nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026
    Facebook Twitter Instagram
    ಟ್ರೆಂಡಿಂಗ್
    • ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು
    • ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ
    • AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?
    • ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?
    • ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
    • ತುಮಕೂರಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶ: ತಕ್ಷಣವೇ ನೇಮಕಾತಿ!
    • ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ
    • ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಯುವಕನ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುರು ಶಿಷ್ಯರು: ಈ ದಿನದ ಕಥೆ
    ಲೇಖನ May 16, 2026

    ಗುರು ಶಿಷ್ಯರು: ಈ ದಿನದ ಕಥೆ

    By adminMay 16, 2026No Comments3 Mins Read
    guru shishyaru

    ಬಹಳ ಹಿಂದೆ ಒಂದು ಕಾಡಿನ ಕುಟೀರದಲ್ಲಿ ಬಾದರಾಯಣ ಎಂಬ ಗುರುವಿದ್ದರು. ಇವರಿಗೆ ನಾಲ್ವರು ಶಿಷ್ಯರು ಅನಿಕ, ಮನಿಕ, ಸುನಿಕ ಮತ್ತು ಮುನಕ ಎಂಬ ನಾಲ್ವರು.  ಬಹಳ ಕಾಲದ ನಂತರ ಆ ಕಾಡಿಗೆ ಭೀಕರ ಬರಗಾಲ ಮತ್ತು ಕ್ಷಾಮ ತಲೆದೋರಿತು. ಅವರು ತಿನ್ನಲು ಕುಡಿಯಲು ಏನೂ ಸಿಗದಂತಾಯಿತು ಅನಿವಾರ್ಯವಾಗಿ ಕಾಡನ್ನು ತೊರೆಯಬೇಕಾದ ಪರಿಸ್ಥಿತಿ ಬಂದೊದಗಿತು. ಕೊನೆಗೆ ಗುರುಗಳು ನಾಲ್ವರು ಶಿಷ್ಯರನ್ನು ಉದ್ದೇಶಿಸಿ ನೋಡಿ ಶಿಷ್ಯರೆ ನಾವು ಪ್ರಯಾಣ ಮಾಡುವ ಮಾರ್ಗ ಮಧ್ಯೆ ದಣಿವಾದಾಗ ಕುಡಿಯಲು ನೀರಾದರೂ ಬೇಕಾಗುತ್ತದೆ, ನೀವುಗಳು ಹೇಗಾದರೂ ಮಾಡಿ ದೊನ್ನೆಗಳಲ್ಲಿ ನೀರನ್ನಾದರೂ ತನ್ನಿರಿ ಎಂದಾಗ ಶಿಷ್ಯರುಗಳು ಬಹಳ ಅಲೆದಾಡಿ ಕೇವಲ 4 ದೊನ್ನೆಗಳಲ್ಲಿ ಮಾತ್ರವೇ ನೀರು ದೊರಕಿತು ಅದನ್ನೇ ತಂದು ಗುರುಗಳಿಗೆ ತೋರಿಸಿ ಗುರುಗಳೇ ಈ 4 ದೊನ್ನೆಗಳ ನೀರು ಕೇವಲ ನಿಮಗಾಗಿ ಮಾತ್ರ ನಾವುಗಳು ದಣಿವನ್ನು ಹೇಗೋ ಸಂಭಾಳಿಸುತ್ತೇವೆ ಇನ್ನು ಹೊರಡೋಣವೇ ಗುರುಗಳೇ ಎಂದಾಗ ಗುರುಗಳು ಆಯಿತು ಎಂದು ಹೇಳಿ ಹೊರಟರು.

    ಬಹಳ ದೂರ ನಡೆದರು ಎಲ್ಲರಿಗೂ ದಣಿವು ಶುರುವಾಯಿತು ಗುರುಗಳು ಹಿಂದೆಬರುತ್ತಿದ್ದ ಶಿಷ್ಯರನ್ನು ನೋಡಿ ನನಗೆ ತುಂಬಾ ದಣಿವಾದಾಗ ಮಾತ್ರ ನೀರು ಕೇಳುತ್ತೇನೆ ನೀವುಗಳು ಯಾರೂ ಕುಡಿಯಬಾರದು, ನಾನು ಕೇಳಿದಾಗ ಮಾತ್ರ ನನಗೆ ಕೊಡಬೇಕು ಎಂದಾಗ ಶಿಷ್ಯಂದಿರೆಲ್ಲಾ ಆಯಿತು ಗುರುಗಳೆ ಎಂದರು. ಎಷ್ಟು ದೂರ ನಡೆದರೂ ಗುರುಗಳು ನೀರನ್ನೇ ಕೇಳಲಿಲ್ಲ ಕೊನೆಗೆ ಅನಿಕನಿಗೆ ಬಹಳ ದಣಿವಾಗಿ ಇನ್ನು ದಣಿವು ತಡೆಯಲಾರೆ ನೀರು ಕುಡಿಯದಿದ್ದರೆ ಸತ್ತೇ ಹೋಗುತ್ತೇನೆ ಅನಿಸತೊಡಗಿತು. ಕೊನೆಗೆ ಗುರುಗಳು ಕೇಳಿದಾಗ ನೋಡೋಣ ಎಂದು ಯೋಚಿಸಿ ತನ್ನ ಕೈಲಿದ್ದ ದೊನ್ನೆಯ ನೀರನ್ನು ಕುಡಿದು ಸಮಾಧಾನಗೊಂಡನು. ಹೀಗೆಯೇ ಪ್ರಯಾಣ ಮುಂದುವರೆಯಿತು. ಮತ್ತಷ್ಟು ಮುಂದೆ ಬಂದರೂ ಗುರುಗಳು ನೀರು ಕೇಳಲೇ ಇಲ್ಲ ಮನಿಕನಿಗೆ ಅಧಿಕ ಧಣಿವಾಗಿ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಂಡು ಅವನೂ ತನ್ನ ಕೈಲಿದ್ದ ನೀರನ್ನು ಕುಡಿದು ಬಿಟ್ಟನು.

    ಮತ್ತೆ ಪ್ರಯಾಣ ಮುಂದುವರೆಯಿತು ಗುರುಗಳು ನೀರು ಕೇಳಲೇ ಇಲ್ಲ ಕೊನಗೆ ಸುನಿಕನಿಗೂ ಬಹಳ ದಣಿವಾಗಿ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಳ್ಳುತ್ತಾ ಅವನ ಕೈಲಿದ್ದ ದೊನ್ನೆಯ ನೀರನ್ನು ಕುಡಿದು ಬಿಟ್ಟನು. ಹೀಗೆಯೇ ಪ್ರಯಾಣ ಮುಂದುವರೆದು ಕೊನಗೆ ಮುನಕನಿಗೆ ಸಾವೇ ಎದುರುಬಂದಂತೆ ದಣಿವಾಯಿತು. ಅವನೂ ಕೂಡ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಂಡು ತನ್ನ ಕೈಲಿದ್ದ ನೀರನ್ನು ಕುಡಿದುಬಿಟ್ಟನು. ಕೊನಗೆ ಬಹಳ ದೂರ ನಡೆದಾಗ ದೂರದಲ್ಲಿ ಒಂದು ಬಾವಿ ಕಾಣಿಸಿತು. ಮುಂದೆ ಹತ್ತಿರದಲ್ಲಿ ಒಂದು ಗ್ರಾಮವಿರಬೇಕು ಎಂದು ಎಲ್ಲರೂ ಹರ್ಷಿತರಾದರು ಮತ್ತು ಬಾವಿಯ ಬಳಿ ಹೋದರು ಅಲ್ಲಿ ರಾಟೆಗೆ ಒಂದು ಹಗ್ಗಹಾಕಿ ಒಂದು ಬಿಂದಿಗೆ ಹಗ್ಗಕ್ಕೆ ಕುಣಿಕೆ ಹಾಕಲಾಗಿತ್ತು. ನಂತರ ಗುರುಗಳು ನನಗೆ ತುಂಬಾ ದಣಿವಾಗಿದೆ ಮೊದಲು ನೀರು ಕೊಡಿ ಎಂದಾಗ ಶಿಷ್ಯರು ಬಾವಿಯಿಂದ ನೀರು ಸೇದಿ ಗುರುಗಳಿಗೆ ಕುಡಿಸಿದರು.

    ನಂತರ ಶಿಷ್ಯರು ಅತ್ಯಂತ ಆಶ್ಚರ್ಯಚಕಿತರಾಗಿ ಗುರುಗಳೇ ನಾವು ನಿಮಗಾಗಿ ತಂದಿದ್ದ ನೀರನ್ನು ದಣಿವು ತಡೆಯಲಾಗದೇ ಮಾರ್ಗ ಮಧ್ಯೇ ನಾವುಗಳೇ ಕುಡಿದು ಬಿಟ್ಟೆವು ನೀವು ಇಲ್ಲಿಯವರೆಗೂ ನೀರನ್ನೇ ಕೇಳಲಿಲ್ಲ ಹೇಗೆ ದಣಿವನ್ನು ನಿವಾರಿಸಿಕೊಂಡಿರಿ ಎಂದಾಗ ಗುರುಗಳು ಶಂತಚಿತ್ತದಿಂದ ಹೀಗೆ ಹೇಳಿದರು ನಾವು ದೃಢ ಸಂಕಲ್ಪ ಮಾಡಿ ಗುರಿಮುಟ್ಟುವುದೊಂದೇ ನಮ್ಮ ಧ್ಯೇಯ ಮಾಡಿಕೊಂಡಾಗ ನಮ್ಮ ಇತರ ಸಮಸ್ಯಗಳು ಏನಿದ್ದರೂ ಎಲ್ಲವೂ ಗೌಣವಾಗುತ್ತವೆ, ನಾನು ಇದನ್ನೇ ಮಾಡಿದ್ದು ಆದರೆ ನೀವುಗಳು ಗುರಿಯ ಕಡೆ ಮುಖ ಮಾಡದೇ ಪ್ರಯಾಣದ ಕಡೆ ಮುಖ ಮಾಡಿದ್ದರಿಂದ ನಿಮಗೆ ಸಮಸ್ಯೆ ಯಾಯಿತು ನಾನು ನಿಮಗಾಗಿಯೇ ನೀರನ್ನು ತರಿಸಿದ್ದು ಆದ್ದರಿಂದಲೇ ನೀವು ನೀರು ಕುಡಿದು ಜೀವ ಉಳಿಸಿಕೊಂಡಿರಿ ಎಂದಾಗ ಶಿಷ್ಯರಿಂದೆಲ್ಲಾ  ನಾಚಿ ತಲೆಬಾಗಿಸಿ ಗುರುಗಳಲ್ಲಿ ಕ್ಷಮೆ ಕೇಳಿ ಅಂದಿನಿಂದ ಏಕಾಗ್ರತೆ ಮತ್ತು ದೃಢ ಸಂಕಲ್ಪದಿಂದ ಸಾಧಿಸಿ ಗುರುಮೆಚ್ಚದ ಉತ್ತಮ ಶಿಷ್ಯಂದಿರಾದರು.

    venugopal
    ರಚನೆ: ವೇಣುಗೋಪಾಲ್

    ಸಂಪಾದಕರ ಮಾತು:

    ಇಂದಿನ “ಗುರು ಶಿಷ್ಯರು” ಕಥೆ ಜೀವನದ ಅತ್ಯಂತ ಮಹತ್ವದ ಸಂದೇಶವೊಂದನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸುತ್ತದೆ. ಬದುಕಿನಲ್ಲಿ ಸಂಕಷ್ಟಗಳು, ದಣಿವು, ಕೊರತೆಗಳು ಬಂದಾಗ ಹಲವರು ಮಧ್ಯದಲ್ಲೇ ಮನಸ್ಸು ಬದಲಾಯಿಸಿ ಗುರಿಯನ್ನು ಮರೆತುಬಿಡುತ್ತಾರೆ. ಆದರೆ ದೃಢ ಸಂಕಲ್ಪ ಮತ್ತು ಏಕಾಗ್ರತೆ ಇದ್ದರೆ ಎಷ್ಟೇ ಕಷ್ಟ ಬಂದರೂ ಗುರಿಯನ್ನು ತಲುಪಬಹುದು ಎಂಬುದನ್ನು ಗುರು ಬಾದರಾಯಣರ ನಡೆ ಸ್ಪಷ್ಟವಾಗಿ ಸಾರುತ್ತದೆ. ಗುರುಗಳು ಶಿಷ್ಯರಿಗೆ ನೀರು ತರಲು ಹೇಳಿದರೂ, ಅದನ್ನು ತಮ್ಮಗಾಗಿ ಮಾತ್ರವಲ್ಲ ಶಿಷ್ಯರ ಜೀವ ಉಳಿಯಲೆಂದೇ ತರಿಸಿದ್ದರು ಎಂಬ ಅರ್ಥ ಕೊನೆಯಲ್ಲಿ ಬೆಳಕಿಗೆ ಬರುತ್ತದೆ. ನಿಜವಾದ ಗುರು ಎಂದರೆ ಕೇವಲ ಬೋಧನೆ ಮಾಡುವವನು ಅಲ್ಲ, ಶಿಷ್ಯರ ಒಳಿತಿಗಾಗಿ ದೂರದೃಷ್ಟಿಯಿಂದ ಯೋಚಿಸುವ ಮಾರ್ಗದರ್ಶಕ. ಇದೇ ವೇಳೆ ಶಿಷ್ಯರು ಮಾಡಿದ ತಪ್ಪು ಮಾನವ ಸಹಜ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ — ಗುರಿಗಿಂತ ತಾತ್ಕಾಲಿಕ ಕಷ್ಟಗಳಿಗೆ ಹೆಚ್ಚು ಮಹತ್ವ ಕೊಡುವುದು.

    ಈ ಕಥೆ ವಿದ್ಯಾರ್ಥಿಗಳು, ಯುವಕರು ಹಾಗೂ ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ. ಗುರಿಯತ್ತ ಮನಸ್ಸು ನೆಟ್ಟಾಗ ಸಣ್ಣ ಸಣ್ಣ ಅಡಚಣೆಗಳು ನಮ್ಮನ್ನು ತಡೆಯಲಾರವು. ಏಕಾಗ್ರತೆ, ಸಹನೆ ಮತ್ತು ಗುರುಗಳ ಮಾರ್ಗದರ್ಶನ ಇದ್ದರೆ ಸಾಧನೆ ನಿಶ್ಚಿತ ಎಂಬ ಸತ್ಯವನ್ನು ಈ ಕಥೆ ಸುಂದರವಾಗಿ ತಿಳಿಸುತ್ತದೆ.

    — ಸಂಪಾದಕರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?

    October 5, 2026

    ಶಿವನ ಕೊರಳಿನಿಂದ ಬುದ್ಧನ ಧ್ಯಾನದವರೆಗೆ ನಾಗರಹಾವಿನ ನಂಟೇಕೆ? ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿರುವ ನಿಗೂಢ ನಂಬಿಕೆಯ ಕಥೆ ಇಲ್ಲಿದೆ!

    October 4, 2026

    ‘ಕಸ’ವೇ ಇಲ್ಲಿ ಹರಕೆ! ಹಳೆಯ ವಸ್ತುಗಳನ್ನು ದೇವಿಗೆ ಅರ್ಪಿಸುವ ಅಪರೂಪದ ಆಚರಣೆ ಎಲ್ಲಿದೆ ಗೊತ್ತಾ?

    October 2, 2026

    Leave A Reply Cancel Reply

    Our Picks

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026

    ಫ್ಲೈದುಬೈ ವಿಮಾನ ದಾಳಿ: ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು ?

    October 2, 2026

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ…

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026

    ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.