ಬೆಳ್ತಂಗಡಿ: ಭರತ ಖಂಡದ ಜೈನ ಪರಂಪರೆಯಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಸಂಸ್ಕಾರ ದಿನ ಭಜನೆಗಳಂತಹ ಧರ್ಮ ಕಾರ್ಯದಲ್ಲಿ ಮಂಗಳೂರು ವಲಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷೇ ,ತ್ಯಾಗಿಸೇವಾ ಸಮಿತಿಯ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಸಂತಸ ವ್ಯಕ್ತಪಡಿಸಿದರು
ಅವರಿಂದು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ ಮಂಗಳೂರು ವಲಯ ಮಟ್ಟದ ಜಿನಭಜನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಜೈನ್ ಮಿಲನ್ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಪಂಚ ಕಲ್ಯಾಣಗಳು ಬಸದಿಗಳ ಜೀರ್ಣೋದ್ದಾರ, ಧಾರ್ಮಿಕ ಕಾರ್ಯಕ್ರಮಗಳು ಸಂತಸ ತಂದಿದೆ. ಇದರಿಂದ ಸಂಸ್ಕಾರ ಉಳಿಯುತ್ತದೆ ಹಾಗೂ ಬೆಳೆಯುತ್ತದೆ, ಜಿನ ಭಜನೆಯಿಂದ ಸಮಾಜದಲ್ಲಿ ಬಸದಿಗಳ ಸ್ವಚ್ಛತೆ , ಸ್ವಾಧ್ಯಾಯದಿಂದ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚುತ್ತಿದ್ದು, ಮಹಿಳಾ ವಿಭಾಗ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಭಜನೆ ನೆನಪಿಗೆ ಸುಲಭವಾದದ್ದು, ಮನಸ್ಸಿಗೆ ಮುದ ನೀಡಲಿದೆ, ಈ ಹಿಂದೆ ಬಸದಿ ಎನ್ನುವುದು ಮನೆಯಲ್ಲಿತ್ತು ಈಗ ಎಲ್ಲೆಡೆ ಇದ್ದು ,ಇದರಿಂದ ಏಕಾಗ್ರತೆ ಉಂಟಾಗಿ ಕರ್ಮಗಳು ನಿರ್ಜರವಾಗುತ್ತವೆ. ಮಾನವನ ಸಾಮಾನ್ಯ ಜೀವನ ಮನಸ್ಸಿನ ಕ್ಷೋಬೆಯಿಂದ ದೂರ ಉಳಿಯುತ್ತದೆ ,ದೇವಸ್ಥಾನ ಭಜನೆ, ಪೂಜೆಗಳು ,ಜೀವನಕ್ಕೆ ಶೋಭೆ ತರಲಿವೆ ಇದರಿಂದ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ದೊರೆತು ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಜಿನ ಭಜನೆಗೆ ಹೆಗಡೆ ದಂಪತಿಗಳು ಹೊಸ ರೂಪ ನೀಡಿದರು, ಇದರಿಂದ ಶಿಸ್ತು ಬದ್ಧ ಜೀವನ, ತಿಳುವಳಿಕೆ ಹೊಸ ರೂಪಗೊಂಡು, ಕೆಟ್ಟ ಚಟಗಳು ದೂರವಾಗಿವೆ. ಈ ಹಿಂದೆ ಸಿನಿಮಾ ರಂಗಕ್ಕೆ ಜೋತು ಬಿದ್ದ ಜನ ಈಗ ಜಿನ ಭಜನೆಗೆ ಹೊತ್ತು ನೀಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಜಿನ ಭಜನೆ ಎಂದು ಹೆಚ್ಚು ಪ್ರಭಾವ ಬೀರುತ್ತಿದ್ದು ಯುಗಳ ಮುನಿಗಳ ಕಾರ್ಯ ಹಾಗೂ ಜಿನಭಜನೆಗೆ ದಿ.ಯಶೋವರ್ಮಾ ರವರ ಸೇವೆ ಸ್ಮರಿಸಿದ್ದರು.
ನಮ್ಮ ಜೀವನ ಜಾರೊ ಬಂಡೆ ಇದ್ದಂತೆ ಮೋಕ್ಷ ಎಂಬ ಸ್ಥಾನಕ್ಕೆ ಹಲವಾರು ಎಡರು -ತೊಡರುಗಳಿವೆ ಎಲ್ಲವನ್ನು ನಿಭಾಯಿಸಿಕೊಂಡು ಸಾಗಿದಾಗ ಯಶಸ್ಸು ಸಾಧ್ಯ ಎಂದ ಅವರು, ಮನಸ್ಸು ಶುದ್ಧಿ ಇಲ್ಲದವರಿಗೆ ಶ್ರೀಗಂಧದ ಸುಹಾಸನೆ ಫಲ ನೀಡಲಾರದು ಎಂದರು.
ಭಾರತೀಯ ಜೈನ್ ಮಿಲನ್ ವಲಯ –8 ಅಧ್ಯಕ್ಷ ಕೆ. ಯುವರಾಜ್ ಭಂಡಾರಿ ಮಾತನಾಡಿ, ಈ ಹಿಂದೆ ಮಿಲನ್ ಗಳು ಆರೋಗ್ಯ -ಸೇವಾ ವಲಯಕ್ಕೆ ಸೀಮಿತವಾಗಿತ್ತು ಇದರ ಕೇಂದ್ರ ಕಛೇರಿ ಬೆಂಗಳೂರು ಆಗಿತ್ತು, ಈಗ ಎಲ್ಲಾ ವಲಯಗಳಿಗೆ ಆದ್ಯತೆ ನೀಡಿದೆ ಅಧಿಕಾರ ಮೈಸೂರಿಗೆ ನೀಡಿದೆ, ಎಲ್ಲೆಡೆ ಜಿನ ಭಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಎಲ್ಲದಕ್ಕೂ ದೂರ ದೃಷ್ಟಿ, ಸಹಕಾರ ಮುಖ್ಯವಾಗಿದೆ .ಅನಿತಾ ಸುರೇಂದ್ರ ಕುಮಾರ್ ರವರ ದೂರ ದೃಷ್ಟಿ ಸಹಕಾರದಿಂದ ಜಿನಭಜನೆ ಯಶಸ್ಸು ಕಂಡಿದೆ ಎಂದರು.
ಜೈನ್ ಮಿಲನ 7 ವಿಭಾಗಗಳಲ್ಲಿ ಮಂಗಳೂರು ವಿಭಾಗ ವಿಶೇಷವಾದದ್ದು, ಅದರದೇ ಆದ ಸಾಹಿತ್ಯ ಜಿನಭಜನೆ ರಚನೆ, ರಾಗ ಸಂಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು .
ತೀರ್ಪುಗಾರರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಜಿನಭಜನೆಯಿಂದ ಸಮಾಜ ಕಟ್ಟಲು ಸಾಧ್ಯ ಎಲ್ಲದಕ್ಕೂ ಒಗ್ಗಟ್ಟು ಅಗತ್ಯ, ಹೊಸ ಸಂಘಗಳ ಹುಟ್ಟಿಗಿಂತ ,ಹಳೇ ಸಂಘಗಳ ಪುನಶ್ಚೇತನ ಅಗತ್ಯ ಎಂದರು.
ಕಾರ್ಯಕ್ರಮದ ಸಂಯೋಜಕೀ ಸೋನಿಯೋ ಯಶೋವರ್ಮ ಮಾತನಾಡಿ, ಜಿನಭಜನೆಯಿಂದ ಧರ್ಮ ಸಂಘಟನೆಗಳು ಪ್ರಭಾವನೆಯಾಗಲಿದೆ ಸಂಸ್ಕಾರ ಸಿಗಲಿದೆ, ಸ್ಪರ್ಧೆ ಪ್ರತಿಷ್ಠೆಗಿಂತ ಧರ್ಮ ಸಂಘಟನೆ ಅಗತ್ಯ ,ಇದು ಅನಿತಾ ರವರ ಪರಿಕಲ್ಪನೆಯಾಗಿದ್ದು, ಜಿನ ಭಜನೆ ನಿತ್ಯ ಕಾಯಕವಾಗಬೇಕು, ಯುವಜನತೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಅಗತ್ಯ ಎಂದು ಅವರು, “”ಮನಿ ಭಜನೆಗಿಂತ ಮನ ಭಜನೆ ಅಗತ್ಯ”. ಎಂದು ಅವರು ,ಭಜನೆಯಿಂದ ಸಂಸ್ಕಾರವಂತ ಜೀವನದ ದೃಷ್ಟಿಕೋನಗಳು ಬದಲಾಗಲಿವೆ. ರೋಗನಿರೋಧಕ ಗಳಿಗೆ ಚೈತನ್ಯ ಬರಲು ಸಾಧ್ಯ ಎಂದವರು, ಬೆಳ್ತಂಗಡಿ ಜೈನ್ ಮಿಲನ ಕಾರ್ಯವನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಡಾ. ಹೇಮಾವತಿ ವಿ. ಹೆಗಡೆ. , ಡಿ. ಹರ್ಷೇಂದ್ರ ಹೆಗಡೆ ಕುಲದೀಪ್ .ಎಂ . ಚೌಟ, ಮಂಜುಳಾ ಅಭಯ ಚಂದ್ರ ಜೈನ ,ಪ್ರಸನ್ನ ಕುಮಾರ್, ಪುಷ್ಪರಾಜ್ ಜೈನ, ಸುದರ್ಶನ್, ರತ್ನಾಕರ್ ಜೈನ್ ಪ್ರವೀಣ್ ಕುಮಾರ್ ಇಂದ್ರ, ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಯುವರಾಜ್ ಜೈನ್, ಸುಮಂತ್ ಕುಮಾರ್ ಜೈನ್ ,ಸತೀಶ್ ಚಂದ್ರ ಜೈನ್, ತೀರ್ಥ ಕುಮಾರ್ ಜೈನ್, ಶ್ವೇತಾ ಜೈನ್ , ಶಾಂತಿ ಶ್ರೀ ಜೈನ ಮಹಿಳಾ ಸಂಘದ ತ್ರಿಶಾಲ ಉದಯ್ ಕುಮಾರ್ ಮಲ್ಲ, ಶಶಿಕಲಾ ಹೆಗಡೆ ,ಸುಕುಮಾರ ಬಲ್ಲಾಳ, ಶಶಿಕಿರಣ್ ಜೈನ ,ಜಯರಾಜ್ ಕಂಬಳಿ,ಮಂಗಳೂರು ವಿಭಾಗ ಮಟ್ಟದ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಬಂಟ್ವಾಳ ವಿಭಾಗದ ಎಮ್ .ಸುಭಾಷ್ ಚಂದ್ರ ಜೈನ್, ಬೆಳ್ತಂಗಡಿ ಧೀಮತಿ ಮಹಿಳಾ ಸಮಾಜದ ಅಧ್ಯಕ್ಷ ರಜತಾ .ಪಿ .ಶೆಟ್ಟಿ ,ಕಾರ್ಯದರ್ಶಿ ದಿವ್ಯ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೇಸರಿ ರತ್ನ ರಾಜಯ್ಯ, ಶ್ವೇತಾ ಜೈನ. ಜಿತೇಂದ್ರ ಜೈನ್ ,ರತನ್ ಕುಮಾರ್ ಜೈನ್, ಪ್ರಸನ್ನ.ಆರ್.ಹೆಗಡೆ, ಕಾರ್ಕಳ ಜೈನ್ ಮಿಲನ್ ಅಧ್ಯಕ್ಷ ವಿ .ಅಶೋಕ್ ಕುಮಾರ್ ಜೈನ್ ,ವಿ. ಆದಿರಾಜ್, ರಾಜಶ್ರೀ ಹೆಗಡೆ, ನಿರೀಕ್ಷಾ ಹೊಸ್ಮಾರ್, ರೇಖಾ ಸಂತೋಷ್, ಉದಯ್ ಕುಮಾರ್ ಕಂಬಳಿ, ದಿನೇಶ್ ಕುಮಾರ್, ಮೂಡುಬಿದರೆ ಪುಷ್ಪರಾಜು ಜೈನ್, ರಾಕೇಶ್ ಜೈನ್, ಮಹಾವೀರ್ ,ಸಿದ್ಧಾಂತ ಕೀರ್ತಿ, ಪ್ರಮೋದ್ ಕುಮಾರ್, ಜಿತೇಂದ್ರ ಜೈನ್, ರತನ್ ಕುಮಾರ್ , ಪ್ರಸನ್ನ ಕುಮಾರ್, ಮಂಗಳೂರು ವಿಭಾಗದ ಜೈನ್ ಮಿಲನ್ ತಂಡಗಳು ಶ್ರಾವಕ ಶ್ರಾವಕಿಯರು ವಿವಿಧ ಜೈನ ಸಂಘಟನೆಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಒಟ್ಟು 45 ತಂಡಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಏಳಿಗೆಗೆ ಶ್ರಮಿಸಿದ ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ನವೀನ್ ಕುಮಾರ್ ಜೈನ್, ಕಾರ್ಯದರ್ಶಿ ಸಂಪತ್ ಕುಮಾರ್ ಹಾಗೂ ಕೋಶಾಧಿಕಾರಿ ಲಿಖಿತ್ ಕುಮಾರ್ ರವರನ್ನು ಸನ್ಮಾನಿಸಲಾಯಿತು. ನವೀನ್ ಕುಮಾರ್ ಸ್ವಾಗತಿಸಿ ,ಪ್ರಾಸ್ತಾವಿಕ ನುಡಿಗಳ ನಾಡಿದರು. ಸಂಪತ್ ಕುಮಾರ್ ವಂದಿಸಿದರು .
ಜಿನ ಭಜನಾ ಸ್ಪರ್ಧೆ ಫಲಿತಾಂಶ:
ಕಿರಿಯ ವಿಭಾಗದಲ್ಲಿ ತೀರ್ಪುಗಾರರಾಗಿ
ಕಾವ್ಯ ನಿಶ್ಚಯ ಬೆಂಗಳೂರು ,
ಭಾರತಿ ಛಬ್ಬಿಸ್ ಶಿಗ್ಗಾವಿ
,ಚಿನ್ಮಯ್ ಭಟ್.
ಕಿರಿಯರ ವಿಭಾಗದಲ್ಲಿ ವಿಜೇತ ತಂಡಗಳು:
ಕ್ರಮವಾಗಿ
ಸೌಮ್ಯಕ್ ತಂಡ ಬಂಟ್ವಾಳ.
ಕನಕ ಮಂಜರಿ ಹೊಸ್ಮರು.
ಚಾರು ತಂಡ ಮೂಡುಬಿದರೆ
ಸಮಾಧಾನಕರ ಬಹುಮಾನ
ಸಪ್ತಸ್ವರ ತಂಡ .
ಆದಿನಾಥ ತಂಡ .
ಹರ್ಷಿಧ ತಂಡ
ಹಿರಿಯರ ವಿಭಾಗದಲ್ಲಿ ತೀರ್ಪುಗಾರರು:
ನವೀನ್ ಜಾಂಬಳೆ .
ನಿಶ್ಚಯ್ ಮಂಡ್ಯ .
ಉಷಾ ಹೆಬ್ಬಾರ್.
ಹಿರಿಯರ ವಿಭಾಗದಲ್ಲಿ ವಿಜೇತ ತಂಡಗಳು:
ಬ್ರಾಹ್ಮೀ ತಂಡ ಮೂಡಬಿದರೆ
ಪರಶು ಶ್ರೀ ಭಜನಾ ತಂಡ ಪುತ್ತೂರು
ವಿಧಿಶ ತಂಡ
ಸಮಾಧಾನಕರ ಬಹುಮಾನ ತಂಡಗಳು:
ಅನಂತ ಶ್ರೀ ಭಜನಾ ತಂಡ ಭಜಗೋಳಿ
ಬಾಹುಬಲಿ ಭಜನಾ ತಂಡ.
ಶುಕ್ಲಾ ಭಜನಾ ತಂಡ .
ರತ್ನಾ ತ್ರಯ ಭಜನಾ ತಂಡ .
ಮಹಾಕವಿ ರತ್ನಾಕರ ವರ್ಣಿ ತಂಡ ಮೂಡಬಿದರೆ.
ವಿಶೇಷ ಬಹುಮಾನವನ್ನು ಸುವರ್ಣ ತಂಡವಾಗಿ ಮೂಡುಬಿದ್ರೆಯ” ದವಳ “ತಂಡವು ಆಯ್ಕೆಯಾಗಿದೆ.
ವರದಿ: ಜೆ. ರಂಗನಾಥ- ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q