಿ ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಗುರುವಾರ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು ಮುಂದಾಗಿದೆ. ಈ ವೇಳೆ ಆನೆಗಳನ್ನು ಕಂಡು ಗಾಬರಿಯಿಂದ ಕಾಡನತ್ತ ಓಡುವ ವೇಳೆ ಹುಲಿ ಮಹದೇವ ಗೌಡ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.

    ಇನ್ನು ಸಾಕಾನೆಗಳ ಮೂಲಕ ಕೊಂಬಿಂಗ್‌ ಆರಂಭಿಸಿರುವ ಬಗ್ಗೆ ಅರಣ್ಯ ಇಲಾಖೆಯು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಕೊಂಬಿಂಗ್‌ ಬಗ್ಗೆ ಅರಿವಿಲ್ಲದೇ ಹಲವು ರೈತರು ಜಮೀನಿಗಳಿಗೆ ಕೆಲಸಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಹೀಗಾಗಿಯೇ ಇದರ ಮಾಹಿತಿ ಇಲ್ಲದೆ ಮಹದೇವ ಗೌಡ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

    ಅರಣ್ಯ ಇಲಾಖೆಯ ವಾಹನ ಜಖಂ:

    ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ಮಾಡಿಲ್ಲ. ಹಾಗೂ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಹುಲಿ ದಾಳಿಯಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಸಿಬ್ಬಂದಿಯನ್ನು ಜಮೀನು ಬಿಟ್ಟು ಹೋಗದಂತೆ ತಡೆದು, ಅರಣ್ಯ ಇಲಾಖೆಯ ವಾಹನಗಳನ್ನು ಜಖಂ ಮಾಡಿದರು. ಹೀಗಾಗಿ ಕೆಲ ಕಾಲ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

    ಹುಲಿಯನ್ನು ಹಿಡಿಯುವ ತನಕ ನಿಮ್ಮನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಮುಖಂಡರು ತಡೆ ನೀಡಿ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೀರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಬಡಗಲುಪುರ ಭಾಗದಲ್ಲಿ ಆಗಾಗ್ಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಗುರುವಾರ ಬಡಗಲು ಪುರದ ಮಹದೇವು ಎಂಬವರ ಮೇಲೆ ಹುಲಿ ದಾಳಿ ನಡೆಸಿದೆ. ಇದರಿಂದಾಗಿ ಆತನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಸಾವು–ಬದುಕಿನ ನಡುವೆ ಹೋರಾಟದಲ್ಲಿರುವ ಆತನಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ  ಸರ್ಕಾರ ವತಿಯಿಂದ ಸೂಕ್ತ ಪರಿಹಾರ ನೀಡಬೇಕು. ಈ ಭಾಗದಲ್ಲಿ ಹುಲಿ ಹಾಗೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಈ ಬಗ್ಗೆ ತುರ್ತಾಗಿ ಕ್ರಮವಹಿಸಬೇಕು. ಹೆಡಿಯಾಲ ವಲಯದ ಅರಣ್ಯ ಮುಂದೆ ಮುತ್ತಿಗೆ ಹಾಕುತ್ತವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    — ಬಡಗಲುಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೀದರ್: ಸಿಸಿಟಿ ಕಾಮಗಾರಿ ಸ್ಥಳದಲ್ಲೇ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ; 330 ಜನರಿಗೆ ನೆರವು

    August 23, 2026

    ಸರಗೂರಿನ ಬಿಡಗಲು ಗ್ರಾಮದಲ್ಲಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪೂರ್ಣ

    August 23, 2026

    ಬೀದರ್: ಬರ ಘೋಷಣೆ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಬೃಹತ್ ರಸ್ತೆ ತಡೆ

    August 22, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೈದಿದ್ದ ಆರೋಪಿ ಸೆರೆ

    August 25, 2026

    ತುಮಕೂರು: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು…

    ಮತದಾರರ ಕರಡು ಪಟ್ಟಿ ಪ್ರಕಟ: 2.37 ಲಕ್ಷ ಮತದಾರರು ಕರಡಿನಿಂದ ಡಿಲೀಟ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ಕೊನೆಯ ದಿನ

    August 25, 2026

    “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

    August 25, 2026

    ಕರ್ನಾಟಕ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ ಗುತ್ತಿಗೆದಾರ ಅಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

    August 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.