Subscribe to Updates
Get the latest creative news from FooBar about art, design and business.
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
- ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ’ ಪ್ರಶಸ್ತಿ
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
Author: admin
ಮಧುಗಿರಿ: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದ ದಲಿತ ಛಲವಾದಿ ಸಮುದಾಯದವರು ತಮ್ಮ ಪೂರ್ವಿಕರ ಸಮಾಧಿಗಳ ಬಳಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಕೆರೆಯ ದಂಡೆಯ ಬಳಿ ತಲತಲಾಂತರಗಳಿಂದ ತಮ್ಮ ಸಮುದಾಯದ ಹಿರಿಯರ ಅಂತ್ಯ ಸಂಸ್ಕಾರಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಕೆರೆ ಹೂಳೆತ್ತುವ ಕಾಮಗಾರಿಯ ವೇಳೆ ಸಮಾಧಿಗಳ ಸುತ್ತಮುತ್ತ ಮಣ್ಣನ್ನು ಆಳವಾಗಿ ತೆಗೆದ ಪರಿಣಾಮ, ಸಮಾಧಿಗಳ ಬಳಿ ತೆರಳಿ ಪೂಜಾ ವಿಧಿವಿಧಾನಗಳನ್ನು ನಡೆಸಲು ತೊಂದರೆ ಉಂಟಾಗಿದೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಧಿಗಳಿರುವ ಸ್ಥಳದ ಪಕ್ಕ ಮಣ್ಣು ತುಂಬಿಸಿ ಮೆಟ್ಟಿಲುಗಳನ್ನು ನಿರ್ಮಿಸಿ, ಯಥಾಸ್ಥಿತಿಯಲ್ಲಿ ಪೂಜಾ ಕಾರ್ಯಗಳನ್ನು ಸುಗಮವಾಗಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಜೊತೆಗೆ ವೀರಾಪುರ ಗ್ರಾಮದ ದಲಿತ ಛಲವಾದಿ ಜನಾಂಗದವರಿಗೆ ಪ್ರತ್ಯೇಕ ರುದ್ರಭೂಮಿಯನ್ನು ಮಂಜೂರು ಮಾಡಿಕೊಡಬೇಕೆಂದು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ಗ್ರಾಮ ಪಂಚಾಯಿತಿ ನೇರಳೇಕೆರೆ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿರುವ…
ತುಮಕೂರು: ನಗರ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ರೈಸ್ ಮಿಲ್ ಪ್ರಾಂಗಣದಲ್ಲಿ ಮಲಗಿದ್ದ ಕಾರ್ಮಿಕನ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಮನಕಲಕುವ ಘಟನೆ ವರದಿಯಾಗಿದೆ. ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಗೊಲ್ಲರಹಟ್ಟಿಯ ಬಿ.ರಂಗನಾಥ್ (36) ಮೃತ ದುರ್ದೈವಿಯಾಗಿದ್ದಾರೆ. ಮೇ 13ರಂದು ರಾತ್ರಿ ತಾನೂ ಕೆಲಸ ಮಾಡುತ್ತಿದ್ದ ಅಂತರಸನಹಳ್ಳಿಯ ಬಾಲರಾಮೇಶ್ವರ ರೈಸ್ ಮಿಲ್ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗಿದ್ದಾಗ, ರೈಸ್ ಮಿಲ್‌ನಿಂದ ಹೊರಹೋಗಲು ಮುಂದಾದ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ರಂಗನಾಥ್ ಮೇಲೆ ಹರಿಸಿಕೊಂಡು ಹೋಗಿದ್ದು ರಕ್ತಸ್ರಾವವಾಗಿ ರಂಗನಾಥ್ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತನ ಪತ್ನಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಟೀ ಅಂಗಡಿ ಇಟ್ಟುಕೊಂಡು ಜೀವನಸಾಗಿಸುತ್ತಿದ್ದ ಮಹಿಳೆಯಿಂದ ಓಟಿಪಿ ಪಡೆದು 41 ಸಾವಿರ ಖಾತೆಯಿಂದ ಎಗರಿಸಿರುವ ಘಟನೆ ನಡೆದಿದೆ. ಬಟವಾಡಿ ಹೊಯ್ಸಳಯ್ಯನ ತೋಟದ ವಾಸಿ ರಾಧಾ ಎಂಬುವರ ಮೊಬೈಲ್ ಸಂಖ್ಯೆಗೆ ಮೇ 13ರಂದು ಅಪರಿಚಿತ ನಂಬರ್ ನಿಂದ ಕರೆಬಂದಿದ್ದು, ನಿಮ್ಮ ಬ್ಯಾಂಕ್ ಖಾತೆ ಲಾಕ್ ಆಗಿದೆ. ಮೊಬೈಲ್ ಗೆ ಬಂದಿರುವ ಓಟಿಪಿ ನಂಬರ್ ಹೇಳುವಂತೆ ಕೇಳಿದ್ದಾರೆ. ಅಪರಿಚಿತನ ಮಾತು ನಂಬಿ ಓಟಿಪಿ ಸಂಖ್ಯೆ ಹೇಳಿದ ಕೂಡಲೇ ಮಹಿಳೆ ಖಾತೆಯಿಂದ 41,241 ರೂ. ಕಡಿತವಾಗಿದ್ದು, ಮೋಸಹೋದ ಬಳಿಕ ಮನನೊಂದ ಬಡ ಮಹಿಳೆಗೆ ಸೈಬರ್ ಠಾಣೆಯಲ್ಲಿ ಗುರುವಾರ ದೂರುದಾಖಲಿಸಿದ್ದಾಳೆ. ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟ ಹಣಕ್ಕೆ ಸೈಬರ್ ವಂಚಕರು ಕನ್ನಹಾಕಿದ್ದು, ಸಂಬಂಧಪಟ್ಟವರನ್ನು ಹುಡುಕಿ ಹಣ ಕೊಡಿಸುವಂತೆ ಮಹಿಳೆ ಮೊರೆಯಿಟ್ಟಿದ್ದಾಳೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಜಿಲ್ಲೆಯ ರೈತರ ಮತ್ತು ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲು ರೈತ ಸಂಘ ತೀರ್ಮಾನಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಟಿ. ಆರ್. ಯೋಗೇಶ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸಚಿವ ಜಿ.ಪರಮೇಶ್ವರ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ತಂದು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ, ಅನೇಕ ಗ್ರಾಮಗಳಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡಿದೆ ಎನ್ನಲಾಗುತ್ತಿದ್ದರೂ, ಹಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಬರಗಾಲದ ಪರಿಣಾಮ ಜಿಲ್ಲೆಯ ತೆಂಗು, ಅಡಿಕೆ ಸೇರಿದಂತೆ ವಾಣಿಜ್ಯ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಜಿಲ್ಲಾಡಳಿತ ಇದುವರೆಗೆ ಸಮಗ್ರ…
ಮಧುಗಿರಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳುಗಳ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಮೇ 2026ರ ತಿಂಗಳಿನಲ್ಲಿ ವಿತರಿಸಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ಅಂತ್ಯೋದಯ ಪಡಿತರ ಚೀಟಿ (ಎಎವೈ)ಗೆ ಮಾಹೆಯಾನ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ, ಮಾಹೆಯಾನ 14.ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ಸೇರಿದಂತೆ ಒಟ್ಟು 70. ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ (ಕೇಂದ್ರ) ಪಡಿತರ ಚೀಟಿ (ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 3.ಕೆ.ಜಿ.ಯಂತೆ 6.ಕೆ.ಜಿ. ರಾಗಿ ಹಾಗೂ ಮಾಹೆಯಾನ 2.ಕೆ.ಜಿ.ಯಂತೆ 4.ಕೆ.ಜಿ.ಅಕ್ಕಿ ಸೇರಿದಂತೆ ಒಟ್ಟು 10.ಕೆ.ಜಿ. ರಾಗಿ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ(ರಾಜ್ಯ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 5.ಕೆ.ಜಿ.ಯಂತೆ ಒಟ್ಟು 10.ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು. ತಾಲ್ಲೂಕಿನ ಪಡಿತರ ಚೀಟಿದಾರರು ಮೇ ಮತ್ತು ಜೂನ್ ಮಾಹೆಗೆ ಸಂಬಂಧಿಸಿದ 2 ತಿಂಗಳ ಪಡಿತರವನ್ನು ಮೇ-2026ರ ಮಾಹೆಯಲ್ಲಿಯೇ ಒಟ್ಟಿಗೆ ಪಡೆಯಬೇಕಾಗಿದೆ.…
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ 3 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಹಾಗೂ ಜಿಲ್ಲೆಯ ಫಲಾನುಭವಿಗಳಿಗೆ ಸಾರ್ಥಕ ಸೇವೆಗಳ ಸಮರ್ಪಣೆ ಕಾರ್ಯಕ್ರಮವನ್ನು ಮೇ 20 ರ ಬದಲಾಗಿ ಮೇ 19ರಂದು ಒಂದು ದಿನ ಮುಂಚಿತವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿ ಅವುಗಳನ್ನು ಆದ್ಯತಾ ಕಾರ್ಯಕ್ರಮಗಳಾಗಿ ತೆಗೆದುಕೊಂಡು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಈ ವಿಷಯವನ್ನು ಜನಸಮುದಾಯದೊಂದಿಗೆ ಹಂಚಿಕೊಳ್ಳಲು ಮೇ 20ರಂದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ನಿಗದಿಪಡಿಸಲಾಗಿತ್ತು. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬೇಡಿಕೆ ಈಡೇರಿಸುವಂತೆ ಅಂದೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರುವ ಜನರಿಗೆ ತೊಂದರೆಯಾಗಬಾರದೆಂದು…
ತುಮಕೂರು: ಕೆರೆಯ ಮಣ್ಣನ್ನು ರೈತರು ಜಮೀನಿಗೆ ಬಳಸಿಕೊಳ್ಳಲು ಹಾಗೂ ಸಾರ್ವಜನಿಕ ಉದ್ದೇಶದ ಸರ್ಕಾರಿ ಯೋಜನೆಗಳಿಗೆ ಬಳಸಿಕೊಳ್ಳಲು ಅಡ್ಡಿಪಡಿಸುವಂತಿಲ್ಲ. ಸರ್ಕಾರದ ಆದೇಶವನ್ನು ಪಾಲಿಸಿ ಕೆರೆ ಮಣ್ಣು ಬಳಕೆಗೆ ಮೇ 21ರೊಳಗಾಗಿ ಅಗತ್ಯ ಮಾರ್ಗಸೂಚಿ ಹೊರಡಿಸುವಂತೆ ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ಜರುಗಿದ ದಿಶಾ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲಿ ಕೆರೆಗಳ ಮಣ್ಣು ಎತ್ತುವಳಿ ಸಂಬಂಧ ವಿಸ್ತೃತ ಚರ್ಚೆ ನಡೆಯಿತು. ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ವಿಷಯ ಪ್ರಸ್ತಾಪಿಸಿ ರೈಲ್ವೆ ಯೋಜನೆಗೆ ಕೆರೆಯ ಅಂಗಳದಲ್ಲಿ ಮಣ್ಣು ತೆಗೆದುಕೊಂಡು ಹೋಗಿದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಸರಿಯಿಲ್ಲ ಎಂದರು. ಪೂರಕ ಧ್ವನಿಯೆತ್ತಿದ ಶಾಸಕರಾದ ಬಿ.ಸುರೇಶ್ ಗೌಡ ಗಣಿ ಭೂ ವಿಜ್ಞಾನ ಇಲಾಖೆಯವರು ರೈತರು ಕೃಷಿ ಕಾರ್ಯಕ್ಕೆ ಕೆರೆ ಹೂಳನ್ನು ಟ್ರ್ಯಾಕ್ಟರ್‌ನಲ್ಲಿ, ಲಾರಿಯಲ್ಲಿ ಸಾಗಿಸಲು ಸರ್ಕಾರವೇ ಅವಕಾಶ ಕಲ್ಪಿಸಿದೆ. ಆದರೆ ಗಣಿ ಇಲಾಖೆಯವರು ದಾರಿ ಮಧ್ಯೆ ತಡೆದು ರೈತರಿಗೆ…
ಬಹಳ ಹಿಂದೆ ಒಂದು ಕಾಡಿನ ಕುಟೀರದಲ್ಲಿ ಬಾದರಾಯಣ ಎಂಬ ಗುರುವಿದ್ದರು. ಇವರಿಗೆ ನಾಲ್ವರು ಶಿಷ್ಯರು ಅನಿಕ, ಮನಿಕ, ಸುನಿಕ ಮತ್ತು ಮುನಕ ಎಂಬ ನಾಲ್ವರು. ಬಹಳ ಕಾಲದ ನಂತರ ಆ ಕಾಡಿಗೆ ಭೀಕರ ಬರಗಾಲ ಮತ್ತು ಕ್ಷಾಮ ತಲೆದೋರಿತು. ಅವರು ತಿನ್ನಲು ಕುಡಿಯಲು ಏನೂ ಸಿಗದಂತಾಯಿತು ಅನಿವಾರ್ಯವಾಗಿ ಕಾಡನ್ನು ತೊರೆಯಬೇಕಾದ ಪರಿಸ್ಥಿತಿ ಬಂದೊದಗಿತು. ಕೊನೆಗೆ ಗುರುಗಳು ನಾಲ್ವರು ಶಿಷ್ಯರನ್ನು ಉದ್ದೇಶಿಸಿ ನೋಡಿ ಶಿಷ್ಯರೆ ನಾವು ಪ್ರಯಾಣ ಮಾಡುವ ಮಾರ್ಗ ಮಧ್ಯೆ ದಣಿವಾದಾಗ ಕುಡಿಯಲು ನೀರಾದರೂ ಬೇಕಾಗುತ್ತದೆ, ನೀವುಗಳು ಹೇಗಾದರೂ ಮಾಡಿ ದೊನ್ನೆಗಳಲ್ಲಿ ನೀರನ್ನಾದರೂ ತನ್ನಿರಿ ಎಂದಾಗ ಶಿಷ್ಯರುಗಳು ಬಹಳ ಅಲೆದಾಡಿ ಕೇವಲ 4 ದೊನ್ನೆಗಳಲ್ಲಿ ಮಾತ್ರವೇ ನೀರು ದೊರಕಿತು ಅದನ್ನೇ ತಂದು ಗುರುಗಳಿಗೆ ತೋರಿಸಿ ಗುರುಗಳೇ ಈ 4 ದೊನ್ನೆಗಳ ನೀರು ಕೇವಲ ನಿಮಗಾಗಿ ಮಾತ್ರ ನಾವುಗಳು ದಣಿವನ್ನು ಹೇಗೋ ಸಂಭಾಳಿಸುತ್ತೇವೆ ಇನ್ನು ಹೊರಡೋಣವೇ ಗುರುಗಳೇ ಎಂದಾಗ ಗುರುಗಳು ಆಯಿತು ಎಂದು ಹೇಳಿ ಹೊರಟರು. ಬಹಳ ದೂರ ನಡೆದರು ಎಲ್ಲರಿಗೂ ದಣಿವು…
ಚಿಕ್ಕನಾಯಕನಹಳ್ಳಿ: ಎಸ್ ಎಸ್ ಎಲ್ ಸಿಯಲ್ಲಿ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಪಡೆಯುವಂತೆ ಪ್ರೇರೇಪಿಸಿದ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಮೇ 16 ರಂದು ಪಟ್ಟಣದಲ್ಲಿ ‘ನಮಗೆ ಪ್ರೇರಣೆ ನಮ್ಮ ಮೇಷ್ಟ್ರು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲೂಕು ಆಡಳಿತ ಸೌಧದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಬಿ ಚಾರಿಟಬಲ್ ಟ್ರಸ್ಟ್ ಜ್ಞಾನಕಲ ಇವರ ವತಿಯಿಂದ ನಾಳೆ (ಮೇ 16) ಬೆಳಿಗ್ಗೆ 11 ಗಂಟೆಗೆ ಪಟ್ಟಣದ ತೀನಾಂಶ್ರೀ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಕಾರ್ಯಕ್ರಮದ ವಿಶೇಷವೆಂದರೆ, ಸಾಧನೆ ಮಾಡಿದ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ. 2024-25ನೇ ಸಾಲಿನಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಹಂದನಕೆರೆಯ ವಿದ್ಯಾರ್ಥಿ ಕಿಶನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 623 ಅಂಕ ಗಳಿಸಿದ ಸಿ.ಎನ್. ಹಳ್ಳಿ ಮೊರಾರ್ಜಿ ವಸತಿ ಶಾಲೆಯ ಯಶವಂತ್ ಕೆ. ಅಧ್ಯಕ್ಷತೆ ವಹಿಸಲಿದ್ದು, 620 ಅಂಕ ಪಡೆದ…
ತುಮಕೂರು: ರಾಜ್ಯ ಸರ್ಕಾರ ರಸಾಯನ ಹಂಚಿದಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಹಂಚಿಕೆ ಮಾಡಿದ್ದು, ರೋಸ್ಟರ್ ಬಿಂದು ಹಂಚಿಕೆಯೂ ಸಮಾಧಾನ ತಂದಿಲ್ಲ ಎಂದು ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ತುಮಕೂರು ವಿವಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಒಳಮೀಸಲು ಸಮಿತಿ ಅಧ್ಯಕ್ಷನಾಗಿ ಹೈಕೋರ್ಟ್ ಅಭಿಪ್ರಾಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲು ನಿಗದಿ ಮಾಡಿದ್ದೇವು. ಅತ್ಯಂತ ಅವಕಾಶವಂಚಿತ ಅಲೆಮಾರಿ ಸಮುದಾಯಕ್ಕೂ ಶೇ 1ರಷ್ಟು ಮೀಸಲು ದೊರೆಯುವಂತೆ ಮಾಡಿದ್ದೇವು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ರಸಾಯನ ಹಂಚಿದ ಹಾಗೆ ಎಬಿಸಿ ಕೆಟಗರಿ ಮಾಡಿ ತಲಾ ಪ್ರತಿಶತ 5.25%, 5.25% ಹಾಗೂ 4.5% ರಷ್ಟು ಮೀಸಲು ಹಂಚಿಕೆ ಮಾಡಿದ್ದು, ರೋಸ್ಟರ್ ಪದ್ಧತಿಯನ್ನು ಸರಿಯಾಗಿ ಮಾಡಿಲ್ಲ. ಇದರಿಂದ ಯಾರಿಗೂ ನ್ಯಾಯ ಸಿಕ್ಕಿಲ್ಲ. ಯಾರಿಗೂ ಸಮಾಧಾನ ಆಗಿಲ್ಲ ಇದು ಕೇವಲ ರಾಜೀ ಸೂತ್ರ ಮಾತ್ರ ಎಂದರು. ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಅವರು ಸರ್ಕಾರದಲ್ಲಿ 2 ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಒಂದು…