Subscribe to Updates
Get the latest creative news from FooBar about art, design and business.
- ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ನಿವಾಸಕ್ಕೆ ಸಿದ್ಧಗಂಗಾ ಶ್ರೀ ಭೇಟಿ: ವಿಶೇಷ ಆಶೀರ್ವಾದ
- ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ: ಮಾಜಿ ಸಚಿವ ಸಂತೋಷ್ ಲಾಡ್
- ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ಸಂಪೂರ್ಣ ತೃಪ್ತ: ಜಿ. ಪರಮೇಶ್ವರ
- ಡಿ.ಕೆ. ಶಿವಕುಮಾರ್ ಜೀವನದ ಮಾರ್ಗದರ್ಶಕ ಶಕ್ತಿ ‘ನೊಣವಿನಕೆರೆ ಅಜ್ಜಯ್ಯ’!
- ಕೆಪಿಸಿಸಿಗೆ ಬಿ.ಕೆ.ಹರಿಪ್ರಸಾದ್ ಹೊಸ ಸಾರಥಿ: ಹೈಕಮಾಂಡ್ ಮಹತ್ವದ ನಿರ್ಧಾರ
- ಸಿಎಂ ಕುರ್ಚಿ ನನ್ನದಲ್ಲ, ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ: ಸಿಎಂ ಡಿ.ಕೆ.ಶಿವಕುಮಾರ್
- ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ!
- ಸಾದರ ಸಮುದಾಯ ಭವನದಲ್ಲಿ ಸಪ್ತಗಿರಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
Author: admin
ಮಂಡ್ಯ: ಕೆರೆಯಲ್ಲಿ ಈಜಾಡಲು ಹೋಗಿದ್ದ ಐವರು ಬಾಲಕರ ಪೈಕಿ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಂಕರಪುರ ಗ್ರಾಮದ ರಂಜನ್ ಗೌಡ (14) ಹಾಗೂ ಮುತ್ತುರಾಜು (17) ಮೃತಪಟ್ಟವರಾಗಿದ್ದಾರೆ. ರಜೆ ಇದ್ದ ಕಾರಣ ಸ್ನೇಹಿತರ ಜೊತೆಗೆ ಆಟವಾಡಲು ಹೋಗಿದ್ದ ಬಾಲಕರು ಕೆರೆಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ. ರಂಜನ್ ಗೌಡ ಮುರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಮುತ್ತುರಾಜು ಸೋಮನಹಳ್ಳಿಯ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಇವರಿಬ್ಬರಿಗೆ ಕೂಡ ಈಜು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮಕ್ಕಳು ನೀರಿನ ಆಳ ತಿಳಿಯದೇ ನೀರಿಗಿಳಿದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ತಕ್ಷಣವೇ ಜೊತೆಗಿದ್ದ ಗೆಳೆಯವರು ಇವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಗ್ರಾಮಸ್ಥರು ದೇಶಹಳ್ಳಿ ಕೆರೆ ಬಳಿ ಜಮಾಹಿಸಿ ರಾತ್ರಿ ರಂಜನ್ ಗೌಡ ಮೃತ ದೇಹ ಪತ್ತೆ ಮಾಡಿದ್ದಾರೆ.ಆದರೆ ಸೋಮು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಬೆಳಿಗ್ಗೆ 8.30 ಕ್ಕೆ…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಯಲ್ಲಪ್ಪನಾಯಕನಹಳ್ಳಿಯಲ್ಲಿ ಭಾನುವಾರದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಪ್ಪನಾಯಕನ ಹೊಸಕೋಟೆ ಸಂಸ್ಥಾನದ ದೊರೆಗಳಾದ ರಾಜಾ ಜಯಚಂದ್ರ ರಾಜು ಮಾತನಾಡಿ ತಳ ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಕಡಿಮೆ ಇರುತ್ತದೆ. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಸಾಧನವಾಗಬೇಕು. ಪ್ರತಿಯೊಂದು ಮನೆಯಲ್ಲೂ ಪೋಷಕರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಶಿಕ್ಷಕ ಹನುಮಂತರಾಯಪ್ಪ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಆಯುಧವನ್ನು ತೊರೆದು ಲೇಖನಿಯನ್ನು ಹಿಡಿದು ಇಂದು ಜಗತ್ತಿಗೆ ಮೌಲ್ಯಗಳನ್ನು ನೀಡಿ ಸರ್ವಪೂಜ್ಯರಾಗಿದ್ದಾರೆ. ತನ್ನ ರಾಮಾಯಣದ ಕೃತಿಯ ಮೂಲಕ ತಂದೆ, ತಾಯಿ, ಅಕ್ಕ, ಅಣ್ಣ ತಮ್ಮ ಗುರುವು ಇತ್ಯಾದಿ ಬಂಧಗಳ ಮೌಲ್ಯಗಳನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಆದಾಗಿ ಮಕ್ಕಳು ರಾಮಾಯಣದಲ್ಲಿ ಬರುವ ಪಾತ್ರಗಳನ್ನು ಅರ್ಥ ಮಾಡಿಕೊಂಡು ಅಲ್ಲಿನ ಆದರ್ಶಗಳನ್ನು ಪಾಲಿಸಿ ಉತ್ತಮ ನಾಗರೀಕರಾಗಬೇಕು ಎಂದರು. ಜಯಂತಿಯ ಅಂಗವಾಗಿ ಮಹಿಳೆಯರು ಕಳಶ ಮತ್ತು ಕುಂಭಗಳನ್ನು ಹೊತ್ತು ಪುರಮೆರವಣಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ಪಿ.ಎನ್.ನಾಗರಾಜು, ರಾಜಾ, ರವಿಶಂಕರರಾಜು, ಮಾಜಿ ಗ್ರಾ.ಪಂ ಸದಸ್ಯ ಮಾರಪ್ಪ, ಎ.ಎಸ್.ಐ ನರಸಿಂಹಮೂರ್ತಿ,…
ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಟೋಬರ್ 22 ರಂದು ಜಿಲ್ಲೆಯ 11 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈ ಅದಾಲತ್‌ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು–ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ 22ರಂದು ಜಿಲ್ಲೆಯ ಶಿರಾ ತಾಲೂಕಿನ ಕಸಬಾ ಹೋಬಳಿ ಭೂವನಹಳ್ಳಿ; ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ; ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ನಾಗರಘಟ್ಟ; ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ; ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ದೊಡ್ಡನಾರವಂಗಲ; ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ದಸೂಡಿ, ಹಂದನಕೆರೆ ಹೋಬಳಿ ದೊಡ್ಡ ಎಣ್ಣೇಗೆರೆ, ಕಸಬಾ ಹೋಬಳಿ ದುಗುಡೀಹಳ್ಳಿ ಹಾಗೂ ಕಂದಿಕೆರೆ ಹೋಬಳಿ ತೀರ್ಥಪುರ; ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ; ಪಾವಗಡ ತಾಲೂಕಿನ ಕಸಬಾ ಹೋಬಳಿ ಕೊಡಮಡಗು ಸೇರಿ 11 ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ…
ತುಮಕೂರು: ರಸಗೊಬ್ಬರ ಮಾರಾಟ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ರಸಗೊಬ್ಬರಗಳ ಲೇಬಲ್ ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿದ್ದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಹೆಬ್ಬೂರಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಎರಡು ರಸಗೊಬ್ಬರಗಳನ್ನು ರಸಗೊಬ್ಬರ ನಿಯಂತ್ರಣ ಆದೇಶ ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನರ‍್ದೇಶಕರಾದ ಪುಟ್ಟರಂಗಪ್ಪ ಹಾಗೂ ಅಶ್ವತ್ಥ್ನಾರಾಯಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ 20 ಸಾವಿರ ಮೌಲ್ಯದ 100 ಕೆ.ಜಿ. ರಸಗೊಬ್ಬರ ಹಾಗೂ ರಸಗೊಬ್ಬರದ ಗ್ರೇಡ್ ನಮೂದಿಸದೆ ಮತ್ತು ತಯಾರಿಕಾ ಪರವಾನಗಿ ಸಂಖ್ಯೆ ತಪ್ಪಾಗಿ ನಮೂದಿಸಿದ್ದ 7.75 ಲೀಟರ್ ರಸಗೊಬ್ಬರದ 31 ಬಾಟಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದಿನ ಕ್ಷೇತ್ರ ಭೇಟಿಯಲ್ಲಿ ಸದರಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರಸಗೊಬ್ಬರ ನಿಯಂತ್ರಣ ಆದೇಶ 1995ರ ಉಲ್ಲಂಘನೆ (ಲೇಬಲ್) ಸಂಬಂಧ ಮಾರಾಟ ತಡೆ ಆದೇಶ ಜಾರಿ ಮಾಡಿ ಸಮಜಾಯಿಷಿ…
ಕೊರಟಗೆರೆ: ತುಮುಲ್ ಕೊರಟಗೆರೆ ತಾಲೂಕು ನಿರ್ದೇಶಕ ಸ್ಥಾನಕ್ಕೆ ಎನ್ ಡಿ ಎ ಪಕ್ಷದ ಅಭ್ಯರ್ಥಿಯಾಗಿ ಸುಂಕದಹಳ್ಳಿ ಸಿದ್ದಗಂಗಯ್ಯ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಘೋಷಣೆ ಮಾಡಿದ್ದಾರೆ. ತುಮಕೂರು ಹಾಲು ಒಕ್ಕೂಟದ ತೆರವಾಗಿರುವ ನಿರ್ದೇಶಕರುಗಳ ಸ್ಥಾನಕ್ಕೆ ನವಂಬರ್ ನಲ್ಲಿ ಚುನಾವಣೆ ಘೋಷಣೆಯಾಗಿದ್ದು, ಕೊರಟಗೆರೆ ತಾಲೂಕಿನ ಮೈತ್ರಿ ಪಕ್ಷದ ಎಲ್ಲಾ ಅಧ್ಯಕ್ಷರು ಮುಖಂಡರುಗಳು ಕಾರ್ಯಕರ್ತರು ಸೇರಿ ಅಂತಿಮ ಅಭ್ಯರ್ಥಿಯಾಗಿ ಸುಂಕದಹಳ್ಳಿ ಸಿದ್ದಗಂಗಯ್ಯ ಅವರನ್ನ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ್ ಕುಮಾರ್ ತಿಳಿಸಿದರು. ಇದೇ ವೇಳೆ ಮಾಜಿ ಶಾಸಕ ಸುಧಾಕರ್ ಲಾಲ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಒಂದಾದ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳಿಂದ ಎನ್ ಡಿ ಎ ಒಕ್ಕೂಟದಿಂದ ಇದೀಗ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು ನಮ್ಮ ಕೊರಟಗೆರೆ ತಾಲೂಕು ಅಭ್ಯರ್ಥಿಯಾಗಿ ಎರಡು ಪಕ್ಷದ ಒಮ್ಮತದಿಂದ ಸುಂಕದಹಳ್ಳಿ ಸಿದ್ದಗಂಗಯ್ಯ ಅವರನ್ನ ಚುನಾವಣೆಗೆ ನಿಲ್ಲಿಸಲಾಗಿದ್ದು ಅವರನ್ನ ಬಹುಮತಗಳಿಂದ ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ…
ತುಮಕೂರು: ಉಪಲೋಕಾಯುಕ್ತರೆದುರೇ ವಿಶೇಷ ಚೇತನ ವೃದ್ದೆಯೊಬ್ಬರು ಭಿಕ್ಷೆ ಬೇಡಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ನಗರದಲ್ಲಿ ನಡೆದಿದೆ. ಇತ್ತೀಚೆಗೆ ತುಮಕೂರು ಜಿಲ್ಲೆ ವೈಭವದ ದಸರಾ ಕಾರ್ಯಕ್ರಮದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ಜನಸಾಮಾನ್ಯರು ಕನಿಷ್ಠ ಮೂಲಭೂತ ಸೌಕರ್ಯವೂ ಸಿಗದೇ ಒದ್ದಾಡುತ್ತಿರುವುದು ಬೆಳಕಿಗೆ ಬಂದಿದೆ. ಹಂದಿ ಜೋಗಿ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಇಲ್ಲಿನ ಕುಟುಂಬಗಳ ನರಕ ಸದೃಶ ಬದುಕಿನ ದರ್ಶನವಾಗಿದೆ. ಇಲ್ಲಿನ ಜನರು ಮೂಲಭೂತ ಸೌಕರ್ಯವಿಲ್ಲದೇ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ವೃದ್ಧೆ ಭಿಕ್ಷೆ ಕೇಳಿದಾಗ ಮನಕರಗಿ ಉಪಲೋಕಾಯುಕ್ತ ಬಿ.ವಿರಪ್ಪಅವರು ಭಿಕ್ಷೆ ನೀಡಿದ್ದಾರೆ. ಜೊತೆಗೆ ವೃದ್ಧೆಯ ಪೂರ್ವಾಪರ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಹಂದಿಜೋಗಿ ಕುಟುಂಬಗಳು ಮಾಡಿದ್ದ ಮನವಿಯ ಮೇರೆಗೆ ಹಾಗೂ ಮಾಧ್ಯಮ ವರದಿಗಳ ಹಿನ್ನೆಲೆ ಉಪಲೋಕಾಯುಕ್ತ ಬಿ.ವೀರಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಕೂಡಲೇ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ…
ತುಮಕೂರು: ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಇಂದು ತುಮಕೂರಿನಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಇರುವ ಹುತಾತ್ಮ ಪುತ್ಥಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಯಂತ್ ಕುಮಾರ್ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು, ಭಾರತದಲ್ಲಿ ಕಳೆದ ವರ್ಷ ಕರ್ತವ್ಯದಲ್ಲಿದ್ದ 213 ಮಂದಿ ಪೊಲೀಸರು ಹುತಾತ್ಮರಾಗಿದ್ದರು, ಅವರಲ್ಲಿ ಕರ್ನಾಟಕದಲ್ಲಿ ಇವರು ಹುತಾತ್ಮರಾಗಿದ್ದರು. ಇವರಲ್ಲಿ ತುಮಕೂರು ಜಿಲ್ಲೆಯ ಕೂಡಿಗೇನಹಳ್ಳಿ ಪೊಲೀಸ್ ಠಾಣೆ ಯ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆ ಮಹೇಶ್ ಜಿ.ವಿ.ಹುತಾತ್ಮರಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಹುತಾತ್ಮರಾಗಿರುವ ಪೊಲೀಸ್ ಸಿಬ್ಬಂದಿ ಮಹೇಶ್ ಅವರ ಪೋಷಕರು ಹುತಾತ್ಮ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು : ಮೂಡ ಸೈಟ್ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಸೈಟ್ ಬೇಕು ಅಂತ ಅರ್ಜಿ ಹಾಕಿದ್ರಾ, ಯಾರಿಗಾದ್ರೂ ಪೋನ್ ಮಾಡವ್ರಾ. 15 ವರ್ಷದ ಹಿಂದಿನ ನಡಾವಳಿಕೆಗಳನ್ನ ಇಂದಿನ ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಂಡು ಅವರಿಗೆ ಕೆಟ್ಟ ಹೆಸರು ಬರುವಂತೆ ಕೆಲಸ ಮಾಡ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆ ತಂದವರು. ಹಸಿವಿನಿಂದ ಯಾರು ಮಲಗಬಾರದು ಅಂತ ಮಾಡಿದ್ರು. ಸಿದ್ದರಾಮಯ್ಯ ಏನು ಕುರುಬರಿಗೆ ಮಾತ್ರ ಮಾಡಿದ್ರಾ, ಬದಲಾಗಿ ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಮಾಡ್ಲಿ ಅಂತ ಅದನ್ನ ಮಾಡಿದ್ರು ಎಂದರು. ಇತ್ತೀಚೆಗೆ ಕೊರಟಗೆರೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅವನ್ಯಾರೋ ಅಧಿಕಾರಿ ಮೂರ್ಖ ರಾತ್ರೊರಾತ್ರಿ ಅದನ್ನ ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಪ್ರತಿ ವರ್ಷದ ಅಕ್ಟೋಬರ್ 21ರಂದು ನಡೆಯುವ “ಪೊಲೀಸ್ ಹುತಾತ್ಮರ ದಿನಾಚರಣೆ” (Police Martyrs’ Day) ಜನತೆ ಹಾಗೂ ಸರ್ಕಾರಕ್ಕೆ ಕೇವಲ ಆಚರಣೆಯ ದಿನವಲ್ಲ, ಇದು ದೇಶದ ಸಾಂವಿಧಾನಿಕ ಶಾಂತಿ, ಸುವ್ಯವಸ್ಥೆ, ಮತ್ತು ನಮ್ಮ ರಕ್ಷಣೆಯ ಹಿತಾಸಕ್ತಿಗೆ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವ ಪವಿತ್ರ ದಿನ. ಈ ವಿಶೇಷ ದಿನವು ದೇಶದ ಭದ್ರತೆಯಲ್ಲಿ ತೊಡಗಿಕೊಂಡಿರುವ ಆ ನಾಯಕರ ಶೌರ್ಯವನ್ನು ಸಾರುವಂತಹದ್ದು. ಕಾರ್ಯಕ್ರಮದ ಮೂಲ: “ಪೊಲೀಸ್ ಹುತಾತ್ಮರ ದಿನಾಚರಣೆ”ಯು 1959ರಲ್ಲಿ ಲಡಾಕ್ ಪ್ರದೇಶದ ಹೋಟ್ಸ್‍ಪ್ರಿಂಗ್ಸ್‌ನಲ್ಲಿ ನಡೆದ ಯುದ್ಧದ ಸ್ಮಾರಕವಾಗಿದೆ. ಅಕ್ಟೋಬರ್ 21, 1959 ರಂದು, ಚೀನಾ ಸೈನಿಕರ ದಾಳಿಯ ಸಂದರ್ಭದಲ್ಲಿ 10 ಭಾರತೀಯ ಪೊಲೀಸ್ ಸಿಬ್ಬಂದಿಗಳು ತೀವ್ರ ಹೋರಾಟ ನಡೆಸಿ, ದೇಶದ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಕಾಪಾಡಲು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದರು. ಈ ಘಟನೆ ನಂತರ, 1960ರಲ್ಲಿ ಈ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಾಗಿ ಮಾನ್ಯತೆ ನೀಡಲಾಯಿತು. ಆಚರಣೆ ಮತ್ತು ಗೌರವ: ಹುತಾತ್ಮರಿಗೆ ಶ್ರದ್ಧಾಂಜಲಿ…
ಪುಣೆ: ಪುಣೆಯ ಮಂಡೈ ಮೆಟ್ರೋ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡವೊಂದು ಸಂಭವಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಮಹಾತ್ಮ ಫುಲೆ ಮಂಡೈ ಪ್ರದೇಶದ ಮೆಟ್ರೋ ನಿಲ್ದಾಣದ ನೆಲ ಮಹಡಿಯಲ್ಲಿ ಭಾನುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ಆರಂಭಿಸಿದ್ದಾರೆ. ಸ್ಥಳೀಯ ಸಂಸದ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಮತ್ತು ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಬೆಂಕಿಯನ್ನು ನಂದಿಸಲಾಗಿದೆ ಮತ್ತು ಘಟನೆಯು ಮೆಟ್ರೋ ಸೇವೆಯ ಮೇಲೆ ಪರಿಣಾಮ ಬೀರಲಿಲ್ಲ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q