Subscribe to Updates
Get the latest creative news from FooBar about art, design and business.
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
- ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
- ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
- ಬಾಡಿಗೆ ಕಾರು ಚಾಲಕನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
Author: admin
ತುಮಕೂರು: ನವೀಕರಿಸಬಹುದಾದ ಇಂಧನ ಮೂಲಗಳೇ ಭವಿಷ್ಯದ ಭರವಸೆ. ಸಿದ್ಧಗಂಗಾ ವೈದ್ಯಕೀಯ ಕಾಲೇಜು ಈ ನಿಟ್ಟಿನಲ್ಲಿ ವಿದ್ಯುತ್ ಸ್ವಾವಲಂಬನೆಗಾಗಿ ಸೋಲಾರ್ ಶಕ್ತಿ ಉತ್ಪಾದಿಸಿ ಪರಿಸರ ಕಾಳಜಿಯ ಬದ್ಧತೆ ನಿರೂಪಿಸಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು. ಬಿಜಾಪುರ ಜಿಲ್ಲೆಯ ಝಳಕಿ ಬಳಿ ನಿಯೋಗ್ರೀನ್ ಸಂಸ್ಥೆಯ ಜೊತೆ ಜಂಟಿಯಾಗಿ ನಿರ್ಮಾಣವಾಗಿರುವ 2 ಮೆಗಾ ವ್ಯಾಟ್ ನ ಸೋಲಾರ್ ಘಟಕಕಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯುತ್ ಉತ್ಪಾದನೆಗಾಗಿ ಅತಿವಿರಳವಾಗಿ ಸಿಗುವ ಕಲ್ಲಿದ್ದಲು ಮುಂತಾದ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಇದು ಪರಿಸರಕ್ಕೆ ಎಂದಿಗೂ ಮಾರಕವಾಗುವಂತಹದ್ದು, ಬೃಹತ್ ಆರೋಗ್ಯ ಸೇವೆಯನ್ನು ನಿರ್ವಹಿಸಲು ನಮಗೆ ಮಾಸಿಕ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಬಳಕೆ ಅನಿವಾರ್ಯವಾಗಿತ್ತು ಇದೀಗ ಸೋಲಾರ್ ಶಕ್ತಿ ಬಳಕೆಯಿಂದ ದಾಖಲೆಯ ಮಟ್ಟದಲ್ಲಿ ತಗ್ಗಲಿದೆ ಎಂದರು. ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಟಿ.ಎಮ್. ಸ್ವಾಮಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಆರಂಭದ ದಿನಗಳಲ್ಲೇ ಹೊಸದುರ್ಗ ಬಳಿಯ ಮುತ್ತೂಡು ಎಂಬಲ್ಲಿ 1 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಿತ್ತು, ಇದೀಗ…
ಚಿಕ್ಕನಾಯಕನಹಳ್ಳಿ: ತಾಲೂಕಿನ ಹಂದನಕೆರೆ ಗ್ರಾಮದ ಜನರು ಸರಿಯಾದ ಆ್ಯಂಬುಲೆನ್ಸ್ ಸೇವೆಯಿಲ್ಲದೇ ಪರದಾಡುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸರಿಯಾದ ವೈದ್ಯಕೀಯ ಆರೈಕೆಯಿಲ್ಲದೇ ಕಂಗೆಟ್ಟಿದ್ದಾರೆ. ಹಂದನಕೆರೆ ಗ್ರಾಮಸ್ಥರು ಹಾಗೂ ಸಬ್ಬೆನಹಳ್ಳಿ ಡಿಎಸ್ಎಸ್ ತಾಲೂಕು ಸಂಚಾಲಕ ವಸಂತ್ ಅವರು ಈ ಬಗ್ಗೆ ತಕ್ಷಣವೇ ಸರ್ಕಾರ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಹಂದನಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲ. ಜನರು ಈ ಬಗ್ಗೆ ಪ್ರಶ್ನಿಸಿದ್ರೆ, ಆ್ಯಂಬುಲೆನ್ಸ್ ನ ಟೈರ್ ಕೆಟ್ಟು ಹೋಗಿದೆ ಅಂತ ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ್ಯಂಬುಲೆನ್ಸ್ ಸಮಸ್ಯೆ ಬಗ್ಗೆ ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಗಳಾಗಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಎಂದು ಹಂದನಕೆರೆ ಗ್ರಾಮಸ್ಥರು ಹಾಗೂ ಸಬ್ಬೆನಹಳ್ಳಿ ಡಿಎಸ್ಎಸ್ ತಾಲೂಕು ಸಂಚಾಲಕ ವಸಂತ್ ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೊರಟಗೆರೆ: ಬೂದಗವಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಬಿ.ಎನ್. ಕವಿತಾ ರಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿಯ 3ನೇ ಅವಧಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ಬಿ.ಎನ್. ಕವಿತಾರಮೇಶ್ ಆಯ್ಕೆಯಾದರು. ಮಲ್ಲೇಕಾವು ಗ್ರಾಮ ಪಂಚಾಯಿತಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಬಿ.ಎನ್.ಕವಿತಾರಮೇಶ್, ಬೂದಗವಿ ಗ್ರಾಮ ಪಂಚಾಯಿತಿಯ 19 ಜನ ಸದಸ್ಯರು ಪೈಕಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಸಿದ್ದರಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಮುಂದುವರಿಕೆಯಾಗಿದ್ದಾರೆ. ನೂತನ ಅಧ್ಯಕ್ಷೆ ಕವಿತಾ ರಮೇಶ್ ಮಾತನಾಡಿ, ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸುವ ಭರವಸೆ ನೀಡಿದರು. ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಕೆ. ನೇತೃತ್ವದಲ್ಲಿ ಚುನಾವಣೆ ನಡೆಯಿತು. ಪಿಎಸ್ ಐ ಚೇತನ್ ಕುಮಾರ್, ಸ್ಥಳೀಯ ಜನ ಪ್ರತಿನಿಧಿಗಳು ಯುವ ಮುಖಂಡರು ಸಾರ್ವಜನಿಕರು ಹಾಜರಿದ್ದರು. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಳ್ತಂಗಡಿ: ಭರತ ಖಂಡದ ಜೈನ ಪರಂಪರೆಯಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಸಂಸ್ಕಾರ ದಿನ ಭಜನೆಗಳಂತಹ ಧರ್ಮ ಕಾರ್ಯದಲ್ಲಿ ಮಂಗಳೂರು ವಲಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷೇ ,ತ್ಯಾಗಿಸೇವಾ ಸಮಿತಿಯ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಸಂತಸ ವ್ಯಕ್ತಪಡಿಸಿದರು ಅವರಿಂದು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ ಮಂಗಳೂರು ವಲಯ ಮಟ್ಟದ ಜಿನಭಜನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಜೈನ್ ಮಿಲನ್ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಪಂಚ ಕಲ್ಯಾಣಗಳು ಬಸದಿಗಳ ಜೀರ್ಣೋದ್ದಾರ, ಧಾರ್ಮಿಕ ಕಾರ್ಯಕ್ರಮಗಳು ಸಂತಸ ತಂದಿದೆ. ಇದರಿಂದ ಸಂಸ್ಕಾರ ಉಳಿಯುತ್ತದೆ ಹಾಗೂ ಬೆಳೆಯುತ್ತದೆ, ಜಿನ ಭಜನೆಯಿಂದ ಸಮಾಜದಲ್ಲಿ ಬಸದಿಗಳ ಸ್ವಚ್ಛತೆ , ಸ್ವಾಧ್ಯಾಯದಿಂದ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚುತ್ತಿದ್ದು, ಮಹಿಳಾ ವಿಭಾಗ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಭಜನೆ ನೆನಪಿಗೆ ಸುಲಭವಾದದ್ದು, ಮನಸ್ಸಿಗೆ ಮುದ ನೀಡಲಿದೆ, ಈ ಹಿಂದೆ ಬಸದಿ ಎನ್ನುವುದು ಮನೆಯಲ್ಲಿತ್ತು ಈಗ…
ತುಮಕೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆ, ವಿಭೂತಿ ಘಟಕ, ಬೋಜನಾಲಯ ಕೇಂದ್ರ ಹಾಗೂ ಮಿಲ್ಟಿ ಹೋಟೆಲ್ ಯೋಜನೆಗಳಡಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ 2024-25ನೇ ಸಾಲಿಗಾಗಿ ವಿವಿಧ ಯೋಜನೆಗಳಡಿ ಫಲಾನುಭವಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಪಾರದರ್ಶಕವಾಗಿ ಅರ್ಹರನ್ನು ಆಯ್ಕೆ ಮಾಡಲಾಯಿತು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 247 ಅರ್ಜಿಗಳ ಪೈಕಿ 22, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 1,420 ಅರ್ಜಿಗಳ ಪೈಕಿ 19, ಕರ್ನಾಟಕ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 825 ಅರ್ಜಿಗಳಲ್ಲಿ…
ಬೆಂಗಳೂರು: ಮುಸ್ಲಿಮ್ ಸಮುದಾಯದ ಮತಗಳಿಂದ ತನಗೆ ಸೋಲಾಯ್ತು ಎಂದು ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಸೋಲಿನ ಬಗ್ಗೆ ನೀಡಿರುವ ಹೇಳಿಕೆಗೆ ಬೆಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಇಬ್ರಾಹಿಂ, ಪ್ರತಿಕ್ರಿಯೆ ನೀಡಿದರು. ಅಪ್ಪಾ ನಿಖಿಲಾ, ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ರಾಮನಗರದಲ್ಲಿ ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು. ಪ್ರಧಾನಿಯಾಗಿದ್ದಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ. ಅಷ್ಟೇ ಅಲ್ಲ ನಿಮ್ಮಪ್ಪ ಸಾಬ್ರ ಮತಗಳಿಂದಲೇ ಗೆದ್ದಿದ್ದು ಎಂದು ಇಬ್ರಾಹಿಂ ತಿರುಗೇಟು ನೀಡಿದರು. ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದಾಗಲೇ ನಾನು ಹೇಳಿದ್ದೆ, ಚನ್ನಪಟ್ಟಣ ಚುನಾವಣೆನ ನನ್ನ ಬಿಟ್ಟು ನಡೆಸಿ ಎಂದಿದ್ದೆ. ನಾನಿದ್ದಾಗ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ರು, ಈಗ ನಿಖಿಲ್ ಕುಮಾರಸ್ವಾಮಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ಸುದ್ದಿಗೋಷ್ಠಿ ನೋಡಿ ಅಯ್ಯೋ ಅನಿಸಿತು, ಚಿಕ್ಕವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ಸಿಎಂ…
ಉತ್ತರಪ್ರದೇಶ: ಗೂಗಲ್ ಮ್ಯಾಪ್ ನೀಡಿದ ದಾರಿಯನ್ನು ನಂಬಿ ಕಾರಿನಲ್ಲಿ ಹೊರಟಿದ್ದ ಮೂವರು ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿವೇಕ್ ಮತ್ತು ಅಮಿತ್ ಹಾಗೂ ಇನ್ನೋರ್ವ ವ್ಯಕ್ತಿ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಇವರು ಮೂವರೂ ಮದುವೆ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಬಾಡಿಗೆ ಕಾರೊಂದರಲ್ಲಿ ಗುರುಗ್ರಾಮದಿಂದ ಉತ್ತರಪ್ರದೇಶದ ಬರೇಲಿಗೆ ಈ ಮೂವರು ಹೊರಟಿದ್ದರು. ಈ ವೇಳೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸಿದ್ದರು. ಅದರಂತೆ ಬರೇಲಿ ಸಮೀಪದ ನಿರ್ಮಾಣ ಹಂತದ ಸೇತುವೆಯ ದಾರಿ ತೋರಿಸಿದೆ ಅದರಂತೆ ಕಾರು ಚಾಲಕ ಅದೇ ಮಾರ್ಗವನ್ನು ಅನುಸರಿಸಿಕೊಂಡು ಹೋಗಿದ್ದಾದ್ದಾರೆ. ಆದರೆ ಸೇತುವೆ ಅಪೂರ್ಣಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು ಐವತ್ತು ಅಡಿ ಆಳದ ರಾಮಗಂಗಾ ನದಿಗೆ ಬಿದ್ದಿದೆ ಅಷ್ಟೋತ್ತಿಗಾಗಲೇ ರಾತ್ರಿಯಾಗಿದ್ದ ಕಾರಣ ವಿಚಾರ ಯಾರಿಗೂ ಗೊತ್ತಾಗಿಲ್ಲ ಮರುದಿನ ಭಾನುವಾರ ಬೆಳಿಗ್ಗೆ ಅಲ್ಲಿನ ಸ್ಥಳೀಯರು ನದಿಗೆ ಬಿದ್ದಿರುವ ಕಾರೊಂದನ್ನು…
ಶಿವಮೊಗ್ಗ: ಏಷ್ಯನ್ ಡೆವಲಪ್ಟೆಂಟ್ ಬ್ಯಾಂಕ್, ರಾಜ್ಯದಲ್ಲಿ 500 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲು 2500 ಕೋಟಿ ರೂ. ನೆರವು ನೀಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೊರಬದ ವಿದ್ಯುತ್ ನಗರದಲ್ಲಿ ಭಾನುವಾರ 25 ಕೋಟಿ ವೆಚ್ಚದಲ್ಲಿ ಸೊರಬ –ಕುಮಟಾ– ಕಟಮಡಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಅರ್ಹತೆವುಳ್ಳ ಬಿಪಿಎಲ್ ಕಾರ್ಡ್ ದಾರರಿಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ತಡೆ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಗೆ ತೆರಳಿ ಸಮಸ್ಯೆ ನಿವಾರಿಸಲಾಗುವುದು. ಪ್ರತಿ ಗ್ರಾಮಗಳಿಗೆ 92 ಯೋಜನೆಗಳಡಿ 250 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ರಾಜ್ಯದಲ್ಲಿ 500 ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ಏಷ್ಯನ್ ಡೆವಲಪ್ಟೆಂಟ್ ಬ್ಯಾಂಕ್ 2500 ಕೋಟಿ ರೂ ನೆರವು ನೀಡಿದ್ದು, ಇದನ್ನು ಬಳಸಿಕೊಂಡು ಎಲ್ಲಾ ಸೌಕರ್ಯಗಳು ಇರುವ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೆ ಕೇವಲ ರಾಜ್ಯಾಧ್ಯಕ್ಷರೊಬ್ಬರೇ ಹೊಣೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ಮಾಧ್ಯಮಗಳ ಜೊತೆಗೆ ಈ ಸಂಬಂಧ ಮಾತನಾಡಿದ ಅವರು, ಈ ಸೋಲಿಗೆ ಪಕ್ಷವೇ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರು ವಾಮ ಮಾರ್ಗದ ಮೂಲಕ, ವಕ್ರ ಮಾರ್ಗದ ಮೂಲಕ, ಹಣವನ್ನು ಹರಿಸುವ ಮೂಲಕ, ಜಾತಿ ವಿಷಬೀಜವನ್ನು ಬಿತ್ತಿ, ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಒಗ್ಗಟ್ಟು ಮಾಡಿ, ಮುಖ್ಯಮಂತ್ರಿಗಳು ತಾನು ಸಿಎಂ ಆಗಿ ಐದು ವರ್ಷ ಇರಬೇಕೋ ಬೇಡವೋ ಎಂದು ಮಂತ್ರಿಗಳಿಗೆ, ಶಾಸಕರಿಗೆ ಕೇಳಿ, ಭಯವನ್ನುಂಟು ಮಾಡಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆದ್ದಿದ್ದಾರೆ. ಎನ್ಡಿಎ 3 ಸೀಟುಗಳನ್ನು ಸೋತಿದೆ. ಸೋಲಿನ ಅವಲೋಕನ ಮಾಡಿ ಬಿಜೆಪಿಯನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿ ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ರವಿ ಕುಮಾರ್ ತಿಳಿಸಿದರು.…
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರಕ್ಕೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಡಿ.9ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ಬೆಳಗಾವಿ ಚಲೋ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನೋಟಿಸ್ ನೀಡಲಾಗುತ್ತದೆ. ಕೈಗಾರಿಕಾ ವಿವಾದ ಕಾಯಿದೆ ಸೆಕ್ಷನ್ 27ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮೊದಲು ನೋಟಿಸ್ ನೀಡಬೇಕು. ಹಾಗಾಗಿ ಡಿಸೆಂಬರ್ 9ರಂದು ನೋಟಿಸ್ ನೀಡಲಾಗುತ್ತಿದೆ. ಬಳಿಕ ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರ ಆರಂಭಿಸಲಾಗುತ್ತದೆ. 6 ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಸೇರಿ ಜಂಟಿ ಕ್ರಿಯಾ ಸಮಿತಿ ಮಾಡಿಕೊಂಡಿದ್ದು, 6 ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿವೆ. ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ…