Subscribe to Updates
Get the latest creative news from FooBar about art, design and business.
- ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ನಿವಾಸಕ್ಕೆ ಸಿದ್ಧಗಂಗಾ ಶ್ರೀ ಭೇಟಿ: ವಿಶೇಷ ಆಶೀರ್ವಾದ
- ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ: ಮಾಜಿ ಸಚಿವ ಸಂತೋಷ್ ಲಾಡ್
- ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ಸಂಪೂರ್ಣ ತೃಪ್ತ: ಜಿ. ಪರಮೇಶ್ವರ
- ಡಿ.ಕೆ. ಶಿವಕುಮಾರ್ ಜೀವನದ ಮಾರ್ಗದರ್ಶಕ ಶಕ್ತಿ ‘ನೊಣವಿನಕೆರೆ ಅಜ್ಜಯ್ಯ’!
- ಕೆಪಿಸಿಸಿಗೆ ಬಿ.ಕೆ.ಹರಿಪ್ರಸಾದ್ ಹೊಸ ಸಾರಥಿ: ಹೈಕಮಾಂಡ್ ಮಹತ್ವದ ನಿರ್ಧಾರ
- ಸಿಎಂ ಕುರ್ಚಿ ನನ್ನದಲ್ಲ, ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ: ಸಿಎಂ ಡಿ.ಕೆ.ಶಿವಕುಮಾರ್
- ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ!
- ಸಾದರ ಸಮುದಾಯ ಭವನದಲ್ಲಿ ಸಪ್ತಗಿರಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
Author: admin
ಆಂಧ್ರಪ್ರದೇಶ: 16 ವರ್ಷದ ಬಾಲಕಿಯ ಮನೆಗೆ ನುಗ್ಗಿದ ಮಾಜಿ ಗೆಳೆಯ ಆಕೆಯನ್ನು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕಡಪ ಜಿಲ್ಲೆಯ ಬದ್ವೇಲ್ ಹೊರವಲಯದಲ್ಲಿ ನಡೆದಿದೆ. ಕಡಪ ಜಿಲ್ಲೆಯ ಬದ್ವೇಲ್ ಹೊರವಲಯದಲ್ಲಿ ಜೆ ವಿಘ್ನೇಶ್ ಅಪ್ರಾಪ್ತ ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ನಡೆಸಿರುವ ಆರೋಪಿಯಾಗಿದ್ದಾನೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕಿಯನ್ನು ಕಡಪ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬಾಲಕಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾಳೆ. ಪೊಲೀಸರ ಪ್ರಕಾರ, ವಿಘ್ನೇಶ್ ಮತ್ತು ಅಪ್ರಾಪ್ತ ಬಾಲಕಿ ಪರಸ್ಪರ ಸಂಬಂಧದಲ್ಲಿದ್ದರು, ಅಲ್ಲದೇ ಹಲವು ಬಾರಿ ಬಾಲಕಿ ಮೇಲೆ ಈತ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಆದರೆ ಆರೋಪಿ ಕೆಲವು ತಿಂಗಳ ಹಿಂದೆ ಅವಳೊಂದಿಗೆ ಬೇರ್ಪಟ್ಟು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದನು. ಇದರಿಂದ ನೊಂದ ಬಾಲಕಿ ತನ್ನನ್ನು ಮದುವೆಯಾಗು ಎಂದು ಪದೇ ಪದೇ ಕೇಳಿಕೊಂಡಿದ್ದರಿಂದ ರೊಚ್ಚಿಗೆದ್ದು ಬಾಲಕಿಯನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಸದ್ಯ ಆರೋಪಿಯ ವಿರುದ್ಧ…
ಅಕ್ಟೋಬರ್ 20ರ ಭಾನುವಾರದಂದು ಕರ್ಕ ರಾಶಿಯಲ್ಲಿ ಮಂಗಳನ ಸಂಕ್ರಮಣ ನಡೆಯಲಿದೆ. ಸುಮಾರು 16 ತಿಂಗಳ ನಂತರ, ಕರ್ವಾ ಚೌತ್ ದಿನದಂದು ಮಂಗಳವು ಕರ್ಕಾಟಕಕ್ಕೆ ಮರಳುತ್ತಿದೆ. ಜ್ಯೋತಿಷ್ಯದಲ್ಲಿ, ಕಟಕ ರಾಶಿಯನ್ನು ಮಂಗಳದ ಅತ್ಯಂತ ಕಡಿಮೆ ರಾಶಿ ಎಂದು ಕರೆಯಲಾಗುತ್ತದೆ. ಮಂಗಳನು ಇಲ್ಲಿಗೆ ಆಗಮಿಸಿದಾಗ ಶನಿಯೊಂದಿಗೆ ಮಂಗಳನ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಂಗಳ ಗ್ರಹದ ಈ ಸಾಗಣೆಯನ್ನು ಅಶುಭವೆಂದು ಪರಿಗಣಿಸಲಾಗಿದೆ, ಇದು ವಿಶ್ವದ ಅನೇಕ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ಅನೇಕ ರಾಶಿಗಳಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕರ್ಕಾಟಕ ರಾಶಿ ಸೇರಿದಂತೆ ಯಾವ ರಾಶಿಯವರಿಗೆ ಕ್ಷುದ್ರ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರದಿಂದ ಪ್ರತಿಕೂಲ ಪರಿಣಾಮ ಪಡೆಯುವ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ…
ತುಮಕೂರು: ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ಗುಬ್ಬಿ ಪಟ್ಟಣದ ಪೋಲೀಸ್ ಠಾಣೆ ಹಿಂಭಾಗದ ಹಂದಿಜೋಗರ ವಸತಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಮಳೆ ನೀರಿನಲ್ಲಿ ಜೀವನ ನಡೆಸುತ್ತಿರುವ ಹಂದಿಜೋಗಿಗಳನ್ನು ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮನವೊಲಿಸಿದರು. ಮಳೆ ನೀರಿನಿಂದ ಆವೃತಗೊಂಡಿರುವ ಹಂದಿಜೋಗರ ಗುಡಿಸಲುಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಸುರಕ್ಷಿತ ಸ್ಥಳಕ್ಕೆ ತಕ್ಷಣ ಸ್ಥಳಾಂತರವಾಗಬೇಕು ಎಂದು ನಿವಾಸಿಗಳಿಗೆ ಮನವಿ ಮಾಡಿದರು. ಸತತ ಮಳೆಯಿಂದ ಹಂದಿಜೋಗಿಗಳು ಸಂಕಷ್ಟದಲ್ಲಿದ್ದು, ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ತಹಶೀಲ್ದಾರ್ ಬಿ. ಆರತಿ ಅವರು ಸಾತೇನಹಳ್ಳಿ ಪ್ರದೇಶದಲ್ಲಿ 35 ಹಂದಿಜೋಗಿ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಣೆಯಾಗಿದ್ದು, ಉಳಿದ ಕುಟುಂಬಗಳಿಗೆ ದಾಖಲೆಗಳ ಸಲ್ಲಿಕೆಯನ್ನು ಮುಗಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ನಂತರ ಸಾತೇನಹಳ್ಳಿಯ ಸ್ಥಳ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು, ಸ್ಥಳೀಯ ಆಡಳಿತವನ್ನು ಕುಡಿಯುವ ನೀರು,…
ಪೌಷ್ಟಿಕಾಂಶದ ಶಕ್ತಿ ಕೇಂದ್ರ ಅಂತಲೇ ಕರೆಯಲ್ಪಡುವ ಚಿಯಾ ಸೀಡ್ಸ್ ನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ಸುಧಾರಿಸುವುದಲ್ಲದೇ ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಮುಂಜಾನೆ ಚಿಯಾ ಸೀಡ್ಸ್ ಸೇವನೆ ಮಾಡುವುದರಿಂದ ನಿಮಗೆ ಅಗತ್ಯವಾದ ಶಕ್ತಿ, ಪೋಷಣೆ ಮತ್ತು ಚೈತನ್ಯ ಸಿಗುತ್ತದೆ. ಇದು ದಿನವಿಡೀ ದೇಹದ ಅಗತ್ಯಗಳನ್ನು ಪೂರೈಸುತ್ತದೆ. ಚಿಯಾ ಸೀಡ್ಸ್ಗಳು ಫೈಬರ್, ಒಮೆಗಾ –3 ಕೊಬ್ಬಿನಾಮ್ಲಗಳು, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇತ್ಯಾದಿಗಳನ್ನು ಹೊಂದಿರುತ್ತವೆ. ಈ ಎಲ್ಲಾ ಪೋಷಕಾಂಶಗಳನ್ನು ಬೆಳಗ್ಗೆ ಪಡೆಯುವುದರಿಂದ ದೇಹದಲ್ಲಿ ಅವುಗಳ ಕೊರತೆ ಇರುವುದಿಲ್ಲ. ಚಿಯಾ ಬೀಜಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಮಲಬದ್ಧತೆ ಸಮಸ್ಯೆಗೂ ಪರಿಹಾರ ನೀಡುತ್ತದೆ. ಚಿಯಾ ಸೀಡ್ಸ್ ಗಳು ನಿಧಾನವಾಗಿ ಜೀರ್ಣವಾಗುತ್ತವೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಅನಗತ್ಯವಾಗಿ ಹಸಿವಿನ ಭಾವನೆಯನ್ನು ಹೊಂದುವುದಿಲ್ಲ. ಇದನ್ನು ನಿಮ್ಮ ಡಯಟ್ ಲಿಸ್ಟ್ನಲ್ಲಿ ಸೇರಿಸಿಕೊಳ್ಳಬಹುದು. ಚಿಯಾ ಬೀಜಗಳಲ್ಲಿ ಒಮೆಗಾ–3 ಕೊಬ್ಬಿನಾಮ್ಲಗಳು ಇರುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು…
ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತವು ಕೈಗೊಂಡಿದೆ. ಈ ವರ್ಷ ಹಾಸನಾಂಬ ದೇವಿಯ ಬಾಗಿಲು 24–10–2024, ಗುರುವಾರ ಮಧ್ಯಾಹ್ನ 12.00 ಗಂಟೆಗೆ ತೆರೆಯಲಾಗುವುದು. ಭಕ್ತರು ವಿವಿಧ ದಿನಗಳಲ್ಲಿ ನಿಗದಿತ ಸಮಯದಂತೆ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ: 25–10–2024, ಶುಕ್ರವಾರ: ಬೆಳಗ್ಗೆ 4.00 ರಿಂದ ಸಂಜೆ 7.00 ತನಕ ದರ್ಶನ. ನೈವೇದ್ಯ ಸಮಯದಲ್ಲಿ (ಸಂಜೆ 7.00 ಗಂಟೆಗೆ) ದರ್ಶನ ಇರುವುದಿಲ್ಲ. 26—10–2024 ರಿಂದ 01–11–2024: ಪ್ರತಿದಿನ ಬೆಳಗ್ಗೆ 4.00 ರಿಂದ ಮಧ್ಯಾಹ್ನ 2.00 ಹಾಗೂ ಮಧ್ಯಾಹ್ನ 3.00 ರಿಂದ ಬೆಳಗಿನ ಜಾವ 3.00 ತನಕ ದರ್ಶನ. 02—11–2024 ಶನಿವಾರ: ಬೆಳಗ್ಗೆ 4.00 ರಿಂದ ಸಂಜೆ 5.00 ಮತ್ತು ರಾತ್ರಿ 11.00 ರಿಂದ ಬೆಳಗಿನ ಜಾವ 6.00. (ಸಂಜೆ 5.00 ರಿಂದ ರಾತ್ರಿ 11.00 ವರೆಗೆ ದರ್ಶನ ಇರುವುದಿಲ್ಲ) 03–11–2024 ಭಾನುವಾರ: ಈ ದಿನ ಭಕ್ತರಿಗೆ ದರ್ಶನ ಇರುವುದಿಲ್ಲ. ಮಧ್ಯಾಹ್ನ 12.00 ಗಂಟೆಗೆ…
ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಟೋಬರ್ 21 ರಿಂದ ನಿಗಧಿಪಡಿಸಿದ ದಿನಾಂಕದಂದು ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈ ಅದಾಲತ್ ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು–ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ 21ರಂದು ಜಿಲ್ಲೆಯ ತುಮಕೂರು ತಾಲ್ಲೂಕು ಬೆಳ್ಳಾವಿ, ತಿಪಟೂರು ತಾಲ್ಲೂಕು ಈಚನೂರು ಹಾಗೂ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯತಿಯಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಭಾರತ್ ಫೈನ್ಯಾನ್ಸ್, ಮ್ಯಾಜಿಕ್ ಬಸ್ ಹಾಗೂ ಬಗಾಡಿಯಾ ಚೈತ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ಅಕ್ಟೋಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಹಾಜರಾಗಬಹುದಾಗಿದೆ. ಎಸ್.ಎಸ್.ಎಲ್.ಸಿ, ಐ.ಟಿ.ಐ (ಯಾವುದೇ ಟ್ರೇಡ್), ಯಾವುದೇ ಪದವಿ, ಬಿ.ಎಸ್ಸಿ ನರ್ಸಿಂಗ್ & ಜಿ.ಎನ್.ಎಂ ನರ್ಸಿಂಗ್ ಹಾಗೂ ಬಿ.ಇ.( Mechanical) ಪಾಸಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816–2278488, ಮೊ.ಸಂ. 9071021143, 9513136642ನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾವು ಬೆಳೆಯುವ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊಳಪಡಿಸಲಿಚ್ಛಿಸುವ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನ ಮಾಡಲು ಓರಿಯಂಟಲ್ ಜನರಲ್ ಇನ್ಯೂರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ. ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು 2024–25ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಮಳೆ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟು ಬೆಳೆ ವಿಮೆ ನಷ್ಟ ಹಾಗೂ ಸ್ಥಳ ನಿರ್ಧಿಷ್ಠ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು. ಸ್ಥಳ ನಿರ್ಧಿಷ್ಟ ಪ್ರಕೃತಿ…
ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆಯು ವಾರ್ಷಿಕ 5,000 ರೂ.ಗಳ ಆರ್ಥಿಕ ನೆರವು ನೀಡಲು ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗದ ನೇಕಾರರಿಂದ ಅರ್ಜಿ ಆಹ್ವಾನಿಸಿದೆ. ನೇಕಾರರ ಸಮ್ಮಾನ್ ಯೋಜನೆಯಡಿ ಈ ಹಿಂದೆ ನೋಂದಣಿಯಾಗಿರುವ ಕೈಮಗ್ಗ ನೇಕಾರರು/ ಮಗ್ಗ ಪೂರ್ವ ನೇಕಾರರು / ಮಗ್ಗ ಪೂರ್ವ ಚಟುವಟಿಕೆ ಮಾಡುತ್ತಿರುವ ವಿದ್ಯುತ್ ಮಗ್ಗ ಹಾಗೂ ಕೈಮಗ್ಗ ನೇಕಾರರು/ ಕಾರ್ಮಿಕರು ಆರ್ಥಿಕ ನೆರವನ್ನು ಪಡೆಯಬಹುದಾಗಿದೆ. ಆಸಕ್ತರು ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 30ರೊಳಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, 5ನೇ ಕ್ರಾಸ್, ಸಿದ್ದಗಂಗಾ ಬಡಾವಣೆ, ತುಮಕೂರು ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2275370ಯನ್ನು ಸಂಪರ್ಕಿಸಬಹುದಾಗಿದೆ. ಕೈಮಗ್ಗ ನೇಕಾರರು ತಮ್ಮ ಅರ್ಜಿಯೊಂದಿಗೆ ಆಧಾರ್ ಚೀಟಿ, ಪಡಿತರ ಚೀಟಿ, ನೇಕಾರ ಸಮ್ಮಾನ್ ಐ.ಡಿ/ಪೆಹಚಾನ್ ಕಾರ್ಡ್, ಆಧಾರ ಲಿಂಕ್ಡ್ ಹಾಗೂ ಎನ್ಪಿಸಿಐ(NPCI) ಮ್ಯಾಪಿಂಗ್ ಇರುವ ಬ್ಯಾಂಕ್ ಪಾಸ್ ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿರುವ ಫೋಟೋ, ಕೈಮಗ್ಗದಲ್ಲಿ ಕಾರ್ಯನಿರ್ವಹಿಸುವ…
ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್. ವಿನಾಯಕ ಅವರು ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ವಿನಾಯಕ ಅವರನ್ನು ಪ್ರಶ್ನಿಸಿದಾಗ ಸರಿಯಾದ ರೀತಿಯಲ್ಲಿ ದಾಖಲೆ ನೀಡದೆ ಉತ್ತರ ನೀಡಲು ತಡವರಿಸಿದ ಪ್ರಸಂಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಪ್ರಕರಣಗಳ ತನಿಖೆ ಮತ್ತು ವಿಲೇವಾರಿ ಸಭೆಯಲ್ಲಿ ಈ ಪ್ರಸಂಗ ಜರುಗಿತು. ದೂರುದಾರರು ಮತ್ತು ಪ್ರತಿ ದೂರುದಾರರ ಸಮ್ಮುಖದಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ, ಪಿಡಿಓ ವಿನಾಯಕ ಅವರಿಗೆ ಎಚ್ಚರಿಕೆ ನೀಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಸಾರ್ವಜನಿಕ ಸೇವೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚಿಸುವುದು ಅಪರಾಧ. ಇಂತಹ ಅಪರಾಧಗಳನ್ನು ಲೋಕಾಯುಕ್ತ ಸಹಿಸುವುದಿಲ್ಲ. ಸಾರ್ವಜನಿಕರನ್ನು ವಂಚಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು. ಕಾನೂನು ತೊಡಕಿಲ್ಲದ ಅರ್ಜಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ…